Back
Home » ಇತ್ತೀಚಿನ
ವಾಟ್ಸಾಪ್‌ನಲ್ಲಿ Friendship ಡೇ ಸ್ಟಿಕ್ಕರ್ ಡೌನ್‌ಲೋಡ್‌ ಮಾಡುವುದು ಹೇಗೆ?
Gizbot | 1st Aug, 2020 06:00 PM
 • ಸ್ಟಿಕ್ಕರ್

  ಹೌದು, ಟೆಕ್ನಾಲಜಿ ಮುಂದುವರೆದಂತೆ ಸೊಶೀಯಲ್‌ ಮೀಡಿಯಾ ಬಳಕೆಯಲ್ಲೂ ಸಾಕಷ್ಟು ಆಪ್ಡೇಟ್‌ ಆಗುತ್ತಲೇ ಇದೆ. ಈ ಹಿಂದೆ ನೀವು ಯಾವುದೇ ಭಾವನೆಗಳನ್ನ ವ್ಯಕ್ತಪಡಿಸಬೇಕಿದ್ದರೂ ಪಠ್ಯ ರೂಪದಲ್ಲಿಯೇ ಸಂದೇಶ ಕಳುಹಿಸಬೇಕಿತ್ತು. ಆದರೆ ದಿನಕಳೆದಂತೆ ಭಾವನೆಗಳಿಗೆ ಅನುಗಣವಾಗಿ ಸ್ಟಿಕ್ಕರ್‌ಗಳನ್ನ ಕಳುಹಿಸುವ ಶೈಲಿ ರೂಡಿ ಆಗಿದೆ. ಬಹುತೇಕ ಎಲ್ಲಾ ಮೆಸೇಜಿಂಗ್‌ ಆಪ್‌ಗಳಲ್ಲಿಯೂ ಸ್ಟಿಕ್ಕರ್‌ಗಳನ್ನ ಕಳುಹಿಸುವುದಕ್ಕೆ ಅವಕಾಶವನ್ನ ನಿಡಲಾಗಿದೆ. ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನ ಸೂಚಿಸುವ ಸ್ಟಿಕ್ಕರ್‌ಗಳನ್ನ ನಿವು ಕಳುಹಿಸಬಹುದಾಗಿದೆ. ಹಾಗಾದ್ರೆ ಸ್ನೇಹಿತರ ದಿನದಂದು ನಿಮ್ಮ ಸ್ನೇಹಿತರಿಗೆ ಶುಭಾಶಯಗಳನ್ನ ಕೋರುವುದಕ್ಕೆ ಸ್ನೇಹಿತರ ದಿನದ ಸ್ಟಿಕ್ಕರ್‌ಗಳನ್ನಕಳುಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.


 • ಫ್ರೆಂಡ್ಶಿಪ್ ಡೇ

  ಮೆಸೇಜಿಂಗ್‌ ಆಪ್‌ಗಳಲ್ಲಿ ಸ್ಟಿಕ್ಕರ್‌ಗಳ ಬಳಕೆಯು ಪ್ರಾರಂಭವಾದ ದಿನದಿಂದಲೂ ಸ್ಟಿಕ್ಕರ್‌ಗಳ ಬಳಕೆ ಜನಪ್ರಿಯತೆಯನ್ನ ಪಡೆದುಕೊಮಡಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಸಹ ಪರಿಚಯಿಸಿದೆ. ಅಷ್ಟೇ ಅಲ್ಲ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇತರ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಸಹ ಸ್ಟಿಕ್ಕರ್‌ ಸಂದೇಶಗಳನ್ನ ಕಾಣಬಹುದಾಗಿದೆ. ಹಬ್ಬ ಅಥವಾ ಯಾವುದೇ ವಿಶೇಷ ದಿನದ ಆಚರಣೆ ದಿನವಿದ್ದಾಗ ಸ್ಟಿಕ್ಕರ್‌ಗಳ ಬಳಕೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಸದ್ಯ ಇದೇ ಭಾನುವಾರ ನಿಮ್ಮ ಸ್ನೇಹಿತರಿಗೆ ಸ್ನೇಹ ದಿನದ ವಿಷಯದ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಸಹಜ. ಹಾಗಾದ್ರೆ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಹೈಕ್‌ ನಲ್ಲಿ ಫ್ರೆಂಡ್ಶಿಪ್ ಡೇ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.


 • ವಾಟ್ಸಾಪ್

  ಹಂತ 1: ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್‌ನಲ್ಲಿ 'Friendship day WhatsApp stickers.' ಸರ್ಚ್‌ ಮಾಡಿ

  ಹಂತ 2: ಸರ್ಚ್‌ ಮಾಡಿದ ನಂತರ ನಿವು ಯಾವುದೇ ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಬಹುದು.

  ಹಂತ 3: ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ನೀವು ಅದನ್ನು ವಾಟ್ಸಾಪ್‌ಗೆ ಸೇರಿಸಬಹುದು. ಅದಕ್ಕಾಗಿ ಮೀಸಲಾದ ಆಯ್ಕೆ ಇರಬೇಕು.

