Back
Home » ಸಮ್ಮಿಲನ
ನಿಮ್ಮ ಹಸ್ತಲಾಘವದ ರೀತಿಯು ನಿಮ್ಮ ವ್ಯಕ್ತಿತ್ವದ ಕುರಿತು ಸಾಕಷ್ಟು ಹೇಳಬಲ್ಲದು!!
Boldsky | 17th Oct, 2019 04:33 PM
 • ಹಸ್ತಲಾಘವ ಅಭಾಷಿತ ಅಭಿನಂದನಾತ್ಮಕ ಸಂಕೇತ

  ಅದೊಂದು ಸಾಮಾಜಿಕ ಪರಿಸರದಲ್ಲಿಯೇ ಆಗಿರಲೀ ಇಲ್ಲವೇ ಕಾರ್ಯಕ್ಷೇತ್ರದಲ್ಲಿಯೇ ಆಗಿರಲೀ, ಇಂದು ಹಸ್ತಲಾಘವಗಳು ಪರಸ್ಪರರು ಸಂಭಾಷಣೆಯನ್ನು ಆರಂಭಗೊಳಿಸುವ ದಿಶೆಯಲ್ಲಿ ಒಂದು ಪರಿಚಯಾತ್ಮಕ ಮಾಧ್ಯಮದ ರೂಪದಲ್ಲಿ ನೆರವಿಗೆ ಬರುತ್ತವೆ. ಹಸ್ತಲಾಘವವು ಕೇವಲ ಒಂದು ಅಭಾಷಿತ ಅಭಿನಂದನಾತ್ಮಕ ಸಂಕೇತವಾಗಿರುವುದಷ್ಟೇ ಅಲ್ಲದೇ ಅದಕ್ಕೂ ಮೀರಿದ ತೂಕವುಳ್ಳದ್ದಾಗಿದೆ. ಹಸ್ತಲಾಘವದಲ್ಲಿ ತೊಡಗಿರುವಾಗ ಆ ಪರಿಸ್ಥಿತಿಯಲ್ಲಿ ನಿಮ್ಮ ಮನೋಭಾವನೆ ಎಂತಹದ್ದಾಗಿದೆ ಹಾಗೂ ನೀವು ಎಂತಹಾ ಸ್ವಭಾವದ ವ್ಯಕ್ತಿಯೆಂಬುದನ್ನೂ ನೀವು ಹಸ್ತಲಾಘವವನ್ನು ಕೈಗೊಳ್ಳುವ ರೀತಿಯು ಅನಾವರಣಗೊಳಿಸುತ್ತದೆ.

  ನಿಮ್ಮ ಹಸ್ತಲಾಘವ ಏನನ್ನು ಪ್ರತಿನಿಧಿಸುತ್ತದೆ?

  ನೀವು ಇನ್ನೊಬ್ಬರ ಕೈಕುಲುಕುವ ರೀತಿಯು ನಿಮ್ಮ ಪರವಾಗಿ ಕೆಲಸ ಮಾಡುತ್ತಿದೆಯೇ ಅಥವಾ ನಿಮಗೆ ವಿರುದ್ಧವಾಗಿ ಕಾರ್ಯಾಚರಿಸುತ್ತಿದೆಯೇ ಎಂಬುದನ್ನೂ ಹಾಗೂ ಪ್ರತಿಬಾರಿಯೂ ಇನ್ನೊಬ್ಬರ ಕೈಕುಲುಕುವಾಗ ನೀವು ಸರಿಯಾದ ರೀತಿಯನ್ನು ಅನುಸರಿತ್ತಿರುವುದನ್ನು ಖಾತ್ರಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನೂ ಈ ಲೇಖನದ ಮೂಲಕ ಕಂಡುಕೊಳ್ಳಿರಿ.


