Back
Home » Car News
ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ
DriveSpark | 22nd Oct, 2019 05:01 PM
 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಈ ಸಾಲಿಗೆ ಮತ್ತೊಂದು ಕಾರು ಸೇರ್ಪಡೆಯಾಗಿದೆ. ಅದುವೇ ನಿಸ್ಸಾನ್ ಜಾಂಗಾ 1. ಈ ವಾಹನವನ್ನು ಭಾರತೀಯ ಸೇನೆಯು ಹಲವು ವರ್ಷಗಳವರೆಗೆ ಬಳಸುತ್ತಿತ್ತು. ಗಾಢವಾದ ಹಸಿರು ಬಣ್ಣವನ್ನು ಹೊಂದಿರುವ ಈ ವಾಹನವನ್ನು ಮಾಡಿಫೈ ಮಾಡಲಾಗಿದ್ದು, ಹಲವು ಬದಲಾವಣೆಗಳನ್ನು ಸಹ ಮಾಡಲಾಗಿದೆ.


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಈ ವಾಹನವನ್ನು ತಮ್ಮ ವೈಯಕ್ತಿಕ ಬಳಕೆಗಾಗಿ ಉಪಯೋಗಿಸುವ ಸಾಧ್ಯತೆಗಳಿವೆ. ಎಂಎಸ್ ಧೋನಿರವರು ಈ ವಾಹನದಲ್ಲಿ ರಾಂಚಿಯ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ.ಕೆಲವರಿಗೆ ಈ ವಾಹನ ಹಾಗೂ ಅದರ ಹೆಸರು ಎರಡೂ ವಿಚಿತ್ರವಾಗಿ ಕಾಣಬಹುದು.


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಈ ವಾಹನದ ಬಗ್ಗೆ ಹೇಳುವುದಾದರೆ ನಿಸ್ಸಾನ್ ಜಾಂಗಾ 1 ವಾಸ್ತವವಾಗಿ ಭಾರತದಲ್ಲಿ ಬಹಳ ಅಪರೂಪದ ವಾಹನವಾಗಿದೆ. ಏಕೆಂದರೆ ಅದು ಮಿಲಿಟರಿ ವಾಹನವಾಗಿದೆ. ಇದು ನಿಸ್ಸಾನ್ ಕಂಪನಿಯು ಅಭಿವೃದ್ಧಿಪಡಿಸಿರುವ ವಾಹನವಾಗಿದೆ.


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಜಾಂಗಾ ಎಂಬುದು ಭಾರತೀಯ ಸೇನೆಯ ಜಬಲ್ಪುರ್ ಆರ್ಡ್‌ನೆನ್ಸ್ ಹಾಗೂ ಗನ್‌ಕ್ಯಾರೇಜ್ ಅಸೆಂಬ್ಲಿ(ಜಾಂಗಾ) ಹೆಸರಿನ ಸಂಕ್ಷಿಪ್ತ ರೂಪವಾಗಿದೆ. ಇದು ಹಳೆ ತಲೆಮಾರಿನ ನಿಸ್ಸಾನ್ ಪ್ಯಾಟ್ರೋಲ್ ವಾಹನವಾಗಿದೆ. ತನ್ನ ಬೃಹತ್ ಗಾತ್ರದ ಕಾರಣದಿಂದಾಗಿ, ಜಾಂಗಾ ಹೆಚ್ಚಿನ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ.


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಇದರ ಜೊತೆಗೆ, ನಿಸ್ಸಾನ್ ಜಾಂಗಾದ ವಿರಳ ಹಾಗೂ ಬೆದರಿಸುವಂತಹ ಲುಕ್‍ ಹಾಗೂ ಬೇರೆ ವಾಹನಗಳಿಗಿಂತ ವಿಭಿನ್ನವಾಗಿರುವ ಕಾರಣಕ್ಕೆ ಸಾರ್ವಜನಿಕರ ಗಮನವನ್ನು ಸೆಳೆಯುತ್ತದೆ. ಜಾಂಗಾ ದೀರ್ಘಕಾಲದವರೆಗೆ ಭಾರತೀಯ ಸೇನೆಯ ನೆಚ್ಚಿನ ಕಾರಾಗಿತ್ತು.


