Back
Home » ಬಾಲಿವುಡ್
ಜೆರ್ಸಿ ರೀಮೇಕ್: ರಶ್ಮಿಕಾ ಇಲ್ಲ, ಆ ಜಾಗಕ್ಕೆ ಇನ್ನೊಬ್ಬ ನಟಿ ಎಂಟ್ರಿ
Oneindia | 18th Oct, 2019 05:12 PM

'ಕಬೀರ್ ಸಿಂಗ್' ಸೂಪರ್ ಹಿಟ್ ಆದ ಬಳಿಕ ಶಾಹೀದ್ ಕಪೂರ್ ಮತ್ತೊಂದು ಸೌತ್ ಸಿನಿಮಾವನ್ನ ರೀಮೇಕ್ ಮಾಡುತ್ತಿದ್ದಾರೆ. ತೆಲುಗಿನಲ್ಲಿ ನಾನಿ ಅಭಿನಯಿಸಿದ್ದ 'ಜೆರ್ಸಿ' ಚಿತ್ರದ ಹಿಂದಿ ವರ್ಷನ್ ನಲ್ಲಿ ಶಾಹೀದ್ ನಾಯಕಯಾಗಿದ್ದಾರೆ.

ಶಾಹೀದ್ ಕಪೂರ್ ಗೆ ಈ ಚಿತ್ರದಲ್ಲಿ ಕನ್ನಡ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ತೆಲುಗಿನಲ್ಲಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದ ಪಾತ್ರದಲ್ಲಿ ಕಿರಿಕ್ ಪಾರ್ಟಿ ನಟಿಸಬಹುದು ಎಂಬ ನಿರೀಕ್ಷೆಯೂ ಇತ್ತು. ಇದೀಗ, ಈ ನಿರೀಕ್ಷೆ ಹುಸಿಯಾಗಿದೆ.

ಶ್ರದ್ಧಾ ಕಪೂರ್ ಗೆ ಜೋಡಿಯಾಗಿ ಮೃನಾಲ್ ಠಾಕೂರ್ ನಟಿಸುತ್ತಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ. ಹೃತಿಕ್ ರೋಷನ್ ಜೊತೆ 'ಸೂಪರ್-30' ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದ ಮೃನಾಲ್ ಈಗ ಜೆರ್ಸಿ ರೀಮೇಕ್ ಗೆ ಬಣ್ಣ ಹಚ್ಚುತ್ತಿದ್ದಾರೆ.

ಈ ಚಿತ್ರವನ್ನ ರೀಮೇಕ್ ಮಾಡೋಕೆ 35 ಕೋಟಿ ಚೆಕ್ ಪಡೆದಿದ್ದಾರಂತೆ ಶಾಹೀದ್.!

ರಶ್ಮಿಕಾ ಮಂದಣ್ಣ ಅವರ ಜೊತೆ ಅಂತಿಮ ಹಂತದವರೆಗೂ ಮಾತುಕತೆ ಆಗಿತ್ತಂತೆ. ಆದರೆ, ಸಂಭಾವನೆ ವಿಷಯದಲ್ಲಿ ಅಂತಿಮ ನಿರ್ಧಾರಕ್ಕೆ ಬಾರದ ನಿರ್ಮಾಪಕ ಮತ್ತು ರಶ್ಮಿಕಾ ಮತ್ತಷ್ಟು ವಿಳಂಬ ಮಾಡಿದರಂತೆ.

ನಿರ್ಮಾಪಕರಿಗೆ ಸಿನಿಮಾ ಬೇಗ ಶುರು ಮಾಡಬೇಕು ಎಂಬ ಉದ್ದೇಶವಿದ್ದರಿಂದ, ನಾಯಕಿ ಆಯ್ಕೆ ಅವಶ್ಯಕತೆ ಇತ್ತು. ನಿಗದಿಯಾಗಿದ್ದ ದಿನಕ್ಕೆ ರಶ್ಮಿಕಾ ಡೇಟ್ ನೀಡುವುದು ಅನುಮಾನ ಉಂಟಾದ ಹಿನ್ನಲೆ, ಅವರನ್ನ ಕೈಬಿಟ್ಟು ಮೃನಾಲ್ ಗೆ ಮಣೆ ಹಾಕಲಾಗಿದೆ.

ಸ್ಟಾರ್ ನಟನ ಜೊತೆ ಬಾಲಿವುಡ್ ಗೆ ಹೋಗಲು ಸಜ್ಜಾದ ರಶ್ಮಿಕಾ!

ಜೆರ್ಸಿ ಸಿನಿಮಾಗೆ ಶಾಹೀದ್ ಕಪೂರ್ ಜೊತೆ ಫ್ರೆಶ್ ಪೇರ್ ಇರಲಿ, ರಶ್ಮಿಕಾ ನಟಿಸಿದರೆ ಒಳ್ಳೆಯದು ಎಂಬ ಕಾರಣಕ್ಕೆ, ದಿಲ್ ರಾಜು ಕೂಡ ಪ್ರಯತ್ನ ಪಟ್ಟಿದ್ದರಂತೆ. ಆದರೆ, ಈ ಡೀಲ್ ಆಗಲಿಲ್ಲ.

ಮೃನಾಲ್ ಠಾಕೂರ್ ಸದ್ಯ ತೂಫಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮರಾಠಿಯಲ್ಲಿ ಎರಡು ಸಿನಿಮಾ ಮಾಡಿದ್ದಾರೆ. ಕಿರುತೆರೆಯಲ್ಲಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

   
 
ಟೆಕ್ನಾಲಜಿ