Back
Home » ಇತ್ತೀಚಿನ
ಪಿಕ್ಚರ್-ಇನ್-ಪಿಕ್ಚರ್ ಮೋಡ್ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!
Gizbot | 7th Aug, 2020 02:00 PM
 • ವಾಟ್ಸಪ್‌

  ಹೌದು, ವಾಟ್ಸಪ್‌ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಬಳಕೆದಾರರಿಗೆ ಶೇರ್‌ಚಾಟ್ ವೀಡಿಯೊ ಬೆಂಬಲಿಸುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇನ್ನು ಐಒಎಸ್ ಗಾಗಿ ವಾಟ್ಸಾಪ್ v2.20.81.3 ಬೀಟಾ ಮತ್ತು ಆಂಡ್ರಾಯ್ಡ್‌ಗಾಗಿ ವಾಟ್ಸಾಪ್ v2.20.197.7 ಬೀಟಾ ವರ್ಷನ್‌ ಅಲ್ಲಿ ಪರಿಚಯಿಸಲಿದೆ. ಸದ್ಯ ಎಲ್ಲಾ ವಾಟ್ಸಾಪ್‌ ಬಳಕೆದಾರರು ಯೂಟ್ಯೂಬ್ ಮತ್ತು ಫೇಸ್‌ಬುಕ್ ವೀಡಿಯೊ ಲಿಂಕ್‌ಗಳಿಗೆ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ಮಾದರಿಯಲ್ಲಿ ಫ್ಲೋಟಿಂಗ್ ವೀಡಿಯೊ ಮೂಲಕ ಅಪ್ಲಿಕೇಶನ್‌ನಲ್ಲಿ ಶೇರ್‌ಚಾಟ್ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ,


 • ವಾಟ್ಸಾಪ್‌

  ವಾಟ್ಸಾಪ್‌ ತನ್ನ ಬಳಕೆದಾರರಿಗೆ ಪ್ಲೋಟಿಂಗ್ ಮಾದರಿಯಲ್ಲಿ ಶೇರ್‌ಚಾಟ್‌ ವೀಡಿಯೊಗಳನ್ನ ವೀಕ್ಷಿಸುವ ಅವಕಾಶವನ್ನ ಕಲ್ಪಿಸಲು ಮುಂದಾಗಿದೆ. ಅಲ್ಲದೆ ವಾಟ್ಸಾಪ್ ಬೀಟಾ ಚಾಟ್‌ಗಳಲ್ಲಿ ವಾಲ್‌ಪೇಪರ್‌ಗಳನ್ನು ಬಳಕೆದಾರರ ಗ್ರಾಹಕೀಕರಣಕ್ಕೆ ಅನುಮತಿಸುವ ಸಾಮರ್ಥ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ ಹೇಳಲಾಗ್ತಿದೆ. ಇದರ ಪ್ರಕಾರ ಈ ಫೀಚರ್ಸ್‌ ಒಮ್ಮೆ ಲೈವ್ ಆಗಿದ್ದರೆ, ಬಳಕೆದಾರರು ವಿಭಿನ್ನ ಚಾಟ್‌ಗಳಲ್ಲಿ ವಿಭಿನ್ನ ವಾಲ್‌ಪೇಪರ್‌ಗಳನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ.


