Back
Home » ಇತ್ತೀಚಿನ
5,000ರೂ ಒಳಗೆ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್‌ ಗ್ಯಾಜೆಟ್‌ಗಳು!
Gizbot | 2nd Aug, 2020 12:00 PM
 • ಪ್ರಾಡಕ್ಟ್‌

  ಹೌದು, ರಕ್ಷಾ ಬಂದನದ ದಿನ ನಿಮ್ಮ ಸಹೊದರಿ ಅಥವಾ ಸಹೋದರನಿಗೆ ಅತ್ಉತ್ತಮವಾದ ಗಿಫ್ಟ್‌ಗಳನ್ನ ನೀಡುವದಕ್ಕೆ ಹಲವು ಆಯ್ಕೆಗಳನ್ನ ಟೆಕ್‌ ವಲಯದಲ್ಲಿಯೂ ಕಾಣಬಹುದಾಗಿದೆ. ಸ್ಮಾರ್ಟ್‌ ಪ್ರಾಡಕ್ಟ್‌ ಪ್ರಿಯರಾಗಿದ್ದು, ನೀವು ಅವುಗಳನ್ನೇ ಖರೀದಿಸುವುದಾದರೆ ನೀವು 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮವಾದ ಸ್ಮಾರ್ಟ್‌ಗ್ಯಾಜೆಟ್‌ಗಳನ್ನು ಸಹ ನಿಡಬಹುದಾಗಿದೆ. ಅಷ್ಟಕ್ಕೂ 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಐದು ಸ್ಮಾರ್ಟ್ ಗ್ಯಾಜೆಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.


 • ಒಪ್ಪೊ ಎನ್ಕೊ W31

  ಇನ್ನು ನೀವು ಇಯರ್‌ ಬಡ್ಸ್‌ಗಳನ್ನ ಗಿಫ್ಟ್‌ ನೀಡುವುದಾದರೆ ಒಪ್ಪೋ ಎನ್‌ಕೋ ಡಬ್ಲ್ಯು 31 ವಾಯರ್‌ಲೆಸ್‌ ಇಯರ್‌ ಬಡ್ಸ್‌ ಅನ್ನು ನೀಡಬಹುದಾಗಿದೆ. ಈ ವಾಯರ್‌ಲೆಸ್‌ ಇಯರ್‌ಬಡ್ಸ್‌ ಆಪಲ್ ಏರ್‌ಪಾಡ್ಸ್ ಪ್ರೊನಂತೆಯೆ ವಿನ್ಯಾಸವನ್ನು ಹೊಂದಿದೆ. ಇದು ವೃತ್ತಾಕಾರದ ಆಕಾರದ ವಿನ್ಯಾಸವನ್ನ ಹೊಂದಿದೆ. ಇನ್ನು ಈ ಒಪ್ಪೊ ಎನ್ಕೊ ಡಬ್ಲ್ಯು 31 ಧೂಳು ಮತ್ತು ವಾಟರ್‌ ಪ್ರೂಪ್‌ ಅನ್ನು ಹೊಂದಿದ್ದು, IP54 ರೇಟಿಂಗ್ ಹೊಂದಿದೆ. ಅಲ್ಲದೆ ಈ ಇಯರ್‌ಬಡ್‌ಗಳು 3.5 ಗಂಟೆಗಳ ಬ್ಯಾಟರಿ ಮತ್ತು ಚಾರ್ಜಿಂಗ್ ಕೇಸ್‌ ಜೊತಗೆ 15 ಗಂಟೆಗಳ ಬ್ಯಾಟರಿ ಅವದಿಯನ್ನು ನೀಡಲಿದೆ.


