Back
Home » ಆರೋಗ್ಯ
ಸೊಂಟದ ಕೆಳಭಾಗ ನೋವೇ? ಹೀಗೆ ಮಾಡಿ ಕಡಿಮೆಯಾಗುವುದು
Boldsky | 2nd May, 2020 09:41 AM
 • ಸೊಂಟದ ನೋವು ಎದುರಾಗುವುದು ಹೇಗೆ?

  ಸೊಂಟದ ಮೂಳೆಸಂಧುಗಳು ನಮ್ಮ ದೇಹದ ಅತಿ ಹೆಚ್ಚು ಬಳಸುವ ಕೀಲುಗಳಲ್ಲಿ ಒಂದಾಗಿದೆ. ಅಚ್ಚರಿ ಎಂದರೆ ದೇಹದ ಅತಿ ಹೆಚ್ಚು ಭಾರವನ್ನು ಹೊರುವ ಮೂಳೆಯ ಸಂಧು ಇದಲ್ಲ, ಬದಲಿಗೆ ಮೊಣಕಾಲು. ಪ್ರತಿ ಹೆಜ್ಜೆ ನಡೆಯುವಾಗಲೂ ಈ ಮೂಳೆಸಂಧುಗಳಲ್ಲಿ ಹೆಚ್ಚಿನ ಪ್ರಮಾಣದ ಸವೆತ ಎದುರಾಗುತ್ತದೆ. ಮೂಳೆಗಳ ಚಲನೆಗೆ ಮೂಳೆಸಂಧುಗಳ ಭಾಗದಲ್ಲಿ ವೃತ್ತಾಕಾರದ ಭಾಗಗಳಿದ್ದು ಇವು ಒಂದರ ಒಳಗೊಂದು ಜಾರುವಂತಿರುತ್ತವೆ ಹಾಗೂ ಇಲ್ಲಿ ಜಾರುಕ ದ್ರವ ಈ ಜಾರುವಿಕೆಯನ್ನು ಸಾಧ್ಯಗೊಳಿಸುತ್ತದೆ.

  ಉತ್ತಮ ಆರೋಗ್ಯಕ್ಕೆ ಈ ಭಾಗದಲ್ಲಿ ಸದಾ ಸಾಕಷ್ಟು ಜಾರುಕ ದ್ರವ ಇರಲೇಬೇಕು. ವಯಸ್ಸಾದಂತೆ ಸ್ವಾಭಾವಿಕವಾಗಿ ಈ ಜಾರುಕದ್ರವ ಕೊಂಚ ಕಡಿಮೆಯಾಗುವ ಕಾರಣ ಮೂಳೆಗಳು ಪರಸ್ಪರ ತಿಕ್ಕಿಕೊಂಡು ಹೆಚ್ಚು ಸವೆಯುತ್ತವೆ. ಅಲ್ಲದೇ ಸೊಂಟದ ಭಾಗದ ಸ್ನಾಯುಗಳು ಮತ್ತು ಸ್ನಾಯುರಜ್ಜುಗಳು (tendon) ಸಾಮರ್ಥ್ಯಕ್ಕೂ ಮೀರಿ ಬಳಕೆಯಾಗುತ್ತವೆ. ಕೆಲವೊಮ್ಮೆ ಈ ಭಾಗದ ಮೂಳೆಯೂ ಮುರಿತಕ್ಕೆ ಒಳಗಾಗಬಹುದು. ಇದರಿಂದ sciatica ಅಥವಾ fracture ಅಥವಾ ಎರಡೂ ಎದುರಾಗಬಹುದು. ಸೊಂಟದ ಮೂಳೆಸಂಧುಗಳ ನೋವು ತೊಡೆ, ಕೆಳಹೊಟ್ಟೆ, ಸೊಂಟದ ಒಳಭಾಗ, ಪಕ್ಕದ ಭಾಗ, ನಿತಂಬಗಳಲ್ಲಿಯೂ ನೋವು ಉಂಟು ಮಾಡಬಹುದು. ಕೆಲವೊಮ್ಮೆ ಕೆಳಹೊಟ್ಟೆ ಅಥವಾ ಬೆನ್ನಿನ ನೋವು ಸಹಾ ಸೊಂಟದ ಭಾಗದತ್ತ ವ್ಯಾಪಿಸಬಹುದು.


 • ಸೊಂಟ ನೋವನ್ನು ಗುಣಪಡಿಸಲು ಯೋಗಾಭ್ಯಾಸ ಹೇಗೆ ಸಹಾಯ ಮಾಡುತ್ತದೆ?

