Back
Home » ಆರೋಗ್ಯ
ನೆಲ, ವಸ್ತುಗಳ ಮೇಲೆ ಕೊರೊನಾ ವೈರಸ್ ಎಷ್ಟು ಸಮಯ ಬದುಕಿರುತ್ತದೆ?
Boldsky | 14th Mar, 2020 09:15 AM
 • ಕೊರೊನಾ ಅಟ್ಟಹಾಸ

  ಸಾಧಾರಣ ನೆಗಡಿಯಾದರೂ ಕೂಡ ಭಯ ಬೀಳುವ ಪರಿಸ್ಥಿತಿ ಉಂಟಾಗಿದೆ. ಭಾರತದಲ್ಲಿ ಕೊರೊನಾಗೆ ಒಂದು ಬಲಿಯೂ ಆಗಿದೆ. ಕೊರೊನೊ ಸೋಂಕಿತರ ಸಂಖ್ಯೆ 75 ತಲುಪಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಾರದೆಂಬ ಮುನ್ನೆಚ್ಚರಿಕೆಕ್ರಮವಾಗಿ ಈಗಾಗಲೇ ಸರಕಾರ ಹಲವಾರು ಮಾರ್ಗಸೂಚಿಗಳನ್ನು ಕಂಪನಿಗಳು ಹಾಗೂ ಸಾರ್ವಜನಿಕರಿಗೆ ನೀಡಿದೆ.

  ವಿದೇಶದಿಂದ ಭಾರತಕ್ಕೆ ಮರಳುತ್ತಿರುವವರನ್ನು ಪರೀಕ್ಷಿಸಲಾಗುತ್ತಿದೆ, ಇನ್ನು ಇಲ್ಲಿಂದ ಯಾರೂ ಹೊರ ದೇಶಗಳಿಗೆ ಹೋಗದಂತೆ ಹಾಗೂ ಕಂಪನಿಗಳು ಉದ್ಯೋಗಿಗಳನ್ನು ಸ್ವಲ್ಪ ದಿನಗಳವರೆಗೆ ಹೊರ ದೇಶಕ್ಕೆ ಕಳುಹಿಸದಂತೆ ಕೇಂದ್ರ ಸರಕಾರ ಆದೇಶ ನೀಡಲಾಗಿದೆ. ಜನರು ಕೂಡ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ, ನೆಗಡಿ, ಕೆಮ್ಮು ಇರುವವರು ಹಾಗೂ ಇತರರು ಮಾಸ್ಕ್‌ ಧರಿಸುತ್ತಿದ್ದಾರೆ, ಹ್ಯಾಂಡ್‌ ಸ್ಯಾನಿಟೈಸರ್ ಬಳಸುತ್ತಿದ್ದಾರೆ.


 • ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು

  ಕೊರೊನೊ ವೈರಸ್‌ನಿಂದ ಹರಡುವಂಥ ಕೋವಿಡ್‌ 19 ರೋಗವನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಮಿಕ ಪಿಡುಗು ಎಂದು ಘೋಷಿಸಿದ ಮೇಲೆ ಈ ರೋಗದ ಬಗ್ಗೆ ಭಯ ಮತ್ತಷ್ಟು ಹೆಚ್ಚಾಗಿದೆ. ಜಗತ್ತಿನಲ್ಲಿರುವ ಬೇರೆಲ್ಲಾ ಮಾರಕ ರೋಗಗಳಿಗಿಂತ ಕೊರೊನಾ ಭಯಾನಕವಾಗಿದೆ.


 • ನಿಲ್ಲುತ್ತಿಲ್ಲ ಸಾವಿನ ಕೇಕೆ

  ಈ ಕೊರೊನಾ ವೈರಸ್ ಬಗ್ಗೆ ಜನ ತುಂಬಾ ಭಯ ಭೀತರಾಗಲು ಕಾರಣ ಇದು ಹರಡುತ್ತಿರುವ ರೀತಿಯಾಗಿದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಮಾತ್ರವಲ್ಲ, ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುಗಳಿಂದಲೂ ಸೋಂಕು ಹರಡುತ್ತಿದೆ.

  ಆದ್ದರಿಂದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದರೆ ಅವನು ಓಡಾಡಿದ, ಮುಟ್ಟಿದ, ಮಾತನಾಡಿಸಿದ ಎಲ್ಲಾ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸುವ ಪರಿಸ್ಥಿತಿ ಉಂಟಾಗಿದೆ. ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 1,25,048 ದಾಟಿದೆ, 4,613 ಜನರು ಮೃತ ಮಟ್ಟಿದ್ದಾರೆ.


