Back
Home » ಇತ್ತೀಚಿನ
'ಗ್ಯಾಲ್ಯಾಕ್ಸಿ A50s' ಮತ್ತು 'ಗ್ಯಾಲ್ಯಾಕ್ಸಿ 70s' ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!
Gizbot | 16th Dec, 2019 10:57 AM
 • ಸ್ಯಾಮ್‌ಸಂಗ್

  ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ''ಗ್ಯಾಲ್ಯಾಕ್ಸಿ A50s'' ಮತ್ತು ''ಗ್ಯಾಲ್ಯಾಕ್ಸಿ 70s'' ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ಘೋಷಿಸಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಇದೀಗ ಡಿಸ್ಕೌಂಟ್ ಪಡೆದಿರುವುದರಿಂದ ಇನ್ನಷ್ಟು ಆಕರ್ಷಿಸಲಿವೆ. ಅಂದಹಾಗೇ ಈ ಆಫರ್‌ ಸೀಮಿತ ಕೊಡುಗೆಯದ್ದಾಗಿದ್ದು, ಇದೇ ಡಿಸೆಂಬರ್ 13 ರಿಂದ ಇದೇ ಡಿ. 31ರ ವರೆಗೂ ಮಾತ್ರ ಇರಲಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.


 • ಕ್ಯಾಶ್‌ಬ್ಯಾಕ್‌

  ಗ್ಯಾಲ್ಯಾಕ್ಸಿ 70s ಸ್ಮಾರ್ಟ್‌ಫೋನ್ಗೆ 3,000ರೂ. ವರೆಗೂ ಕ್ಯಾಶ್‌ಬ್ಯಾಕ್‌ ಡಿಸ್ಕೌಂಟ್ ಲಭಿಸಲಿದೆ ಮತ್ತು ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್‌ಗೆ 2,000ರೂ.ವರೆಗೂ ಕ್ಯಾಶ್‌ಬ್ಯಾಕ್‌ ದೊರೆಯಲಿದೆ. ಈ ಕೊಡುಗೆಯು ಆಫ್‌ಲೈನ್‌ ಖರೀದಿಗೆ ಲಭ್ಯವಾಗಲಿದೆ. ಹೀಗಾಗಿ ಗ್ರಾಹಕರು ಈ ಕೊಡುಗೆಯ ಅವಧಿಯಲ್ಲಿ ಪ್ರಮುಖ ಆಫ್‌ಲೈನ್‌ ಶಾಪ್‌ಗಳಲ್ಲಿ ಖರೀದಿಸಬಹುದಾಗಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ 70s ಮತ್ತು ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


 • ಗ್ಯಾಲ್ಯಾಕ್ಸಿ A50s ಡಿಸ್‌ಪ್ಲೇ

  ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. ಫೋನಿನ್ ಬಾಹ್ಯ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರದ ಅನುಪಾತ 91.6 ರಷ್ಟಾಗಿದ್ದು, ಹಾಗೆಯೇ 158.5 mm x 74.5 mm x 7.7 mm ಸುತ್ತಳತೆಯನ್ನು ಪಡೆದಿದೆ.


 • ಗ್ಯಾಲ್ಯಾಕ್ಸಿ A50s ಪ್ರೊಸೆಸರ್

  ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 9611 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 4GB+128GB ಮತ್ತು 6GB+128GB ಸಾಮರ್ಥ್ಯದ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.


 • ಗ್ಯಾಲ್ಯಾಕ್ಸಿ A50s ಕ್ಯಾಮೆರಾ

  ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಅವುಗಳು ಮುಖ್ಯ ಕ್ಯಾಮೆರಾವು 48MP ಸೆನ್ಸಾರ್‌ನಲ್ಲಿದೆ. ಹಾಗೆಯೇ ಉಳಿದೆರಡು ಕ್ಯಾಮೆರಾಗಳು 5MP+8MP ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇನ್ನೂ ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ.


 • ಗ್ಯಾಲ್ಯಾಕ್ಸಿ A50s ಬ್ಯಾಟರಿ

  ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನಿನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇನ್ನೂ ಇದರೊಂದಿಗೆ 15W ಫಾಸ್ಟ್‌ ಚಾರ್ಜರ್‌ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಒಳಗೊಂಡಿದೆ.


 • ಗ್ಯಾಲ್ಯಾಕ್ಸಿ 70s ಡಿಸ್‌ಪ್ಲೇ

  ಗ್ಯಾಲ್ಯಾಕ್ಸಿ 70s ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.7 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಫೋನಿನ್ ಬಾಹ್ಯ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರದ ಅನುಪಾತ 86% ರಷ್ಟಾಗಿದ್ದು, ಗೊರಿಲ್ಲಾ ಗ್ಲಾಸ್‌ ರಕ್ಷಣೆ ಪಡೆದಿದೆ. ಹಾಗೆಯೇ 164.3 x 76.7 x 7.9 mm ಸುತ್ತಳತೆಯನ್ನು ಪಡೆದಿದೆ.


 • ಗ್ಯಾಲ್ಯಾಕ್ಸಿ 70s ಪ್ರೊಸೆಸರ್

  ಗ್ಯಾಲ್ಯಾಕ್ಸಿ 70s ಸ್ಮಾರ್ಟ್‌ಫೋನ್ ಆಕ್ಟಾಕೋರ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 6GB+128GB ಮತ್ತು 8GB+128GB ಸಾಮರ್ಥ್ಯದ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.


 • ಗ್ಯಾಲ್ಯಾಕ್ಸಿ 70s ಕ್ಯಾಮೆರಾ

  ಗ್ಯಾಲ್ಯಾಕ್ಸಿ 70s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾಗಳನ್ನು ಸೆಟ್‌ಅಪ್ ಒಳಗೊಂಡಿದ್ದು, ಅವುಗಳು ಮುಖ್ಯ ಕ್ಯಾಮೆರಾವು 64MP ಸೆನ್ಸಾರ್‌ನಲ್ಲಿದೆ. ಹಾಗೆಯೇ ಉಳಿದೆರಡು ಕ್ಯಾಮೆರಾಗಳು 5MP+8MP ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇನ್ನೂ ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ.


 • ಗ್ಯಾಲ್ಯಾಕ್ಸಿ 70s ಬ್ಯಾಟರಿ

  ಗ್ಯಾಲ್ಯಾಕ್ಸಿ 70s ಸ್ಮಾರ್ಟ್‌ಫೋನಿನಲ್ಲಿ 4,500mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಪಡೆದಿದ್ದು, ಇದರೊಂದಿಗೆ 15W ಫಾಸ್ಟ್‌ ಚಾರ್ಜರ್‌ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಒಳಗೊಂಡಿದೆ.


 • ಬೆಲೆ ಮತ್ತು ಲಭ್ಯತೆ

  ಸ್ಯಾಮ್‌ಸಂಗ್‌ನ ಗ್ಯಾಲ್ಯಾಕ್ಸಿ 70s ಮತ್ತು ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್‌ಗಳು ಸದ್ಯ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪಡೆದಿವೆ. ಗ್ಯಾಲ್ಯಾಕ್ಸಿ A50s ಫೋನಿನ ಆರಂಭಿಕ ಬೇಸ್ ವೇರಿಯಂಟ್ 19,999ರೂ, ಪ್ರೈಸ್‌ಟ್ಯಾಗ್ ಹೊಂದಿದ್ದು, ಇನ್ನು ಗ್ಯಾಲ್ಯಾಕ್ಸಿ 70s ಫೋನಿನ ಬೇಸ್‌ ವೇರಿಯಂಟ್ 25,999ರೂ.ಗಳ ಬೆಲೆಯನ್ನು ಪಡೆದಿದೆ. ಈ ಕೊಡುಗೆ ಆಫ್‌ಲೈನ್‌ ತಾಣಗಳಲ್ಲಿ ಲಭ್ಯವಾಗಲಿದೆ.
ಪ್ರಸ್ತುತ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಂಪನಿಯು ಹಲವು ನೂತನ ಮಾದರಿಯ ಸ್ಮಾರ್ಟ್‌ಫೋನ್ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಇನ್ನು ಇತ್ತೀಚಿಗಷ್ಟೆ ತನ್ನ ಕೆಲ ಜನಪ್ರಿಯ ಫೋನ್‌ಗಳ ಬೆಲೆ ಇಳಿಕೆ ಮಾಡಿ ಸದ್ದು ಮಾಡಿತ್ತು. ಇದೀಗ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ''ಗ್ಯಾಲ್ಯಾಕ್ಸಿ A50s'' ಮತ್ತು ''ಗ್ಯಾಲ್ಯಾಕ್ಸಿ 70s'' ಸ್ಮಾರ್ಟ್‌ಫೋನ್‌ಗಳಿಗೆ ಇದೀಗ ಭಾರಿ ಡಿಸ್ಕೌಂಟ್ ಘೋಷಿಸಿದೆ.

 
ಟೆಕ್ನಾಲಜಿ