Back
Home » Car News
ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ
DriveSpark | 22nd Oct, 2019 06:17 PM
 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  2030ರ ವೇಳೆ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ಹಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಕೇಂದ್ರ ಸರ್ಕಾರವು, ಹಂತ ಹಂತವಾಗಿ ಇಂಧನ ಆಧಾರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಟೊಯೊಟಾ, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳತ್ತ ಹೆಚ್ಚು ಗಮನಹರಿಸುತ್ತಿವೆ.

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಟೊಯೊಟಾ ಸಂಸ್ಥೆಯು ಈಗಾಗಲೇ ಹೈಬ್ರಿಡ್ ತಂತ್ರಜ್ಞಾನದಲ್ಲಿ ಮುಂಚೂಣಿ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಮಾರುತಿ ಸುಜುಕಿ ಜೊತೆಗೂಡಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತಂತೆ ಸುದ್ದಿ ಮಾಧ್ಯಮಗಳ ಸಂವಾದದಲ್ಲಿ ಮಾತನಾಡಿರುವ ಟೊಯೊಟಾ ಮೋಟಾರ್ ಕಾರ್ಪೊರೇಷನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶಿಗೆಕಿ ಟೆರಶಿ(Shigeki Terashi) ಅವರು ಶೀಘ್ರದಲ್ಲೇ ಸಹಭಾಗಿತ್ವ ಅಡಿಯಲ್ಲಿ ನಿರ್ಮಾಣವಾಗಿರುವ ಹೊಸ ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ ಎಂದಿದ್ದಾರೆ.

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಸಹಭಾಗಿತ್ವದ ಯೋಜನೆ ಅಡಿ ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು ಈಗಾಗಲೇ ಕ್ರಾಸ್ ಬ್ಯಾಡ್ಜಿಂಗ್ ಕಾರುಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದು, ಇದು ಭವಿಷ್ಯದ ಎಲೆಕ್ಟಿಕ್ ಕಾರುಗಳ ಉತ್ಪಾದನೆಯಲ್ಲೂ ಹೊಸ ಬದಲಾವಣೆಗೆ ಕಾರಣವಾಗಲಿದೆ ಎಂದಿರುವ ಶಿಗೆಕಿ ಟೆರಶಿ ಅವರು ಮೊದಲ ಹಂತವಾಗಿ ಕಂಪ್ಯಾಕ್ಟ್ ಬ್ಯಾಟರಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಸುಳಿವು ನೀಡಿದ್ದಾರೆ. ಇವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಟ್ರಿ ಲೆವಲ್ ಕಾರುಗಳ ಬೆಲೆಯಲ್ಲಿ ದೊರೆಯಲಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಈ ಎಲೆಕ್ಟ್ರಿಕ್ ಕಾರುಗಳನ್ನು ಸಿದ್ದಪಡಿಸಲಾಗಿದೆ.

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಹೀಗಾಗಿ ಎಲೆಕ್ಟ್ರಿಕ್ ಕಾರುಗಳ ಯೋಜನೆಗೆ ಜಂಟಿಯಾಗಿ ಭರ್ಜರಿ ತಯಾರಿ ನಡೆಸಿರುವ ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು ಮತ್ತೊಮ್ಮೆ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಸಂಚಲನ ಸೃಷ್ಠಿಸುವ ತವಕದಲ್ಲಿವೆ.

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಜಂಟಿಯಾಗಿ ಅಭಿವೃದ್ದಿಪಡಿಸಲಿರುವ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಯೋಜನೆಯಲ್ಲಿ ಟೊಯೊಟಾ ಸಂಸ್ಥೆಯು ಬ್ಯಾಟರಿ ತಂತ್ರಜ್ಞಾನ ಮತ್ತು ಅಭಿವೃದ್ದಿ ಮೇಲೆ ಕಾರ್ಯನಿರ್ವಹಣೆ ಮಾಡಲಿದ್ದರೆ ಮಾರುತಿ ಸುಜುಕಿ ಸಂಸ್ಥೆಯು ಕಾರುಗಳ ನಿರ್ಮಾಣ ಮತ್ತು ಮಾರಾಟ ಮೇಲೆ ಹಿಡಿತ ಸಾಧಿಸಲಿದೆ.

