Back
Home » ಇತ್ತೀಚಿನ
ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ್ರೇ 1KG ಈರುಳ್ಳಿ ಫ್ರೀ, ಫ್ರೀ, ಫ್ರೀ..!
Gizbot | 10th Dec, 2019 01:37 PM
 • ಸ್ಮಾರ್ಟ್‌ಫೋನ್

  ಹೌದು, ಹೊಸ ಸ್ಮಾರ್ಟ್‌ಫೋನ್ ಖರೀದಿಸಿದರೇ ಖಂಡಿತವಾಗಿಯು ಒಂದು ಕೆಜಿ ಈರುಳ್ಳಿ ಉಚಿತ. ಇಂತಹದೊಂದು ವಿಭಿನ್ನ ಆಫರ್‌ ಘೋಷಿಸಿರುವ ತಮಿಳನಾಡಿನಿನ ತಂಜಾವೂರು ಜಿಲ್ಲೆಯ ಎಸ್‌ಟಿಆರ್ ಮೊಬೈಲ್‌ (STR Mobiles) ಅಂಗಡಿಯತ್ತ ಈಗ ಎಲ್ಲರು ಅಚ್ಚರಿಯಿಂದ ನೋಡುವಂತಾಗಿದೆ. ಹಾಗೆಯೇ ಫೋನ್ ಖರೀದಿಸಿದರೇ ಈರುಳ್ಳಿ ಉಚಿತ ಎನ್ನುವ ಆಫರ್ ಸಾಮಾಜಿಕ ತಾಣಗಳಲ್ಲಿಯೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.


 • ಈರುಳ್ಳಿ ಬೆಲೆಯು

  ಸದ್ಯ ದೇಶದಲ್ಲಿ ಈರುಳ್ಳಿ ಬೆಲೆಯು ದ್ವಿಶತಕದ ಗಡಿ ದಾಟಿದ್ದು, ಗ್ರಾಹಕರಿಗೆ ಈರುಳ್ಳಿ ಬಂಗಾರದಷ್ಟೇ ದುಬಾರಿ ಅನಿಸುವಂತಾಗಿದೆ. ಪ್ರಸ್ತುತ, ತಮಿಳುನಾಡಿನಲ್ಲಿ ಒಂದು ಕಿಲೋಗ್ರಾಂ ದೊಡ್ಡ ಗಾತ್ರದ ಈರುಳ್ಳಿ ಸುಮಾರು 140 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಹಾಗೂ ಸಣ್ಣ ಈರುಳ್ಳಿ ಮತ್ತು ಮಧ್ಯಮ ಗಾತ್ರದ ಈರುಳ್ಳಿ ಸುಮಾರು 160 ರೂ.ಗಳಿಗೂ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಆಫರ್ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಅಂಗಡಿ ಮಾಲೀಕರು ಮಾಡಿದ್ದಾರೆ.


 • ಉಚಿತ

  ಸ್ಮಾರ್ಟ್‌ಫೋನ್ ಖರೀದಿಸಿದರೇ ಈರುಳ್ಳಿ ಉಚಿತ ಅನ್ನುವ ಆಫರ್‌ ಅನ್ನು ಯಾರು ಇದುವರೆಗೂ ನೀಡಿಲ್ಲ. ಈ ವಿಭಿನ್ನ ಕೊಡುಗೆಯು ಸ್ಥಳೀಯ ನಿವಾಸಿಗಳಿಗೆ ಭಾರಿ ಅಚ್ಚರಿ ಅನಿಸಿದ್ದು, ಅಂಗಡಿಯ ಹತ್ತಿರ ಓಡಾಡುವ ಪಾದಚಾರಿಗಳು ಸೇರಿದಂತೆ ಅನೇಕ ಗ್ರಾಹಕರು ಕುತೂಹಲದಿಂದ ಈ ಕೊಡುಗೆಯನ್ನು ಗಮನಿಸುತ್ತಿದ್ದಾರೆ ಎಂದು ಅಂಗಡಿಯ ಮಾಲೀಕರಾದ ಸರವಣ ಕುಮಾರ ಅವರು ಹೇಳಿದ್ದಾರೆ.


 • ಸ್ಮಾರ್ಟ್‌ಫೋನ್

  ಈ ಮೊದಲು ದಿನಕ್ಕೆ ಕೇವಲ ಎರಡು ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದ್ದವು ಆದರೆ ಈ ಆಫರ್ ಘೋಷಿಸಿದ ಮೇಲೆ ಕಳೆದ ಗುರುವಾರ ಮತ್ತು ಶುಕ್ರವಾರ ಪ್ರತಿದಿನ ಎಂಟು ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ಬಹುಶಃ ಈ ವಿಶೇಷ ಕೊಡುಗೆ ಗ್ರಾಹಕರಿಗೆ ಇಷ್ಟವಾಗಿರಬಹುದು ಎನ್ನುವ ಮಾತುಗಳನ್ನು ಸರವಣ ಮಾಧ್ಯಮವೊಂದಕ್ಕೆ ಹಂಚಿಕೊಂಡಿದ್ದಾರೆ. ಇನ್ನು ಇವರ ಅಂಗಡಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ ಗ್ರಾಹಕರಿಗೆ ಒಂದು ಕೆಜಿ ಈರುಳ್ಳಿ ಫ್ರೀ. ಉಚಿತವಾಗಿ ನೀಡುವ ಈರುಳ್ಳಿಯಲ್ಲಿ ಸಣ್ಣ ಮತ್ತು ದೊಡ್ಡ ಗಾತ್ರದ ಆಯ್ಕೆ ಸಹ ಅವರು ನೀಡಿರುವುದು ವಿಶೇಷ.
ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಅತೀ ಅಗತ್ಯ ಡಿವೈಸ್ ಆಗಿದ್ದು, ಈ ನಿಟ್ಟಿನಲ್ಲಿ ಹೊಸ ಬಗೆಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಸಾಗಿವೆ. ಇನ್ನು ಸ್ಮಾರ್ಟ್‌ಫೋನ್ ಖರೀದಿಸಲು ಗ್ರಾಹಕರು ತಮ್ಮ ಅಂಗಡಿಗೆ ಬರಲಿ ಎಂದು ಅಂಗಡಿಯವರು, ವಾಚ್, ಮೆಮೊರಿ ಕಾರ್ಡು, ಮೊಬೈಲ್ ಬ್ಯಾಕ್‌ಕವರ್, ಶಾಪಿಂಗ್ ಕೂಪನ್ ಹೀಗೆ ನಾನಾ ತರಹದ ಉಡುಗೊರೆ ಆಫರ್ ಮಾಡುತ್ತಾರೆ, ಆದ್ರೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಿದರೇ ಈರುಳ್ಳಿ ಫ್ರೀ ಕೊಡುವುದನ್ನು ಎಂದಾದರೂ ಕೇಳಿದ್ದಿರಾ?

 
ಟೆಕ್ನಾಲಜಿ