  ಯೋಗಾಸನವನ್ನು ನಿಯಮಿತ ಅಭ್ಯಾಸ ಮಾಡುತ್ತಾ ಬಂದರೆ ಸೊಂಟದ ಕೀಲುಗಳು ಮತ್ತು ಸ್ನಾಯುಗಳಲ್ಲಿ ಸೆಡೆತ ಎದುರಾಗುವುದನ್ನು ತಡೆಯುತ್ತದೆ. ಇದು ಆ ಭಾಗದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಈ ಆಸನಗಳು ಒಂದಕ್ಕಿಂತ ಹೆಚ್ಚು ಪ್ರದೇಶಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಆದ್ದರಿಂದ, ಈ ಆಸನಗಳಿಂದ ಕೇವಲ ಸೊಂಟ ಮಾತ್ರವಲ್ಲ, ನೋವನ್ನು ಹೊರಸೂಸುವ ಇತರ ಭಾಗಗಳಿಗೂ ಸೂಕ್ತ ವ್ಯಾಯಾಮ ದೊರೆತು ನೋವು ಶಮನಗೊಳ್ಳುತ್ತದೆ. ಇಂತಹ ಕೆಲವು ಆಸನಗಳೆಂದರೆ:


 • 1. ಆನಂದ ಬಾಲಾಸನ

  ಹೆಸರೇ ಸೂಚಿಸುವಂತೆ ಮಗುವೊಂದು ಆನಂದದಿಂದ ತನ್ನ ಪಾದಗಳನ್ನು ಕೈಗಳಿಂದ ಎಳೆದುಕೊಂಡಿರುವಂತೆ ಈ ಭಂಗಿ ಕಾಣಿಸಿಕೊಳ್ಳುತ್ತದೆ. ಈ ಆಸನ ನಮ್ಮ ಬಾಲ್ಯದ ತೊಟ್ಟಿಲಿನಲ್ಲಿದ್ದ ದಿನಗಳಿಗೆ ಕೊಂಡೊಯ್ಯುತ್ತದೆ. ಈ ಆಸನದಲ್ಲಿ ಕೈ ಮತ್ತು ಕಾಲುಗಳಿಗೆ ಹೆಚ್ಚಿನ ಸೆಳೆತ ದೊರಕುತ್ತದೆ ಹಾಗೂ ಬೆನ್ನಿಗೂ ಉತ್ತಮ ಸೆಳೆತ ದೊರಕುತ್ತದೆ. ನಿತಂಬಗಳ ಸ್ನಾಯುಗಳು ವಿಸ್ತರಿಸಲ್ಪಡುತ್ತವೆ ಹಾಗೂ ಕೈ ಕಾಲುಗಳಲ್ಲಿ ಹೊಸ ರಕ್ತಪರಿಚಲನೆ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಸೊಂಟದ ಕೀಲುಗಳಿಗೆ ಉತ್ತಮ ಮಸಾಜ್ ದೊರಕಿದಂತಾಗುತ್ತದೆ ಹಾಗೂ ನೋವು ಇಲ್ಲವಾಗುತ್ತದೆ.


 • 2. ಆಂಜನೇಯಾಸನ

  ಅಂಜನೇಯಾಸನದಿಂದ ನಿಮ್ಮ ಸೊಂಟದ ಕೀಲುಗಳು ಮತ್ತು ಸ್ನಾಯುಗಳ ಮೇಲೆ ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುವ ಕಡಿಮೆ ಪ್ರಾಬಲ್ಯದ ವ್ಯಾಯಾಮವಾಗಿದೆ. ಈ ಆಸನದಿಂದ ಸೊಂಟದ ಸ್ನಾಯುಗಳು ಹೆಚ್ಚು ಸೆಳೆತಕ್ಕೆ ಒಳಗಾಗುತ್ತವೆ ಹಾಗೂ ರಕ್ತಪರಿಚಲನೆಯೂ ಹೆಚ್ಚುತ್ತದೆ. ಪರಿಣಾಮವಾಗಿ ಸ್ನಾಯುಗಳು ಸಡಿಲಗೊಂಡು ಸೊಂಟದ ನೋವು ಶೀಘ್ರವೇ ಇಲ್ಲವಾಗುತ್ತದೆ. ಈ ಆಸನವನ್ನು ನಿಧಾನವಾಗಿ ಪ್ರಾರಂಭಿಸಿ ಸೊಂಟದ ನೋವು ತಾಳಿಕೊಳ್ಳುವಷ್ಟು ಮಾತ್ರವೇ ಕಾಲನ್ನು ಸೆಳೆಯಬೇಕು. ನೋವು ಹೆಚ್ಚುವ ಅನುಭವವಾದರೆ ತಕ್ಷಣ ಅಲ್ಲಿಯೇ ನಿಲ್ಲಿಸಿ ಕೆಲ ಸೆಕೆಂಡುಗಳ ಕಾಲ ಈ ನೋವನ್ನು ಪಡೆಯಬೇಕು. ಹೆಚ್ಚಿದ ರಕ್ತಪರಿಚಲನೆ ಈ ನೋವನ್ನು ಅಲ್ಲಿಯೇ ಶಮನಗೊಳಿಸುವುವುದನ್ನು ಪ್ರತ್ಯಕ್ಷವಾಗಿ ಅನುಭವ ಪಡೆಯಬಹುದು.


