Back
Home » ಸಮ್ಮಿಲನ
ಭಾರತೀಯರು ತಮ್ಮ ಹಿರಿಯರ ಪಾದಗಳನ್ನು ಏಕೆ ಮುಟ್ಟುತ್ತಾರೆ?
Boldsky | 15th Oct, 2019 03:36 PM
 • ಹಿಂದೂ ಸಂಸ್ಕೃತಿ

  ಹಿರಿಯದ ಪಾದಮುಟ್ಟಿ ನಮಸ್ಕರಿಸಿದರೆ, ಆಗ ಆ ವ್ಯಕ್ತಿಗೆ ಶಕ್ತಿ, ಜ್ಞಾನ, ವಿದ್ಯೆ ಮತ್ತು ಪ್ರಸಿದ್ಧಿ ಸಿಗುವುದು. ಇದರರ್ಥ ಹಿರಿಯರು ಈ ಜಗತ್ತಿನಲ್ಲಿ ನಮಗಿತಂಲೂ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿದ್ದಾರೆ ಮತ್ತು ಅವರು ಕ್ರಮಿಸಿರುವಂತಹ ದೂರವು ದೀರ್ಘವಾಗಿದೆ. ಹಿರಿಯರ ಕಾಲಿನಲ್ಲಿರುವ ಧೂಳಿನಿಂದಲೂ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.


 • ಪಾದ ಮುಟ್ಟಿ ನಮಸ್ಕರಿಸಲು ಸರಿಯಾದ ವಿಧಾನ

  ಹಿರಿಯರು ಅಥವಾ ಗೌರವಾನ್ವಿತ ವ್ಯಕ್ತಿಯ ಪಾದ ಮುಟ್ಟಿ ನಮಸ್ಕರಿಸಲು ನಿಮ್ಮ ದೇಹದ ಮೇಲಿನ ಭಾಗವನ್ನು ಬಾಗಿಸಬೇಕು ಮತ್ತು ಮೊಣಕಾಲನ್ನು ಬಗ್ಗಿಸದೆ, ಕೈಗಳನ್ನು ನೇರವಾಗಿಸಿ ಪಾದಗಳನ್ನು ಮುಟ್ಟಬೇಕು. ಕೈಗಳು ನೇರವಾಗಿ ಇರಬೇಕು ಮತ್ತು ನಿಮ್ಮ ಬಲದ ಕೈಯು ಅವರ ಎಡಗಾಲು ಮತ್ತು ಎಡಗೈಯು ಬಲದ ಕಾಲನ್ನು ಮುಟ್ಟಬೇಕು. ಹಿರಿಯ ವ್ಯಕ್ತಿಯು, ಕಾಲು ಮುಟ್ಟಿದವರ ತಲೆಯ ಮೇಲಿನ ಭಾಗವನ್ನು ಬಲದ ಕೈಯಿಂದ ಮುಟ್ಟಿ ಆಶೀರ್ವಾದ ನೀಡಬೇಕು.


