Back
Home » ಇತ್ತೀಚಿನ
ಒಪ್ಪೊ ರೆನೋ 4 ಪ್ರೊ: ಆಕರ್ಷಕ ಲುಕ್‌ ಮತ್ತು ವೇಗದ ಕಾರ್ಯವೈಖರಿ!
Gizbot | 6th Aug, 2020 04:15 PM
 • ಸ್ಮಾರ್ಟ್‌ಫೋನ್‌

  ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಸದಾ ಹೊಸತನದ ಸ್ಮಾರ್ಟ್‌ಫೋನ್‌, ಹೊಸತನದ ಕ್ಯಾಮೆರಾ ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುವ ಒಪ್ಪೊ ತನ್ನ ರೆನೋ ಸರಣಿಯಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅದರಲ್ಲೂ ಸದ್ಯ ಬಿಡುಗಡೆ ಆಗಿರುವ ಒಪ್ಪೊ ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಒಪ್ಪೊ ರೆನೊ 4 ಪ್ರೊ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಮತ್ತು ಸ್ವಿಫ್ಟ್ ಚಾರ್ಜಿಂಗ್ ಸಿಸ್ಟಂನಿಂದ ಬಳಕೆದಾರರ ಮನಗೆದ್ದಿದೆ. ಅಷ್ಟಕ್ಕೂ ಒಪ್ಪೊ ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ ಎಂದು ಹೇಳುವುದಕ್ಕೆ ಕಾರಣಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.


 • ಬೆಜೆಲ್-ಲೆಸ್‌ 3D ಬಾರ್ಡರ್‌ಲೆಸ್‌ ಸೆನ್ಸ್ ಸ್ಕ್ರೀನ್

  ಒಪ್ಪೊ ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ 3D ಬಾರ್ಡರ್‌ಲೆಸ್ ಸೆನ್ಸ್ ಸ್ಕ್ರೀನ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ನ ಅಂಚುಗಳಲ್ಲಿ 55.9 ಡಿಗ್ರಿಗಳಷ್ಟು 3D ವಕ್ರತೆಯನ್ನು ಹೊಂದಿದೆ. ಇದು ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನಲ್ಲಿ ಕಾಣುವ ಪ್ರೀಮಿಯಂ ಲುಕ್‌ಅನ್ನು ನೀಡುತ್ತದೆ. ಇದು 6.5 3 ಸೂಪರ್ ಅಮೋಲೆಡ್ ಸ್ಕ್ರೀನ್‌ ಡಿಸ್‌ಪ್ಲೇ ಹೊಂದಿದ್ದು, ಸ್ಕ್ರೀನ್-ಟು-ಬಾಡಿ 92.01% ಅನುಪಾತ ಮತ್ತು 20: 9 ರಚನೆಯ ಅನುಪಾತವನ್ನು ಹೊಂದಿರುವುದರಿಂದ ಬಳಕೆದಾರರಿಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಇದಲ್ಲದೆ ಈ ಸ್ಕ್ರೀನ್‌ 2400x1080 FHD+ ರೆಸಲ್ಯೂಶನ್ ಹೊಂದಿರುವುದರಿಂದ ಎದ್ದುಕಾಣುವ ಚಿತ್ರಗಳನ್ನು ಕಾಣಬಹುದಾಗಿದೆ. ಜೊತೆಗೆ ಇದರಲ್ಲಿ 90Hz ರಿಫ್ರೆಶ್ ದರವನ್ನು ಮತ್ತು 180Hz ವರೆಗಿನ ಟಚ್ ಸ್ಯಾಂಪ್ಲಿಂಗ್ ದರವನ್ನು ಸಹ ಪಡೆದುಕೊಳ್ಳಬಹುದಾಗಿದೆ.