 • ಪ್ರಬಲ ಹಸ್ತಲಾಘವ

  ಹಸ್ತಲಾಘವದ ರೀತಿಯೂ ಗಣನೀಯವಾಗಿರುತ್ತದೆ ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ ಹಾಗೂ ಒಂದು ಪ್ರಬಲ ಹಸ್ತಲಾಘವವು ಅತಿಶಯದ್ದಾಗಿರುತ್ತದೆ ಎಂಬುದು ಕೆಲವರ ಭಾವನೆ. ಎದುರುಗೊಂಡಿರುವವರ ಹಸ್ತವನ್ನು ಬಲವಂತವಾಗಿ ಸೆಳೆದುಕೊಳ್ಳುವುದರ ಮೂಲಕ, ನೀವು ಪ್ರಾಬಲ್ಯವನ್ನು ಮೆರೆಯುತ್ತಿರುವಿರೆಂಬ ಭಾವನೆಯು ನಿಮ್ಮನ್ನು ಎದುರುಗೊಂಡಿರುವವರ ಮನದಲ್ಲಿ ಮೂಡಿಸುವ ಇರಾದೆ ಖಂಡಿತವಾಗಿಯೂ ನಿಮಗಿಲ್ಲ ಹೌದೇ ? ತೀರಾ ಜೋರಾಗಿ ಯಾರದ್ದಾದ್ದರೂ ಕೈಕುಲುಕುವುದು ನಿಮ್ಮ ಸ್ಪರ್ಧಾ ಮನೋಭಾವವನ್ನು ತೋರಿಸುತ್ತದೆ. "ಅದೊಂದು ರೀತಿಯಲ್ಲಿ ನೀನು ಹೆಚ್ಚೋ ಇಲ್ಲಾ ನಾನು ಹೆಚ್ಚೋ" ಎಂಬಂತಿರುತ್ತದೆ.


 • ನೀರಸ ಹಸ್ತಲಾಘವ

  ನೀವು ಯಾರೊಡನೆಯಾದರೂ ಹಸ್ತಲಾಘವದಲ್ಲಿ ತೊಡಗಿದಾಗ, ಅವರು ನಿಮ್ಮ ಕೈಯನ್ನು ಹಿಡಿದಿರುವಿರೋ ಅಥವಾ ಇಲ್ಲವೋ ಎಂಬಂತಹ ಅನುಭವವು ನಿಮಗಾದಲ್ಲಿ, ನಿಮಗೆ ಹೇಗೆನಿಸೀತು ? ದುರ್ಬಲ ಹಸ್ತಲಾಘವವು ಆಸಕ್ತಿಯ ಕೊರತೆಯ ಒಂದು ಉದಾಹರಣೆಯಾಗಿರುತ್ತದೆ. "ಹಸ್ತಲಾಘವದ ಸಂಪೂರ್ಣ ದೃಢತೆಯು ಇಲ್ಲದೇ ಹೋದಲ್ಲಿ, ನೀವು ಆ ಅನ್ಯ ವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂಬ ಸಂದೇಶವನ್ನು ಆ ಮತ್ತೊಬ್ಬ ವ್ಯಕ್ತಿಗೆ ರವಾನಿದಂತಾಗುತ್ತದೆ; ನೀವು ಅವರ ಕುರಿತು ಆಸಕ್ತರಾಗಿಲ್ಲ" ಎಂಬುದರ ಸೂಚಕವದು. ಅವರೊಬ್ಬ ಅಪರಿಚಿತರೇ ಆಗಿರಬಹುದು ಇಲ್ಲವೇ ವೃತ್ತಿಪರರೇ ಆಗಿರಬಹುದು, ಜನರು ನಿಮ್ಮ ಹಾವಭಾವಗಳ ಕುರಿತು ಸೂಕ್ಷ್ಮಮತಿಗಳಾಗಿರುತ್ತಾರೆ ಹಾಗೂ ನಿಮ್ಮ ಮನಸ್ಥಿತಿಯನ್ನು ಅನಾವರಣಗೊಳಿಸಬಲ್ಲ ನಿಮ್ಮ ಹಸ್ತಲಾಘವದ ಶೈಲಿಯಿಂದಲೇ ಜನರು ನಿಮ್ಮ ಕುರಿತು ತತ್ ಕ್ಷಣದ ತೀರ್ಮಾನಗಳನ್ನು ಮಾಡಿಬಿಡುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.