 • ವಾಟ್ಸಾಪ್

  ಸದ್ಯ ಆಂಡ್ರಾಯ್ಡ್ ಮತ್ತು ಐಫೋನ್‌ಗಾಗಿ ವಾಟ್ಸಾಪ್ ತನ್ನ ಇತ್ತೀಚಿನ ಬೀಟಾ ಆವೃತ್ತಿಗಳಲ್ಲಿ ಶೇರ್‌ಚಾಟ್ ವೀಡಿಯೊಗೆ ಬೆಂಬಲವನ್ನು ಒದಗಿಸುತ್ತಿದೆ ಆದರೆ 24 ಗಂಟೆಗಳ ಒಳಗೆ ಮಾತ್ರ, ಬಳಕೆದಾರರು ಅದನ್ನು ಬಳಸಲು ಸಾಧ್ಯವಾಗುತ್ತದೆ ಎನ್ನಲಾಗ್ತಿದೆ. ಇದಲ್ಲದೆ ಶೇರ್‌ಚಾಟ್‌ನಲ್ಲಿ ಶೇರ್‌ ಮಾಡಿಕೊಂಡ ವೀಡಿಯೊಗಳನ್ನು ವಾಟ್ಸಾಪ್‌ನಲ್ಲಿ ಪ್ಲೇ ಮಾಡಬಹುದಾಗಿದೆ. ಲಿಂಕ್‌ಗಳ ಮೂಲಕ ಶೇರ್‌ ಮಾಡುವ ಶೇರ್‌ ಚಾಟ್‌ ವೀಡಿಯೋಗಳನ್ನ ವಾಟ್ಸಾಪ್‌ನಲ್ಲಿಯೇ ವೀಕ್ಷಿಸಲು ಇದು ಅವಕಾಶ ಕಲ್ಪಿಸಲಿದೆ. ಶೇರ್‌ಚಾಟ್ ವೀಡಿಯೊವನ್ನು ಹಂಚಿಕೊಂಡ ನಂತರ, ಪ್ಲೇ ಐಕಾನ್ ಹೊಂದಿರುವ ವೀಡಿಯೊ ಬಾಕ್ಸ್ ಅನ್ನು ಚಾಟ್‌ನಲ್ಲಿ ತೋರಿಸಲಾಗುತ್ತದೆ. ಒಮ್ಮೆ ನೀವು ಪ್ಲೇ ಬಟನ್ ಒತ್ತಿದರೆ, ವೀಡಿಯೊ ವಾಟ್ಸಾಪ್ ಒಳಗೆ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಲ್ಲಿ ಪ್ಲೇ ಆಗಲಿದೆ.


 • ವಾಟ್ಸಾಪ್

  ಇದಲ್ಲದೆ ಹೊಸ ಬೀಟಾ ವಾಟ್ಸಾಪ್ ಹೊಸ ಮಲ್ಟಿ ವಾಲ್‌ಪೇಪರ್ಸ್ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಹ ಹೇಳಲಾಗ್ತಿದೆ. ಈ ಫೀಚರ್ಸ್‌ ಅಭಿವೃದ್ಧಿಯ ಹಂತದಲ್ಲಿದ್ದೂ, ಭವಿಷ್ಯದ ಆಪ್ಡೇಟ್‌ನಲ್ಲಿ ಎಲ್ಲಾ ಬಳಕೆದಾರರಿಗೂ ಲಬ್ಯವಾಗಲಿದೆ. ಇದು ವಿಭಿನ್ನ ಚಾಟ್‌ಗಳಲ್ಲಿ ಬಳಕೆದಾರರು ವಿಭಿನ್ನ ವಾಲ್‌ಪೇಪರ್‌ಗಳನ್ನು ಬಳಸಲು ಅನುಮತಿಸುತ್ತದೆ. ಜೊತೆಗೆ ಸಿಸ್ಟಮ್ ಥೀಮ್ ಅನ್ನು ಬದಲಾಯಿಸುವಾಗ ಬಳಕೆದಾರರು ವಿಭಿನ್ನ ವಾಲ್‌ಪೇಪರ್‌ಗಳನ್ನು ಆಯ್ಕೆ ಮಾಡಲು ಸಹ ಅವಕಾಶ ಕಲ್ಪಿಸಿಕೊಡುತ್ತದೆ. ಮಲ್ಟಿ ವಾಲ್‌ಪೇಪರ್ ಫೀಚರ್ಸ್‌ ಆಯ್ದ ವಾಲ್‌ಪೇಪರ್‌ನ ಬ್ರೈಟ್‌ನೆಶ್‌ ಅನ್ನು ಸೆಟ್‌ಮಾಡುವ ಸಾಮರ್ಥ್ಯವನ್ನು ಸಹ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ವಿಶ್ವದ ಜನಪ್ರಿಯ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌. ತನ್ನ ಹೊಸ ಮಾದರಿಯ ಫೀಚರ್ಸ್‌ಗಳನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಬಂದಿದೆ. ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿರುವ ವಾಟ್ಸಾಪ್‌ ಇದೀಗ ಮತ್ತೊಂದು ಜನಪ್ರಿಯ ಫೀಚರ್ಸ್‌ ಅನ್ನು ಪರಿಚಯಿಸೋಕೆ ಮುಂದಾಗಿದೆ. ಸದ್ಯ ಲಭ್ಯ ಮಾಹಿತ ಪ್ರಕಾರ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಬಳಕೆದಾರರಿಗೆ ಶೇರ್‌ಚಾಟ್ ವೀಡಿಯೊ ಬೆಂಬಲಿಸುವ ಫೀಚರ್ಸ್‌ ಅನ್ನು ವಾಟ್ಸಾಪ್ ಹೊರತರುತ್ತಿದೆ ಎಂದು ವರದಿಯಾಗಿದೆ.

 
ಟೆಕ್ನಾಲಜಿ