 • ವಿಶೇಷ ವಿನ್ಯಾಶ

  ಇನ್ನು ಒಪ್ಪೊ ರೆನೋ 4 ಪ್ರೊ ವಿನ್ಯಾಸವು ಪರಿಪೂರ್ಣತೆಯ ರಚನೆ ಆಗಿದ್ದು, ಗ್ರಾಹಕರ ನೆಚ್ಚಿನ ವಿನ್ಯಾಸವನ್ನ ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಮೀಸಲಾದ ಹಾರ್ಡ್‌ವೇರ್ ಅಗತ್ಯವಿರುವ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದ್ದರೂ, ಇದು ಕೇವಲ 161 ಗ್ರಾಂ ತೂಕವನ್ನು ಹೊಂದಿದೆ ಮತ್ತು 7.7 ಎಂಎಂ ಅಳತೆ ಹೊಂದಿದ್ದು,ಅತ್ಯಂತ ಹಗುರವಾದ ಸ್ಮಾರ್ಟ್‌ಫೋನ್ ಆಗಿದೆ. ಅಲ್ಲದೆ ಇದು ಪ್ರೀಮಿಯಂ-ಮ್ಯಾಟ್ ಫಿನಿಶ್‌ ಅನ್ನು ಹೊಂದಿದೆ. ಇದು ಫಿಂಗರ್‌ಪ್ರಿಂಟ್-ಪ್ರೂಪ್‌ ಅನ್ನು ಸಹ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ಟಾರ್ರಿ ನೈಟ್, ಕಪ್ಪು ಗ್ರೇಡಿಯಂಟ್ ಟಚ್‌ ಅನ್ನು ಹೊಂದಿದೆ.


 • ಪವರ್‌ಫುಲ್‌ ಬ್ಯಾಟರಿ

  ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ 4000mAh ದೊಡ್ಡ ಗಾತ್ರದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ ವಿಶ್ವದ ಅತಿ ವೇಗದ ಚಾರ್ಜಿಂಗ್ 65W SuperVOOC 2.0. ಟೆಕ್ನಾಲಜಿಯನ್ನ ನೀಡಲಾಗಿದೆ. ಇದು ಕೇವಲ 36 ನಿಮಿಷಗಳಲ್ಲಿ ರೆನೋ 4 ಪ್ರೊ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು, ಮತ್ತು 5 ನಿಮಿಷಗಳ ಚಾರ್ಜ್‌ನಲ್ಲಿ ಬಳಕೆದಾರರು 4 ಗಂಟೆಗಳ ಕಾಲ ವೀಡಿಯೊ ವೀಕ್ಷಣೆ ಮಾಡಬಹುದಾಗಿದೆ. ಇದಲ್ಲದೆ ಇದರಲ್ಲಿ TUV ರೈನ್‌ಲ್ಯಾಂಡ್‌ನಿಂದ ಪ್ರಮಾಣೀಕರಿಸಲ್ಪಟ್ಟ ಐದು ಪದರಗಳ ರಕ್ಷಣೆಯನ್ನು ನೀಡುತ್ತದೆ. ಇನ್ನು ಇದರಲ್ಲಿ ಬ್ಯಾಟರಿಗೆ ಮೀಸಲಾದ ಪ್ರೊಟೆಕ್ಷನ್‌ ಚಿಪ್‌ಸೆಟ್ ಅನ್ನು ಹೊಂದಿದ್ದು. ಇದರಲ್ಲಿ ಸೂಪರ್ ಪವರ್ ಸೇವಿಂಗ್ ಮೋಡ್ ಪವರ್ ಡ್ರೈನ್ ಅನ್ನು ನಿಧಾನಗೊಳಿಸುತ್ತದೆ. ಆದ್ದರಿಂದ, ಈ ಮೋಡ್ ಬಳಕೆದಾರರಿಗೆ 1.5 ಗಂಟೆಗಳ ಕಾಲ ವಾಟ್ಸಾಪ್‌ನಲ್ಲಿ ಚಾಟ್ ಮಾಡಲು ಅಥವಾ 5% ಬ್ಯಾಟರಿಯೊಂದಿಗೆ 77 ನಿಮಿಷಗಳ ಕಾಲ ಕರೆ ಮಾಡಲು ಅನುಮತಿಸುವುದರಿಂದ ನೀವು ಹೊರಹೋಗುವ ಮೊದಲು ನಿಮ್ಮ ಫೋನ್‌ಗಳನ್ನು ಫುಲ್ ಚಾರ್ಜ್‌ ಮಾಡದೇ ಹೋದರೂ ಯೊಚಿಸುವ ಅಗತ್ಯವಿಲ್ಲ.