 • 3. ಅರ್ಧ ಮತ್ಸ್ಯೇಂದ್ರಾಸನ

  ದೇಹವನ್ನು ಹೊರಳಿಸುವುದು ಒಂದು ಉತ್ತಮ ವ್ಯಾಯಾಮವಾಗಿದ್ದು ಇದರಿಂದ ದೇಹದ ಕಲ್ಮಶಗಳನ್ನು ಹೊರಹಾಕಲಾಗುತ್ತದೆ ಎಂದು ನಂಬಲಾಗಿದೆ. ಈ ಆಸನದಲ್ಲಿಯೂ ದೇಹವನ್ನು ಕೊಂಚ ತಿರುಚುವ ಮೂಲಕ ಒಳ ಅಂಗಗಳಿಗೆ ಮಸಾಜ್ ದೊರಕುತ್ತದೆ ಹಾಗೂ ಕಲ್ಮಶಗಳನ್ನು ನಿವಾರಿಸಲಾಗುತ್ತದೆ. ತನ್ಮೂಲಕ ರಕ್ತ ಪರಿಚಲನೆಯನ್ನೂ ಹೆಚ್ಚಿಸಿ ಸೊಂಟದ ಸ್ನಾಯುಗಳ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಯೋಗ ಪಟುಗಳು ಸೊಂಟ ನೋವಿನ ವ್ಯಕ್ತಿಗಳಿಗೆ ಈ ಆಸನವನ್ನು ನಿತ್ಯವೂ ಅನುಸರಿಸುವಂತೆ ಸಲಹೆ ಮಾಡುತ್ತಾರೆ.


 • 4. ಬದ್ಧ ಕೋನಾಸನ

  ಈ ಆಸನದಿಂದ ನಿತಂಬಗಳ ಸ್ನಾಯುಗಳು ಅತಿ ಹೆಚ್ಚು ಸೆಳೆತವನ್ನು ಪಡೆಯುತ್ತವೆ. ಈ ಆಸನದ ಮೂಲಕ ಸೊಂಟ ಮತ್ತು ನಿತಂಬದ ಸ್ನಾಯುಗಳು ಮತ್ತು ಮೂಳೆಸಂಧುಗಳು ಅತಿ ಹೆಚ್ಚಿನ ಚಲನೆಯನ್ನು ಪಡೆಯುತ್ತವೆ ಹಾಗೂ ಈ ಮೂಲಕ ಸೊಂಟದ ಮೂಳೆಸಂಧುಗಳ ನಡುವೆ ಜಾರುಕದ್ರವ ಅತಿ ಹೆಚ್ಚು ಹರಿಯುವಂತೆ ಮಾಡುತ್ತದೆ. ಹೀಗೆ ಹರಿಯುವ ಮೂಲಕ ಹಿಂದೆ ಇದ್ದ ತಡೆತಡೆಗಳಲ್ಲವೂ ನಿವಾರಣೆಯಾಗಿ ಇನ್ನಷ್ಟು ಸರಾಗವಾಗಿ ಮೂಳೆಗಳು ಬಾಗುತ್ತವೆ ಹಾಗೂ ನೋವು ಸಹಾ ಇಲ್ಲವಾಗುತ್ತದೆ. ಅಚ್ಚರಿ ಎಂಬಂತೆ ಹಿಂದೆಂದಿಗಿಂತಲೂ ಈಗ ಇನ್ನಷ್ಟು ಸುಲಭವಾಗಿ ಸೊಂಟ ಬಗ್ಗಿಸಲು ಸಾಧ್ಯವಾಗುತ್ತದೆ.