 • ಹಿರಿಯದ ಪಾದ ಮುಟ್ಟಿ ನಮಸ್ಕರಿಸುವ ಹಿಂದಿರುವ ವಿಜ್ಞಾನ

  ಪಾದ ಸ್ಪರ್ಶ ಮಾಡುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವು ಇದೆ. ನಮ್ಮ ದೇಹದಲ್ಲಿರುವ ನರಗಳು ಮೆದುಳಿನಿಂದ ಆರಂಭವಾಗಿ ದೇಹದ ಎಲ್ಲಾ ಭಾಗಗಳಿಗೆ ಹರಡಿ ಅಂತಿಮವಾಗಿ ಕಾಲ್ಬೆರಳು ತುದಿ ಭಾಗದಲ್ಲಿ ಕೊನೆಯಾಗುವುದು. ಪಾದಸ್ಪರ್ಶ ಮಾಡುವ ವೇಳೆ ನಿಮ್ಮ ಕೈಬೆರಳುಗಳು ಮತ್ತು ಎದುರಿನ ವ್ಯಕ್ತಿಯ ಕಾಲ್ಬೆರಳುಗಳು ಪರಸ್ಪರ ಸ್ಪರ್ಶಗೊಂಡು, ಎರಡು ದೇಹಗಳ ಶಕ್ತಿಯು ಸಂಪರ್ಕಿಸುವುದು. ನಿಮ್ಮ ಕೈಯ ಬೆರಳುಗಳು ಶಕ್ತಿಯನ್ನು ಪಡೆಯುವುದಾದರೆ, ಅದೇ ಹಿರಿಯರ ಕಾಳಿನ ಬೆರಳುಗಳು ಶಕ್ತಿ ನೀಡುವುದು. ಹಿರಿಯರು ನಿಮ್ಮ ಗೌರವವನ್ನು ಸ್ವೀಕರಿಸಿದರೆ ಆಗ ಅವರ ಹೃದಯವು ಒಳ್ಳೆಯ ಆಲೋಚನೆ ಹಾಗೂ ಧನಾತ್ಮಕ ಶಕ್ತಿಯಿಂದ ಕೂಡುವುದು. ಇದು ಕೈಬೆರಳು ಹಾಗೂ ಕಾಲಿನ ಬೆರಳಿನ ಮೂಲಕ ವರ್ಗಾವಣೆ ಆಗುವುದು.


 • ಯಾರ ಪಾದ ಸ್ಪರ್ಶಿಸಬೇಕು?

  ಭಾರತೀಯ ಸಂಸ್ಕೃತಿಯಲ್ಲಿ ಕಿರಿಯರು ತಮ್ಮ ಹಿರಿಯ ಸೋದರ, ಪೋಷಕರು, ಅಜ್ಜ-ಅಜ್ಜಿ, ಶಿಕ್ಷಕರು, ಆಧ್ಯಾತ್ಮಿಕ ಗುರು ಮತ್ತು ಹಿರಿಯ ವ್ಯಕ್ತಿಗಳ ಪಾದ ಸ್ಪರ್ಶಿಸಿ ನಮಸ್ಕರಿಸುವರು. ಹಿರಿಯ ಮತ್ತು ಗೌರವಾನ್ವಿತ ವ್ಯಕ್ತಿಗಳ ಪಾದ ಸ್ಪರ್ಶ ಮಾತ್ರ ಮಾಡಬೇಕು. ಯಾಕೆಂದರೆ ಇವರು ಜೀವನಪೂರ್ತಿ ಹೆಚ್ಚು ಜ್ಞಾನ, ಅನುಭವ ಮತ್ತು ಸದ್ಗುಣಗಳನ್ನು ಪಡೆದಿರುವರು. ಇದು ತುಂಬಾ ಶಕ್ತಿಶಾಲಿ ಆಗಿರುವುದು ಮತ್ತು ಅವರನ್ನು ಗೌರವಿಸಿದರೆ ಮತ್ತು ಆಶೀರ್ವಾದ ಪಡೆದರೆ ಅದರಿಂದ ನಮಗೆ ಹೆಚ್ಚಿನ ಲಾಭ ಆಗುವುದು.