 • ಎಲ್ಲವನ್ನೂ ಸೆರೆ ಹಿಡಿಯಬಲ್ಲ ಕ್ಯಾಮೆರಾ ವಿಶೇಷತೆ

  ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ ಒಳಗೊಂಡಿರುವ ಮತ್ತೊಂದು ವಿಶೇಷತೆಯೆಂದರೆ ಅದರ 48 ಮೆಗಾಪಿಕ್ಸೆಲ್‌ ಸೆನ್ಸಾರ್ ಒಳಗೊಂಡಿರುವ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌. 32 ಎಂಪಿ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರಲ್ಲಿ ಶಟರ್ ಬಗ್ ಅನ್ನು ಪೂರೈಸಲು ಸಾಕಷ್ಟು ವಿಧಾನಗಳು ಕ್ಯಾಮರಾಕ್ಕೆ ಸಹಾಯ ಮಾಡುತ್ತವೆ. ಎಐ ಕಲರ್ ಭಾವಚಿತ್ರವು ಶಾಟ್‌ನಲ್ಲಿರುವ ವಿಷಯವನ್ನು ನೈಸರ್ಗಿಕ ಬಣ್ಣದಲ್ಲಿ ಹೈಲೈಟ್ ಮಾಡುತ್ತದೆ. ರಿಯಲ್‌ ಟೈಂನಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಕಲರ್‌ಗಳನ್ನು ಬ್ಲ್ಯಾಕ್‌ ಅಂಡ್‌ ವೈಟ್‌ ಕಲರ್‌ಗೆ ಕನ್ವರ್ಟ್‌ ಮಾಡಲಿದೆ. ಇದರಲ್ಲಿ ರೆನೊ 4 ಪ್ರೊ ಕ್ಯಾಮೆರಾ ಅಪ್ಲಿಕೇಶನ್ ನಾಲ್ಕು ಏಕವರ್ಣದ ಬಣ್ಣ ಫಿಲ್ಟರ್‌ಗಳನ್ನು ಸಹ ಹೊಂದಿದೆ, ಇದು ನಿರ್ದಿಷ್ಟ ಬಣ್ಣವನ್ನು ಹೈಲೈಟ್ ಮಾಡುತ್ತದೆ ಮತ್ತು ಬ್ಯಾಕ್‌ಗ್ರೌಂಡ್‌ ಏಕವರ್ಣವನ್ನು ಕನ್ವರ್ಟ್‌ ಮಾಡುತ್ತದೆ. ಇನ್ನು ಕ್ಯಾಮೆರಾ ಹಾರ್ಡ್‌ವೇರ್ ಅಲ್ಟ್ರಾ ಸ್ಟೆಡಿ ವಿಡಿಯೋ 3.0 ಹೊಂದಿರುವುದರಿಂದ ಉತ್ತಮ ವಿಡಿಯೋ ರೇಕಾರ್ಡಿಂಗ್‌ ಅನ್ನು ಮಾಡಬಹುದಾಗಿದೆ.