 • 5. ಗೋಮುಖಾಸನ

  ಹೆಸರೇ ತಿಳಿಸುವಂತೆ ಗೋಮುಖಾಸನ ಅಥವಾ ಹಸುವಿನ ಮುಖದ ಭಂಗಿಯ ಈ ಆಸನದಿಂದ ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ಶಾಂತ ಪ್ರಜ್ಞೆಯನ್ನು ಹರಡಲು ಸಾಧ್ಯವಾಗುತ್ತದೆ. ನಿಮ್ಮ ಕಾಲುಗಳನ್ನು ಒಂದರ ಮೇಲೊಂದು ಜೋಡಿಸಿದಾಗ, ಸ್ನಾಯು-ಸ್ನಾಯುರಜ್ಜು ಕೀಲುಗಳಲ್ಲಿ ಪ್ರಚೋದನೆ ಉಂಟಾಗುತ್ತದೆ ಹಾಗೂ ರಕ್ತಪರಿಚಲನೆ ಹೆಚ್ಚುತ್ತದೆ. ಬೆನ್ನುಹುರಿ, ಈ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ, ಸ್ನಾಯುಗಳನ್ನು ವಿಶ್ರಾಂತಿ ಪಡೆಯಲು ಸಂಕೇತಿಸುತ್ತದೆ. ಈ ಭಂಗಿಯು ಎಂಡಾರ್ಫಿನ್‌ಗಳ ಬಿಡುಗಡೆಯ ಮೂಲಕವೂ ಕೆಲವು ಫಲಿತಾಂಶಗಳನ್ನು ಉಂಟುಮಾಡುತ್ತದೆ, ಇದು ನಿಮ್ಮ ದೇಹ ಮತ್ತು ಮನಸ್ಸಿನೊಳಗೆ ವಿಶ್ರಾಂತಿ ಪಡೆಯುವ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ಇದರಿಂದಾಗಿ ಸೊಂಟದ ನೋವನ್ನು ಸಹ ನಿವಾರಿಸುತ್ತದೆ.


 • 6. ಮಾಲಾಸನ

  ಮಾಲಾಸನ ಮೂಲತಃ ಒಂದು ಬಸ್ಕಿ ಹೊಡೆಯುವ ವ್ಯಾಯಾಮವೇ ಆಗಿದೆ. ನೀವು ಸೊಂಟದ ನೋವನ್ನು ಹೊಂದಿರುವಾಗ ಅಭ್ಯಾಸ ಮಾಡಲು ಸೂಕ್ತವಾದ ಆಸನವಾಗಿದೆ. ಏಕೆಂದರೆ ಅದು ನಿಮ್ಮ ಸೊಂಟದ ಸ್ನಾಯುಗಳ ಸೆಡೆತವನ್ನು ಸಡಿಲಿಸಿ ರಕ್ತಪರಿಚಲನೆ ಹೆಚ್ಚಿಸುತ್ತದೆ. ಇದು ನಿಮ್ಮ ಸೊಂಟದ ಕೀಲುಗಳನ್ನು ಬಲಪಡಿಸುತ್ತದೆ ಮತ್ತು ಈ ಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ. ತನ್ಮೂಲಕ ಸೊಂಟದ ನೋವು ಮತ್ತು ಬಿಗಿತವನ್ನು ಸುಲಭವಾಗಿ ನಿವಾರಿಸುತ್ತದೆ.


 • 7. ರಾಜಕಪೋಟಾಸನ

  ಪಾರಿವಾಳದ ಭಂಗಿಯನ್ನು ಹೋಲುವ ಈ ಆಸನ ವಾಸ್ತವದಲ್ಲಿ ಏಕ ಪಾದ ರಾಜಕಪೋಟಾಸನ ಎಂದು ಕರೆಯಲಾಗುತ್ತದೆ. ಏಕೆಂದರೆ ಒಂದು ಪಾದವನ್ನು ಒಂದು ಬಾರಿಗೆ ಸೆಳೆತಕ್ಕೆ ಒಳಗಾಗಿಸುವ ಮೂಲಕ ಆ ಭಾಗದ ನೋವನ್ನು ನಿವಾರಿಸಲು ಸಾಧ್ಯವಾಗುತ್ತದೆ. ಈ ಆಸನದಲ್ಲಿ ಸೊಂಟದ ಸ್ನಾಯುಗಳನ್ನು ಅಪಾರವಾಗಿ ವಿಸ್ತರಿಸುತ್ತದೆ, ಇದರಿಂದಾಗಿ ಅಂತರ್ನಿರ್ಮಿತ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಇದು ಜಾರುಕದ್ರವಗಳ ಸರಿಯಾದ ಹರಿವನ್ನು ಖಾತ್ರಿಗೊಳಿಸುತ್ತದೆ ಮತ್ತು ಸೊಂಟದ ಪ್ರದೇಶದಲ್ಲಿ ಉಂಟಾಗಿದ್ದ ತಡೆಗಳನ್ನು ಯಶಸ್ವಿಯಾಗಿ ನಿವಾರಿಸುವ ಮೂಲಕ ಸೊಂಟ ಮತ್ತು ನಿತಂಬಗಳ ಸ್ನಾಯುಗಳನ್ನು ಹುರಿಗಟ್ಟಿಸುತ್ತದೆ. ಈ ಆಸನವನ್ನು ಎಡ ಮತ್ತು ಬಲ ಕಾಲುಗಳಿಗೆ ಪ್ರತ್ಯೇಕವಾಗಿ ಜೋಡಿಯಾಗಿ ನಿರ್ವಹಿಸಬೇಕು.

