Back
Home » ಸುದ್ದಿ
ಹೈದರಾಬಾದ್: ಹೃದಯಾಘಾತಕ್ಕೊಳಗಾಗಿ ವಿಮಾನದಲ್ಲೇ ಪ್ರಯಾಣಿಕ ಸಾವು
Oneindia | 23rd Oct, 2019 01:19 PM

ಹೈದರಾಬಾದ್, ಅಕ್ಟೋಬರ್ 23: ಉಕ್ರೇನಿನ ಪ್ರಜೆಯೊಬ್ಬರು ವಿಮಾನದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ದೊಹಾದಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ಖತಾರ್ ಏರ್ ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗಲಿನಾ ಕೊಂಕಿನಾ ಎಂಬ 69 ವರ್ಶಶ ವಯಸ್ಸಿನ ವ್ಯಕ್ತಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಕಳೆದ 20 ವರ್ಷಗಳ ಹಿಂದೆ ಬೈಪಾಸ್ ಸರ್ಜರಿ ಮಾಡಲಾಗಿತ್ತು.

ವೈರಲ್ ಆಯ್ತು ವಿಮಾನ ಹೈಜಾಕ್ ವಿಡಿಯೋ... ಅಸಲಿ ಕತೆಯೇ ಬೇರೆ!

ಮಂಗಳವಾರ ಬೆಳಗ್ಗಿನ ಜಾವ 1:30 ರ ಸಮಯದಲ್ಲಿ ಅವರು ವಿಮಾನದಲ್ಲಿ ಇದ್ದಕ್ಕಿದಂತೆ ಮೂರ್ಛೆ ಹೋದರು. ಅವರನ್ನು ಎಬ್ಬಿಸಲು ಪ್ರಯತ್ನಿಸಿದರೆ ಸಾಧ್ಯವಾಗಲಿಲ್ಲ. ಕೂಡಲೇ ಏರ್ ಹಾಸ್ಟಸ್ ಗಳು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.

ಕೂಡಲೇ ವಿಮಾನವನ್ನು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್ ಮಾಡಲಾಯ್ತು. ಆದರೆ ವಿಮಾನ ಲ್ಯಾಂಡ್ ಆಗಿದ್ದು ತಡವಾಗಿದ್ದರಿಂದ ಅವರನ್ನು ಬೆಳಿಗ್ಗೆ 3:25 ಕ್ಕೆ ವೈದ್ಯರು ಪರೀಕ್ಷಿಸಿದರು. ಅಷ್ಟರಲ್ಲೇ ಅವರು ಅಸುನೀಗಿದ್ದರು ಎಂದು ವೈದ್ಯರು ಘೋಷಿಸಿದರು.

   
 
ಟೆಕ್ನಾಲಜಿ