Back
Home » ಸಿನಿ ಸಮಾಚಾರ
ತೀವ್ರ ನಿಗಾ ಘಟಕದಲ್ಲಿ ಖ್ಯಾತ ಕಲಾವಿದ ಜಯಕುಮಾರ್: ನೆರವಿಗಾಗಿ ಪತ್ನಿಯ ಮನವಿ
Oneindia | 9th Oct, 2019 11:23 AM

ಹಿರಿಯ ಕಲಾವಿದ ಜಯಕುಮಾರ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಜಯಕುಮಾರ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಅವರ ಕುಟುಂಬ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕಂಗಾಲಾಗಿದ್ದಾರೆ.

ಕಳೆದ 50 ವರ್ಷಗಳಿಂದ ಗುಬ್ಬಿ ಕಂಪೆಂನಿ, ಗುಡಗೇರಿ, ಕುಮಾರಸ್ವಾಮಿ, ಚಿಂದೋಡಿ ಸೇರಿದಂತೆ ಸಾಕಷ್ಟು ಕಂಪನಿಗಳಲ್ಲಿ ನಿರಂತರ ರಂಗಸೇವೆ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ 150 ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ವರನಟ ರಾಜಕುಮಾರ್ ಅವರು ಪ್ರತ್ಯಕ್ಷವಾಗಿಸುವ ಅಭಿನಯ ಅವರದು. ನಾಟಕ ಯಾವುದೇ ಇರಲಿ ಈ ಕಲಾವಿದನಿಗೆ ಹೀರೋ ಪಾತ್ರ ಮುಡಿಪು. ನೋಡಲು ವರನಟನ ತದ್ರೂಪ. ಹಾಗೆಂದು ಅನುಕರಣೀಯ ಪ್ರತಿಭೆ ಮಾತ್ರವಲ್ಲ, ಅವರೊಬ್ಬ ಅಪ್ರತಿಮ ನಟ.

ಶ್ರೇಷ್ಟ ಗಾಯಕನ ಕೊನೆ 'ಜೀವಗಾನ' : ಎಲ್ ಎನ್ ಶಾಸ್ತ್ರಿ ಬದ್ಧತೆಗೆ ದೊಡ್ಡ ಶರಣು

ದಾವಣಗೆರೆಯ ಕೊಡಗನೂರಿನವರಾದ ಜಯಕುಮಾರ್, ತಿಂಗಳ ಹಿಂದೆಯಷ್ಟೆ ಕಲಬುರ್ಗಿಯಲ್ಲಿ ಖಾಯಂ ಮೊಕ್ಕಾಂ ಮಾಡಿರುವ ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುತ್ತಿರುವಾಗಲೆ ಲಘು ಹೃದಯಘಾತವಾಗಿದೆ. ಎರಡನೇ ಬಾರಿ ಮತ್ತೆ ಹೃದಯಾಘಾತವಾದಾಗ ದಾವಣಗೆರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದ್ರೆ ಅಷ್ಟರಲ್ಲೆ ಎರಡು ಕಿಡ್ನಿಗಳ ಸಮಸ್ಯೆ ಕಾಣಿಸಿಕೊಂಡ ಕಾರಣ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

ಕಳೆದ ಹದಿನೈದು ದಿನಗಳಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖ ಆಗುವ ಎಲ್ಲ ಲಕ್ಷಣಗಳಿವೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಹೆಲ್ತ್ ಕಾರ್ಡಿನ ಸೌಲಭ್ಯ, ಹೃದಯ ರಕ್ತನಾಳಗಳಿಗೆ ಅಳವಡಿಸಿದ ಸ್ಟಂಟ್ ಗಳಿಗೆ ಕೊನೆಗೊಂಡಿದೆ. ಈಗ ಮಣಿಪಾಲ್ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ಚಿಕಿತ್ಸೆಗೂ ಹಣ ಕಟ್ಟಲೇಬೇಕಿದೆ. ಚಿಕಿತ್ಸೆ ವೆಚ್ಚ ಭರಿಸಲು ಜಯಕುಮಾರ್ ಬಳಿ ಹಣವಿಲ್ಲ. ಜಯಕುಮಾರ್ ಜತೆ ಅವರ ಪತ್ನಿ ಪದ್ಮಾವತಿ, ಮಗ ಮಾರುತಿ‌ ಇದ್ದಾರೆ.

ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ಶಿವರಾಜ್ ಕುಮಾರ್, ದರ್ಶನ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆ, ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಕುಮಾರ್ ಈಗ ತೀರ ಸಂಕಷ್ಟದಲ್ಲಿದ್ದಾರೆ. ನೆರವಿಗಾಗಿ ಅವರ ಪತ್ನಿ ಪದ್ಮಾಪತಿ ಮತ್ತು ಪುತ್ರ ಮಾರುತಿ ಮನವಿ ಮಾಡಿಕೊಂಡಿದ್ದಾರೆ.

ಜಯಕುಮಾರ್ ಅವರ ಬ್ಯಾಂಕ್ ಖಾತೆ ವಿವರ ಹೀಗಿದೆ :

ಸಿಂಡಿಕೇಟ್ ಬ್ಯಾಂಕ್ ಬೆಂಗಳೂರು A/C: 04492010022368

IFSC code: SYNB 0000449

   
 
ಟೆಕ್ನಾಲಜಿ