Back
Home » ಆರೋಗ್ಯ
ವಿಶ್ವ ಬೆನ್ನುಮೂಳೆಯ ದಿನ 2019: ನಿಮ್ಮ ಬೆನ್ನು ಹುರಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್
Boldsky | 16th Oct, 2019 01:20 PM
 • ನಿಮ್ಮ ಬೆನ್ನು ಹುರಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಟಿಪ್ಸ್

  ಬೆನ್ನುಹುರಿಯ ಆರೋಗ್ಯಕ್ಕಾಗಿ ನೀವು ಕೆಲವೊಂದು ಪ್ರಮುಖ ಹೊಂದಾಣಿಕೆ ಮಾಡಿಕೊಂಡರೆ ಒಳ್ಳೆಯದು.


 • 1. ಎಡಬಲ

  ಯಾವುದೇ ರೀತಿಯ ಭಾರವಾದ ವಸ್ತುವನ್ನು ನೀವು ಎತ್ತುವಾಗ ಸರಿಯಾದ ರೀತಿಯನ್ನು ಅನುಸರಿಸದೆ ಇದ್ದರೆ ಆಗ ಬೆನ್ನು ಹುರಿಗೆ ಹಾನಿಯಾಗುವುದು. ಎನ್ ಐಎನ್ ಡಿಎಸ್ ಪ್ರಕಾರ ಭಾರ ಎತ್ತಲು ನೀವು ವಸ್ತುವಿನ ತುಂಬಾ ಹತ್ತಿರಕ್ಕೆ ಬಂದು ನಿಲ್ಲಿ ಮತ್ತು ಕಾಲುಗಳು ಮತ್ತು ನೊಣಕಾಲುಗಳನ್ನು ಬಳಸಿಕೊಂಡು ಅದನ್ನು ಎತ್ತಲು ಪ್ರಯತ್ನಿಸಿ. ಬೆನ್ನು ಮತ್ತು ದೇಹದ ಮೇಲಿನ ಭಾಗಕ್ಕೆ ಒತ್ತಡ ಹಾಕಬೇಡಿ. ನೀವು ಮೊಣಕಾಲನ್ನು ಬಾಗಿಸಿದರೆ ಆಗ ಕೈಗಳು ಒಂದೇ ಎತ್ತರದಲ್ಲಿ ಇರುವುದು. ತಲೆಯನ್ನು ಕೆಳಕ್ಕೆ ಬಾಗಿಸಿ ಮತ್ತು ಬೆನ್ನು ನೇರವಾಗಿ ಇರಲಿ. ವಸ್ತು ತುಂಬಾ ಭಾರವಾಗಿದ್ದರೆ ಆಗ ನೀವು ಇದನ್ನು ಒಬ್ಬರೇ ಎತ್ತಲು ಪ್ರಯತ್ನಿಸಬೇಡಿ. ಬೇರೆಯವರ ನೆರವು ಪಡೆಯಿರಿ.


