Back
Home » ಇತ್ತೀಚಿನ
ವಾಟ್ಸಪ್‌ ಬಳಕೆದಾರರಿಗೆ ಶಾಕಿಂಗ್ ಸುದ್ದಿ!..ಈ ಫೋನ್‌ಗಳಲ್ಲಿ ಇನ್ನು ವಾಟ್ಸಪ್ ಸ್ಥಗಿತ!
Gizbot | 11th Dec, 2019 11:08 AM
 • ವಾಟ್ಸಾಪ್

  ಹೌದು, ಇನ್ನು ಕೆಲವೇ ವಾರಗಳಲ್ಲಿ ಕೆಲವು ಹಳೆಯ ಆಂಡ್ರಾಯ್ಡ್‌ ಮತ್ತು ಐಓಎಸ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ತನ್ನ ಕಾರ್ಯ ನಿಲ್ಲಿಸಲಿದೆ. ಈ ಬಗ್ಗೆ ವಾಟ್ಸಾಪ್ FAQ ವಿಭಾಗ ಮಾಹಿತಿ ಹೊರಹಾಕಿದೆ. ಬರುವ 1 ಫೆಬ್ರವರಿ, 2020 ರಿಂದ ಕೆಲವು ಹಳೆಯ ಸ್ಮಾರ್ಟ್‌ಫೋನ್‌ ಪ್ಲಾಟ್‌ಫಾರ್ಮ್‌ಗಳಿಗೆ ವಾಟ್ಸಪ್‌ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವುದರಿಂದ ಅಪ್ಲಿಕೇಶನ್ ಅನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ.


 • ಅಪ್‌ಡೇಟ್

  ವಾಟ್ಸಪ್‌ ಈಗಾಗಾಲೇ ಸಾಕಷ್ಟು ಅಪ್‌ಡೇಟ್ ಆವೃತ್ತಿಗಳನ್ನು ಪಡೆದಿದ್ದು, ವಾಟ್ಸಪ್ ಹೊಸ ಆವೃತ್ತಿ ಕೆಲವು ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳ ಹಳೆಯ ಆವೃತ್ತಿಗೆ ಬೆಂಬಲವಾಗುವುದಿಲ್ಲ. ಹಾಗೆಯೇ ಇದೇ ಡಿಸೆಂಬರ್ 31, 2019 ರಿಂದ ವಾಟ್ಸಾಪ್ ಎಲ್ಲಾ ವಿಂಡೋಸ್ ಫೋನ್‌ಗಳ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದೆ. ಹೀಗಾಗಿ ಹಳೆಯ ಆವೃತ್ತಿಯ ಫೋನ್‌ಗಳಿಗೆ ವಾಟ್ಸಪ್ ಇನ್ನು ಅಲಭ್ಯವಾಗಲಿದೆ.


 • ಯಾವ ಫೋನ್‌ಗಳಲ್ಲಿ ವಾಟ್ಸಪ್ ಅಲಭ್ಯವಾಗಲಿದೆ

  ಆಂಡ್ರಾಯ್ಡ್‌ನ 2.3.7 ವರ್ಷನ್ ಓಎಸ್‌ ಮತ್ತು ಇದಕ್ಕಿಂತಲೂ ಹಿಂದಿನ ಓಎಸ್‌ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸಪ್ ಸಪೋರ್ಟ್‌ ಲಭ್ಯವಾಗುವುದಿಲ್ಲ. ಹಾಗೆಯೇ ಐಓಎಸ್‌ನ iOS 8 ಆವೃತ್ತಿ ಮತ್ತು ಇದಕ್ಕೂ ಹಳೆಯ/ಹಿಂದಿನ ಆವೃತ್ತಿಯ ಓಎಸ್‌ಗಳಿಗೆ ವಾಟ್ಸಪ್ ಬೆಂಬಲ ದೊರಕುವುದಿಲ್ಲ. ಇನ್ನು ಇದೇ ಡಿಸೆಂಬರ್ 31 ರಿಂದ ವಿಂಡೊಸ್‌ ಓಎಸ್‌ನ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೂ ವಾಟ್ಸಪ್‌ ಸ್ಥಗಿತವಾಗಲಿದೆ.


 • ವಾಟ್ಸಪ್ ಬೆಂಬಲ ಇರುವ ಓಎಸ್

  ಆಂಡ್ರಾಯ್ಡ್‌ನ OS 4.0.3+ ಮತ್ತು ಈ ವರ್ಷನ್ ಮುಂದಿನ ಓಎಸ್‌ ಮಾದರಿಗಳಲ್ಲಿ ವಾಟ್ಸಪ್‌ ಯಾವುದೇ ಅಡೆತಡೆ ಇಲ್ಲದೇ ಕೆಲಸಮಾಡಲಿದೆ. ಹಾಗೆಯೇ ಐಫೋನ್‌ನ ಐಓಎಸ್‌ನ iOS 9+ ಆವೃತ್ತಿ ಮತ್ತು ಅದರ ನಂತರದ ಹೊಸ ಆವೃತ್ತಿಯ ಐಫೋನ್‌ಗಳಲ್ಲಿ ವಾಟ್ಸಪ್ ಬೆಂಬಲ ಮುಂದುವರೆಯಲಿದೆ. ಇನ್ನು KaiOS 2.5.1+ ಓಎಸ್‌ ಸ್ಮಾರ್ಟ್‌ಫೋನ್‌ ಹಾಗೂ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಗಳಲ್ಲಿಯೂ ವಾಟ್ಸಪ್ ಸಪೋರ್ಟ್‌ ಮುಂದುವರೆಯಲಿದೆ.
ಅತೀ ಹೆಚ್ಚಿನ ಸಕ್ರಿಯ ಬಳಕೆದಾದರನ್ನು ಹೊಂದಿರುವ ಜನಪ್ರಿಯ ಸಾಮಾಜಿಕ ಜಾಲತಾಣ 'ವಾಟ್ಸಪ್‌' ತನ್ನ ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇತ್ತೀಚಿಗಷ್ಟೆ ಫಿಂಗರ್‌ಪ್ರಿಂಟ್ ಲಾಕ್ ಸೆಕ್ಯುರಿಟಿ ಸೌಲಭ್ಯವನ್ನು ನೀಡಿರುವ ವಾಟ್ಸಪ್ ಸಂಸ್ಥೆಯು ಇದೀಗ ಬಳಕೆದಾರರಿಗೆ ಭಾರಿ ಶಾಕಿಂಗ್ ಸುದ್ದಿಯನ್ನು ಹೊರಹಾಕಿದೆ. ಸದ್ಯದಲ್ಲಿಯೇ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಸ್ಥಗಿತವಾಗಲಿದೆ ಎಂದಿದೆ.

 
ಟೆಕ್ನಾಲಜಿ