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಈ ಕಾರ್ ಅನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸುವ ಮೊದಲು ಭಾರತದಲ್ಲಿ ಅಲ್ಪಾವಧಿಗೆ ನಾಗರಿಕರಿಗೆ ಮಾರಾಟ ಮಾಡಲಾಗಿತ್ತು. ಅವುಗಳು ಅಧಿಕೃತವಾಗಿ ಲಭ್ಯವಿಲ್ಲದಿದ್ದರೂ, ಜಾಂಗಾದ ಮಾಡಿಫೈ ಮಾಡಲಾದ ಕಾರುಗಳು, ಹಲವಾರು ಕಾರ್ ಬಾಡಿ ಶಾಪ್ ಹಾಗೂ ಮಾಡಿಫೈ ಮಾಡುವ ಸ್ಥಳಗಳಲ್ಲಿ ಮಾರಾಟವಾಗುತ್ತವೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಈ ವಾಹನವು ಅಪರೂಪದ ವಾಹನವಾದ್ದರಿಂದ ಭಾರೀ ಬೆಲೆಯನ್ನು ಹೊಂದಿದೆ. ಎಂ.ಎಸ್.ಧೋನಿ ಕಾರು ಹಾಗೂ ಬೈಕುಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ದುಬಾರಿ ಬೆಲೆಯ ಕಾರು ಹಾಗೂ ಬೈಕುಗಳಿವೆ. ಅವುಗಳಲ್ಲಿ ಕೆಲವು ಈ ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಲ್ಲ.

  MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಅವರ ಬಳಿ ಅಲ್ಟ್ರಾ-ಅಪರೂಪದ ಕಾನ್ಫೆಡರೇಟ್ ಹೆಲ್ಕಾಟ್ ಎಕ್ಸ್ 132, ಕವಾಸಕಿ ಹೆಚ್ 2, ಡುಕಾಟಿ 1098, ಕವಾಸಕಿ ನಿಂಜಾ ಝಡ್ಎಕ್ಸ್ 14 ಆರ್, ಹಾರ್ಲೆ ಡೇವಿಡ್ಸನ್ ಫ್ಯಾಟ್‍‍ಬಾಯ್, ಯಮಹಾ ವೈಜೆಡ್ 600 ಥಂಡರ್ ಕ್ಯಾಟ್ ಹಾಗೂ ಬಿಎಸ್ಎ ಗೋಲ್ಡ್ ಸ್ಟಾರ್‍‍‍ನಂತಹ ಕೆಲವು ವಿಂಟೇಜ್ ಎಕ್ಸೊಟಿಕ್ಸ್ ಸೇರಿವೆ.

  MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಇದರ ಜೊತೆಗೆ ಯಮಹಾ ಆರ್‌ಎಕ್ಸ್ 100, ಆರ್‌ಡಿ 350 ಯಂತಹ ಅವರ ನೆಚ್ಚಿನ ಬೈಕ್‍‍ಗಳೂ ಸಹ ಇವೆ. ಧೋನಿ ಇತ್ತೀಚೆಗಷ್ಟೇ ರೂ. 1.6 ಕೋಟಿ ಬೆಲೆಯ ಜೀಪ್ ಗ್ರ್ಯಾಂಡ್ ಚೆರೋಕೀ ಟ್ರ್ಯಾಕ್‌ಹಾಕ್ ಖರೀದಿಸಿದ್ದರು. ಈ ಎಸ್‌ಯುವಿ 6.2-ಲೀಟರ್ ಹೆಲ್‌ಕ್ಯಾಟ್ ಎಂಜಿನ್‌ ಹೊಂದಿದ್ದು, 707 ಬಿಹೆಚ್‌ಪಿ ಪವರ್ ಹಾಗೂ 875 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.


 • ಭಾರೀ ಗಾತ್ರದ ಕಾರು ಖರೀದಿಸಿದ ಎಂಎಸ್ ಧೋನಿ

  ಇದು ಭಾರತದ ಅತ್ಯಂತ ಶಕ್ತಿಶಾಲಿಯಾದ ಎಸ್‍‍ಯುವಿಯಾಗಿದೆ. ಎಂ‍ಎಸ್ ಧೋನಿಯವರ ಗ್ಯಾರೇಜ್‌ನಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್ಇ, ಹಮ್ಮರ್ ಹೆಚ್ 2, ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2, ಆಡಿ ಕ್ಯೂ 7, ಜಿಎಂಸಿ ಸಿಯೆರಾ, ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಮಿಟ್ಸುಬಿಷಿ ಪಜೆರೊ ಕಾರುಗಳಿವೆ.
ಎಂಎಸ್ ಧೋನಿ ಈ ವರ್ಷ ವಾಹನಗಳನ್ನು ಖರೀದಿಸುವ ಮೂಡ್‍‍ನಲ್ಲಿದ್ದಾರೆಂದು ಕಾಣುತ್ತದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಂಎಸ್ ಧೋನಿ ತಮ್ಮ ಮನಸೆಳೆಯುವ ಗ್ಯಾರೇಜ್‍‍ನಲ್ಲಿ ಹಲವು ಹೊಸ ಕಾರುಗಳು ಹಾಗೂ ಬೈಕುಗಳನ್ನು ಸೇರಿಸುತ್ತಿದ್ದಾರೆ.

   
 
ಟೆಕ್ನಾಲಜಿ