 • ರಾಜಕೀಯ ನಾಯಕನ ಹಸ್ತಲಾಘವ

  ಹಸ್ತಲಾಘವಕ್ಕೆ ಮುಂದಾಗುವ ವ್ಯಕ್ತಿಯು ಎದುರುಗೊಂಡ ವ್ಯಕ್ತಿಯ ಕೈಗಳ ಮೇಲೆ ತನ್ನ ಎರಡೂ ಹಸ್ತಗಳನ್ನಿರಿಸಿದನೆಂದಾದರೆ ಅದು ಪ್ರಾಮಾಣಿಕತೆ ಮತ್ತು ವಿಶ್ವಾಸದ ಸಂಕೇತವಾಗಿರುತ್ತದೆ. "ಇಂತಹ ಹಸ್ತಲಾಘವವು ಬಲಪ್ರದರ್ಶನದ ಒಂದು ಪಯಣವಲ್ಲ, ಬದಲಿಗೆ ಮೆಚ್ಚಿಗೆಯ ಒಂದು ಪ್ರವಾಸವಾಗಿರುತ್ತದೆ". ಹಸ್ತಲಾಘವಕ್ಕೆ ಮೊದಲು ಮುಂದಾದವರು, ಹಸ್ತಲಾಘವವನ್ನು ಸ್ವೀಕರಿಸುವವರ ಮುಂಗೈಯನ್ನು ಬಾಚಿಕೊಳ್ಳಲು ತಮ್ಮ ಮುಕ್ತಹಸ್ತವನ್ನು ಬಳಸುತ್ತಾರೆಂದರೆ ಅದರ ಅರ್ಥ "ನಾನು ನಿಜಕ್ಕೂ, ನಿಜವಾಗಿಯೂ ನಿಮ್ಮನ್ನು ಇಷ್ಟಪಡುತ್ತೇನೆ" ಎಂದೇ ಆಗಿರುತ್ತದೆ.


 • ಅವಸರವಸರದ ಅಥವಾ ಕಾಟಾಚಾರದ ಹಸ್ತಲಾಘವ

  ಮುಖಾಮುಖಿಯಾದ ಕೂಡಲೇ ಹಸ್ತಲಾಘವಕ್ಕೆ ಮುಂದಾಗುವುದು ತಬ್ಬಿಬ್ಬಾಗಿರುವ ಅಥವಾ ಗಲಿಬಿಲಿಗೊಂಡಿರುವ ಮನಸ್ಥಿತಿಯ ಸೂಚಕ. ಪರಿಚಯವನ್ನು ಮಾಡಿಕೊಳ್ಳುವುದಕ್ಕೂ ಪುರುಸೊತ್ತಿಲ್ಲದವರ ಹಾಗೇ ನೇರ ಹಸ್ತಲಾಘವಕ್ಕೇ ಮುಂದಾಗುವುದು ವ್ಯಕ್ತಿಯ ಅಶಾಂತ ಮನಸ್ಥಿತಿಯ ದ್ಯೋತಕವಾಗಿರುತ್ತದೆ. "ಅಂತಹ ಹಸ್ತಲಾಘವವನ್ನು ಸ್ವೀಕರಿಸುವ ವ್ಯಕ್ತಿಗೆ ಮುಜುಗುರವಾಗುವ ರೀತಿಯಲ್ಲಿ, ಹಸ್ತಲಾಘವವನ್ನು ಮಾಡಲು ಮುಂದಾದ ವ್ಯಕ್ತಿಯು ತಾನು ಪರಿಸ್ಥಿತಿಯೊಂದಿಗೆ ಹೊಂದಾಣಿಕೆಯಲ್ಲಿರುವ ಕುರಿತು ಯಾವುದೇ ಕಾಳಜಿಯುಳ್ಳವನಾಗಿಲ್ಲವೆಂಬುದನ್ನೂ" ಇದು ತೋರಿಸುತ್ತದೆ. ಯಾವುದೇ ವಿಚಾರದಲ್ಲಿಯೇ ಆಗಲೀ, ಅವಸರಿಸುವುದು ಸಾಮಾನ್ಯವಾಗಿ ಧನಾತ್ಮಕ ಫಲಿತಾಂಶವನ್ನು ಕೊಡಲಾರದು, ಹಾಗಾಗಿ ವಾತಾವರಣವನ್ನು ತಿಳಿಯಾಗಿಸುವ ದಿಶೆಯಲ್ಲಿ ನಿಮ್ಮ ಧಾವಂತ ಮನಸ್ಥಿತಿಯನ್ನು ಶಾಂತಗೊಳಿಸಿರಿ.