 • ಒಪ್ಪೊ ಎಕೋ ಸಿಸ್ಟಮ್‌

  ಒಪ್ಪೊ ಸಂಸ್ಥೆ ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಈಗ ಕಂಪನಿಯು ಸ್ಮಾರ್ಟ್ ಆಡಿಯೊ ಡಿವೈಸ್‌ಗಳ ಪೋರ್ಟ್ಫೋಲಿಯೊ ಮತ್ತು ವೆರಿಯೆಬಲ್ಸ್‌ ಪ್ರಾಡಕ್ಟ್‌ಗಳನ್ನು ಸಹ ಹೊಂದಿದೆ. ಬ್ರ್ಯಾಂಡ್ ಇತ್ತೀಚೆಗೆ ತನ್ನ ಶ್ರೇಣಿಯ ಎನ್‌ಕೋ ವಾಯರ್‌ಲೆಸ್ ಇಯರ್‌ಬಡ್‌ಗಳನ್ನು ಪರಿಚಯಿಸಿದೆ. ಈ ಟ್ರೂಲಿ ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಈಗಾಗಲೇ ಆಡಿಯೊ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇನ್ನು ವೆರಿಯೆಬಲ್ಸ್‌ ಪ್ರಾಡಕ್ಟ್‌ಗಳಲ್ಲಿ ಒಪ್ಪೋ ಬ್ರ್ಯಾಂಡ್ ಇತ್ತೀಚೆಗೆ ತನ್ನ ಮೊದಲ ಸ್ಮಾರ್ಟ್ ವಾಚ್ ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಒಪ್ಪೊ ವಾಚ್‌ನ 46mm ರೂಪಾಂತರವು 1.91-ಇಂಚಿನ ಅಮೋಲೆಡ್ ಡ್ಯುಯಲ್ ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದ್ದು, 72.76% ಸ್ಕ್ರೀನ್-ಟು-ಬಾಡಿ ಅನುಪಾತ, 402x476 ರೆಸಲ್ಯೂಶನ್ ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ವಾಚ್ 430mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದು ಸ್ಮಾರ್ಟ್ ಮೋಡ್‌ನೊಂದಿಗೆ 36 ಗಂಟೆಗಳ ಬ್ಯಾಕಪ್ ಮತ್ತು ಪವರ್ ಸೇವರ್ ಮೋಡ್‌ನಲ್ಲಿ 21 ದಿನಗಳವರೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಅಂಬಿಕ್ ಅಪೊಲೊ 3 ಚಿಪ್-ಚಾಲಿತ ಪವರ್‌ ಸೇವಿಂಗ್‌ ಮೋಡ್ ಅನ್ನು ಹೊಂದಿದೆ.


 • ಬೆಲೆ ಮತ್ತು ಲಭ್ಯತೆ

  ಒಪ್ಪೊ ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ 8GB RAM + 128GB ರೂಪಾಂತರಕ್ಕೆ 34,990 ರೂ. ಆಗಿದ್ದು, ಇದು ಈಗಾಗಲೇ ಮಾರಾಟವಾಗ್ತಿದೆ. ಇನ್ನು OPPO ಸಹ OPPOCARE + ಜೊತೆಗೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಿದೆ. ಇನ್ನು ಒಪ್ಪೊ ವಾಚ್ ಇದೇ ಆಗಸ್ಟ್ 10 ರಿಂದ ಮಾರಾಟವಾಗಲಿದೆ. ಒಪ್ಪೊ ವಾಚ್‌ನ 46mm ರೂಪಾಂತರವು 19,990 ರೂ ಬೆಲೆಯನ್ನ ಹೊಂದಿದ್ದು, 41mm ಆವೃತ್ತಿ 14,990 ರೂ.ಬೆಲೆಯನ್ನ ಹೊಂದಿದೆ.
ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೊ ಕಂಪೆನಿ ತನ್ನ ಹೊಸ ತನದ ಸ್ಮಾರ್ಟ್‌ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶೇಷ ಸ್ಮಾರ್ಟ್‌ಫೋನ್‌ಗಳಿಂದ ತನ್ನ ಸ್ಥಾನವನ್ನ ಗಟ್ಟಿಮಾಡಿಕೊಂಡಿದೆ. ಇದಲ್ಲದೆ ತನ್ನದೇ ಆದ ಗ್ರಾಹಕ ವರ್ಗ ಸೃಷ್ಟಿಸಿಕೊಂಡಿರುವ ಒಪ್ಪೊ ಮಾರುಕಟ್ಟೆಯಲ್ಲಿ ತನ್ನ ಬ್ರ್ಯಾಂಡ್ ನಲ್ಲಿ ಆಕರ್ಷಕ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಒಪ್ಪೊ ಯಾವಾಗಲೂ ವಿಶೇಷವಾದ ಸ್ಮಾರ್ಟ್‌ಫೋನ್‌ಗಳನ್ನೇ ಪರಿಚಯಿಸುತ್ತೆ ಎನ್ನುವುದಕ್ಕೆ ಸದ್ಯ ಇತ್ತೀಚಿಗಷ್ಟೇ ಒಪ್ಪೊ ತನ್ನ ರೆನೋ ಸರಣಿಯಲ್ಲಿ ಪರಿಚಯಿಸಿರುವ ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ ಸಾಕ್ಷಿಯಾಗಿದೆ.

 
ಟೆಕ್ನಾಲಜಿ