 • ಕೊರೊನಾ ಹರಡುವ ರೀತಿ ಕಂಡು ಭಯಭೀತರಾದ ಜನರು

  ಜನರು ಈಗ ಲಿಫ್ಟ್‌, ಟೇಬಲ್, ಸಾರ್ವಜನಿಕ ಸ್ಥಳಗಳಲ್ಲಿ ಮೆಟ್ಟಿಲುಗಳ ಹ್ಯಾಂಡ್ರೆಲ್ ಇವುಗಳನ್ನು ಮುಟ್ಟಲು ಜನರು ಭಯ ಪಡುತ್ತಿದ್ದಾರೆ. ಅಮೆರಿಕದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಸೋಂಕಿತ ವ್ಯಕ್ತಿ ಓಡಾಡಿದ ಸ್ಥಳದಿಂದ ಕೂಡ ಕೊರೊನಾ ವೈರಸ್ ಹರಡುವುದು ಎಂದು ಹೇಳಿದೆ.


 • ಎಷ್ಟು ಕಾಲ ಬದುಕಿರುತ್ತೆ?

  ಮತ್ತೊಂದು ಅಧ್ಯಯನ ಪ್ರಕಾರ ಕೊರೊನಾ ವೈರಸ್ ತಾಮ್ರದ ವಸ್ತುಗಳಲ್ಲಿನಾಲ್ಕು ದಿನ, ಕಾರ್ಡ್‌ಬೋರ್ಡ್‌ನಲ್ಲಿನಲ್ಲಿ 24 ಗಂಟೆ, ಪ್ಲಾಸ್ಟಿಕ್ ಹಾಗೂ ಸ್ಟೈನ್‌ಲೆಸ್ ಸ್ಟೀಲ್‌ನಲ್ಲಿ 2-3 ದಿನ ಇರುತ್ತದೆ ಎಂದು ಹೇಳಿದೆ.

  ಇನ್ನೊಂದು ಅಧ್ಯಯನ ವರದಿ ಜರ್ನಲ್ ಆಫ್‌ ಹಾಸ್ಪಿಟಲ್ ಇನ್‌ಫೆಕ್ಷನ್ ಮ್ಯಾಗ್‌ಜಿನ್‌ನಲ್ಲಿ ಪ್ರಕಟವಾಗಿದ್ದು ಇದರಲ್ಲಿ ವೈರಸ್‌ಗಳಾದ ಮಿಡಲ್ ಈಸ್ಟ್‌ ಸಿಂಡ್ರೋಮ್, ಸಾರ್ಸ್, ಸಾಂಕ್ರಾಮಿಕ ಪಿಡುಗು ಆಗಿರುವ ಕೊರೊನೊವೈರಸ್ ಗ್ಲಾಸ್, ಪ್ಲಾಸ್ಟಿಕ್, ಮೆಟಲ್ ವಸ್ತುಗಳಲ್ಲಿ, ಮೊಬೈಲ್‌ ಸ್ಕ್ರೀನ್‌ಗಳಲ್ಲಿ 9 ದಿನಗಳವರೆಗೆ ಜೀವಿಸಿರುತ್ತದೆ ಎಂದು ಹೇಳಿದೆ.


 • ಸ್ವಚ್ಛತೆಗೆ ಆದ್ಯತೆ ನೀಡಿ

  ಇನ್ನು ನೆಲ ಹಾಗೂ ವಸ್ತುಗಳ ಮೇಲಿರುವ ವೈರಸ್‌ ನಾಶಪಡಿಸಲು ಶೇ62-71ರಷ್ಟಿ ಈಥೋನಾಲ್, ಶೇ. 0.5ಹೈಡ್ರೋಜಿನ್ ಪರಾಕ್ಸೈಡ್, ಶೇ. 0.1 ಸೋಡಿಯಂ ಹೈಡ್ರೋಕ್ಲೋರೈಟ್ ಇವುಗಳನ್ನು ಮಿಶ್ರ ಮಾಡಿ ಒರೆಸಿದರೆ ವೈರಸ್ ನಾಶವಾಗುತ್ತದೆ. ಸರಿಯಾಗಿ ಸ್ವಚ್ಛ ಮಾಡದಿದ್ದರೆ ಕೊರೊನಾವೈರಸ್ ಬದುಕುವ ಸಾಧ್ಯತೆ ಇದೆ.