 • ಎಲ್ಲೋ ನೋಡುತ್ತಾ ಕೈಕುಲುಕುವುದು

  ಹಸ್ತಲಾಘವದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ನಡುವೆ ದೃಷ್ಟಿ ಸಂಪರ್ಕವೇ ಇಲ್ಲದಿರುವ ಸ್ಥಿತಿಯಂತೂ ಕೇವಲ ಅವಮಾನಕರವಾದದ್ದಷ್ಟೇ ಅಲ್ಲ, ಬದಲಿಗೆ ಒರಟು ನಡವಳಿಕೆಯ ಪ್ರತೀಕವೂ ಹೌದು. ಹಸ್ತಲಾಘವದಲ್ಲಿ ತೊಡಗಿದ ತಕ್ಷಣವೇ ದೃಷ್ಟಿ ಸಂಪರ್ಕದಲ್ಲಿ ಅರೆಘಳಿಗೆಯಷ್ಟೇ ತೊಡಗಿ ಒಡನೆಯೇ ದೃಷ್ಟಿಯನ್ನು ಬೇರೆಡೆ ಹೊರಳಿಸುವುದು ನಿಮ್ಮ ಅನಾಸಕ್ತಿಯನ್ನೂ ಮತ್ತು ಅನಾದರವನ್ನೂ ತೋರಿಸುತ್ತದೆ. ಪರಸ್ಪರರ ಪರಿಚಯವು ಒಳಗೊಳ್ಳುವ ಒತ್ತಡದ ಸನ್ನಿವೇಶವನ್ನು ತಿಳಿಗೊಳಿಸುವ ದಿಶೆಯಲ್ಲಿ ಹಸ್ತಲಾಘವವು ನೆರವಾಗಬೇಕೇ ಹೊರತು ಪರಿಸ್ಥಿತಿಯನ್ನು ಮತ್ತಷ್ಟು ಬಿಗಿಗೊಳಿಸಬಾರದು. ಸಾಮಾನ್ಯವಾಗಿ ಸುಮ್ಮನೇ ಕಾಟಾಚಾರಕ್ಕಾಗಿ ತೊಡಗಿಸಿಕೊಳ್ಳುವ ಹಸ್ತಲಾಘವದಲ್ಲಿ ಇಂತಹ ರೀತಿಯ ಕೈಕುಲುಕುವಿಕೆಯು ತಳುಕು ಹಾಕಿಕೊಂಡಿರುತ್ತದೆ.


