Back
Home » ಇತ್ತೀಚಿನ
ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇ ನಲ್ಲಿ ವಿಶೇಷ ರಿಯಾಯಿತಿ
Gizbot | 17th Sep, 2020 08:00 PM
 • ಫ್ಲಿಪ್ ಕಾರ್ಟ್

  ವಿಶೇಷವೆಂದರೆ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ಪ್ರೀ ಬುಕ್ಕಿಂಗ್ ಮಾಡುವುದಕ್ಕೂ ಕೂಡ ಅವಕಾಶ ನೀಡುತ್ತಿದೆ.ಸೇಲ್ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ನೀವು ನಿಮಗೆ ಬೇಕಿರುವ ವಸ್ತುಗಳನ್ನು ಗುರುತು ಮಾಡಿ ಆರ್ಡರ್ ಮಾಡಬಹುದು. ಹಾಗಾದ್ರೆ ಯಾವೆಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ರಿಯಾಯಿತಿ ಇರುತ್ತದೆ ನೋಡೋಣ.


 • ಗೇಮಿಂಗ್ ಲ್ಯಾಪ್ ಟಾಪ್ ಗಳಿಗೆ 30% ದ ವರೆಗೆ ರಿಯಾಯಿತಿ

  ಅತ್ಯುತ್ತಮ ಗೇಮಿಂಗ್ ಲ್ಯಾಪ್ ಟಾಪ್ ಗಳನ್ನು ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ನಲ್ಲಿ 30% ರಿಯಾಯಿತಿಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ನೋ ಕಾಸ್ಟ್ ಇಎಂಐ ಪಾವತಿ ಆಯ್ಕೆ ಮತ್ತು ಎಕ್ಸ್ ಚೇಂಜ್ ಆಫರ್ ನ್ನು ಕೂಡ ನೀವು ಇದಕ್ಕೆ ಪಡೆದುಕೊಳ್ಳಬಹುದು.


 • ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 70% ದ ವರೆಗೆ ರಿಯಾಯಿತಿ

  ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ ಈ ಸೇಲ್ ನಲ್ಲಿ ಸೆಪ್ಟೆಂಬರ್ 20 ರ ವರೆಗೂ ಅತ್ಯುತ್ತಮ ರಿಯಾಯಿತಿ ಇರಲಿದ್ದು 70% ದ ವರಗೆ ರಿಯಾಯಿತಿ ಲಭ್ಯವಾಗುತ್ತದೆ.


 • ಉತ್ತಮ ಮಾರಾಟ ಕಂಡ ಪ್ರಿಂಟರ್ ಗಳಿಗೆ ಅಧ್ಬುತ ರಿಯಾಯಿತಿ

  ಪ್ರಿಂಟರ್ ನ್ನು ಹುಡುಕುತ್ತಿದ್ದೀರಾ? ಎಪ್ಸಾನ್, ಹೆಚ್ ಪಿ, ಕೆನಾನ್ ಮತ್ತು ಇತರೆ ಪ್ರಿಂಟರ್ ಗಳು 2,000 ರುಪಾಯಿಯೊಳಗೆ ಲಭ್ಯವಿದ್ದು ಉತ್ತಮ ಬೆಲೆಯಲ್ಲಿ ಖರೀದಿಸುವ ಅವಕಾಶ ಈ ಸೇಲ್ ನಲ್ಲಿ ಲಭ್ಯವಿದೆ.


 • ಮೌಸ್ ಮತ್ತು ಕೀಬೋರ್ಡ್ ಗಳಿಗೆ ರಿಯಾಯಿತಿ

  ಕಂಪ್ಯೂಟರ್ ಆಕ್ಸಸರೀಸ್ ನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕು ಎಂದು ನೀವು ಬಯಸುತ್ತಿದ್ದೀರಾ. ಹಾಗಾದ್ರೆ ಇದುವೇ ಸರಿಯಾದ ಸಮಯ. ಮೌಸ್, ಕೀಬೋರ್ಡ್ ಗಳು ಕಡಿಮೆ ಬೆಲೆಗೆ ಕೈಗೆಟುಕುತ್ತದೆ. ಹೆಚ್ ಪಿ, ಲಾಜಿಟೆಕ್, ಡೆಲ್ ಸೇರಿದಂತೆ ಹಲವು ಬ್ರ್ಯಾಂಡ್ ನ ಮೌಸ್ ಮತ್ತು ಕೀಬೋರ್ಡ್ ಗಳು 1,000 ರುಪಾಯಿಯೊಳಗಿನ ಬೆಲೆಗೆ ಸಿಗುತ್ತದೆ.