  ಹಂತ 4: ನಂತರ, ಅದು ವಾಟ್ಸಾಪ್ ಒಳಗೆ ಸ್ಟಿಕ್ಕರ್ ವಿಭಾಗದಲ್ಲಿ ಕಾಣಿಸುತ್ತದೆ.

  ಹಂತ 5: ಆದರಲ್ಲಿ ನಿಮ್ಮ ನೆಚ್ಚಿನ ಸ್ಟಿಕ್ಕರ್‌ ಅನ್ನು ಆರಿಸಿ, ಅದನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿ.


 • ಟೆಲಿಗ್ರಾಮ್

  ಹಂತ 1: ಟೆಲಿಗ್ರಾಮ್‌ನಲ್ಲಿ, ಎಡ ಭಾಗದಲ್ಲಿ ಕೆಳಗಿನ ಮೂಲೆಯಲ್ಲಿರುವ ಸ್ಟಿಕ್ಕರ್ ಐಕಾನ್ ಅನ್ನು ಟ್ಯಾಪ್ ಮಾಡಿ.

  ಹಂತ 2: ನಂತರ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಿರ್ದಿಷ್ಟ ವಿಷಯದ ಸ್ಟಿಕ್ಕರ್ ಅನ್ನು ಹುಡುಕಿ.

  ಹಂತ 3: ನಂತರ ನಿಮ್ಮ ಸ್ಟಿಕ್ಕರ್ carouselನಲ್ಲಿ ಸ್ಟಿಕ್ಕರ್ ಸೇರಿಸಿ.

  ಹಂತ 4: ನಂತರ, ನೀವು ಚಾಟ್‌ನೊಳಗಿನ ಐಕಾನ್ ಅನ್ನು ಟಚ್‌ ಮಾಡಿದಾಗ ನೀವು ಆಯ್ಕೆ ಮಾಡಿದ ಸ್ಟಿಕ್ಕರ್‌ಗಳು ಕಾಣಸಿಗುತ್ತದೆ.


 • Hike

  ಹಂತ 1: ಹೈಕ್‌ನಲ್ಲಿ ನೀವು ಚಾಟ್ ಮಾಡುವಾಗ ಎಡ ಭಾಗದ ಕೆಳಗಿನ ಮೂಲೆಯಲ್ಲಿರುವ ಸ್ಟಿಕ್ಕರ್ ಐಕಾನ್ ಮೇಲೆ ಟ್ಯಾಪ್ ಮಾಡಿ.

  ಹಂತ 2: ಸ್ಟಿಕ್ಕರ್ carousel ಒಳಗೆ ಬಲಭಾಗದಲ್ಲಿರುವ 'ಪ್ಲಸ್‌' ಐಕಾನ್ ಟ್ಯಾಪ್ ಮಾಡಿ.

  ಹಂತ 3: ಸಂಬಂಧಿತ ಸ್ಟಿಕ್ಕರ್‌ಗಾಗಿ ಹುಡುಕಿ ಮತ್ತು 'ಚಾಟ್‌ಗೆ ಸೇರಿಸಿ' ಟ್ಯಾಪ್ ಮಾಡಿ.

  ಹಂತ 4: ನಂತರ, ಅದು ನಿಮ್ಮ ಸ್ಟಿಕ್ಕರ್‌ ಒಳಗೆ ಕಾಣಿಸುತ್ತದೆ. ಅಲ್ಲಿಂದ ನೀವು ಆಯ್ಕೆ ಮಾಡಿ ಚಾಟ್‌ ಮಾಡಬಹುದಾಗಿದೆ.
ಅಗಸ್ಟ್‌ ತಿಂಗಳ ಮೊದಲ ಭಾನುವಾರ ಬಂತೆಂದರೆ ಸಾಕು ಎಲ್ಲಾ ಮಾದರಿಯ ಮೆಸೆಜಿಂಗ್‌ ಆಪ್‌ಗಳಲ್ಲಿ ಸ್ನೇಹವನ್ನು ಕುರಿತ ಸಂದೇಶಗಳು ಹರಿದಾಡುತ್ತವೆ. ಸದ್ಯ ಇದು ಸ್ಮಾರ್ಟ್‌ಫೋನ್‌ ಜಮಾನ ಆಗಿರೋದ್ರಿಂದ ಬಹುತೇಕ ಸ್ನೇಹಿತರೆಲ್ಲರೂ ತಮ್ಮ ಗೆಳೆಯರಿಗೆ ವಾಟ್ಸಾಪ್‌, ಫೇಸ್‌ಬುಕ್‌, ಹೈಕ್‌, ಟೆಲಿಗ್ರಾಮ್ ನಂತಹ ಮೆಸೇಜಿಂಗ್‌ ಆಪ್‌ಗಳಲ್ಲಿ ಸಂದೇಶಗಳನ್ನ ರವಾನಿಸುತ್ತಾರೆ. ಆದ್ರೆ ಇದೀಗ ಟ್ರೆಡ್‌ ಬದಲಾಗಿ ಹೋಗಿದೆ. ಪಠ್ಯ ಸಂದೇಶಗಳ ಬದಲಿಗೆ ಸ್ಟಿಕ್ಕರ್‌ಗಳ ಸಂದೇಶ ಬಂದು ನಿಂತಿದೆ.

 
ಟೆಕ್ನಾಲಜಿ