 • ದೀರ್ಘಕಾಲೀನ ಹಸ್ತಲಾಘವ

  ಕೈ ಬೆರಳುಗಳ ಮೂಳೆಗಳನ್ನು ಹಿಸುಕುವ ರೀತಿಯಲ್ಲಿಲ್ಲದ, ಒಂದು ಒಳ್ಳೆಯ ದೃಢ ಹಸ್ತಲಾಘವಕ್ಕಾಗಿ ಮುಂದಾಗುವುದು ಮುಖ್ಯವೇನೋ ಸರಿ; ಆದರೆ ನೀವು ಹಿಡಿದ ಕೈಯನ್ನು ಬಿಡದೇ ಹಾಗೆಯೇ ಹಿಡಿದುಕೊಂಡೇ ಇದ್ದಲ್ಲಿ, ಅದು ನಿರಾಶೆಗೆ, ಕಿರಿಕಿರಿಗೆ ಹೇತುವಾಗುತ್ತದೆ. ಕಾಟಾಚಾರಕ್ಕೆಂಬಂತೆ, ಹಸ್ತಲಾಘವವನ್ನು ಗಡಿಬಿಡಿಯಲ್ಲಿ ಮುಗಿಸಿಬಿಡಲು ನಿಮಗೆ ಮನಸ್ಸಿಲ್ಲದಿದ್ದರೂ ಕೂಡಾ, ಎರಡು ಪೂರ್ಣ ಕ್ಷಣಗಳಿಗಿಂತಲೂ ಹೆಚ್ಚುಕಾಲದವರೆಗೆ ಕೈಗಳನ್ನು ಹಿಡಿದುಕೊಂಡೇ ಇರುವುದು ಸರಿಯಲ್ಲ.


 • ತೀಕ್ಷ್ಣನೋಟದೊಂದಿಗಿನ ಹಸ್ತಲಾಘವ

  ಒಂದು ದೀರ್ಘಕಾಲೀನ ಹಸ್ತಲಾಘವದಲ್ಲಿ ನಿಮ್ಮ ಎದುರಾಳಿಯ ಕಣ್ಣುಗಳನ್ನು ಬಹುಕಾಲದವರೆಗೆ ಕೆಕ್ಕರಿಸಿ ಅಥವಾ ದುರುಗುಟ್ಟಿ ನೋಡುತ್ತಿರುವಿರೆಂದಾರೆ, ಅದರರ್ಥ ನೀವು ನಿಮ್ಮ ಪ್ರಾಬಲ್ಯವನ್ನು ಮೆರೆಯುತ್ತಿರುವಿರೆಂದಾಗುತ್ತದೆ.


 • ಹಸ್ತಲಾಘವದ ಸರಿಯಾದ ಪದ್ಧತಿ ಯಾವುದು ?

  ಮೊದಲ ಭೇಟಿಯಲ್ಲಿಯೇ ಒಂದು ಒಳ್ಳೆಯ ಅಭಿಪ್ರಾಯವನ್ನು ಮೂಡಿಸುವಲ್ಲಿ ಹಸ್ತಲಾಘವದ ಪಾತ್ರವು ಮಹತ್ವದ್ದೆಂದು ನಿಮಗೆ ತಿಳಿದಿದೆಯೇ? ಹಸ್ತಲಾಘವಕ್ಕೆ ಮುಂದಾದವರ ಹಸ್ತವು, ತಮ್ಮ ಹೆಬ್ಬೆರಳಿನಿಂದ, ಹಸ್ತಲಾಘವವನ್ನು ಸ್ವೀಕರಿಸುವವರ ಹಸ್ತದ ಹೆಬ್ಬೆರಳನ್ನು ಆವರಿಸಿಕೊಳ್ಳುವುದರ ಮೂಲಕ ಸ್ಪರ್ಶಿಸುವ ರೀತಿಯಲ್ಲಿರುತ್ತದೆ ಒಂದು ಒಳ್ಳೆಯ ಹಸ್ತಲಾಘವ. ಪರಸ್ಪರರ ಹಸ್ತಗಳ ಮೂಲಕದ ಸಂಪರ್ಕವು, ನಟನಾ ಸ್ನೇಹವನ್ನು ಮೀರಿದ ಮೈತ್ರಿ ಸಂದೇಶವನ್ನು ರವಾನಿಸುತ್ತದೆ.

