Back
Home » Car News
ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ
DriveSpark | 22nd Oct, 2019 07:25 PM
 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಹೊಸ ಜನರೇಷನ್ ಕ್ರೆಟಾವನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಇಂಡಿಯಾ ಸ್ಪೆಕ್ ಅದೇ ವಿನ್ಯಾಸವನ್ನು ಸಹ ಹೊಂದಿದೆ. ಸ್ಪೈ ಚಿತ್ರದಲ್ಲಿ ಎಸ್‍‍ಯು‍ವಿಯಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‍‍ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಯು‍‍ನಿ‍ಟ್‍ಗಳು ಬಹಿರಂಗವಾಗಿದೆ. ಕಿಯಾ ಸೆಲ್ಟೋಸ್ ಬೆಂಗಾವಲಿನಲ್ಲಿ ಮೂರು ಮ್ಯೂಲ್ ಟೆಸ್ಟ್ ಗಳನ್ನು ಸ್ಪೈ ಚಿತ್ರಗಳು ಬಹಿರಂಗಪಡಿಸುತ್ತದೆ.


 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಪ್ರಸ್ತತ ಜನರೇಷನ್ ಮಾದರಿಗೆ ಹೊಸ ಜನರೇಷನ್ ಹ್ಯುಂಡೈ ಹೋಲಿಸಿದರೆ ಕ್ರೆಟಾ 30 ಎಂಎಂ ಉದ್ದ, 10 ಎಂಎಂ ಅಗಲ ಮತ್ತು 8 ಎಂಎಂ ಕಡಿಮೆ ಇದೆ. ಪ್ರಸ್ತುತ ಜನರೇಷನ್ ಎಸ್‍‍ಯು‍ವಿ ಶಾರ್ಪ್ ವಿನ್ಯಾಸವನ್ನು ಹೊಂದಿದ್ದರೆ ಹೊಸ ರೌಂಡಡ್ ವಿನ್ಯಾಸವನ್ನು ಹೊಂದಿರಲಿದೆ.


 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಮುಂಬರುವ ಎಸ್‍‍ಯುವಿಯ ಮುಂಭಾಗವು ಹೊಸ ಹೆಡ್‍‍ಲ್ಯಾಂಪ್ ವಿನ್ಯಾಸದೊಂದಿಗೆ ದೊಡ್ಡ ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಸ್ಲಿಮ್ ಆಕಾರದ ಎಲ್ಇ‍ಡಿ ಡಿಆರ್‍ಎಲ್‍, ಸ್ಪ್ಲಿಟ್ ಹೆಡ್‍‍ಲ್ಯಾಂಪ್ ಸೆಟ್ ಅಪ್, ಹೆಡ್‍‍ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ.


 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಮುಂಬರುವ ಹೊಸ ಜನರೇಷನ್ ಎಸ್‍‍ಯು‍ವಿ ಹಿಂಭಾಗದ ವಿನ್ಯಾಸವು ರೌಂಡಡ್ ವಿನ್ಯಾಸವನ್ನು ಹೊಂದಿದೆ. ಇದು ಎರಡೂ ಬದಿಯಲ್ಲಿ ಸ್ಪ್ಲಿಟ್ ಎಲ್‍ಇಡಿ ಟೈಲ್ ಲ್ಯಾಂಪ್‍‍ಗಳನ್ನು ಕನೆಕ್ಟ್ ಮಾಡುವ ಬೂಟ್‍‍ಲೆಡ್ನ ಟೈಲ್ ಬಾರ್ ಅನ್ನು ಹೊಂದಿದೆ.


 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಹೊಸ ಹ್ಯುಂಡೈ ಕ್ರೆಟಾ ಇಂಟಿರಿಯರ್‍‍ನಲ್ಲಿ ಹೊಸ 10.25 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಕಾರಿನಲ್ಲಿ ಆಕರ್ಷಕ ಡ್ಯಾಶ್ ಬೋರ್ಡ್ ಹೊಂದಿರಲಿದೆ. ಇದರಲ್ಲಿ ಟಯರ್ ಪ್ರೆಶರ್ ಮಾನಿಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಫ್ಲಾಟ್ - ಬಾಟಮ್ ಸ್ಟೀರಿಂಗ್ ವ್ಹೀಲ್, ಆಡಿಯೋ ಸಿಸ್ಟಂ, ಮೌಂಟೆಡ್ ಕಂಟ್ರೋಲ್ ಅನ್ನು ಹೊಂದಿದೆ. ಇಂಟರ್‍‍ನೆಟ್ ಕನೆಕ್ಟ್ ಹೊಂದಿರುವ ಹಲವಾರು ಇತರ ವೈಶಿಷ್ಟ್ಯಗಳು ಹೊಂದಿದೆ.