  ಸೊಂಟ ನೋವಿನ ಶಮನಕ್ಕೆ ನೀವು ಎಂದಾದರೂ ಯೋಗಾಸನವನ್ನು ಪ್ರಯತ್ನಿಸಿದ್ದೀರಾ? ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ ಎಂದು ಯೋಗಪಟುಗಳು ವಿವರಿಸುತ್ತಾರೆ, ಆದ್ದರಿಂದ ಸೊಂಟದಲ್ಲಿ ಯಾವುದೇ ನೋವು ಮತ್ತು ಅಸ್ವಸ್ಥತೆ ಈಗ ಇರದೇ ಇದ್ದರೂ ಮುಂದೆ ಎದುರಾಗುವುದನ್ನು ತಪ್ಪಿಸಲು ಆದಷ್ಟೂ ಬೇಗನೇ ಯೋಗಾಭ್ಯಾಸವನ್ನು ಪ್ರಾರಂಭಿಸುವುದು ಒಳ್ಳೆಯದು. ಒಂದು ವೇಳೆ ನಿಮಗೆ ಈಗಾಗಲೇ ಸೊಂಟ ನೋವು ಇದ್ದರೆ, ಏನು ಮಾಡಬೇಕೆಂದು ಈಗ ನಿಮಗೆ ತಿಳಿದಿದೆ! ಆದರೆ ನೀವೇ ಸ್ವತಃ ಅನುಸರಿಸದೇ ಅನುಭವಿ ಯೋಗಪಟುಗಳ ಮೇಲ್ವಿಚಾರಣೆಯಲ್ಲಿ ನೀವು ಇದನ್ನು ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಸೊಂಟದ ನೋವು ಇಂದು ಹೆಚ್ಚಿನ ವ್ಯಕ್ತಿಗಳಲ್ಲಿ ಕಾಣಬರುತ್ತಿರುವ ತೊಂದರೆಯಾಗಿದೆ. ಹೆಚ್ಚು ಹೊತ್ತು ಕುಳಿತೇ ಮಾಡುವ ಕೆಲಸಗಳು ಇದಕ್ಕೆ ಪ್ರಮುಖ ಕಾರಣ. ಉಳಿದಂತೆ ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮದ ಕೊರತೆ, ಕೆಲವು ಕಾಯಿಲೆಗಳು ಮತ್ತು ಔಷಧಿಗಳ ಪ್ರಭಾವ ಮೊದಲಾದವೂ ಈ ನೋವಿಗೆ ಕಾರಣವಾಗಬಹುದು. ಕಾರಣವೇನೇ ಇದ್ದರೂ ನೋವು ಮಾತ್ರ ರೋಗಿಯ ಚಲನೆಯನ್ನೇ ಬಾಧಿಸುತ್ತದೆ.

ಈ ನೋವನ್ನು ಶಮನಗೊಳಿಸುವ ಯಾವುದೇ ಆದರೂ ಸರಿ, ಅದನ್ನು ಅನುಸರಿಸುವ ಮನಃಸ್ಥಿತಿಯನ್ನು ರೋಗಿ ಹೊಂದಿರುತ್ತಾರೆ. ಸೊಂಟದ ನೋವಿಗೆ ಔಷಧಿಗಳು ನೀಡುವ ಶಮನಕ್ಕಿಂತಲೂ ನಿಸರ್ಗ ತಾನೇ ಸರಿಪಡಿಸಿಕೊಳ್ಳುವ ಗುಣವೇ ಹೆಚ್ಚು ಫಲಪ್ರದವಾಗಿದೆ. ಈ ಶಕ್ತಿಯನ್ನು ಕೆಲವು ಯೋಗಾಸನಗಳು ಇನ್ನಷ್ಟು ಉತ್ತಮಗೊಳಿಸುತ್ತವೆ.

 
ಟೆಕ್ನಾಲಜಿ