 • 2. ಸರಿಯಾಗಿ ನಿದ್ರಿಸಿ

  ನಿದ್ರೆಯು ಸಂಪೂರ್ಣ ಆರೋಗ್ಯಕ್ಕೆ ಅತೀ ಅಗತ್ಯವಾಗಿರುವುದು. ದೇಹವು ತನ್ನನ್ನು ಸರಿಪಡಿಸಿಕೊಳ್ಳಲು ರಾತ್ರಿ ವೇಳೆ ನಿದ್ರಿಸುವುದು ಅತೀ ಅಗತ್ಯವಾಗಿರುವುದು. ಒಂದು ಬದಿಗೆ ಮಲಗಿ, ಹೊಟ್ಟೆಯಲ್ಲಿ ಮಲಗಬೇಡಿ. ಹೊಟ್ಟೆಯಲ್ಲಿ ಮಲಗಿದರೆ ಆಗ ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಒಂದೇ ಬದಿಗೆ ಮಲಗಿದರೆ ಆಗ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆ ನಿವಾರಣೆ ಆಗುವುದು ಮತ್ತು ರಾತ್ರಿ ವೇಳೆ ಉತ್ತಮವಾಗಿ ನಿದ್ರೆ ಬರುವುದು ಎಂದು ಹೃದಯ, ಶ್ವಾಸಕೋಶ ಮತ್ತು ರಕ್ತ ಸಂಸ್ಥೆಯು ಹೇಳಿದೆ. ಒಳ್ಳೆಯ ಹಾಸಿಗೆ ಮತ್ತು ತಲೆದಿಂಬಿಗೆ ಹಣ ವ್ಯಯಿಸಿ. ಇದರಿಂದ ಬೆನ್ನಿಗೆ ಒಳ್ಳೆಯ ವಿಶ್ರಾಂತಿ ಸಿಗುವುದು.


 • 3. ಸ್ಟ್ರೆಚ್ ಮಾಡುವುದು

  ಪ್ರತಿಯೊಬ್ಬರು ದಿನನಿತ್ಯವು ಸ್ಟ್ರೆಚಿಂಗ್ ಮಾಡಬೇಕು. ಇದರಿಂದ ದೇಹದಲ್ಲಿರುವಂತಹ ಗಂಟುಗಳು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ನೆರವಾಗುವುದು. ನೀವು ಹೀಗೆ ಮಾಡಿದರೆ ಅದರಿಂದ ಗಾಯಾಳು ಸಮಸ್ಯೆ ಕಡಿಮೆ ಮಾಡಬಹುದು. ದಿನದ ಆರಂಭವನ್ನು ಕೆಲವೊಂದು ಸ್ಟ್ರೆಚ್ ಮೂಲಕ ಮಾಡಿದರೆ ಅದರಿಂದ ಬೆನ್ನುಹುರಿಯ ಆರೋಗ್ಯವು ಉತ್ತಮವಾಗುವುದು.


 • 4. ಚಟುವಟಿಕೆಯಿಂದ ಇರಿ

  ದೈಹಿಕವಾಗಿ ಫಿಟ್ ಮತ್ತು ಚಟುವಟಿಕೆಯಿಂದ ಇರದೆ ಇದ್ದರೆ ಆಗ ಖಂಡಿತವಾಗಿಯೂ ಬೆನ್ನು ನೋವು ಕಾಣಿಸಿಕೊಳ್ಳುವುದು ಎಂದು ಎನ್ ಐಎನ್ ಡಿಎಸ್ ಹೇಳಿದೆ. ನೀವು ಜಿಮ್ ಗೆ ಹೋಗುವುದು, ನಡೆಯುವುದು, ಬೈಕ್ ಸವಾರಿ ಅಥವಾ ಈಜುವುದನ್ನು ಮಾಡಬಹುದು ಅಥವಾ ಮಕ್ಕಳೊಂದಿಗೆ ಆಟವಾಡುವುದರಿಂದಲೂ ಚಟುವಟಿಕೆಯಿಂದ ಇರಬಹುದು ಮತ್ತು ಇದರಿಂದ ದೇಹಕ್ಕೆ ಚಲನೆ ಸಿಗುವುದು ಮತ್ತು ಆರೋಗ್ಯಕಾರಿ ಬೆನ್ನುಹುರಿ ನಿಮ್ಮದಾಗುವುದು. ಸ್ಟ್ರೆಚಿಂಗ್, ಏರೋಬಿಕ್ ಚಟುವಟಿಕೆಗಳು ಬೆನ್ನುಹುರಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.


