Back
Home » ಸುದ್ದಿ
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ; 15ರ ಬಾಲಕ ವಶಕ್ಕೆ
Oneindia | 23rd Oct, 2019 01:14 PM

ಮುಂಬೈ, ಅಕ್ಟೋಬರ್ 23: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹದಿನೈದು ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಈ ಬಾಲಕನ ಮನೆಯು ಕಲ್ಯಾಣ್ ಟೌನ್ ಶಿಪ್ ನಲ್ಲಿ ಇದ್ದು, ಆತನ ಸೋದರಿ ನಡೆಸುವ ಟ್ಯೂಷನ್ ಗೆ ಬರುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಹುಬ್ಬಳ್ಳಿಯಲ್ಲಿ 14ರ ಬಾಲಕಿ ಮೇಲೆ ಅತ್ಯಾಚಾರ ಯತ್ನ

ಸೋಮವಾರದಂದು ಬಾಲಕಿ ಟ್ಯೂಷನ್ ಗೆ ಬಂದ ವೇಳೆಯಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಆರೋಪಿ ಬಾಲಕನು ಆಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆ ನಂತರ ಅಳುತ್ತಾ ಮನೆಗೆ ತೆರಳಿದ ಬಾಲಕಿಯು ಘಟನೆ ಬಗ್ಗೆ ತಿಳಿಸಿದ್ದಾಳೆ. ಬಾಲಕಿಯ ಪೋಷಕರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಬಾಲಕನನ್ನು ವಶಕ್ಕೆ ಪಡೆದು, ಐಪಿಸಿ ಸೆಕ್ಷನ್ ಹಾಗೂ 'ಪೋಕ್ಸೊ' ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರದಂದು ಆರೋಪಿಯನ್ನು ಕೋರ್ಟ್ ಮುಂದೆ ಹಾಜರು ಪಡಿಸಿದ್ದು, ರಿಮ್ಯಾಂಡ್ ಹೋಮ್ ನಲ್ಲಿ ದಾಖಲು ಮಾಡುವಂತೆ ನ್ಯಾಯಾಲಯವು ಆದೇಶ ನೀಡಿದೆ.

   
 
ಟೆಕ್ನಾಲಜಿ