Back
Home » ಆರೋಗ್ಯ
ಇರ್ಫಾನ್ ಖಾನ್ ಬಲಿ ಪಡೆದ ಕರುಳಿನ ಸೋಂಕು ಮತ್ತು ಕ್ಯಾನ್ಸರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
Boldsky | 30th Apr, 2020 09:39 AM
 • ಕೋಲಿಟಿಸ್ ಎಂದರೇನು?

  ಕೋಲಿಟಿಸ್‌ ಕಾಯಿಲೆ ಎಂದರೆ ಕರುಳಿನ ಸೋಂಕು. ದೊಡ್ಡ ಕರುಳಿನಲ್ಲಿ ಉರಿಯೂತ ಉಂಟಾಗುವುದು. ಇದು ಸಾಮಾನ್ಯವಾಗಿ ಕಂಡು ಬರುವ ಕಾಯಿಲೆಯಾಗಿದ್ದು ಕೆಲವೊಮ್ಮೆ ಚಿಕ್ಕದಾಗಿ ಕಾಣಿಸಿಕೊಂಡರೆ ಮತ್ತೆ ಕೆಲವರಲ್ಲಿ ಗಂಭೀರ ಸ್ವರೂಪದಾಗಿರುತ್ತದೆ.


 • ಕರುಳಿನ ಸೋಂಕಿಗೆ ಕಾರಣ

  ಸೋಂಕು

  • ಕೋಲಿಟಿಸ್ ಬ್ಯಾಕ್ಟಿರಿಯಾ, ವೈರಸ್‌ಗಳಿಂದ ಉಂಟಾಗುತ್ತದೆ.
  • ಕ್ಯಾಂಪಿಲೋಬ್ಯಾಕ್ಟರ್ಜೆಜುನಿ, ಶಿಗೆಲ್ಲಾ, ಇ. ಕೋಲಿ, ಯೆರ್ಸಿನಿಯೆಂಟರೊಕೊಲಿಟಿಕಾ, ಸಾಲ್ಮೊನೆಲ್ಲಾ ಮತ್ತು ಮೈಕೋಬ್ಯಾಕ್ಟೀರಿಯಂ ಈ ಬ್ಯಾಕ್ಟಿರಿಯಾಗಳಿಂದ ಉಂಟಾಗುತ್ತದೆ. ನೋರೋವೃಸ್, ರೋಟಾವೈರಸ್, ಅಡೆನೋವೈರಸ್ ಇವುಗಳು ಕೂಡ ಕರುಳಿನ ಸೋಂಕು ಉಂಟು ಮಾಡುವುದು.
  • ಸೋಂಕು ಕಲಬೆರಿತ ಆಹಾರ, ಕಲುಷಿತ ನೀರು ಅಥವಾ ಶುಚಿತ್ವವಿಲ್ಲದ ಆಹಾರಗಳ ಸೇವನೆಯಿಂದ ಉಂಟಾಗುವುದು.
  • ಇನ್ನು ಕ್ಲೋಸ್ಟ್ರಿಡಿಯಮ್ ಡಿಫಿಸಿಲ್‌ನಿಂದಲೂ ಕರುಳಿನ ಸೋಂಕು ಉಂಟಾಗುವುದು. ಇದು ವ್ಯಕ್ತಿಗೆ ಅಧಿಕ ಆ್ಯಂಟಿಬಯೋಟಿಕ್ ಔಷಧಿ ನೀಡಿದಾಗ ಬ್ಯಾಕ್ಟಿರಿಯಾಗಳ ಬೆಳವಣಿಗೆ ಹೆಚ್ಚಾಗಿ ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟಿರಿಯಾದ ಸಮತೋಲನ ತಪ್ಪಿ ಕರುಳು ಸೋಂಕು ಉಂಟಾಗುವುದು.

  ಕರುಳಿನ ಉರಿಯೂತದ ಕಾಯಿಲೆ(IBD)

  • ಇದು ಮಾರಾಣಾಂತಿಕ ಕಾಯಿಲೆಯಾಗಿದ್ದು ಜೀರ್ಣಕ್ರಿಯೆಯಲ್ಲಿ ಉರಿಯೂತದಿಂದಾಗಿ ಉಂಟಾಗುವುದು.