 • ಗೇಮಿಂಗ್ ಡಿವೈಸ್ ಗಳಿಗೆ ರಿಯಾಯಿತಿ

  ಗೇಮ್ ಪ್ಯಾಡ್ ಗಳು, ಗೇಮಿಂಗ್ ಕನ್ಸೋಲ್, ಹೆಡ್ ಸೆಟ್, ಸಿಡಿ ಮತ್ತು ಇತ್ಯಾದಿಗಳು 399 ರುಪಾಯಿ ಬೆಲೆಗೆ ಸಿಗುತ್ತದೆ. ಫ್ಲಿಪ್ ಕಾರ್ಟ್ ನಲ್ಲಿ ಸೆಪ್ಟೆಂಬರ್ 18 ರಂದು ಖರೀದಿಗೆ ಅವಕಾಶವಿರುತ್ತದೆ.


 • ಮೊಬೈಲ್ ಕವರ್

  ಮೊಬೈಲ್ ಕವರ್ ಮತ್ತು ಸ್ಕ್ರೀನ್ ಗಾರ್ಡ್ ಗಳಿಗೆ 70% ದ ವರೆಗೆ ರಿಯಾಯಿತಿ. ಮೊಬೈಲ್ ಕವರ್ ಗಳು ಮತ್ತು ಚಾರ್ಜರ್ ಗಳು 99 ರುಪಾಯಿ ಬೆಲೆಯಲ್ಲಿ ಆರಂಭ


 • ನಿಮ್ಮ ಮೊಬೈಲ್ ನ್ನು ಉತ್ತಮ ಕವರ್ ನಿಂದ, ಪ್ರೊಟೆಕ್ಷನ್ ಕೇಸ್ ನಿಂದ ಕಾಪಾಡಿಕೊಳ್ಳುವುದಕ್ಕೆ ನೀವು ಬಯಸುತ್ತಿದ್ದೀರಾ? ಹಾಗಾದ್ರೆ ಫ್ಲಿಪ್ ಕಾರ್ಟ್ ನಲ್ಲಿ ಇದೀಗ ಅವಕಾಶವಿದೆ. ಹೌದು 299 ರುಪಾಯಿಯಿಂದ ಆರಂಭಗೊಳ್ಳುವ ಅನೇಕ ಮೊಬೈಲ್ ಕವರ್ ಮತ್ತು ಸ್ಕ್ರೀನ್ ಗಾರ್ಡ್ ಗಳು ನಿಮಗೆ ಲಭ್ಯವಾಗುತ್ತದೆ.

  ನೀವು ಟೈಪ್ ಸಿ ಕೇಬಲ್ ಚಾರ್ಜಿಂಗ್ ಗೆ ಮತ್ತು ಡಾಟಾ ಟ್ರಾನ್ಫರ್ ಗಾಗಿಯೂ ಕೂಡ ಕೊಂಡುಕೊಳ್ಳಬಹುದು. ಮೊಬೈಲ್ ಪ್ರೊಟಕ್ಷನ್ ಪೌಚ್ ಗಳು ನಿಮಗೆ 99 ರುಪಾಯಿ ಬೆಲೆಗೆ ಸಿಗುತ್ತದೆ.


 • ಸ್ಮಾರ್ಟ್ ವಾಚ್ ಗಳು ಬ್ಯಾಂಡ್ ಗಳಿಗೆ 50% ದ ವರೆಗೆ ರಿಯಾಯಿತಿ

  ಧರಿಸಬಹುದಾದ ಸ್ಮಾರ್ಟ್ ಡಿವೈಸ್ ಗಳು ಅಂದರೆ ವಿವಿಧ ಬ್ರ್ಯಾಂಡಿನ ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್ ಗಳು ಮತ್ತು, ಸ್ಮಾರ್ಟ್ ಡಿವೈಸ್ ಮತ್ತು ಹ್ಯಾಂಡ್ಸ್ ಫ್ರೀ ಅಸಿಸ್ಟೆಂಟ್ ಗಳು ಮತ್ತು ಬಜೆಟ್ ಸ್ಮಾರ್ಟ್ ವಾಚ್ ಗಳು ನಿಮಗೆ ಫ್ಲಿಪ್ ಕಾರ್ಟಿನ ಈ ಸೇಲ್ ನಲ್ಲಿ ಬಹಳ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ.


 • ಲ್ಯಾಪ್ ಟಾಪ್ ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

  ಲ್ಯಾಪ್ ಟಾಪ್ ಆಕ್ಸಸರೀಸ್ ಗಳು ಉದಾಹರಣೆಗೆ ಟಿಪಿ ಲಿಂಕ್ ನಿಂದ ರೂಟರ್ ಗಳು , ಡಿ-ಲಿಂಕ್ ಮತ್ತು ಇತ್ಯಾದಿಗಳು,ಏರ್ ಟೆಲ್ ನ ಡಾಟಾ ಕಾರ್ಡ್ ಗಳು, ಜಿಯೋಫೈ ಮತ್ತು ಇತ್ಯಾದಿಗಳು ಮತ್ತು ಮೌಸ್ ಮತ್ತು ಕೀಬೋರ್ಡ್ ಗಳು ಸೇರಿದಂತೆ ಹಲವು 80% ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ.


