Back
Home » ಇತ್ತೀಚಿನ
ಸ್ವಾತಂತ್ರ್ಯ ದಿನದ ಪ್ರಯುಕ್ತ ಬಿಎಸ್‌ಎನ್‌ಎಲ್‌ನಿಂದ 147ರೂ. ಪ್ಲ್ಯಾನ್ ಲಾಂಚ್!..ಭಾರಿ ಕೊಡುಗೆ!
Gizbot | 1st Aug, 2020 11:16 AM
 • 74th ಸ್ವಾತಂತ್ರ್ಯ ದಿನ

  ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು 74th ಸ್ವಾತಂತ್ರ್ಯ ದಿನದ ಪ್ರಯುಕ್ತ ಹೊಸದಾಗಿ 147ರೂ. ವೋಚರ್‌ ಅನ್ನು ಪರಿಚಯಿಸಿದೆ. ಈ ವೋಚರ್‌ ಯೋಜನೆಯಲ್ಲಿ ಒಟ್ಟು 10GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೂ ಅದರೊಂದಿಗೆ ಮತ್ತಷ್ಟು ಸೌಲಭ್ಯಗಳು ಈ ರೀಚಾರ್ಜ್ ವೋಚರ್‌ ಪಡೆದಿದೆ. ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಆಕರ್ಷಕ ಅನಿಸುತ್ತದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.


 • ಬಿಎಸ್‌ಎನ್‌ಎಲ್‌ 147ರೂ. ಪ್ಲ್ಯಾನ್‌

  ಬಿಎಸ್‌ಎನ್‌ಎಲ್‌ ಸಂಸ್ಥೆಯು ಚೆನ್ನೈ ವಲಯದಲ್ಲಿ 147ರೂ ವೋಚರ್‌ ಪರಿಚಯಿಸಿದ್ದು, ಲೋಕಲ್ ಮತ್ತು ನ್ಯಾಶನಲ್ ರೋಮಿಂಗ್‌ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ವಾಯಿಸ್‌ ಕರೆಗಳನ್ನು ಹೊಂದಿದೆ. ಬಿಎಸ್ಎನ್ಎಲ್ 250 ನಿಮಿಷಗಳನ್ನು ಮೀರಿದ ಮೂಲ ದರದಲ್ಲಿ ಬಳಕೆದಾರರಿಗೆ ಶುಲ್ಕ ವಿಧಿಸುವುದರೊಂದಿಗೆ ದಿನಕ್ಕೆ 250 ಧ್ವನಿ ನಿಮಿಷಗಳವರೆಗೆ ಅನಿಯಮಿತ ಕರೆ ಅನ್ವಯವಾಗುತ್ತದೆ.


 • 147ರೂ. ಪ್ಲ್ಯಾನಿನ ಇತರೆ ಪ್ರಯೋಜನಗಳು

  ಬಿಎಸ್‌ಎನ್‌ಎಲ್‌ 147ರೂ. ಪ್ಲ್ಯಾನಿನಲ್ಲಿ 10GB ಡೇಟಾ ಜೊತೆಗೆ ಹೆಚ್ಚುವರಿಯಾಗಿ, 30 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತ ಬಿಎಸ್ಎನ್ಎಲ್ ಟ್ಯೂನ್‌ಗಳ ಲಭ್ಯತೆ ಇದೆ. ಇನ್ನು 1999ರೂ ಯೋಜನೆಯನ್ನು ಆಗಸ್ಟ್ 1 ರಿಂದ ಆಗಸ್ಟ್ 31, 2020 ರ ನಡುವೆ ರೀಚಾರ್ಜ್ ಮಾಡುವ ಬಳಕೆದಾರರಿಗೆ ಈಗ 74 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುತ್ತದೆ ಎಂದು ಸಂಸ್ಥೆಯು ಹೇಳಿದೆ.


 • ಕರೆ

  ಈ 1999ರೂ. ಯೋಜನೆಯು ಬಳಕೆದಾರರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆ ಸೇರಿದಂತೆ 250 ನಿಮಿಷಗಳವರೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. 365 ದಿನಗಳವರೆಗೆ ಪ್ರತಿದಿನ ದಿನಕ್ಕೆ 3 ಜಿಬಿ ವರೆಗೆ ಹೈಸ್ಪೀಡ್ ಡೇಟಾ ಸೌಲಭ್ಯ ನೀಡುತ್ತದೆ. ಬಳಕೆದಾರರು ಒಟ್ಟು 439 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆಯಬಹುದಾಗಿದೆ.


 • ಆಗಸ್ಟ್ 31, 2020

  ಹಾಗೆಯೇ ಆಗಸ್ಟ್ 1 ರಿಂದ ಆಗಸ್ಟ್ 31, 2020 ರ ನಡುವೆ ಅವಧಿಯಲ್ಲಿ 247ರೂ. ವೋಚರ್ ರೀಚಾರ್ಜ್‌ ಮಾಡಿಸುವ ಗ್ರಾಹಕರುಗೆ ಆರು ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಒದಗಿಸುತ್ತದೆ ಎಂದು ಬಿಎಸ್ಎನ್ಎಲ್ ಹೇಳಿದೆ. ಇನ್ನು ಈ 247ರೂ. ವೋಚರ್ ಅನಿಯಮಿತ ಕರೆ ಸೌಲಭ್ಯ ಮತ್ತು 3 ಜಿಬಿ ದೈನಂದಿನ ಡೇಟಾ ಸೌಲಭ್ಯ ಪಡೆದಿದ್ದು, ಒಟ್ಟು 30 ದಿನಗಳವರೆಗೆ ವ್ಯಾಲಿಡಿಟಿ ಒದಗಿಸುತ್ತದೆ. ಜೊತೆಗೆ ಬಿಎಸ್ಎನ್ಎಲ್ ಟ್ಯೂನ್ಸ್ ಸೇವೆಯೊಂದಿಗೆ ಇರೋಸ್ ನೌ ಸೇವೆಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ಪ್ರಸ್ತುತ ಟೆಲಿಕಾಂ ಸಂಸ್ಥೆಗಳು ಆಕರ್ಷಕ ಡೇಟಾ ಯೋಜನೆಗಳನ್ನು ಪರಿಚಯಿಸುತ್ತ ಸಾಗಿವೆ. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹ ಖಾಸಿಗೆ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವಂತಹ ಅಧಿಕ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿ ಯೋಜನೆಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿಎಸ್‌ಎನ್‌ಎಲ್‌ ಇದೀಗ ಸ್ವಾತಂತ್ರ್ಯ ದಿನದ ಪ್ರಯುಕ್ತ ಮತ್ತೊಂದು ಹೊಸ ಅಗ್ಗದ ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದೆ.

 
ಟೆಕ್ನಾಲಜಿ