 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಕೊರಿಯನ್ ವಾಹನ ಉತ್ಪಾದನಾ ಸಂಸ್ಥೆ ಹ್ಯುಂಡೈ ಹೊಸ ಜನರೇಷನ್ ಕ್ರೆಟಾ ಎಸ್‍‍ಯು‍ವಿನಲ್ಲಿ ಬಿಎಸ್-6 ಎಂಜಿನ್ ಅನ್ನು ಹೊಂದಲಿದೆ. ಇದರಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ 114 ಬಿಎಚ್‍ಪಿ ಪವರ್ ಮತ್ತು 144 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5 ಲೀಟರ್ ಡೀಸೆಲ್ ಎಂಜಿನ್ 114 ಬಿಎಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍‍ಗಳು ಕಿಯಾ ಸೆಲ್ಟೋಸ್ ಎಂಜಿನ್ ಮಾದರಿಯಲ್ಲಿದೆ. ಹೊಸ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.4 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಸೆಲ್ಟೋಸ್ ಜಿಟಿ ಲೈನ್ ಎಂಜಿನ್ ಮಾದರಿಯಲ್ಲಿ ಇರಲಿದೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್


 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಹೊಸ ಜನರೇಷನ್ ಕ್ರೆಟಾ ಎಸ್‍‍ಯು‍ವಿನಲ್ಲಿ 360 ಡಿಗ್ರಿ ಕ್ಯಾಮೆರಾ, ಲೇನ್ ಕೀಪ್ ಅಸಿಸ್ಟ್, ಫ್ರಂಟ್ ವಾರ್ನಿಂಗ್ ಬ್ರೇಕಿಂಗ್ ಸಿಸ್ಟಂ‍ನೊಂದಿಗೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಅನ್ನು ಹೊಂದಿದೆ. ಸುರಕ್ಷತಾ ಉಪಕರಣಗಳನ್ನು ಮತ್ತು ವೈಶಿಷ್ಟಗಳನ್ನು ಅಪ್‍‍ಡೇಟ್ ಮಾಡಲಾಗಿದೆ. ಹೊಸ ಜನರೇಷನ್ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಬೆಲೆಯು ತುಸು ದುಬಾರಿಯಾಗಿರಲಿದೆ.

  MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!


 • ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಕ್ರೆಟಾ

  ಹ್ಯುಂಡೈ ಕ್ರೆಟಾ ಎಸ್‍‍ಯುವಿಯು ಕಳೆದ ತಿಂಗಳಲ್ಲಿ ಉತ್ತಮವಾಗಿ ಮಾರಾಟವಾಗಿದೆ. ಹಲವಾರು ಉನ್ನತ ವೈಶಿಷ್ಟ್ಯಗಳನ್ನು ಹೊಂದಿದರಿಂದ ಈ ಎಸ್‍‍ಯುವಿ ಕಿಯಾ, ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ಎಸ್‍‍ಯು‍ವಿಗಳಿಗೆ ಪೈಪೋಟಿಯನ್ನು ನೀಡಲಿದೆ. ಹೊಸ ಹ್ಯುಂಡೈ ಕ್ರೆಟಾ ಉನ್ನತ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

  Source: Rushlane
ಹೊಸ ಹ್ಯುಂಡೈ ಕ್ರೆಟಾ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಬಹುದು. ಇದೀಗ ಭಾರತದಲ್ಲಿ ಮೂರು ರೀತಿಯ ಸ್ಪಾಟ್ ಟೆಸ್ಟ್ ನಡೆಸಲಾಗಿದೆ ಎಂದು ರಶ್ಲೆ ಸ್ಪೈ ಚಿತ್ರಗಳನ್ನು ಬಿಡುಗಡೆಗೊಳಿಸಿ ಬಹಿರಂಗಪಡಿಸಿದೆ.

   
 
ಟೆಕ್ನಾಲಜಿ