Back
Home » ಸಿನಿ ಸಮಾಚಾರ
ಬಿಲ್ಡಪ್ ಬೇಡ, ನಿರ್ದೇಶಕರಿಗೆ ಮೂಗುದಾರ ಹಾಕಬೇಡಿ: ನಾಯಕರಿಗೆ ಜಗ್ಗೇಶ್ ಮನವಿ
Oneindia | 9th Oct, 2019 01:24 PM

''ನಮಗೆ ಎಷ್ಟೇ ಚಪ್ಪಾಳೆ ಬಿದ್ದರೂ ಅದಕ್ಕೆ ಕಾರಣಕರ್ತ ಒಬ್ಬ ನಿರ್ದೇಶಕನೇ. ದಯಮಾಡಿ ನಿರ್ದೇಶಕರಿಗೆ ಗೌರವ ನೀಡಿ.'' ಎಂದು ನಟ ಜಗ್ಗೇಶ್ ಹೇಳಿದ್ದಾರೆ. ನಿನ್ನೆ (ಸಪ್ಟೆಂಬರ್ 8) 'ರಂಗನಾಯಕ' ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜಗ್ಗೇಶ್ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ.

ಅ, ಬ, ಪ, ಮ.... ಈ ಅಕ್ಷರಗಳಲ್ಲಿದೆ ಸ್ಟಾರ್ ನಿರ್ದೇಶಕರ ಶಕ್ತಿ

ಚಿತ್ರರಂಗದಲ್ಲಿ ನಾಯಕರು ನಿರ್ದೇಶಕ ಮೇಲೆ ಕೆಲವು ಬಾರಿ ಒತ್ತಡ ಹಾಕುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತವೆ. ನಿರ್ದೇಶಕರ ಕೆಲಸದಲ್ಲಿ ಕೆಲ ನಟರು ಮೂಗು ತುರಿಸುತ್ತಾರೆ. ಈ ವಿಷಯಗಳ ಬಗ್ಗೆ ಜಗ್ಗೇಶ್ ಇದೀಗ ಮಾತನಾಡಿದ್ದು, 'ಹೀಗೆ ಮಾಡುವುದು ಬೇಡ' ಎಂದು ಕನ್ನಡ ಚಿತ್ರರಂಗದ ಕಲಾವಿದರಿಗೆ ಮನವಿ ಮಾಡಿದ್ದಾರೆ.

ಪರಭಾಷೆಯವರ ಬೂಟು ನೆಕ್ಕುವುದು ಬೇಡ, ನಮ್ಮಲ್ಲಿ ಕಲಾವಿದರಿದ್ದಾರೆ: ಜಗ್ಗೇಶ್

''ನಿರ್ದೇಶಕರು ಇದ್ದರೇ ಕಲಾವಿದರು. ಒಬ್ಬ ನಿರ್ದೇಶಕನಿಗೆ ಮೂಗುದಾರ ಹಾಕಬೇಡಿ. ಅವರನ್ನು ಸ್ವಾತಂತ್ರ್ಯವಾಗಿ ಬಿಡಿ. ನಿಮ್ಮ ಬಿಲ್ಡಪ್ ಗಳಿಗೆ ನೀವೇ ಶಾಟ್ ಗಳನ್ನು ತೆಗೆಸಿಕೊಳ್ಳಬೇಡಿ. ಅವನನ್ನು ಎಷ್ಟು ಮುಂದೆ ಬಿಡುತ್ತೀರಿ, ಅಷ್ಟು ನಿಮ್ಮನ್ನು ಮೆರೆಸುತ್ತಾನೆ. ಅದಕ್ಕೆ ಯಾವತ್ತೂ ಕೂಡ ನಿರ್ದೇಶಕನಿಗೆ ಗೌರವ ನೀಡಬೇಕು.'' ಎಂದು ಜಗ್ಗೇಶ್ ಹೇಳಿದ್ದಾರೆ.

'ರಂಗನಾಯಕ' ಸಿನಿಮಾದ ಮೂಲಕ ಜಗ್ಗೇಶ್ ಹಾಗೂ ನಿರ್ದೇಶಕ ಗುರು ಪ್ರಸಾದ್ ಮತ್ತೆ ಒಂದಾಗಿದ್ದಾರೆ. 'ಮಠ' ಹಾಗೂ 'ಎದ್ದೇಳು ಮಂಜುನಾಥ' ನಂತರ ಹ್ಯಾಟ್ರಿಕ್ ಸಿನಿಮಾಗೆ ಸಿದ್ಧವಾಗಿದ್ದಾರೆ. ''ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದು, ಆ ನಂಬಿಕೆಯನ್ನು ಕೆಲಸದ ಮೂಲಕ ತೋರಿಸೋಣ'' ಎಂದು ನಿರ್ದೇಶಕ ಗುರು ಪ್ರಸಾದ್ ಜೊತೆಗೆ ಕೈ ಜೋಡಿಸಿದ್ದಾರೆ.

   
 
ಟೆಕ್ನಾಲಜಿ