 • 5. ಆರೋಗ್ಯಕಾರಿ ತೂಕ ಕಾಪಾಡುವುದು

  ಆರೋಗ್ಯಕಾರಿ ಆಹಾರದೊಂದಿಗೆ ವ್ಯಾಯಾಮ ಮಾಡಿದರೆ ಆಗ ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು. ಅತಿಯಾದ ತೂಕ ಮತ್ತು ಬೊಜ್ಜಿನಿಂದಾಗಿ ಬೆನ್ನು ನೋವು ಸಮಸ್ಯೆಯು ಹೆಚ್ಚಾಗುವುದು. ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಆವರಿಸಿಕೊಂಡಿದ್ದರೆ ಆಗ ಖಂಡಿತವಾಗಿಯೂ ಸ್ನಾಯುಗಳು, ಅಸ್ಥಿರಜ್ಜು ಮತ್ತು ಬೆನ್ನಿನ ಕೆಳಭಾಗದ ಸ್ನಾಯುರಜ್ಜುಗಳ ಮೇಲೆ ಒತ್ತಡ ಬೀಳುವುದು.


 • 6. ದ್ರವಾಹಾರ ಹೆಚ್ಚು ಸೇವಿಸಿ

  ದೇಹವು ಹೆಚ್ಚು ದ್ರವಾಹಾರವನ್ನು ಪಡೆದರೆ ಆಗ ಅದರಿಂದ ಮೃದು ಅಂಗಾಂಶಗಳ ಸ್ಥಿತಿಸ್ಥಾಪಕತ್ವ ಮತ್ತು ಗಂಟಿನಲ್ಲಿರುವಂತಹ ದ್ರವಾಂಶ ಕಾಪಾಡಿಕೊಳ್ಳಬಹುದು. ನಮ್ಮ ಬೆನ್ನುಹುರಿಯು ಜಲಸಂಚಯನಕ್ಕೆ ಒಳಗಾಗುವುದು ಹೆಚ್ಚು ಮತ್ತು ಇದರಿಂದ ತೂಕ ಕಡಿಮೆ ಆಗಬಹುದು. ಬೆನ್ನು ಮೂಳೆಯ ಡಿಸ್ಕ್ ಗಳು ಕುಗ್ಗಿದರೆ ಆಗ ನೋವಿನ ಪರಿಸ್ಥಿತಿ ಕಂಡುಬರುವುದು ಸಾಮಾನ್ಯವಾಗುವುದು. ಡಿಸ್ಕ್ ಬಿರುಕು ಬಿಡುವುದು ಮತ್ತು ತನ್ನ ಸ್ಥಾನದಿಂದ ಪಲ್ಲಟಗೊಳ್ಳಲು ದ್ರವಾಂಶದ ಕೊರತೆಯು ಪ್ರಮುಖ ಕಾರಣವಾಗಿರುವುದು. ಈ ಸಮಸ್ಯೆಯಿಂದಾಗಿ ಡಿಸ್ಕ್ ಜಾರುವ ಸಮಸ್ಯೆ ಮತ್ತು ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆ ಬರುವುದು. ಅಮೆರಿಕಾದ ಮೂಳೆಶಾಸ್ತ್ರಜ್ಞರ ಅಕಾಡಮಿಯ ಪ್ರಕಾರ ಹರ್ನಿಯೇಟೆಡ್ ಡಿಸ್ಕ್ ಸಿಯಾಟಿಕಾಗೆ ಪ್ರಮುಖ ಕಾರಣವಾಗಿದೆ ಮತ್ತು ಇದು ಒಂದು ರೀತಿಯ ಬೆನ್ನು ನೋವಿಗೆ ಕಾರಣವಾಗಿ, ಬಳಿಕ ಕಾಲುಗಳಿಗೆ ಕೂಡ ಹಬ್ಬಬಹುದು.


