Back
Home » ಸುದ್ದಿ
ಸೈನೈಡ್ ಸರಣಿ ಹಂತಕಿ ಇನ್ನಷ್ಟು ಸಂಚು ಬಯಲು ಮಾಡಿದ ಪೊಲೀಸರು
Oneindia | 9th Oct, 2019 06:20 PM
 • ಇನ್ನಿಬ್ಬರು ಮಕ್ಕಳ ಹತ್ಯೆಗೆ ಸಂಚು

  ತನ್ನ ಈ ಹತ್ಯಾ ಸರಣಿಗೆ ಸಹಾಯಕರಾಗಿ ಎರಡನೇ ಪತಿ ಶಾಜು, ಆಕೆ ಸಂಬಂಧಿಕ ಎಂಎಸ್ ಮ್ಯಾಥ್ಯೂ ಹಾಗೂ ಪ್ರಾಜಿಕುಮಾರ್ ಎಂಬುವವರನ್ನು ಬಳಸಿಕೊಂಡಿದ್ದಾಳೆ. ಎಲ್ಲರನ್ನು ಈಗ ಪೊಲೀಸರು ಬಂಧಿಸಿದ್ದಾರೆ. 'ಮೊದಲಿಗೆ ಎಲ್ಲರಿಗೂ ಆಹಾರದಲ್ಲಿ ವಿಷ ಬೆರೆಸಿ ಕೊಂದಿದ್ದಾಳೆ ಎಂದು ತಿಳಿದು ಬಂದಿತು. ಶವಗಳ ಮರಣೋತ್ತರ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಿದ ಬಳಿಕ, ಅತ್ಯಲ್ಪ ಪ್ರಮಾಣದ ಸೈನಡ್ ಬೆರೆಸಿ ಕೊಂದಿದ್ದಾಳೆ" ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿರುವ ಸಿಮೋನ್ ಅವರು ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ ಹೇಳಿದ್ದಾರೆ.


 • ಸುಳ್ಳು ಹೇಳಿದ ಮದ್ವೆಯಾಗಿದ್ದ ಶಾಜು

  ಇಡುಕ್ಕಿಯ ಕಟ್ಟಪ್ಪನ ಎಂಬ ಊರಿನವಳಾದ ಜಾಲಿ ಬಿ.ಕಾಂ ಪದವೀಧರೆಯಾಗಿದ್ದಾಳೆ. 1997ರಲ್ಲಿ ಥಾಮಸ್ ರಾಯ್ ಜತೆ ಪ್ರೇಮ ವಿವಾಹವಾಗಿದ್ದಳು, ದಂಪತಿಗೆ 15 ಹಾಗೂ 21 ವರ್ಷದ ಇಬ್ಬರು ಪುತ್ರರಿದ್ದಾರೆ. ಅವರಿಬ್ಬರೂ ಕೊಚ್ಚಿಯಲ್ಲಿರುವ ತಮ್ಮ ತಂದೆಯ ಸೋದರಿ ಮನೆಯಲ್ಲಿದ್ದಾರೆ. ಕಲ್ಲಿಕೋಟೆಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕಿಯಾಗಿದ್ದೇನೆ ಎಂದು ನಂಬಿಸಿ ಥಾಮಸ್ ರನ್ನು ವರಿಸಿದ್ದಳು. ಅಸಲಿಗೆ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಸರಣಿ ಕೊಲೆ ಆರೋಪಿ ಶಾಜು ಹಾಗೂ ಜಾಲಿ ಇಬ್ಬರಿಗೂ ಮೊದಲ ಮದುವೆಗೂ ಮುನ್ನವೆ ಪರಿಚಯವಿತ್ತು ಎಂಬುದನ್ನು ಫೋನ್ ಸಂಭಾಷಣೆ ವಿವರಗಳಂದ ತಿಳಿದು ಬಂದಿದೆ.


