Back
Home » ಇತ್ತೀಚಿನ
ಇಂದು ಬಾಹ್ಯಾಕಾಶದಲ್ಲಿ ಅಪರೂಪದ ವಿಸ್ಮಯ: ಬರಿಗಣ್ಣಿನಿಂದ ವೀಕ್ಷಿಸಬಹುದು!
Gizbot | 14th Jul, 2020 07:04 PM

ಇಂದು ಬಾಹ್ಯಾಕಾಶದಲ್ಲಿ ಅತೀ ಅಪರೂಪದ ವಿಸ್ಮಯವೊಂದು ಗೋಚರಿಸಲಿದೆ. 'ಸಿ-2020 ಎಫ್‌3 ನಿಯೋವಿಸ್' (C/2020 F3 NEOWISE) ಎಂಬ ಧೂಮಕೇತು ಭೂಮಿಗೆ ಅತ್ಯಂತ ಸಮೀಪ ಹಾದು ಹೋಗಲಿದೆ. ಈ ಅಪರೂಪದ ಬಾಹ್ಯಾಕಾಶ ವಿಸ್ಮಯವನ್ನು ಇಂದು ಸಂಜೆ ಸೂರ್ಯಾಸ್ತದ ನಂತರ ಜನರು ವೀಕ್ಷಿಸಬಹುದಾಗಿದೆ.

'ನಿಯೋವಿಸ್' ಹೆಸರಿನ ಧೂಮಕೇತು (ಜುಲೈ 14) ಇಂದು ಭೂಮಿಯ ಸಮೀಪದಲ್ಲಿ ಕಾಣಿಸಿಕೊಳ್ಳಲಿದೆ. ಸೂರ್ಯಾಸ್ತದ ನಂತರ ಧೂಮಕೇತು 15-20 ನಿಮಿಷಗಳ ಕಾಲ ಸೂರ್ಯಾಸ್ತದ ನಂತರ ವಾಯುವ್ಯ ಆಕಾಶದಲ್ಲಿ ಗೋಚರಿಸುತ್ತದೆ. ಮುಂದಿನ 20 ದಿನಗಳವರೆಗೆ ವೀಕ್ಷಣೆ ಸಾಧ್ಯವಿದೆ, ನಂತರ ಧೂಮಕೇತುವಿನ ಜಾಡು ದೂರದ ಸ್ಥಳಕ್ಕೆ ಹರಿಯುತ್ತದೆ. ಇನ್ನು ಈ ವಿಸ್ಮಯವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಿಯೋವಿಸ್ ಧೂಮಕೇತುವಿನ ಬಗ್ಗೆ ಇದರ ಆಗಮ ಕಕ್ಷೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು (ನಾಸಾ) ಮಾರ್ಚ್ 27ರಂದೇ ಗುರುತಿಸಿತ್ತು, ಸೂರ್ಯನಿಗೆ ಅತಿ ಸಮೀಪದಲ್ಲಿ ಅಂದರೆ ನಾಲ್ಕು ಕೋಟಿ ಮೂವತ್ತು ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಕಾಣಿಸಿಕೊಳ್ಳುವ ಬಗ್ಗೆ ನಾಸಾ ತಿಳಿಸಿದೆ. ಭೂಮಿಯಿಂದ ಸುಮಾರು 20 ಕೋಟಿ ಕಿಲೋಮೀಟರ್ ದೂರದಲ್ಲಿರುವ ಈ ಧೂಮಕೇತು, ಇಂದು 4.30 ಕೋಟಿ ಕಿಲೋಮೀಟರ್‌ ಅಂತರದಲ್ಲಿ ಕಾಣಿಸಿಕೊಳ್ಳಲಿದೆ.

ಮಾರ್ಚ್ 27 ರಂದು ಪತ್ತೆಯಾದ ಸಿ / 2020 ಎಫ್ 3, ಧೂಮಕೇತು ವಾಯುವ್ಯ ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸೂರ್ಯಾಸ್ತದ ನಂತರ ಮುಂದಿನ 20 ದಿನಗಳವರೆಗೆ ಸುಮಾರು 20 ನಿಮಿಷಗಳ ಕಾಲ ಇದು ಗೋಚರಿಸುತ್ತದೆ. ಧೂಮಕೇತು ಜುಲೈ 14 ರಂದು ವಾಯುವ್ಯ ಆಕಾಶದಲ್ಲಿ (ದಿಗಂತದಿಂದ 20 ಡಿಗ್ರಿ) ಕಡಿಮೆ ಕಾಣಿಸುತ್ತದೆ. ಜನರು ಇದನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು" ಎಂದು ಭುವನೇಶ್ವರದಲ್ಲಿನ ಪಠಾನಿ ಸಮಂತ ಗ್ರಹಗಳ ಉಪನಿರ್ದೇಶಕ ಸುಭೇಂಡು ಪಟ್ನಾಯಕ್ ಎಎನ್‌ಐಗೆ ತಿಳಿಸಿದರು.

ಧೂಮಕೇತು ಆಕಾಶದಲ್ಲಿ ವೇಗವಾಗಿ ಏರುತ್ತದೆ ಮತ್ತು ದೀರ್ಘಕಾಲದವರೆಗೆ ಗೋಚರಿಸುತ್ತದೆ." ಕಾಮೆಟ್ ನಿಯೋವಿಸ್ - ಕಾಲು ಶತಮಾನದಲ್ಲಿ ಉತ್ತರ ಗೋಳಾರ್ಧದಿಂದ ಗೋಚರಿಸುವ ಅತ್ಯಂತ ಪ್ರಕಾಶಮಾನವಾದ ಧೂಮಕೇತು ಆಗಿದೆ.

 
ಟೆಕ್ನಾಲಜಿ