Back
Home » ಆರೋಗ್ಯ
ಕೋವಿಡ್ 19 ರೋಗಿ ಮನೆಯಲ್ಲಿಯೇ ಕ್ವಾರೆಂಟೈನ್‌ ಆಗ ಬಯಸುವುದಾದರೆ ಪಾಲಿಸಲೇಬೇಕಾದ ಸೂಚನೆಗಳು
Boldsky | 29th Apr, 2020 09:52 AM
 • ಸೆಲ್ಫ್‌ ಕ್ವಾರೆಂಟೈನ್‌ ಗೈಡ್‌ಲೈನ್ (ಸ್ವ ದಿಗ್ಭಂಧನ)

  ಇತ್ತೀಚೆಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಗೈಡ್‌ಲೈನ್ ಪ್ರಕಾರ ಅತ್ಯಂತ ಅಲ್ಪ ಕೊರೊನಾ ಲಕ್ಷಣವಿರುವ ಅಥವಾ ಕೊರೊನಾ ಸೋಂಕು ಶಂಕಿತರ ಸಂಪರ್ಕದಲ್ಲಿದ್ದು, ಅವರಲ್ಲಿ ಲಕ್ಷಣಗಳು ಕಂಡು ಬರದಿದ್ದರೆ ಅವರು ಮನೆಯಲ್ಲಿಯೇ ಕ್ವಾರೆಂಟೈನ್‌ನಲ್ಲಿರಬಹುದು. ಆದರೆ ಹಾಗೆ ಕ್ವಾರೆಂಟೈನ್ ಆಗುವುದಾದರೆ ಆ ವ್ಯಕ್ತಿಯ ಮನೆ ಅದಕ್ಕೆ ಸೂಕ್ತವಾಗಿರಬೇಕು. ಸೆಲ್ಫ್‌ ಕ್ವಾರೆಂಟೈನ್‌ಗೆ ಹಾಗೂ ಇತರರಿಗೆ ಹರಡದಂತೆ ಸುರಕ್ಷತೆ ಆ ಮನೆಯಲ್ಲಿರಬೇಕು.


 • ಅದಕ್ಕಾಗಿ ಆ ರೋಗಿಯ ಮನೆ ಹೇಗಿರಬೇಕು?

  • ಸೆಲ್ಫ್‌ ಕ್ವಾರೆಂಟೈನ್‌ಗೆ ಒಳಗಾದ ವ್ಯಕ್ತಿಗೆ ಪ್ರತ್ಯೇಕ ಕೋಣೆ ಹಾಗೂ ಇತರ ವ್ಯಕ್ತಿಗಳಿಗೆ ರೋಗ ಹರಡದಿರಲು ಎಲ್ಲಾ ವ್ಯವಸ್ಥೆ ಇರಬೇಕು.
  • ಅವರನ್ನು ಆರೈಕೆ ಮಾಡುವವರು 24*7 ಲಭ್ಯವಿರಬೇಕು.
  • ಅವರನ್ನು ಆರೈಕೆ ಮಾಡುವವರು ಆಗಾಗ ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಬೇಕು.
  • ರೋಗಿಯನ್ನು ಆರೈಕೆ ಮಾಡುವವರು ಹಾಗೂ ಕುಟುಂಬದ ಸದಸ್ಯರು ಮೆಡಿಕಲ್ ಆಫೀಸರ್ ಸಲಹೆ ಮೇರೆ ಹೈಡ್ರೋಕ್ಸಿಕ್ಲೋರೋಕ್ವಿನ್ ಪ್ರೊಫೈಲಾಕ್ಸಿಸ್ ಔಷಧ ತೆಗೆದುಕೊಳ್ಳಬೇಕು.
  • ರೋಗಿಯು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿರಬೇಕು. ಆ ಆ್ಯಪ್ ಎಲ್ಲಾ ಸಮಯದಲ್ಲಿ ಆ್ಯಕ್ಟಿವ್ ಇರಬೇಕು.
  • ರೋಗಿಯು ತನ್ನ ಆರೋಗ್ಯವನ್ನು ಆಗಾಗ ತಪಾಸಣೆ ಮಾಡಿ ಮಾಹಿತಿ ನೀಡಲು ಒಪ್ಪುವಂತಿರಬೇಕು.
  • ಹೋಂ ಕ್ವಾರೆಂಟೈನ್ ಗೈಡ್‌ಲೈನ್‌ ಒಳಗಾಗಲು ಇರುವ ನಿಯಮಗಳನ್ನು ಒಪ್ಪಿ ರೋಗಿಯು ಸಹಿ ಮಾಡಿರಬೇಕು.

