Back
Home » ಆರೋಗ್ಯ
ಚಿಯಾ v/s ಸಬ್ಜಾ ಬೀಜಗಳ ನಡುವಿನ ವ್ಯತ್ಯಾಸ, ಸೇವಿಸುವ ವಿಧಾನ
Boldsky | 15th May, 2020 02:00 PM
 • ಈ ಎರಡು ಬೀಜಗಳನ್ನು ಹೇಗೆ ಸೇವಿಸಬೇಕು?

  ತುಳಸಿ ಬೀಜಗಳನ್ನು ಮೊದಲು ಕನಿಷ್ಠ ಒಂದೆರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸದೆ ತಿನ್ನಲು ಸಾಧ್ಯವಿಲ್ಲ. ಆದರೆ, ಚಿಯಾ ಬೀಜಗಳನ್ನು ನೀವು ಹೇಗೆ ಬಳಸಬೇಕೆಂಬುದನ್ನು ಅವಲಂಬಿಸಿ ಕಚ್ಚಾ ಮತ್ತು ನೆನೆಸಿಟ್ಟು ಎರಡೂ ರೀತಿಯಲ್ಲಿ ಸೇವಿಸಬಹುದು ಎಂದು ಕೌರ್ ಹೇಳುತ್ತಾರೆ. "ಚಿಯಾ ತನ್ನದೇ ಆದ ರುಚಿಯನ್ನು ಹೊಂದಿಲ್ಲ, ಆದ್ದರಿಂದ ಯಾವುದೇ ಆಹಾರ ಪದಾರ್ಥದೊಂದಿಗೆ ಈ ಬೀಜ ಹೊಂದಿಕೊಳ್ಳುತ್ತದೆ, ಆದರೆ ಸಬ್ಜಾಗೆ ತುಳಸಿಯ ಸೌಮ್ಯವಾದ ಪರಿಮಳವಿದೆ" ಎಂದು ಮಖೀಜಾ ಉಲ್ಲೇಖಿಸಿದ್ದಾರೆ. ಚಿಯಾ ನೀರನ್ನು ಹೀರಿಕೊಳ್ಳಲು ಮತ್ತು ಊದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ಸಬ್ಜಾ ಬೀಜ ಕೆವಲ ಸೆಕೆಂಡುಗಳಲ್ಲಿ ಉಬ್ಬಿಕೊಳ್ಳುತ್ತದೆ ಎಂಬುದನ್ನೂ ಕೂಡ ಅವರು ಗಮನಿಸಿದ್ದಾರೆ.


 • ಚಿಯಾ ಮತ್ತು ಸಜ್ಬಾ ಬೀಜಗಳು ಹೇಗೆ ಕಾಣುತ್ತವೆ?

  ನೀವು ಈ ಎರಡೂ ಬೀಜಗಳನ್ನೂ ಹೋಲಿಸಿದಾಗ ನಿಜವಾಗಿಯೂ ವಿಭಿನ್ನವಾಗಿ ಕಾಣುತ್ತವೆ. ತುಳಸಿ ಬೀಜಗಳು ಕಪ್ಪು, ಸಣ್ಣ ಮತ್ತು ದುಂಡಾಗಿರುತ್ತವೆ. ಚಿಯಾ ಬೀಜಗಳು ಸ್ವಲ್ಪ ದೊಡ್ಡದಾಗಿರುತ್ತವೆ, ಹೆಚ್ಚು ಅಂಡಾಕಾರದಲ್ಲಿರುತ್ತವೆ ಮತ್ತು ಬೂದು, ಕಂದು, ಬಿಳಿ ಮತ್ತು ಕಪ್ಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ದೊರಕುತ್ತವೆ.