  ಎದುರುಗೊಂಡಿರುವ ವ್ಯಕ್ತಿಯ ಕೈಯನ್ನು ಹಿಡಿದುಕೊಂಡಿರುವ ರೀತಿಯು ದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ, ಆದರೆ ತೀರಾ ದೃಢವಾಗಿಯೂ ಅಲ್ಲ ಮತ್ತು ಖಂಡಿತವಾಗಿಯೂ ತೀರಾ ಹಗುರಾಗಿಯೂ ಅಲ್ಲ. "ಯಾವಾಗಲೂ ಪರಸ್ಪರರ ನಡುವೆ ದೃಷ್ಟಿ ಸಂಪರ್ಕವನ್ನು ಕಾಯ್ದುಕೊಳ್ಳಿರಿ ಆದರೆ ಅದೇ ವೇಳೆಗೆ ನಿಮ್ಮ ದೃಷ್ಟಿಯು ಹಿತವಾದ ಸ್ನೇಹಪೂರ್ಣ ನೋಟವುಳ್ಳದ್ದಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ. ಯಾವುದೇ ಕಾರಣಕ್ಕೂ ಯಾವುದೇ ಪ್ರಕಾರದ ತೀಕ್ಷ್ಣ ಅಥವಾ ಉಗ್ರ ನೋಟವನ್ನು ಹಸ್ತಲಾಘವದ ವೇಳೆ ಹೊಂದಿರುವುದು ಖಂಡಿತಾ ಸಲ್ಲ".
ಈ ಹಸ್ತಲಾಘವವೆಂಬುದು ಪ್ರಾಯಶ: ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿರುವ, ಅತ್ಯಂತ ಪ್ರಾಚೀನವಾದ ಪರಿಚಯಾತ್ಮಕ ಸಂವಹನದ ಒಂದು ಪ್ರಕಾರ. ಈ ಹಸ್ತಲಾಘವ ಪದ್ಧತಿಯ ಕರಾರುವಕ್ಕಾದ ಜನ್ಮದಿನವು ಅಸ್ಪಷ್ಟವಾಗಿದ್ದರೂ ಸಹ, ಶಾಂತಿಯುತವಾದ ಉದ್ದೇಶಗಳ ಪ್ರಸರಣಕ್ಕಾಗಿ ಒಂದು ಮಾಧ್ಯಮದ ರೂಪದಲ್ಲಿ ಅದು ಆರಂಭಗೊಂಡಿತೆಂದು ಜನಪ್ರಿಯ ಸಿದ್ಧಾಂತವೊಂದರ ಅಂಬೋಣ.

ಹಿಂದೆ, ವ್ಯಕ್ತಿಯೋರ್ವನು ತನ್ನ ಬರಿದಾದ ಬಲಗೈಯನ್ನು ಅಪರಿಚಿತನತ್ತ ಚಾಚುತ್ತಿದ್ದುದರ ಅರ್ಥವೇನಾಗಿತ್ತೆಂದರೆ, ತಾನು ನಿಶ್ಶಸ್ತ್ರನಾಗಿರುವುದಾಗಿಯೂ ಹಾಗೂ ತನಗೆ ಆ ಅಪರಿಚಿತನ ಕುರಿತು ಯಾವುದೇ ದ್ವೇಷವಿಲ್ಲವೆಂಬುದನ್ನು ಸೂಚಿಸುವುದೂ ಆಗಿದ್ದಿತು. ಹಸ್ತದ ಮೇಲ್ಮುಖ ಮತ್ತು ಕೆಳಮುಖ ಚಲನೆಯು, ಓರೆಯಲ್ಲಿ ಅಡಗಿಸಿಟ್ಟಿರಬಹುದಾದ ಯಾವುದೇ ಖಡ್ಗಗಳನ್ನೋ ಅಥವಾ ಕಠಾರಿಗಳನ್ನೋ ತೆಗೆದಿರಿಸುವುದರ ಸೂಚಕವೆಂದು ಭಾವಿಸಲ್ಪಡುತ್ತಿತ್ತು. ಶಪಥವೊಂದನ್ನೋ ಇಲ್ಲವೇ ವಾಗ್ದಾನವೊಂದನ್ನೋ ಮಾಡುವಾಗ ಕೈಕುಲುಕುವಿಕೆಯ ಕ್ರಿಯೆಯು ಒಳ್ಳೆಯ ವಿಶ್ವಾಸದ ಒಂದು ಸಂಕೇತವೆಂದೂ ಭಾವಿಸಲ್ಪಡುತ್ತಿತ್ತು.

 
ಟೆಕ್ನಾಲಜಿ