  ಅಲರ್ಜಿ

  • ಅಲರ್ಜಿ ಕೊಲೆಟಿಸ್ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಹಸುವಿನ ಹಾಲಿನಲ್ಲಿರುವ ಪ್ರೊಟೀನ್‌ನಿಂದಾಗಿ ಗ್ಯಾಸ್ ಸಮಸ್ಯೆ, ಮಲದಲ್ಲಿ ರಕ್ತ ಅಥವಾ ಕಫದ ಅಂಶ ಕಂಡು ಬರುವುದು.

  ಇಸ್ಕೆಮಿಕ್ ಕೋಲಿಟಿಸ್

  • ಕರುಳಿಗೆ ರಕ್ತ ಸಂಚಾರ ಕಡಿಮೆಯಾದಾಗ ಉರಿಯೂತ ಉಂಟಾಗುವುದು. ಇದರಿಂದ ಜ್ವರ, ಬೇಧಿ, ಕರಿಳಿನ ಭಾಗದಲ್ಲಿ ನೋವು ಉಂಟಾಗುವುದು. ರಕ್ತಹೀನತೆ, ಕಡಿಮೆ ರಕ್ತದೊತ್ತಡ, ಕಿರಿದಾದ ರಕ್ತನಾಳಗಳಿಂದ ಈ ಸಮಸ್ಯೆ ಉಂಟಾಗುವುದು.

  ಮೈಕ್ರೋಸ್ಕೋಪಿಕ್ ಕೋಲಿಟಿಸ್

  • ಮೈಕ್ರೋಸ್ಕೋಪಿಕ್ ಕೋಲಟಿಸ್ ಬಿಳಿರಕ್ತ ಕಣದಲ್ಲಿರುವ ಲಿಂಪೋಸೈಟ್ಸ್‌ನಿಂದಾಗಿ ಉಂಟಾಗುತ್ತದೆ. ಇದಕ್ಕೆ ನಿಖರ ಕಾರಣ ಇನ್ನೂ ಗೊತ್ತಿಲ್ಲ. ಸ್ವಯಂನಿರೋಧಕ ಕಾಯಿಲೆ, ಜೀನ್ಸ್, ಸೋಂಕು ಮತ್ತಿತರ ಔಷಧಗಳಿಂದ ಉಂಟಾಗುವುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಿ ಪಡಿಸಿದ್ದಾರೆ.
  • ಡ್ರಗ್ ಇಂಡ್ಯೂಸಿಡ್ ಕೋಲಿಟಿಸ್
  • Nonsteroidal anti-inflammatory drugs (NSAIDS) ಇದನ್ನು ನೀಡಿದಾಗಲೂ ಉಂಟಾಗುವ ಸಾಧ್ಯತೆ ಇದೆ.

  ಕೆಮಿಕಲ್ ಕೋಲಿಟಿಸ್

  • ಎಂಡೋಸ್ಕೋಪ್ ಅಥವಾ ಇತರ ಹಾನಿಕಾರ ರಾಸಾಯನಿಕ ವಿಕಿರಣಗಳು ಆಕಸ್ಮಿಕವಾಗಿ ಬಿದ್ದರೆ ಉಂಟಾಗುವುದು.

 • ಕೋಲಿಟಿಸ್ ಲಕ್ಷಣಗಳು

  • ಕೆಳಹೊಟ್ಟೆ ನೋವು
  • ಜ್ವರ
  • ವಾಂತಿ
  • ಬೇಧಿ (ರಕ್ತ ಕೂಡ ಕಾಣಬಹುದು)
  • ಹೊಟ್ಟೆ ಉಬ್ಬುವುದು
  • ತಲೆಸುತ್ತು
  • ತೂಕ ಇಳಿಕೆ
  • ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು
  • ಚಳಿಜ್ವರ

 • ಪತ್ತೆ ಹೇಗೆ?