 • ಕೊರೊನಾವೈರಸ್ ವಿರುದ್ಧ ಹೋರಾಡೋಣ

  ಸದ್ಯದ ಪರಿಸ್ಥಿತಿಯಲ್ಲಿ ರೋಗ ಬರದಂತೆ ತಡೆಗಟ್ಟುವುದು ಅಲ್ಲದೆ ಬೇರೆ ಯಾವುದೇ ಔಷಧಿ ಕೊರೊನಾ ವೈರಸ್ ನಾಶಪಡಿಸಲು ಕಂಡು ಹಿಡಿದಿಲ್ಲ. ಜನರು ಮುನ್ನೆಚ್ಚರಿಕೆಯಿಂದ ಈ ರೋಗ ತಡೆಗಟ್ಟಬಹುದಾಗಿದೆ.

  ಕೆಮ್ಮು, ಸೀನು, ಜ್ವರ ಕಾಣಿಸಿದರೆ ಸಾಧಾರಣ ಜ್ವರ, ಕೆಮ್ಮು ಎಂದು ಸುಮ್ಮನಾಗದೆ ಕೂಡಲೇ ವೈದ್ಯರನ್ನು ಕಾಣಿ. ಆರೋಗ್ಯ ಸಮಸ್ಯೆ ಕಂಡ ತಕ್ಷಣ ಮನೆಯಲ್ಲಿ ಇತರರ ಜೊತೆ ಬೆರೆಯಲು ಹೋಗಬಾರದು, ಮಾಸ್ಕ್‌ ಧರಿಸಬೇಕು. ಕಾಯಿಲೆ ಯಾವುದೆಂದು ದೃಢ ಪಡುವವರಿಗೆ ಜನರ ಸಂಪರ್ಕಕ್ಕೆ ಬಾರದೆ, ಪ್ರತ್ಯೇಕ ಕೋಣೆಯಲ್ಲಿರುವುದು ಮಾಡಿದರೆ ಈ ಸೋಂಕು ಹರಡದಂತೆ ತಡೆಯಬಹುದಾಗಿದೆ.
ಕೊರೊನಾ ವೈರಸ್ ಈ ಪದ ಕೇಳಿದರೆ ಸಾಕು ಬೆಚ್ಚಿ ಬೀಳುವ ಪರಿಸ್ಥಿತಿ ಉಂಟಾಗಿದೆ. ಜಗತ್ತಿನ ಹಲವು ರಾಷ್ಟ್ರಗಳು ಕೊರೊನೊ ಅಟ್ಟಹಾಸಕ್ಕೆ ನಲುಗಿ ಹೋಗಿದೆ.

ನೋವೆಲ್ ಕೊರೊನಾ ವೈರಸ್ ಮೊದಲಿಗೆ ಡಿಸೆಂಬರ್‌ 30, 2019ರಲ್ಲಿ ಚೀನಾದಲ್ಲಿ ಪತ್ತೆಯಾಯಿತು. ತಿಂಗಳುಗಳು ಮೂರು ಆಗುತ್ತಾ ಬಂದರೂ ಇದರ ಅಟ್ಟಹಾಸ ಕೊನೆಯಾಗಿಲ್ಲ. ಇದೀಗ ಭಾರತ ಅದರಲ್ಲೂ ಬೆಂಗಳೂರಿಗೆ ಕೊರೊನಾ ಭೀತಿ ತಟ್ಟಿದೆ.

ಸಾಧಾರಣ ನೆಗಡಿಯಾದರೂ ಕೂಡ ಭಯ ಬೀಳುವ ಪರಿಸ್ಥಿತಿ ಉಂಟಾಗಿದೆ. ಭಾರತದಲ್ಲಿ ಕೊರೊನಾಗೆ ಒಂದು ಬಲಿಯೂ ಆಗಿದೆ. ಕೊರೊನೊ ಸೋಂಕಿತರ ಸಂಖ್ಯೆ 75 ತಲುಪಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಾರದೆಂಬ ಮುನ್ನೆಚ್ಚರಿಕೆಕ್ರಮವಾಗಿ ಈಗಾಗಲೇ ಸರಕಾರ ಹಲವಾರು ಮಾರ್ಗಸೂಚಿಗಳನ್ನು ಕಂಪನಿಗಳು ಹಾಗೂ ಸಾರ್ವಜನಿಕರಿಗೆ ನೀಡಿದೆ.

 
ಟೆಕ್ನಾಲಜಿ