 • ಪೌಷ್ಠಿಕಾಂಶಗಳು

  ಈ ಎರಡೂ ಬೀಜಗಳು ಕೆಲವು ಪೌಷ್ಠಿಕಾಂಶದ ಪ್ರಯೋಜನಗಳನ್ನು ನೀಡುತ್ತವೆ, ಆಂಟಿಆಕ್ಸಿಡೆಂಟ್ಗಳು, ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಇತರ ಹಲವು ಪ್ರಮುಖ ಖನಿಜಗಳನ್ನು ಒಳಗೊಂಡಿರುವ ಕಾರಣ ಚಿಯಾ ಬೀಜಗಳು ನಿಮಗೆ ಹೆಚ್ಚು 'ಉತ್ತಮ'ವಾದವ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಆದಾಗ್ಯೂ, ತುಳಸಿ ಬೀಜಗಳಲ್ಲಿ ಸಾಕಷ್ಟು ಕಬ್ಬಿಣದ ಅಂಶವಿದೆ.

  ಚಿಯಾ ಬೀಜಗಳು ದೇಹದಲ್ಲಿ ಆರೋಗ್ಯಕರ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಒಮೆಗಾ -3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದ್ದು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಸುಧಾರಿತ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ, ಸಬ್ಜಾ ಬೀಜಗಳು ಮೂತ್ರವರ್ಧಕ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಬ್ಬಿಣ-ಸಮೃದ್ಧ ತುಳಸಿ ಬೀಜಗಳು ರಕ್ತದ ಗುಣಮಟ್ಟವನ್ನು ಸುಧಾರಿಸಲು ಕೂಡ ಸಹಾಯ ಮಾಡುತ್ತದೆ.

  ಚಿಯಾ ಒಮೆಗಾ 3ಯ ಉತ್ತಮ ಮೂಲವಾಗಿದೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಶಕ್ತಿ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುತ್ತದೆ, ಆದರೆ ಸಬ್ಜಾ ಬೀಜಗಳು ದೇಹಕ್ಕೆ ಉತ್ತಮವಾದ ಶೀತಕಗಳಲ್ಲಿ ಒಂದಾಗಿದೆ, ಆಮ್ಲೀಯತೆಯನ್ನು ಎದುರಿಸುವ ಮತ್ತು ಮಲಬದ್ಧತೆಯನ್ನು ನಿವಾರಿಸುವ ಕಬ್ಬಿಣದ ಉತ್ತಮ ಮೂಲವಾಗಿದೆ.


 • ಅವುಗಳನ್ನು ಸೇವಿಸಲು ಸರಿಯಾದ ಮಾರ್ಗ ಯಾವುದು?

  ಯಾವುದೇ ಪಾನೀಯ / ಶೇಕ್ ನ ಲೋಟಕ್ಕೆ ಎರಡು ಚಮಚ ಬೀಜಗಳನ್ನು ಸೇರಿಸಿ ಸೇವಿಸಿ. ಈ ಎರಡೂ ಬೀಜಗಳನ್ನು ನೀರಿನಲ್ಲಿಯೂ ತೆಗೆದುಕೊಳ್ಳಬಹುದು - ಒಂದು ಲೋಟ ನೀರಿಗೆ ಅರ್ಧ ಟೀ ಚಮಚ ಬೀಜಗಳನ್ನು ಸೇರಿಸಿ ಕುಡಿಯಬಹುದು.


 • ತೂಕ ಇಳಿಕೆ ಮತ್ತು ಬೀಜಗಳು

  ಕೌರ್ ಅವರ ಪ್ರಕಾರ, ಬೀಜಗಳ ಮುಖ್ಯ ಪ್ರಯೋಜನವೆಂದರೆ, ಸೇವನೆಯ ನಂತರ ಆರಾಮದಾಯಕ ಅನುಭವವನ್ನು ಪಡೆಯಲು ಸಾಧ್ಯ. ಸರಳವಾಗಿ ಹೇಳುವುದಾದರೆ, ಈ ಬೀಜಗಳನ್ನು ಸೇವಿಸಿದ ನಂತರ ದೇಹಕ್ಕೆ ಆರಾಮವಾಗುತ್ತದೆ, ಇದರಿಂದಾಗಿ ದಿನವಿಡೀ ತಿಂಡಿ ತಿನ್ನಬೇಕೆನ್ನುವ ಬಯಕೆ ತಗ್ಗಬಹುದು.