 • ಶಿಯೋಮಿ ಮಿ ಬಾಕ್ಸ್ 4K

  ಅಮೆಜಾನ್ ಫೈರ್ ಟಿವಿ ಸ್ಟಿಕ್ ನೀವು ವಿಶೇಷವಾಗಿ ಸ್ಮಾರ್ಟ್ ಟಿವಿ ಹೊಂದಿಲ್ಲದಿದ್ದರೆ ವಿಷಯವನ್ನು ಸ್ಟ್ರೀಮಿಂಗ್ ಮಾಡುವ ಡಿವೈಸ್‌ ಆಗಿದೆ. ಸದ್ಯ 3,499 ಬೆಲೆಯ ಶಿಯೋಮಿಯ ಮಿ ಬಾಕ್ಸ್ 4k ಇತ್ತೀಚಿಗೆ ಎಂಟ್ರಿ ನಿಡಿದ ಡಿವೈಸ್‌ ಆಗಿದೆ. ಹೆಸರೇ ಸೂಚಿಸುವಂತೆ, ಇದು 4k ವಿಷಯ ಮತ್ತು ಎಚ್‌ಡಿಆರ್ 10 ಅನ್ನು ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್ ಟಿವಿ ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಅಂತರ್ನಿರ್ಮಿತ Chromecast ನೊಂದಿಗೆ ಬರುತ್ತದೆ. ಇನ್ನು ಮಿ ಬಾಕ್ಸ್ 4k ಗೂಗಲ್ ಅಸಿಸ್ಟೆಂಟ್‌ಗೆ ಸಹ ಬೆಂಬಲವನ್ನು ಹೊಂದಿದೆ. ಅಲ್ಲದೆ ಕಡಿಮೆ ಇಂಟರ್‌ನೆಟ್ ಡೇಟಾವನ್ನು ಸೇವಿಸುವಾಗ ಹೆಚ್ಚಿನ ವೀಡಿಯೊಗಳನ್ನು ವೀಕ್ಷಿಸಲು ನಿಮಗೆ ಅನುಮತಿಸುವ ಡೇಟಾ ಸೇವರ್ ಫೀಚರ್ಸ್‌ ಅನ್ನು ಸಹ ಹೊಂದಿದೆ.


 • ರಿಯಲ್‌ಮಿ ವಾಚ್

  ನೀವು ಕೈಗೆಟುಕುವ ಸ್ಮಾರ್ಟ್ ವಾಚ್ ಅನ್ನು ಹುಡುಕುತ್ತಿದ್ದರೆ ನೀವು ರಿಯಲ್‌ಮಿ ವಾಚ್ ಅನ್ನು ಖರೀದಿಸಬಹುದಾಗಿದೆ. ಇದು ಮತ್ತೊಂದು ಆಪಲ್ ವಾಚ್-ಕ್ಲೋನ್ ಮಾದರಿಯನ್ನ ಹೊಂದಿದೆ. ರಿಯಲ್‌ಮಿ ವಾಚ್ 1.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಇದು 160mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೆ ಇದು ಹಾರ್ಟ್‌ಬೀಟ್‌ ರೇಟಿಂಗ್‌ ಸೇರಿದಂತೆ 14ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮಾದರಿಗಳನ್ನು ಹೊಂದಿದ್ದು, ಹೆಲ್ತ್‌ ಫೀಚರ್ಸ್‌ಗಳನ್ನು ಹೊಂದಿದೆ. ಇದರ ಬೆಲೆ 3,999 ರೂ ಆಗಿದೆ ಎನ್ನಲಾಗಿದೆ.


 • ಗೂಗಲ್ ಹೋಮ್ ಮಿನಿ ಅಥವಾ ಅಮೆಜಾನ್ ಎಕೋ ಡಾಟ್

  ನೀವು ಆಯ್ಕೆ ಮಾಡುವ ಬಜೆಟ್‌ ಬೆಲೆಯ ಸ್ಮಾರ್ಟ್‌ಫ್ರಾಡಕ್ಟ್‌ಗಳಲ್ಲಿ ಅಮೆಜಾನ್ ಎಕೋ ಡಾಟ್ ಮತ್ತು ಗೂಗಲ್ ಹೋಮ್‌ ಮಿನಿ ಕೂಡ ಸೇರಿವೆ. ಇವುಗಳಲ್ಲಿ ಪ್ರತಿ ಸ್ಪೀಕರ್‌ನೊಂದಿಗೆ ಎರಡು ವಿಭಿನ್ನ ಸ್ಮಾರ್ಟ್ ಅಸಿಸ್ಟೆಂಟ್‌ಗಳನ್ನು ಪಡೆಯಬಹುದಾಗಿದೆ. ಇನ್ನು ಅಮೆಜಾನ್ ಎಕೋ ಡಾಟ್ 3 ನೇ ತಲೆಮಾರಿನ ಪ್ರೊಸೆಸರ್‌ ಹೊಂದಿದ್ದು, ಇದರ ಬೆಲೆ 3,499,ರೂ ಆಗಿದೆ. ಅಲ್ಲದೆ ಇದು ನಾಲ್ಕು ಮೈಕ್ರೊಫೋನ್‌ಗಳನ್ನು ಹೊಂದಿದೆ. ಇನ್ನು ಗೂಗಲ್ ಹೋಮ್‌ ಮಿನಿ 3,999 ರೂ ಗಳಿಗೆ ಲಭ್ಯವಾಗಲಿದೆ.


