Back
Home » ಇತ್ತೀಚಿನ
ಗ್ರಾಹಕರೇ ಎಚ್ಚರ!..ಶಾಪಿಂಗ್ ವೇಳೆ ಮೊಬೈಲ್‌ ನಂಬರ್ ನೀಡಬೇಡಿ!
Gizbot | 16th Dec, 2019 01:05 PM
  • ಸೈಬರ್‌ ಕ್ರೈಂ

    ಇತ್ತೀಚಿಗೆ ಸೈಬರ್‌ ಕ್ರೈಂ ಘಟನೆಗಳು ಹೆಚ್ಚಾಗುತ್ತಿದ್ದು, ಈ ಕುರಿತು ಪೊಲೀಸ್ ಆಯುಕ್ತರು ಗ್ರಾಹಕರಿಗೆ ಜಾಗೃತಿ ನೀಡುವ ಟ್ವಿಟ್ ಮಾಡಿದ್ದಾರೆ. ಶಾಪಿಂಗ್ ಮಾಡುವಾಗ ಶಾಪ್‌ಗಳಲ್ಲಿ, ಮಾಲ್ ಅಂಗಡಿಗಳಲ್ಲಿ, ಮೊಬೈಲ್‌ ನಂಬರ್ ಅನ್ನು ಶೇರ್ ಮಾಡುವುದು ಸೈಬರ್ ಕ್ರೈಂಗೆ ಅವಕಾಶ ಮಾಡಿಕೊಟ್ಟಂತೆ. ಹೀಗಾಗಿ ಸಾರ್ವಜನಿಕರು ಶಾಪಿಂಗ್‌ ವೇಳೆ ಮೊಬೈಲ್ ನಂಬರ್‌ ನೀಡುವುದನ್ನು ನಿರಾಕರಿಸಬೇಕು ಎನ್ನುವ ಸಲಹೆಯನ್ನು ಅವರು ನೀಡಿದ್ದಾರೆ.


  • ಅಂಗಡಿಗಳಲ್ಲಿ ಗ್ರಾಹಕರು

    ಮಾಲ್‌ಗಳಲ್ಲಿ, ಅಂಗಡಿಗಳಲ್ಲಿ ಗ್ರಾಹಕರು ನೀಡಿರುವ ಮೊಬೈಲ್‌ ನಂಬರ್‌ಗಳನ್ನು ಜಾಹಿರಾತು ಕಂಪನಿಗಳಿಗೆ ಸೇಲ್ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮೊಬೈಲ್‌ ನಂಬರ್‌ಗಳು ಸೈಬರ್ ವಂಚಕರ ಕೈ ಸೇರುವ ಸಾಧ್ಯತೆಗಳೂ ಇರುತ್ತವೆ. ಹಾಗೇನಾದರೂ ಬ್ಯಾಂಕ್‌ಗಳಿಗೆ ರಿಜಿಸ್ಟರ್ ಆಗಿರುವ ಮೊಬೈಲ್‌ ಸಂಖ್ಯೆ ಸೈಬರ್‌ ವಂಚಕರ ಕೈ ಸೇರಿದರೇ ಅದರ ದುರುಪಯೋಗ ಪಡೆಯಲು ಅವರು ಮುಂದಾಗುತ್ತಾರೆ.


  • ಶಾಪಿಂಗ್ ಮಾಲ್‌

    ಪ್ರಸ್ತುತ ಶಾಪಿಂಗ್ ಮಾಲ್‌ಗಳಲ್ಲಿ ಪ್ರತಿ ಖರೀದಿಗೆ ಪಾಯಿಂಟ್ಸ್‌ ಆಡ್ ಮಾಡಲು, ಲಕ್ಕಿ ಡ್ರಾ, ಸ್ಪೆಷಲ್ ಡಿಸ್ಕೌಂಟ್ ಹೀಗೆ ಇತರೆ ಕಾರಣಗಳಿಗಾಗಿ ಗ್ರಾಹಕರ ಮೊಬೈಲ್‌ ನಂಬರ್‌ ಪಡೆಯುತ್ತಾರೆ. ಬಹುತೇಕ ಗ್ರಾಹಕರು ಅದೇ ಮೊಬೈಲ್‌ ನಂಬರ್‌ ಅನ್ನು ಬ್ಯಾಂಕ್‌, ಗೂಗಲ್ ಪೇ, ಫೋನ್‌ಪೇ, ಯುಪಿಐ ಖಾತೆಗಳಿಗೂ ರಿಜಿಸ್ಟರ್ ಮಾಡಿರುತ್ತಾರೆ. ಇದು ಸೈಬರ್ ವಂಚನೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.
ಶಾಪಿಂಗ್ ಮಾಡುವ ವೇಳೆ ಗ್ರಾಹಕರು ಅಂಗಡಿಗಳಲ್ಲಿ, ಮಾಲ್‌ಗಳಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡುತ್ತಾರೆ. ಹೀಗೆ ಮಾಲ್‌ಗಳಲ್ಲಿ, ಶಾಪ್‌ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಮೊಬೈಲ್ ಸಂಖ್ಯೆ ನೀಡುವುದು ಸೈಬರ್‌ ಕ್ರೈಂ‌ ಘಟನೆಗಳಿಗೆ ಆಹ್ವಾನ ನೀಡಿದಂತೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಟರ್ ರಾವ್ ಟ್ವಿಟ್‌ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಿದ್ದಾರೆ.

 
ಟೆಕ್ನಾಲಜಿ