Back
Home » ಇತ್ತೀಚಿನ
ಭಾರತದಲ್ಲಿ ಈಗ ಒಪ್ಪೋ A52 8GB RAM ಸ್ಮಾರ್ಟ್‌ಫೋನ್ ಲಭ್ಯ!
Gizbot | 7th Aug, 2020 07:45 PM
 • ಹೊಸ ಒಪ್ಪೋ

  ಹೌದು, ಒಪ್ಪೋ ಸಂಸ್ಥೆಯು ಹೊಸ ಒಪ್ಪೋ A52 ಸ್ಮಾರ್ಟ್‌ಫೋನಿನ 8GB RAM ವೇರಿಯಂಟ್‌ ಮಾಡೆಲ್‌ ಅನ್ನು ಭಾರತದಲ್ಲಿ ಪರಿಚಯಿಸಿದೆ. ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಈ ಫೋನ್ ಲಭ್ಯವಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಒಳಗೊಂಡಿದೆ. 8GB RAM ವೇರಿಯಂಟ್ ಬೆಲೆಯು 18,990ರೂ. ಆಗಿದೆ. ಇನ್ನುಳಿದ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


 • ಡಿಸ್‌ಪ್ಲೇ ರಚನೆ

  ಒಪ್ಪೋ A52 ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರಿನ್ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್‌ಪ್ಲೇಯು ವಾಟರ್ ಡ್ರಾಪ್‌ ನಾಚ್‌ ಶೈಲಿಯನ್ನ ಹೊಂದಿದ್ದು, ಡಿಸ್‌ಪ್ಲೇ ಅನುಪಾತವು 19:9 ಆಗಿದೆ. ಡಿಸ್‌ಪ್ಲೇ 405 ppi ಪಿಕ್ಸೆಲ್‌ ಸಾಂದ್ರತೆ ಯನ್ನ ಒಳಗೊಂಡಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು 90.5 ರಷ್ಟಾಗಿದೆ.


 • ಪ್ರೊಸೆಸರ್‌ ಯಾವುದು

  ಒಪ್ಪೋ A52 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 6GB RAM ಮತ್ತು 128GB ಸ್ಟೋರೇಜ್ ಆಯ್ಕೆ ಹೊಂದಿದ್ದು, ಮುಂದೆ 4GB/128GB ಮತ್ತು 8GB/128GB ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳಲ್ಲಿಯೂ ಲಭ್ಯವಾಗಲಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಇದೆ.


 • ಕ್ಯಾಮೆರಾ ರಚನೆ

  ಒಪ್ಪೋ A52 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌, ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್‌ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಡಿಜಿಟಲ್‌ ಜೂಮ್‌, ಆಟೋ ಫ್ಲಾಶ್‌, ಟಚ್‌ ಟು ಫೋಕಸ್‌ ಆಯ್ಕೆಗಳು ಇವೆ.


 • ಬ್ಯಾಟರಿ ಮತ್ತು ಇತರೆ

  ಒಪ್ಪೋ A52 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದರೊಂದಿಗೆ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ದೀರ್ಘಾವಾಧಿ ಬ್ಯಾಕ್‌ಅಪ್ ಸಾಮರ್ಥ್ಯ ಒದಗಿಸಲಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಸೌಲಭ್ಯಗಳನ್ನು ಒಳಗೊಂಡಿದೆ.
ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಒಪ್ಪೋ ಭಾರತದಲ್ಲಿ ಇತ್ತೀಚಿಗಷ್ಟೆ ಒಪ್ಪೋ A52 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್‌ ಮಾದರಿಯ ಫೀಚರ್ಸ್‌ಗಳನ್ನು ಹೊಂದಿರುವ ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.ಈ ಫೋನ್ 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ನಲ್ಲಿ ಮಾತ್ರ ಲಭ್ಯ ಇತ್ತು. ಇದೀಗ 8GB RAM ವೇರಿಯಂಟ್‌ನಲ್ಲಿ ಬಿಡುಗಡೆ ಆಗಿದೆ.

 
ಟೆಕ್ನಾಲಜಿ