 • ಹಿಂದೂ ಸಂಪ್ರದಾಯದಲ್ಲಿ ಹಿರಿಯದ ಪಾದ ಸ್ಪರ್ಶಿಸಿ ನಮಸ್ಕರಿಸುವ ಪ್ರಾಮುಖ್ಯತೆ

  ವೇದಗಳ ಕಾಲದಿಂದಲೂ ಹಿಂದೂ ಸಂಪ್ರದಾಯದಲ್ಲಿ ಪಾದ ಸ್ಪರ್ಶಿಸಿ ನಮಸ್ಕರಿಸುವಂತಹ ಸಂಪ್ರದಾಯವು ಇದೆ ಮತ್ತು ಇದರನ್ನು ಚರಣ ಸ್ಪರ್ಶ( ಚರಣ ಎಂದರೆ ಪಾದ ಮತ್ತು ಸ್ಪರ್ಶ ಎಂದರೆ ಮುಟ್ಟುವುದು). ಹಿಂದೂ ಸಂಪ್ರದಾಯದ ಪ್ರಕಾರ ನೀವು ಹಿರಿಯರ ಪಾದ ಸ್ಪರ್ಶಿಸಿದ ವೇಳೆ ಜ್ಞಾನ, ಬುದ್ಧಿ, ಶಕ್ತಿ ಮತ್ತು ಪ್ರಸಿದ್ಧಿ ಸಿಗುವುದು. ಹಿರಿಯರು ನಮಗಿಂತ ಹೆಚ್ಚಿನ ಜೀವನ ನೋಡಿರುವರು ಮತ್ತು ಅವರ ಅನುಭವವು ಅಪಾರವಾಗಿರುವುದು. ಇದರಿಂದ ಅವರ ಪಾದ ಸ್ಪರ್ಶ ಮಾಡಿದರೆ ಆಗ ನಿಮಗೆ ಅವರಲ್ಲಿರುವ ಜ್ಞಾನ, ಅನುಭವದ ಲಾಭವಾಗುವುದು.


 • ಹಿರಿಯದ ಪಾದ ಸ್ಪರ್ಶದಿಂದ ಸಿಗುವ ಆರೋಗ್ಯ ಲಾಭಗಳು

  ಹಿಂದೂ ವಿದ್ವಾಂಸರ ಪ್ರಕಾರ ಪಾದ ಸ್ಪರ್ಶ ಮಾಡಿ ನಮಿಸಲು ಮೂರು ವಿಧಾನಗಳು ಇವೆ. ದೇಹದ ಮೇಲಿನ ಭಾಗವನ್ನು ಬಗ್ಗಿಸಿ, ಪಾದವನ್ನು ಸ್ಪರ್ಶಿಸುವುದು. ಎರಡನೇಯದಾಗಿ ಮೊಣಕಾಲೂರಿ ಕುಳಿತುಕೊಂಡು ಎದುರಿನ ವ್ಯಕ್ತಿಯ ಪಾದ ಸ್ಪರ್ಶ ಮಾಡುವುದು. ಮೂರನೇಯ ಹಾಗೂ ಕೊನೆಯದು ಸಾಷ್ಟಾಂಗ ನಮಸ್ಕಾರ ಮಾಡುವುದು ಅಂದರೆ ಉದ್ದಗೆ ಮಲಗಿ ಎದುರಿನ ವ್ಯಕ್ತಿಯ ಪಾದ ಸ್ಪರ್ಶ ಮಾಡುವುದು. ಮೊದಲೇ ವಿಧಾನದಲ್ಲಿ ನಿಮ್ಮ ಬೆನ್ನು ಮತ್ತು ಮೊಣಕಾಲಿಗೆ ಎಳೆಯಲ್ಪಡುವುದು. ಮೊಣಕಾಲಿನ ಮೇಲೆ ಕುಳಿತುಕೊಂಡು ಪಾದ ಸ್ಪರ್ಶ ಮಾಡಿದ ವೇಳೆ ಮೊಣಕಾಲು ಮತ್ತು ದೇಹದ ಎಲ್ಲಾ ಗಂಟುಗಳು ಕೂಡ ಎಳೆಯಲ್ಪಡುವುದು. ಇದರಿಂದ ನೋವು ನಿವಾರಣೆ ಆಗುವುದು. ಸಾಷ್ಟಾಂಗ ಪ್ರಣಾಮ ಮಾಡಿದ ವೇಳೆ ದೇಹದ ಸಂಪೂರ್ಣ ಭಾಗವು ಎಳೆಯಲ್ಪಡುವುದು ಮತ್ತು ದೇಹದ ನೋವು ಕಡಿಮೆ ಆಗುವುದು.