 • 2017ರಲ್ಲಿ ಶಾಜು ಮದುವೆಯಾದ ಜಾಲಿ

  2002ರಿಂದ 2016ರ ನಡುವೆ ಸರಣಿ ಹತ್ಯೆ ನಡೆಸಿದ ಬಳಿಕ ಜಾಲಿ 2017ರಲ್ಲಿ ಹೈಸ್ಕೂಲ್ ಶಿಕ್ಷಕ ಶಾಜು ಝಚರಿಯಾಸ್ ಎಂಬವರನ್ನು ವಿವಾಹವಾದಳು. ಎರಡನೇ ಮದುವೆ ಬಳಿಕವೂ ಥಾಮಸ್ ಹಾಗೂ ಕುಟುಂಬದವರ ಸಮಾಧಿ ಬಳಿ ಹೋಗಿ ಹೂಗಳನ್ನಿಟ್ಟು, ಮೊಂಬತ್ತಿ ಹಚ್ಚಿಸಿ ಬರುತ್ತಿದ್ದಳು. ರವಿವಾರದಂದು ಚರ್ಚ್ ಗೆ ಹೋಗಿ ತಪ್ಪದೇ ಪ್ರಾರ್ಥನೆ ಸಲ್ಲಿಸಿದ್ದಳು ಎಂದು ಊರಿನವರು ಹೇಳಿದ್ದಾರೆ. ಜಾಲಿ ಮಾಡಿರುವ ಹತ್ಯೆಗಳ ಬಗ್ಗೆ ತಿಳಿದು ಆಘಾತ ವ್ಯಕ್ತಪಡಿಸಿದ್ದಾರೆ.


 • ಒಂದೇ ಕುಟುಂಬದಲ್ಲಿ ಸರಣಿ ಸಾವು

  ಜಾಲಿಯ ಅತ್ತೆ ನಿವೃತ್ತ ಶಿಕ್ಷಕಿ 57 ವರ್ಷ ವಯಸ್ಸಿನ ಅಣ್ಣಮ್ಮ ಥಾಮಸ್ 2002ರಲ್ಲಿ ಹೃದಯಾಘಾತದಿಂದ ಮೃತರಾದರು. ಬಳಿಕ ಆಕೆ ಪತಿ ಟಾಮ್ ಥಾಮಸ್ (66), ಪುತ್ರ ರಾಯ್​ ಥಾಮಸ್​ (40), 2016ರಲ್ಲಿ ಎರಡು ವರ್ಷದ ಮಗು ಅಲ್ಫೋನ್ಸಾ, ಮಗುವಿನ ತಾಯಿ ಸಿಲಿ(27) ಎಲ್ಲರೂ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು. ಮಾವ ಮೃತ ಪಡುವುದಕ್ಕೂ ಮುನ್ನ ಆಸ್ತಿ ಎಲ್ಲವನ್ನು ತನ್ನ ಹೆಸರಿಗೆ ಜಾಲಿ ಬರೆಸಿಕೊಂಡಿದ್ದಳು. ಸಿಲಿಯ ಪತಿಯೇ ಶಾಜು(ಜಾಲಿಯ ಪ್ರಿಯಕರ). ಸಿಲಿ ಮೃತಳಾದ ಒಂದು ವರ್ಷದ ಬಳಿಕ ಜಾಲಿ ಹಾಗೂ ಶಾಜು ಮದುವೆಯಾಗಿದ್ದಳು.


