Back
Home » ಸುದ್ದಿ
ಜರ್ಮನಿಯ ಹಾಲೆ ನಗರದಲ್ಲಿ ಗುಂಡು ಹಾರಿಸಿ ಇಬ್ಬರ ಹತ್ಯೆ
Oneindia | 9th Oct, 2019 06:30 PM

ಬರ್ಲಿನ್, ಅಕ್ಟೋಬರ್ 9: ಜರ್ಮನಿಯ ಹಾಲೆ ನಗರದಲ್ಲಿ ಬುಧವಾರ ಗುಂಡು ಹಾರಿಸಿ, ಇಬ್ಬರನ್ನು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡು ಹಾರಿಸಿ, ಹತ್ಯೆ ಮಾಡಿದ ನಂತರ ಆರೋಪಿಗಳು ಪರಾರಿ ಆಗಿದ್ದಾರೆ. "ಪ್ರಾಥಮಿಕ ಮಾಹಿತಿ ಪ್ರಕಾರ, ಹಾಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಲವು ಸುತ್ತು ಗುಂಡು ಹಾರಿಸಲಾಗಿದೆ. ಆ ನಂತರ ಶಂಕಿತರು ಕಾರಿನಲ್ಲಿ ಪರಾರಿಯಾಗಿದ್ದಾರೆ" ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಇನ್ನು ಮನೆಗಳಿಂದ ಹೊರಗೆ ಬಾರದಂತೆ ನಾಗರಿಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಇನ್ನು ಸೆಂಟ್ರಲ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ. ಈ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ.

ಮಾಧ್ಯಮವೊಂದರ ಪ್ರಕಾರ, ಪಾಲಸ್ ಜಿಲ್ಲೆಯ ಯಹೂದಿಗಳ ಶ್ರದ್ಧಾ ಕೇಂದ್ರದ ಎದುರು ಗುಂಡಿನ ಮೊರೆತ ಮೊದಲಿಗೆ ಕೇಳಿಬಂತು. ಇನ್ನು ಯಹೂದಿಗಳ ಸ್ಮಶಾನದ ಮೇಲೆ ಹ್ಯಾಂಡ್ ಗ್ರೆನೇಡ್ ತೂರಲಾಗಿದೆ. ಈ ಸುದ್ದಿ ಬಗ್ಗೆ ಪೊಲೀಸರು ಯಾವುದೇ ಖಾತ್ರಿ ಮಾಹಿತಿ ನೀಡಿಲ್ಲ.

   
 
ಟೆಕ್ನಾಲಜಿ