 • ಉತ್ತಮ ಮಾರಾಟ ಕಂಡ ಪವರ್ ಬ್ಯಾಂಕ್ ಗಳಿಗೆ 75% ದ ವರೆಗೆ ರಿಯಾಯಿತಿ

  ನಿಮ್ಮ ಸ್ಮಾರ್ಟ್ ಫೋನ್ ಅಥವಾ ಹೆಡ್ ಫೋನ್ ಗಳನ್ನು ಚಾರ್ಜ್ ಮಾಡುವುದಕ್ಕೆ ಅತ್ಯುತ್ತಮವಾಗಿರುವ ಪವರ್ ಬ್ಯಾಂಕ್ ಗಳನ್ನು ನೀವು ಖರೀದಿಸಬಹುದು. ಸಿಸ್ಕಾ, ಫಿಲಿಪ್ಸ್,ಐಬಾಲ್ ಸೇರಿದಂತೆ ಹಲವು ಕಂಪೆನಿಯ ಡಿವೈಸ್ ಗಳು ನಿಮಗೆ 75% ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.


 • ಕ್ಯಾಮರಾ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

  ಕ್ಯಾಮರಾಗಳು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಡಿವೈಸ್ ಗಳನ್ನು ನೀವು ಹುಡುಕುತ್ತಿದ್ದೀರಾ? ಹಾಗಾದ್ರೆ ಫ್ಲಿಪ್ ಕಾರ್ಟ್ ನಲ್ಲಿ ಆಫರ್ ಮಾಡಿರುವ ಡೀಲ್ ನ್ನು ನೀವು ಗಮನಿಸಲೇಬೇಕು. ಯಾಕೆಂದರೆ ಈ ಪ್ರೊಡಕ್ಟ್ ಗಳನ್ನು ನೀವು80% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ.


 • ಡಾಟಾ ಸ್ಟೋರೇಜ್ ಡಿವೈಸ್ ಗಳಿಗೆ 60%ದ ವರೆಗೆ ರಿಯಾಯಿತಿ

  ಡಾಟಾ ಸ್ಟೋರೇಜ್ ಬಹಳ ಪ್ರಮುಖವಾಗಿರುವ ಅಂಶವಾಗಿದೆ. ಮೆಮೊರಿ ಕಾರ್ಡ್ ಗಳು, ಹಾರ್ಡ್ ಡಿಸ್ಕ್ ಗಳು, ಇಂಟರ್ನಲ್ ಎಸ್ಎಸ್ ಡಿ ಗಳು ಫ್ಲಿಪ್ ಕಾರ್ಟಿನ ಈ ಸೇಲ್ ನಲ್ಲಿ 60% ರಿಯಾಯಿತಿಯಲ್ಲಿ ಲಭ್ಯವಿದೆ.
ಹಬ್ಬದ ದಿನಗಳು ಆರಂಭವಾಗುವ ಮುನ್ನವೇ ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ದಿನಗಳನ್ನು ಘೋಷಿಸಿದೆ. ಮೂರು ದಿನಗಳ ಕಾಲ ಅಂದರೆ ಸೆಪ್ಟೆಂಬರ್ 18 ರಿಂದ ಸೆಪ್ಟೆಂಬರ್ 20 ರ ವರೆಗೆ ಈ ಸೇಲ್ ನಡೆಯಲಿದೆ. ಈ ಸೇಲ್ ನಲ್ಲಿ ಆಕರ್ಷಕ ರಿಯಾಯಿತಿಗಳು ಮತ್ತು ಅನೇಕ ಪ್ರೊಡಕ್ಟ್ ಗಳಿಗೆ ವಿಶೇಷ ಆಫರ್ ಗಳು ಸಿಗುತ್ತದೆ. ಗೆಡ್ಜೆಟ್ಸ್, ಎಲೆಕ್ಟ್ರಾನಿಕ್ ವಸ್ತುಗಳು, ಆಕ್ಸಸರೀಸ್ ಗಳು ಸೇರಿದಂತೆ ಒಟ್ಟು ಅಂದಾಜು 3 ಕೋಟಿಯಷ್ಟು ವಿಭಿನ್ನ ಪ್ರೊಡಕ್ಟ್ ಗಳಿಗೆ ರಿಯಾಯಿತಿ ಇರುತ್ತದೆ.

 
ಟೆಕ್ನಾಲಜಿ