Back
Home » ಇತ್ತೀಚಿನ
ಭರ್ಜರಿ ಬೆಲೆ ಇಳಿಕೆ ಕಂಡ ಮೊಟೊರೊಲಾ ರೇಜರ್ ಫೋಲ್ಡೆಬಲ್‌ ಫೋನ್‌!
Gizbot | 18th Sep, 2020 08:05 PM
 • ಮೊಟೊರೊಲಾ

  ಹೌದು, ಮೊಟೊರೊಲಾ ಸಂಸ್ಥೆಯು ತನ್ನ ಮೊಟೊ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ ಬರೋಬ್ಬರಿ 30,000ರೂ ಇಳಿಕೆ ಮಾಡಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ 1,24,999ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿತ್ತು. ಆದ್ರೀಗ ಬೆಲೆ ಕಡಿತದಿಂದ 94,999ರೂ.ಬೆಲೆಗೆ ಲಭ್ಯ. ಹಾಗೆಯೇ HDFC ಗ್ರಾಹಕರಿಗೆ ಸುಮಾರು 10,000ರೂ. ಡಿಸ್ಕೌಂಟ್‌ ಸಹ ಸಿಗಲಿದೆ. ಹಾಗಾದರೇ ಮೊಟೊರೊಲಾ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


 • ಡಿಸ್‌ಪ್ಲೇ ಮತ್ತು ಡಿಸೈನ್

  ಮೊಟೊರೊಲಾ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ 876 x 2142 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ OLED ಹೆಚ್‌ಡಿ ಪ್ಲಸ್‌ ಫ್ಲೆಕ್ಸಿಬಲ್ ಸ್ಕ್ರೀನ್‌ ಹೊಂದಿದೆ. ಡಿಸ್‌ಪ್ಲೇ ಅನುಪಾತವು 21:9 ಆಗಿದ್ದು, ಮಡಚುವ ರಚನೆಯಿದೆ. ಹಾಗೆಯೇ ನೋಟಿಫಿಕೇಶನಗಾಗಿ 2.7 ಇಂಚಿನ ಕಿರು ಡಿಸ್‌ಪ್ಲೇ ಹೊಂದಿದ್ದು, 600 x 800 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಬಾಹ್ಯ ನೋಟ್ ಹೆಚ್ಚು ಆಕರ್ಷಕವಾಗಿದೆ.


 • ಪ್ರೊಸೆಸರ್‌ ಸಾಮರ್ಥ್ಯ

  ಮೊಟೊರೊಲಾ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲ ಇದೆ. ಇದರೊಂದಿಗೆ 6GB RAM ಮತ್ತು 128GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಫೋನಿನ ಮಲ್ಟಿಟಾಸ್ಕ್ ಕೆಲಸಗಳಿಗೆ ಪ್ರೊಸೆಸರ್ ಕಾರ್ಯವೈಖರಿ ಸಪೋರ್ಟ್‌ ನೀಡಲಿದೆ.


 • ಕ್ಯಾಮೆರಾ ವಿಶೇಷ

  ಮೊಟೊರೊಲಾ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಆ ಕ್ಯಾಮೆರಾವು f/1.7 ಅಪರ್ಚರ್ ನೊಂದಿಗೆ 16ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5ಎಂಪಿ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ನೈಟ್‌ ಮೋಡ್‌ ಆಯ್ಕೆ ಸೇರಿದಂತೆ ಅಗತ್ಯ ಕ್ಯಾಮೆರಾ ಫೀಚರ್ಸ್‌ಗಳನ್ನು ಒದಗಿಸಲಾಗಿದೆ.


 • ಬ್ಯಾಟರಿ ಲೈಫ್

  ಮೊಟೊರೊಲಾ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ 2510mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದ್ದು, ಇದರೊಂದಿಗೆ 15W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ಬ್ಲೂಟೂತ್ 5.0, ವೈ-ಫೈ 802.11, 4G LTE, ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಮೊಟೊರೊಲಾ ಸಂಸ್ಥೆಯ ಜನಪ್ರಿಯ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಮೊಟೊರೊಲಾ ರೇಜರ್ ಈಗಾಗಲೇ ಅಚ್ಚರಿ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಇದೀಗ ಮೊಟೊರೊಲಾ ರೇಜರ್ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಭರ್ಜರಿ ಬೆಲೆ ಇಳಿಕೆ ಕಂಡಿದೆ. ಸ್ಕ್ರೀನ್‌ ಫ್ಲೆಕ್ಸಿಬಲ್‌ ರಚನೆಯನ್ನು ಪಡೆದಿರುವುದು ಈ ಫೋನಿನ ಪ್ರಮುಖ ಆಕರ್ಷಣೆ ಆಗಿದೆ.

 
ಟೆಕ್ನಾಲಜಿ