 • ಟಾಮ್ ಥಾಮಸ್ ಕಿರಿಯ ಪುತ್ರನಿಂದ ದೂರು

  ಆಸ್ತಿ ವರ್ಗಾವಣೆ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ರೋಜೋ ಥಾಮಸ್ (ಟಾಮ್ ಥಾಮಸ್ ಕಿರಿಯ ಪುತ್ರ) ಅನುಮಾನ ವ್ಯಕ್ತಪಡಿಸಿ, ತನ್ನ ಕುಟುಂಬದಲ್ಲಾಗಿರುವ ಹತ್ಯೆ ಬಗ್ಗೆಯೂ ತನಿಖೆ ನಡೆಸುವಂತೆ ಕ್ರೈಂ ವಿಭಾಗದ ಪೊಲೀಸರಿಗೆ ದೂರು ನೀಡಿದರು. ತನಿಖೆ ನಡೆಸಿದ ಬಳಿಕ ಸರಣಿ ಹತ್ಯೆಯ ರಹಸ್ಯ ಬಯಲಾಗಿದೆ.
ತಿರುವನಂತಪುರಂ, ಅಕ್ಟೋಬರ್ 09: 14 ವರ್ಷಗಳ ಅಂತರದಲ್ಲಿ ಎರಡು ವರ್ಷದ ಮಗು ಸೇರಿದಂತೆ 6 ಮಂದಿಯನ್ನು ಸೈನೈಡ್ ನೀಡಿ ಕೊಂದ ಸೊಸೆ ಜಾಲಿ ಶಾಜು ರೂಪಿಸಿದ್ದ ಇನ್ನಷ್ಟು ಸಂಚನ್ನು ಕೇರಳ ಪೊಲೀಸರು ಬಯಲು ಮಾಡಿದ್ದಾರೆ.

ಕೊಡಥಾಯ್ ಊರಿನ ಪೊನ್ನಮಟ್ಟಂ​ ಎಂಬ ಕುಟುಂಬದಲ್ಲಿ 2002ರಿಂದ 2016ರ ನಡುವೆ ಸಂಭವಿಸಿದ ಸಾವಿನ ಬಗ್ಗೆ ಕುಟುಂಬದ ಸದಸ್ಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಈ ಕುಟುಂಬದ ಸೊಸೆ ಜಾಲಿ ಶಾಜು ಮ್ಯಾಥ್ಯೂ ಈ ಹತ್ಯಾಕಾಂಡದ ಹಿಂದಿನ ಸಂಚುಗಾರ್ತಿ ಎಂದು ತಿಳಿದು ಬಂದಿದ್ದು, ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾಅರೆ.

ಕುಟುಂಬದ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡು ತಾನು ಬೇರೊಬ್ಬನನ್ನು ಮದುವೆಯಾಗಿದ್ದ ಜಾಲಿ, ಇದೇ ಮಾದರಿಯಲ್ಲಿ ಇನ್ನಷ್ಟು ಹತ್ಯೆ ಮಾಡಲು ಸಂಚು ರೂಪಿಸಿದ್ದಳು ಎಂದು ಕೋಳಿಕ್ಕಾಡ್ ಗ್ರಾಮೀಣ ಎಸ್ ಪಿ ಕೆಜಿ ಸಿಮೋನ್ ಹೇಳಿದ್ದಾರೆ.

ಹೃದಯಾಘಾತ ಸರಣಿ ಸಾವು, ಕೇರಳದ ನಿಗೂಢ ಹತ್ಯೆ ರಹಸ್ಯ ಬಯಲು

ಇದೇ ಕುಟುಂಬದ ಇನ್ನಿಬ್ಬರು ಮಕ್ಕಳನ್ನು ಇದೇ ರೀತಿ ಸೈನೈಡ್ ಬೆರೆಸಿದ ಆಹಾರ ತಿನ್ನಿಸಿ ಕೊಲ್ಲಲು ಜಾಲಿ ಮುಂದಾಗಿದ್ದಳು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಥಾಮಸ್ ಕುಟುಂಬದ ಆರೋಗ್ಯ ತಪಾಸಣೆಯನ್ನು ಗುಟ್ಟಾಗಿ ನಡೆಸಲಾಗುತ್ತಿದ್ದು, ಸಮಸ್ಯೆ ಕಂಡು ಬಂದವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

   
 
ಟೆಕ್ನಾಲಜಿ