Back
Home » ಸಿನಿ ಸಮಾಚಾರ
ಪುನೀತ್ ರಾಜ್ ಕುಮಾರ್ 'ಮೌರ್ಯ' ಸಿನಿಮಾಗೆ 15 ವರ್ಷದ ಸಂಭ್ರಮ
Oneindia | 22nd Oct, 2019 05:20 PM

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಮೌರ್ಯ ಸಿನಿಮಾ ರಿಲೀಸ್ ಆಗಿ 15 ವರ್ಷಗಳು ಕಳೆದಿವೆ. ಮೌರ್ಯ ಸಿನಿಮಾದ 15 ವರ್ಷದ ಸಂಭ್ರಮವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೌರ್ಯ ಪೋಸ್ಟರ್ ಶೇರ್ ಮಾಡುವ ಮೂಲಕ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೆ ಮೌರ್ಯ ಇದೇ ದಿನ ಅಂದ್ರೆ ಅಕ್ಬೋಬರ್ 22, 2004ಕ್ಕೆ ರಿಲೀಸ್ ಆಗಿತ್ತು. ಚಿತ್ರಕ್ಕೆ ಎಸ್. ನಾರಾಯಣ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಮೀರಾ ಜಾಸ್ಮೀನ್ ಕಾಣಿಸಿಕೊಂಡಿದ್ದರು. ಪುನೀತ್ ತಾಯಿ ಪಾತ್ರದಲ್ಲಿ ಖ್ಯಾತ ನಟಿ ರೋಜಾ ಬಣ್ಣ ಹಚ್ಚಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ 'ಇದನ್ನ' ಕಂಡ್ರೆ ಈಗಲೂ ಭಯ.!

ಮೌರ್ಯ ಸಿನಿಮಾ ತೆಲುಗು ಸಿನಿಮಾದ ರಿಮೇಕ್. 'ಅಮ್ಮ ನಾನಾ ಓ ತಮಿಳಾ ಅಮ್ಮಾಯಿ' ಚಿತ್ರದ ಕನ್ನಡ ರಿಮೇಕ್ ಮೌರ್ಯ. 'ಅಮ್ಮ ನಾನಾ ಓ ತಮಿಳಾ ಅಮ್ಮಾಯಿ' ಚಿತ್ರಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ ರವಿ ತೇಜ, ಜಯಸುಧ, ಪ್ರಕಾಶ್ ರಾಜ್, ಆಸಿನ್ ಸೇರಿದಂತೆ ಸಾಕಷ್ಟು ಜನ ಬಣ್ಣ ಹಚ್ಚಿದ್ದಾರೆ.

ಅಮ್ಮ- ಮಗನ ಭಾವನಾತ್ಮಕ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದರು. "ಅಮ್ಮ ಅಮ್ಮಾ ಐ ಲವ್ ಯೂ..." ಹಾಡು ಇಂದಿಗೂ ಗಾನ ಪ್ರೀಯರ ಹಾಟ್ ಫೇವರಿಟ್ ಹಾಡಾಗಿದೆ. ಚಿತ್ರಕ್ಕೆ ಗುರು ಕಿರಣ್ ಸಂಗೀತ ಸಂಯೋಜನೆ ಮಾಡಿದ್ದರು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿತ್ತು.

   
 
ಟೆಕ್ನಾಲಜಿ