 • ಭಾರತದಲ್ಲಿ ಹಿರಿಯದ ಪಾದ ಮುಟ್ಟಿ ನಮಸ್ಕರಿಸುವ ಸಂದರ್ಭಗಳು

  ಭಾರತೀಯರು ವಿವಿಧ ಸಂದರ್ಭದಲ್ಲಿ ಹಿರಿಯರ ಕಾಲಿಗೆ ಬಿದ್ದು ನಮಸ್ಕಾರ ಪಡೆಯುವರು. ಇದರಲ್ಲಿ ಕೆಲವು ಸಂದರ್ಭಗಳು ಹೀಗಿವೆ...

  • ಏನಾದರೂ ಹೊಸತನ್ನು ಆರಂಭಿಸುವ ವೇಳೆ.

  • ಹುಟ್ಟುಹಬ್ಬ ಮತ್ತು ಮದುವೆ ಸಂದರ್ಭದಲ್ಲಿ.

  • ಹಬ್ಬದ ಸಂದರ್ಭದಲ್ಲಿ.

  • ದೂರ ಪ್ರಯಾಣ ಹೋಗುವ ಮೊದಲು

  • ಯಾವುದೇ ಪರೀಕ್ಷೆ ಅಥವಾ ಸಭೆಯ ಮೊದಲು

  • ಹಿರಿಯರು ನಿಮ್ಮ ಮನೆಗೆ ಬಂದಾಗ ಅಥವಾ ಅವರ ಮನೆಗೆ ನೀವು ಹೋದ ಸಂದರ್ಭದಲ್ಲಿ.

  * ಕೆಲವು ಕುಟುಂಬಗಳಲ್ಲಿ ನಿತ್ಯವೂ ಹಿರಿಯರಿಂದ ಆಶೀರ್ವಾದ ಪಡೆಯುವ ಸಂಪ್ರಾದಾಗಳೂ ಇದೆ.
ಭಾರತೀಯ ಸಂಸ್ಕೃತಿಗೆ ಮಾರು ಹೋಗದವರೇ ಇಲ್ಲ. ಇಲ್ಲಿ ಜಾತಿ, ಧರ್ಮಗಳು ಹಲವಾರು ಇದ್ದರೂ ಇಲ್ಲಿನ ಸಂಸ್ಕೃತಿ ಮಾತ್ರ ವಿಶೇಷ. ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಾಗಿ ಗುರು ಹಿರಿಯರನ್ನು ಗೌರವಿಸುವ ಪರಿಪಾಠವಿದೆ. ಹಿರಿಯರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯಲಾಗುತ್ತದೆ. ಹಿಂದಿನಿಂದಲೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗಿದೆ ಮತ್ತು ಈಗಲೂ ಇದು ಮುಂದುವರಿದಿದೆ.

ಎಲ್ಲಾ ಹಿಂದೂಗಳು ಹಿರಿಯರ ಕಾಲಿಗೆ ಬಿದ್ದು ನಮಿಸುವಂತಹ ಸಂಪ್ರದಾಯ ಪಾಲಿಸುವರು. ಪಾದ ಸ್ಪರ್ಶಿಸಿ ನಮಸ್ಕರಿಸಿದರೆ ಆಗ ಎಲ್ಲಾ ರೀತಿಯ ಅಹಂ ದೂರವಾಗುವುದು ಮತ್ತು ಎದುರಿನ ವ್ಯಕ್ತಿಯ ವಯಸ್ಸು, ಅನುಭವ, ಸಾಧನೆ ಮತ್ತು ಜ್ಞಾನವನ್ನು ನಾವು ಗೌರವಿಸಿದಂತೆ. ಇದಕ್ಕೆ ಪ್ರತಿಯಾಗಿ ಹಿರಿಯರು ನಮಗೆ ಆಶೀರ್ವಾದ ನೀಡುವರು. ಭಾರತೀಯ ಸಂಸ್ಕೃತಿಯಲ್ಲಿ ಇರುವಂತಹ ಈ ಸಂಪ್ರದಾಯದ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ...

 
ಟೆಕ್ನಾಲಜಿ