Back
Home » ಗಾಸಿಪ್
'ಸೈರಾ' ಬಳಿಕ ಮತ್ತೊಂದು ಸರ್ಪ್ರೈಸ್ ಕೊಡೋಕೆ ರೆಡಿಯಾದ ಚಿರು ಪುತ್ರ
Oneindia | 9th Oct, 2019 05:47 PM

'ಸೈರಾ' ಸಿನಿಮಾ ನಿರ್ಮಿಸಿ ಚಿರಂಜೀವಿಗೆ ಬಹುದೊಡ್ಡ ಬ್ರೇಕ್ ಕೊಟ್ಟ ರಾಮ್ ಚರಣ್ ತೇಜ ಈಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರಂತೆ. 'ಖೈದಿ ನಂ 150' ಚಿತ್ರದ ಮೂಲಕ ತಂದೆಗೆ ಕಂಬ್ಯಾಕ್ ನೀಡಿದ ರಾಮ್ ಚರಣ್, ಚಿಕ್ಕಪ್ಪನಿಗಾಗಿ ಮೆಗಾ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರಂತೆ.

ರಾಜಕೀಯ ಕಾರಣದಿಂದ ಸಿನಿಮಾ ಇಂಡಸ್ಟ್ರಿಯಿಂದ ಸ್ವಲ್ಪ ದೂರವಾಗಿರುವ ಪವನ್ ಕಲ್ಯಾಣ್ ಅವರನ್ನ ಮತ್ತೆ ಬೆಳ್ಳಿತೆರೆ ತರಲು ಹಲವು ನಿರ್ಮಾಪಕರು ಮುಗಿಬಿದ್ದಿದ್ದಾರೆ. ಈ ಮಧ್ಯೆ ರಾಮ್ ಚರಣ್ ಕೂಡ ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'

2018ರ ಜನವರಿ ತಿಂಗಳಲ್ಲಿ ತೆರೆಕಂಡಿದ್ದ 'ಅಜ್ಞಾತವಾಸಿ' ಸಿನಿಮಾ ಬಳಿಕ ಪವನ್ ಕಲ್ಯಾಣ್ ಎಲೆಕ್ಷನ್ ನಲ್ಲಿ ಬ್ಯುಸಿಯಾದರು. ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ ಆಗುವ ಲೆಕ್ಕಾಚಾರದಲ್ಲಿದ್ದಾರೆ ಎಂಬ ಮಾತುಗಳಿವೆ.

ಇದೇ ಸಮಯದಲ್ಲಿ ರಾಮ್ ಚರಣ್ ತೇಜ ಕೂಡ ತಮ್ಮ ಚಿಕ್ಕಪ್ಪನಿಗೆ ರೆಡ್ ಕಾರ್ಪೆಟ್ ಹಾಕಿದ್ದು, ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ಮಾಡಲು ಆಫರ್ ಮಾಡಲಿದ್ದಾರಂತೆ.

ಮೆಗಾಸ್ಟಾರ್ ಚಿರಂಜೀವಿಯ 152ನೇ ಚಿತ್ರ ಆರಂಭ

ಈ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಾರದ ಪವನ್ ಕಲ್ಯಾಣ್, ಮುಂದಿನ ಸಿನಿಮಾ ಯಾರ ಜೊತೆ ಮಾಡಬೇಕು ಅಥವಾ ಮಾಡಬೇಕಾ ಎನ್ನುವುದನ್ನ ನಿರ್ಧರಿಸಿದಂತಿಲ್ಲ. ಅದಕ್ಕೆ ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ.

ಮತ್ತೊಂದೆಡೆ ಎಸ್ ಎಸ್ ರಾಜಮೌಳಿ ನಿರ್ದೇಶನ ಆರ್.ಆರ್.ಆರ್ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಎನ್.ಟಿ.ಆರ್ ಮತ್ತು ರಾಮ್ ಚರಣ್ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಚಿರಂಜೀವಿಗೆ ಸೈರಾ ಸಿನಿಮಾ ಮಾಡಿದ್ದರು.

   
 
ಟೆಕ್ನಾಲಜಿ