 • 7. ಜಾಣ್ಮೆಯಿಂದ ಕೆಲಸ ಮಾಡಿ

  ನೀವು ಕೆಲಸ ಮಾಡುವಂತಹ ಸ್ಥಳವು ಸರಿಯಾಗಿ ಇರದೆ ಇದ್ದರೆ ಆಗ ಖಂಡಿತವಾಗಿಯೂ ಬೆನ್ನಿನ ಕೆಳಭಾಗ ಮತ್ತು ಮೇಲಿನ ಭಾಗದ ಮೇಲೆ ಒತ್ತಡ ಬೀಳುವುದು. ಇಂತಹ ಸಮಸ್ಯೆಯಿಂದ ಬೆನ್ನಿನ ಸೆಳೆ ಮತ್ತು ತಲೆನೋವು ಕೂಡ ಬರಬಹುದು. ಲ್ಯಾಪ್ ಟಾಪ್, ಫೋನ್, ಕಂಪ್ಯೂಟರ್ ಡೆಸ್ಕ್ ಅಥವಾ ಕಾರು ನಿಮ್ಮ ದೇಹದ ಎತ್ತರಕ್ಕೆ ಸರಿಯಾಗಿದೆಯಾ ಮತ್ತು ಅದರಲ್ಲಿ ಕಾರ್ಯನಿರ್ವಹಿಸಲು ಆಗುತ್ತದೆಯಾ ಎಂದು ಅರಿತುಕೊಳ್ಳಿ. ಬೆನ್ನಿನ ಕೆಳಗಿನ ಭಾಗಕ್ಕೆ ನೆರವಾಗುವಂತಹ ಕುರ್ಚಿ ಆಯ್ಕೆ ಮಾಡಿ ಅಥವಾ ಒಂದು ತಲೆದಿಂಬು ಅಥವಾ ಟವೆಲ್ ನ್ನು ಸುತ್ತಿ ಕುರ್ಚಿಯಲ್ಲಿಡಿ. ಮೊಣಕಾಲುಗಳು 90 ಡಿಗ್ರಿಯಲ್ಲಿ ಇರಬೇಕು ಮತ್ತು ಪಾದಗಳು ನೆಲದ ಮೇಲೆ ಸರಿಯಾಗಿ ಕುಳಿತುಕೊಂಡಿರಬೇಕು. ಕುತ್ತಿಗೆ ಮತ್ತು ಕಿವಿಯ ಮಧ್ಯೆ ಮೊಬೈಲ್ ನ್ನು ಸುತ್ತಾಡಿಸಿಕೊಂಡು ಇರಬೇಡಿ. ಬೆನ್ನು ನೋವು ತಪ್ಪಿಸಲು ನೀವು ಇಯರ್ ಫೋನ್ ಬಳಕೆ ಮಾಡಿ. ನೀವು ಕುಳಿತುಕೊಂಡು ಕೆಲಸ ಮಾಡುವ ವೇಳೆ ಪದೇ ಪದೇ ಅಲ್ಲಿಂದ ಎದ್ದು ನಡೆದುಕೊಂಡು ಹೋಗಿ. ಒಂದೇ ರೀತಿಯಾಗಿ ನೀವು ಕುಳಿತುಕೊಂಡರೆ ಆಗ ಅದು ಬೆನ್ನಿನ ಸ್ನಾಯುಗಳನ್ನು ಬಿಗಿಗೊಳಿಸುವುದು ಮತ್ತು ಅದರಿಂದ ನೋವು ಬರುವುದು. 2011ರಲ್ಲಿ ಬಿಡುಗಡೆಗೊಂಡಿರುವ ಅಧ್ಯಯನ ವರದಿಯ ಪ್ರಕಾರ, ಕೆಲಸದ ಮಧ್ಯೆ ಸಣ್ಣ ಪ್ರಮಾಣದ ವಿಶ್ರಾಂತಿ ತೆಗೆದುಕೊಂಡರೆ ಆಗ ಮಾನಸಿಕ ಆರೋಗ್ಯ ಮತ್ತು ಉತ್ಪಾದಕತೆಯು ಉತ್ತಮಗೊಳ್ಳುವುದು.