  MOST READ: ಟೊಯೊಟಾ ವೆಲ್‌ಫೈರ್ ಖರೀದಿಗೆ ಬುಕ್ಕಿಂಗ್ ಶುರು- ಬೆಲೆ ರೂ. 80 ಲಕ್ಷ ಅಷ್ಟೆ ಅಂತೆ..!

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಇದೇ ಕಾರಣಕ್ಕೆ ಒಟ್ಟಾಗಿ ಕಾರು ನಿರ್ಮಾಣ ಯೋಜನೆಗಾಗಿ ಒಂದಾಗಿರುವ ಉಭಯ ಸಂಸ್ಥೆಗಳು ತಮ್ಮ ಶಕ್ತಿ ಸಾಮಾರ್ಥ್ಯದ ಆಧಾರದ ಮೇಲೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದು, ಹೊಸ ಯೋಜನೆಗಾಗಿ ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿವೆ.

  MOST READ: ಮುಂದಿನ ಒಂದು ವರ್ಷದೊಳಗೆ ಏಳು ಹೊಸ ಕಾರು ಬಿಡುಗಡೆ ಮಾಡಲಿದೆ ಮಹೀಂದ್ರಾ

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಇನ್ನು ಮಾರುತಿ ಸುಜುಕಿ ನಿರ್ಮಾಣ ಮಾಡಿರುವ ವ್ಯಾಗನ್ ಆರ್ ಎಲೆಕ್ಟ್ರಿಕ್ ಕೂಡಾ ಸಹಭಾಗಿತ್ವದ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೊಂಡಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಾಗಲಿದೆ.

  MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ಆದರೆ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಹಂತದಲ್ಲಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಕ್ಯಾಬ್ ಸೇವೆ ಮತ್ತು ಸರ್ಕಾರಿ ಅಧಿಕಾರಿಗಳ ಅಧಿಕೃತ ಕಾರು ಸೇವೆಗೆ ಮಾತ್ರವೇ ಮಾರಾಟ ಮಾಡಲಿದ್ದು, ತದನಂತರವಷ್ಟೇ ವ್ಯಯಕ್ತಿಕ ಕಾರು ಬಳಕೆದಾರರಿಗೂ ಮಾರಾಟ ಮಾಡುವ ಇರಾದೆಯಲ್ಲಿದೆ.

 • ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ ಟೊಯೊಟಾ ಮತ್ತು ಸುಜುಕಿ

  ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12 ಲಕ್ಷ ಬೆಲೆ ಹೊಂದಲಿರುವ ವ್ಯಾಗನ್ಆರ್ ಕಾರು ಪ್ರತಿ ಚಾರ್ಜ್‌ಗೆ 220ಕಿ.ಮೀ ಮೈಲೇಜ್ ಹೊಂದಿರಲಿದ್ದು, 2020ರ ಜೂನ್ ಹೊತ್ತಿಗೆ ವ್ಯಯಕ್ತಿಕ ಕಾರು ಬಳಕೆದಾರರಿಗೂ ಖರೀದಿಗೆ ಲಭ್ಯವಿರಲಿರುವ ಹೊಸ ಕಾರು ವಾಣಿಜ್ಯ ಬಳಕೆಯ ಮಾದರಿಗಿಂತ ತುಸು ಬದಲಾವಣೆಯೊಂದಿಗೆ ಮಾರಾಟಗೊಳ್ಳಲಿದೆ.
ಸಹಭಾಗಿತ್ವದ ಯೋಜನೆ ಅಡಿ ಈಗಾಗಲೇ ಕಾರು ಉತ್ಪಾದನಾ ಯೋಜನೆಗೆ ಚಾಲನೆ ನೀಡಿರುವ ಟೊಯೊಟಾ ಮತ್ತು ಸುಜುಕಿ ಸಂಸ್ಥೆಗಳು ಸಾಮಾನ್ಯ ಮಾದರಿಯ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡಲಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿವೆ.

ಟೆಕ್ನಾಲಜಿ