 • ಡಿಜಿಟಲ್ ಗಿಫ್ಟ್‌ ಕಾರ್ಡ್‌ಗಳು

  ನೀವು ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನು ಖರೀದಿಸುವುದರಲ್ಲಿ ಗೊಂದಲದಲ್ಲಿದ್ದರೆ ಯಾವ ಮಾದರಿಯ ಗಿಫ್ಟ್‌ ನೀಡುವ ನಿಮ್ಮ ಗೊಂದಲ ಇನ್ನು ಬಗೆಹರಿದಿಲ್ಲ ವೆಂದಾದರೆ ನಿಮಗೆ ಡಿಜಿಟಲ್ ಗಿಫ್ಟ್‌ ಕಾರ್ಡ್‌ಗಳು ಅತ್ಯುತ್ತಮ ಆಯ್ಕೆಯಾಗಿದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇಂಡಿಯಾದಂತಹ ವಿವಿಧ ಬ್ರಾಂಡ್‌ಗಳಿಂದ ಗಿಫ್ಟ್‌ ಕಾರ್ಡ್‌ಗಳು ಲಭ್ಯವಿದೆ. ಅಲ್ಲದೆ ನೀವು ಬಯಸಿದ ಮೊತ್ತಕ್ಕೆ ಗಿಫ್ಟ್‌ ಕಾರ್ಡ್‌ಗಳನ್ನ ನಿಮ್ಮ ಸಹೋದರ ಸಹೋದರಿಯರಿಗೆ ನೀಡಬಹುದಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಅಣ್ಣ-ತಂಗಿಯರ ಪವಿತ್ರಬಂದವನ್ನು ಸಾರುವ ರಕ್ಷಾ ಬಂಧನ ದಿನ ಬರಲಿದೆ. ರಕ್ಷಾ ಬಂಧನ ಹಬ್ಬವನ್ನು ಆಚರಿಸುವ ಸಾಕಷ್ಟು ಮಂದು ತನಮ್ಮ ಸಹೋದರ ಸಹೋದರಿಯರಿಗೆ ಗಿಫ್ಟ್‌ ಏನಾದರೂ ಗಿಫ್ಟ್‌ ನೀಡಬೇಕೆಂಬ ಹಂಬಲ ಇದ್ದೆ ಇರುತ್ತೆ. ಸದ್ಯ ಇದೀಗ ಕೋವಿಡ್‌-19 ಹಾವಳಿ ಇರುವುದರಿಂದ ಈ ಸಮಯದಲ್ಲಿ ರಕ್ಷಾ ಬಂಧನ್‌ ದಿನ ಯಾವ ಗಿಫ್ಟ್‌ ನೀಡೋದು ಅನ್ನೊ ಗೊಂದಲ ಎಲ್ಲರಲ್ಲೂ ಇದ್ದೇ ಇರುತ್ತೆ. ಆದ್ರೆ ನೀವು ಗ್ಯಾಜೆಟ್ಸ್‌ ಪ್ರಿಯರಾಗಿದ್ದು, ನಿಮ್ಮ ಸಹೋದರ ಸಹೋದರಿಯರಿಗೆ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಖರೀದಿಸುವುದಾದರೆ ನಿಮ ಬಜೆಟ್‌ಗೆ ತಕ್ಕಂತೆ ಅತ್ಯುತ್ತಮವಾದ ಗಿಫ್ಟ್‌ಗಳನ್ನೇ ಖರಿದಿಸಬಹುದಾಗಿದೆ.

 
ಟೆಕ್ನಾಲಜಿ