 • 8. ಯಾವುದೇ ಎಚ್ಚರಿಕೆ ಸೂಚನೆಗಳ ಬಗ್ಗೆ ಗಮನಹರಿಸಿ

  ಬೆನ್ನು ನೋವು ಅಥವಾ ಅದರ ಸಮಸ್ಯೆಯನ್ನು ನೀವು ಕಡಗಣಿಸಬೇಡಿ. ಯಾವಾಗಲೊಮ್ಮೆ ಬೆನ್ನು ನೋವು ಕಾಣಿಸಬಹುದು. ಆದರೆ ಇದು ಗಂಭೀರವೇನಲ್ಲ. ಆದರೆ ಪದೇ ಪದೇ ಬೆನ್ನು ನೋವು ಬರುತ್ತಲಿದ್ದರೆ ಮತ್ತು ಅದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಆಗ ಖಂಡಿತವಾಗಿಯೂ ಅದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ದೇಹವು ಏನು ಹೇಳುತ್ತದೆ ಎನ್ನುವುದನ್ನು ಕೇಳಿ. ವ್ಯಾಯಮ ಮತ್ತು ಕೆಲಸ ಅತಿಯಾಗಿ ಮಾಡಬೇಡಿ. ಸ್ವ ಚಿಕಿತ್ಸೆ ಮಾಡಿಕೊಳ್ಳಲು ಹೋಗಬೇಡಿ. ನಿಮಗೆ ಬೆನ್ನು ನೋವಿದ್ದರೆ ಆಗ ಖಂಡಿತವಾಗಿಯೂ ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆಯಿರಿ.




ಇಂದು ವಿಶ್ವ ಬೆನ್ನುಹುರಿ ದಿನಾಚರಣೆ. ಈ ದಿನದ ಮಹತ್ವ ಬೆನ್ನು ಹುರಿ ಹಾಗೂ ಇದಕ್ಕೆ ಸಂಬಂಧಿಸಿದ ಆರೋಗ್ಯ ಜಾಗೃತಿ ಮೂಡಿಸುವುದಾಗಿದೆ. 2019ನೇ ಸಾಲಿನ ವಿಶ್ವ ಬೆನ್ನುಹುರಿ ದಿನಾಚರಣೆಯ ವಿಷಯ "ಬೆನ್ನುಹುರಿಯನ್ನು ಸಕ್ರಿಯಗೊಳಿಸಿ" ಎಂಬುದಾಗಿದೆ.

2012ರಲ್ಲಿ ವರ್ಲ್ಡ ಫೆಟರೇಷನ್ ಆಫ್ ಚೀರೋಪ್ರಾಕ್ಟಿಕ್ ಈ ದಿನಾಚರಣೆಯನ್ನು ಮೊದಲು ಆಚರಿಸಲು ಆರಂಭಿಸಿತು. ಒಟ್ಟಾರೆ ಬೆನ್ನುಹುರಿಯ ಪ್ರಾಮುಖ್ಯತೆ, ಮಹತ್ವ, ಆರೋಗ್ಯ ಸಮಸ್ಯೆಗಳು, ಅದಕ್ಕೆ ಸೂಕ್ತ ಚಿಕಿತ್ಸೆ, ಬೆನ್ನುಹುರಿ ರಕ್ಷಿಸಿಕೊಳ್ಳುವುದು ಹೇಗೆ ಸೇರಿದಂತೆ ಇದಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿದೆ.

ವಿಶ್ವ ಬೆನ್ನು ಹುರಿ ದಿನಾಚರಣೆ ಹಿನ್ನೆಲೆ ಬೆನ್ನುನೋವಿಗೆ ಕಾರಣಗಳೇನು ಎಂಬ ಬಗ್ಗೆ ಮುಂದೆ ತಿಳಿಯೋಣ.