  ವೈದ್ಯರು ಮೊದಲು ನಿಮ್ಮ ಆರೋಗ್ಯದ ಮಾಹಿತಿ ಪಡೆಯುತ್ತಾರೆ. ನಂತರ ಸಿಗ್ಮೋಯಿಡೋಸ್ಕೋಪಿ ಅಥವಾ ಕೊಲೊನೋಸ್ಕೋಪಿ ಮಾಡಲಾಗುವುದು. ಇದರ ಜೊತೆಗೆ ಬೇರಿಯಂ ಎನೆಮಾ, ಟುಮೋಗ್ರಫಿ ಮುಂತಾದ ಪರೀಕ್ಷೆ ಕೂಡ ಮಾಡುತ್ತಾರೆ. ಮಲ ಪರೀಕ್ಷೆ, ರಕ್ತ ಪರೀಕ್ಷೆ ಇವುಗಳ ಮೂಲಕ ಕಾಯಿಲೆ ಇರುವುದು ಪತ್ತೆಯಾಗುವುದು.


 • ಚಿಕಿತ್ಸೆ

  ಕೇಸ್‌ನ ಗಂಭೀರತೆ ಮೇಲೆ ಚಿಕಿತ್ಸೆ ನೀಡಲಾಗುವುದು. ಸಣ್ಣ ಸಮಸ್ಯೆಯಾಗಿದ್ದರೆ ಆ್ಯಂಟಿ ಡಯಾರಿಯಾ ಔಷಧಿ, ಆ್ಯಂಟಿಬಯೋಟಿಕ್, ಸಪ್ಲಿಮೆಂಟ್‌ಗಳಾದ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಡಿ ನೀಡಿ ಗುಣಪಡಿಸಲಾಗುವುದು.


 • ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು

  • ರೋಗ ಹೆಚ್ಚಿಸುವ ಆಹಾರ ಸೇವಿಸಬಾರದು
  • ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು.
  • ಹೆಚ್ಚು ಮಲ ವಿಸರ್ಜನೆಗೆ ಸಹಾಯ ಮಡುವ ಹಣ್ಣು, ತರಕಾರಿಗಳನ್ನು ತಿನ್ನಬೇಕು.ಬಾಲಿವುಡ್‌ ನಟ ತಮ್ಮ ಮನೋಯಜ್ಞವಾದ ಅಭಿನಯದಿಂದ ವೀಕ್ಷಕರ ಮನದಲ್ಲಿ ಉಳಿದಿರುವ ಇರ್ಫಾನ್‌ ಖಾನ್ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಅವರ ಅಸಂಖ್ಯಾ ಅಭಿಮಾನಿಗಳಿಗೆ ಹಾಗೂ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ.

ಅಷ್ಟಕ್ಕೂ ಆ ಅದ್ಭುತ ಪ್ರತಿಭೆಯನ್ನು ಬಲಿ ತೆಗೆದುಕೊಂಡಿದ್ದು ಕರುಳಿನ ಸೋಂಕು ಮತ್ತು ಕ್ಯಾನ್ಸರ್. 2018ರಲ್ಲ ಇರ್ಫಾನ್ ಖಾನ್ ಆರೋಗ್ಯದಲ್ಲಿ ಏರುಪೇರಾಯ್ತು. ಆಗ ತಿಳಿದು ಬಂದಿದ್ದು ಅವರು ತುಂಬಾ ಅಪರೂಪದ ನ್ಯೂರೋಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ ಎಂದು. ನಂತರ ಯುಕೆಯಲ್ಲಿ ಒಂದು ವರ್ಷ ಚಿಕಿತ್ಸೆ ಪಡೆದು ಆ ಕಾಯಿಲಯಿಂದ ಗುಣಮುಖರಾಗಿ ಸಾವನ್ನು ಎದುರಿಸಿ ಬಂದಿದ್ದರು

ಆದರೆ ಇದೀಗ ಕರುಳಿನ ಸೋಂಕು ಹಾಗೂ ಕ್ಯಾನ್ಸರ್‌ನಿಂದಾಗಿ ಆ ನಟ ಬಾರದ ಲೋಕಕ್ಕೆ ಮರಳಿದ್ದಾರೆ. ಆ ನಟನ ಜೀವ ತೆಗೆದ ಕಾಯಿಲೆಯಾದ ಕೋಲಿಟಿಸ್ ಎಂದರೇನು, ಅದರ ಲಕ್ಷಣಗಳೇನು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

 
ಟೆಕ್ನಾಲಜಿ