  ನೀರಿಗೆ ಸೇರಿಸಿದಾಗ, ಚಿಯಾ ಮತ್ತು ತುಳಸಿ ಬೀಜಗಳು ಗಣನೀಯವಾಗಿ ಊದಿಕೊಳ್ಳುತ್ತವೆ, ಇದು ಹೊಟ್ಟೆಯನ್ನು ತುಂಬಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಹೈಡ್ರೀಕರಿಸುತ್ತದೆ (ತೇವಾಂಶ ಉಳಿಸುತ್ತದೆ). ಆದಾಗ್ಯೂ, ಅವು ಆರೋಗ್ಯಕರ ಆಹಾರಕ್ಕೆ ಬದಲಿಯಾದುದಲ್ಲ ಎಂಬುದನ್ನು ಗಮನಿಸುವುದು ಅತೀ ಮುಖ್ಯ. ನಿಮ್ಮ ತುಳಸಿ ಅಥವಾ ಚಿಯಾ ಬೀಜಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು, ನೀವು ಸಮತೋಲಿತ ಆಹಾರವನ್ನು ಸಹ ಸೇವಿಸಬೇಕು.
ನಾವು ನಮ್ಮ ಆರೋಗ್ಯವರ್ಧನೆಗೆ ಪ್ರತಿಸಲವೂ ವೈದ್ಯರನ್ನೇ ಅವಲಂಬಿಸಿ, ಅಥವಾ ವಿವಿಧ ಔಷಧಿಗಳನ್ನೇ ಸೇವಿಸಬೇಕೆಂಬ ನಿಯಮವಿಲ್ಲ. ನೀವು ದಿನನಿತ್ಯ ಬಳಸಬಹುದಾದ ಹಲವಾರು ಕಾಳುಗಳು, ಬೀಜಗಳು ನಿಮ್ಮ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಇಂದು ತುಳಸಿ ಹಾಗೂ ಚಿಜಾ ಬೀಜಗಳ ಆರೋಗ್ಯಕರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರದ ವಿಷಯಕ್ಕೆ ಬಂದರೆ, ಚಿಯಾ ಬೀಜಗಳು ತುಳಸಿ ಅಥವಾ ಸಬ್ಜಾ ಎಂದು ಅನೇಕ ಜನರು ಆಶ್ಚರ್ಯ ಪಡುತ್ತಾರೆ, ಏಕೆಂದರೆ ಎರಡೂ ಮೊದಲ ನೋಟದಲ್ಲಿ ಒಂದೇ ರೀತಿ ಕಾಣುತ್ತವೆ. ಈ ವಿಷಯವನ್ನು ಸ್ಪಷ್ಟಪಡಿಸುತ್ತಾ, ಆಹಾರ ತಜ್ಞ ಲವ್ಲೀನ್ ಕೌರ್ ಮತ್ತು ಪೌಷ್ಟಿಕತಜ್ಞೆ ಪೂಜಾ ಮಖೀಜಾ ಅವರು ಫೇಸ್ಬುಕ್ ಮತ್ತು ಇನ್ಟಾಗ್ರಾಂನಲ್ಲಿ ಈ ಎರಡರ ನಡುವಿನ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ.

ಆದ್ದರಿಂದ, ನೀವು ಈ ಬೀಜಗಳ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ, ನೀವು ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ.

ಈ ಎರಡೂ ಬೀಜಗಳ ನಡುವೆ ಸಾಕಷ್ಟು ಗೊಂದಲಗಳಿವೆ ಎಂದು ಹೇಳಬಹುದು. ಕೆಲವರು ಇವೆರಡೂ ಒಂದೇ ಎಂದೇ ಭಾವಿಸುತ್ತಾರೆ, ಕೌರ್ ಅವರು ತುಳಸಿ ಮತ್ತು ಚಿಯಾ ಬೀಜಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಸ್ವೀಕರಿಸಿದ್ದಾರೆ, ಏಕೆಂದರೆ ಅವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದಾಗ ಪರಿಣಾಮಕಾರಿ ತೂಕ ಇಳಿಕೆಗೆ ಮುಖ್ಯ ಅಂಶವಾಗಿ ಕಂಡುಬರುತ್ತವೆ.

 
ಟೆಕ್ನಾಲಜಿ