ಆಧುನೀಕರಣಗೊಂಡಂತೆ ಮನುಷ್ಯನ ದೈಹಿಕ ಚಟುವಟಿಕೆಗಳು ಕೂಡ ಕುಂದುತ್ತಾ ಹೋಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಹಿಂದೆ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಮನುಷ್ಯನೇ ಮಾಡುತ್ತಿದ್ದ. ಆದರೆ ಇಂದು ಮುಕ್ಕಾಲು ಭಾಗದಷ್ಟು ಕೆಲಸವನ್ನು ಕಂಪ್ಯೂಟರ್ ಮಾಡಿ ಮುಗಿಸುತ್ತದೆ. ಇಂತಹ ಸಂದರ್ಭದಲ್ಲಿ ಮನುಷ್ಯನಿಗೆ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಹಲವಾರು ಸಮಸ್ಯೆಗಳು ಕೂಡ ಆರಂಭವಾಗಿದೆ. ಇದರಲ್ಲಿ ಮುಖ್ಯವಾಗಿ ಬೆನ್ನು ನೋವು ಪ್ರಮುಖವಾದದ್ದು.

ವಿಶ್ವದಾದ್ಯಂತ ಇಂದು ಲಕ್ಷಾಂತರ ಮಂದಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಾವು ಮಾಡುತ್ತಿರುವಂತಹ ಕೆಲಸ ಕಾರ್ಯಗಳು. ಕಂಪ್ಯೂಟರ್ ಮುಂದೆ ಕುಳಿತುಕೊಂಡು ಇಡೀ ದಿನ ಕೆಲಸ ಮಾಡುವುದು, ಅದೇ ರೀತಿಯಾಗಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣ ಹೀಗೆ ಹಲವಾರು ಕಾರಣಗಳಿಂದಾಗಿ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಬೆನ್ನು ನೋವು ಒಮ್ಮೆ ಬಂದರೆ ಅದರ ನಿವಾರಣೆ ಮಾಡುವುದು ತುಂಬಾ ಕಠಿಣವಾಗಿರುವುದು. ನೋವಿನೊಂದಿಗೆ ಜೀವನ ಸಾಗಿಸಿದರೆ ಆಗ ಪರಿಸ್ಥಿತಿಯು ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆನ್ನು ನೋವಿನ ಪರಿಣಾಮವಾಗಿ ಸಾಮಾಜಿಕವಾಗಿ ಬೆರೆಯಲು ಕಷ್ಟವಾಗಬಹುದು, ಜೀವನದ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರಬಹುದು.

ಉದ್ಯೋಗ ಸಂಬಂಧಿ ಅಸಾಮಾನ್ಯತೆಯಿಂದಾಗಿ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಎಂದು ರಾಷ್ಟ್ರೀಯ ನರಶಾಸ್ತ್ರ ಕಾಯಿಲೆ ಮತ್ತು ಪಾರ್ಶ್ವವಾಯು (ಎನ್ ಐಎನ್ ಡಿಎಸ್) ಹೇಳಿದೆ. ಬೆನ್ನುಹುರಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ನಿಮಗೆ ಸ್ವಲ್ಪ ಸಮಯದ ಬಳಿಕ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು.

ಬೆನ್ನುಹುರಿಯ ಸಂಪೂರ್ಣ ಆರೋಗ್ಯ ಸುಧಾರಣೆ ಮಾಡಲು ನೀವು ಹಲವಾರು ರೀತಿಯ ವಿಧಾನಗಳನ್ನು ಅನುಸರಿಸಿಕೊಂಡು ಹೋಗಬಹುದು. ದೇಹದ ಚಲನೆಗಳ ಬಗ್ಗೆ ಮತ್ತು ನೀವು ದೈನಂದಿನ ಚಟುವಟಿಕೆಗಳನ್ನು ಯಾವ ರೀತಿಯಾಗಿ ಮಾಡುತ್ತೀರಿ ಎನ್ನುವುದರ ಬಗ್ಗೆ ನೀವು ಗಮನಹರಿಸಬೇಕು.

 
ಟೆಕ್ನಾಲಜಿ