 • ರೋಗಿಯನ್ನು ಆರೈಕೆ ಮಾಡುವವರಿಗೆ ಇರುವ ಗೈಡ್‌ಲೈನ್

  ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ರೋಗಿಯನ್ನು ಆರೈಕೆ ಮಾಡುವವರಿಗೂ ಕೆಲವೊಂದು ಗೈಡ್‌ಲೈನ್ ನೀಡಿದೆ.

  • ಕೊರೊನಾವೈರಸ್‌ ರೋಗಿಗೆ ಆರೈಕೆ ಮಾಡುವಾಗ, ಅವರಿದ್ದ ಕೋಣೆಗೆ ಹೋಗುವಾಗ ಟ್ರಿಪಲ್ ಲೇಯರ್‌ ಮೆಡಿಕಲ್ ಮಾಸ್ಕ್ ಧರಿಸಿರಬೇಕು.
  • ರೋಗಿಯ ಆರೈಕೆ ಮಾಡುವವರು ಕೈಗಳನ್ನು ಸ್ಚಚ್ಛ ಮಾಡುವ ಮುನ್ನ ತಮ್ಮ ಮುಖ, ಮೂಗು, ಬಾಯಿ ಮುಟ್ಟಬಾರದು.
  • ಕೈಗಳ ಶುಚಿತ್ವಕ್ಕೆ ತುಂಬಾ ಗಮನ ನೀಡಬೇಕು. ಆಹಾರವನ್ನು ತಯಾರಿಸುವ ಮುನನ್, ತಯಾರಿಸಿದ ನಂತರ, ಆಹಾರ ತಿನ್ನುವ ಮೊದಲು, ಟಾಯ್ಲೆಟ್ ಬಳಕೆಗೆ ಮುನ್ನ ಹಾಗೂ ನಂತರ ಶುಚಿತ್ವಕ್ಕೆ ತುಂಬಾ ಮಹತ್ವ ನೀಡಬೇಕು.
  • ಸೋಪ್ ಹಾಕಿ ಕೈತೊಳೆದ ಬಳಿಕ ಡಿಸ್‌ಪೋಸಬಲ್ ಪೇಪರ್ ಟವಲ್ ಬಳಸಿ ಕೈ ಒರೆಸಬೇಕು. ನಂತರ ಅದನ್ನು ಕಸದ ಬುಟ್ಟಿಗೆ ಹಾಕಬೇಕು. ಪೇಪರ್ ಟವಲ್ ಇಲ್ಲಾಂದರೆ ಬಟ್ಟೆ ಟವಲ್ ಬಳಸಬೇಕು, ಅದನ್ನು ಒಂದು ಬಾರಿ ಬಳಸಿ ನಂತರ ಬಿಸಿ ನೀರಿನಲ್ಲಿ ತೊಳೆಯಲು ಹಾಕೇಕು.
  • ತಿನ್ನಲು, ಕುಡಿಯಲು ಪ್ರತ್ಯೇಕ ಪಾತ್ರೆ ರೋಗಿಗೆ ಇಡಬೇಕು, ನೀವು ಪ್ರತ್ಯೇಕ ಪ್ರತ್ಯೇಕ ಪಾತ್ರೆ ಬಲಸಬೇಕು. ಸಿಗರೇಟ್ , ಪಾನೀಯಾ ಇವುಗಳನ್ನು ಇತರರ ಜೊತೆ ಹಂಚಿಕೊಳ್ಳಬೇಡಿ.
  • ರೋಗಿ ತಿಂದ ಪಾತ್ರೆಯನ್ನು ಸೋಪ್‌ ನೀರಿನಲ್ಲಿ ತೊಳೆಯುವಾಗ ಕೈಗಳಿಗೆ ಗ್ಲೌಸ್‌ ಧರಿಸಿರೇಕು.
  • ರೋಗಿ ವೈದ್ಯರು ಸೂಚಿಸಿದ ಔಷಧ ಹಾಗೂ ಸಲಹೆಗಳನ್ನು ಪಾಲಿಸುತ್ತಿದ್ದಾರೆಯೇ ಎಮದು ಗಮನಿಸಬೇಕು.
  • ರೋಗಿಯನ್ನು ಆರೈಕೆ ಮಾಡುವವರು ತಮ್ಮ ಆರೋಗ್ಯವನ್ನೂ ಗಮನಿಸಬೇಕು. ಏನಾದರೂ ಕೋವಿಡ್ 19 ಲಕ್ಷಣಗಳು ಗೋಚರಿಸಿದರೆ ಕೂಡಲೇ ವೈದ್ಯರಿಗೆ ತಿಳಿಸಬೇಕು.

 • ರೋಗಿ ಮನೆಯಲ್ಲಿಯೇ ಕ್ವಾರೆಂಟೈನ್‌ ಆಗುವುದಾದರೆ ಸೂಚನೆಗಳು

  ವೈದ್ಯಕೀಯ ಪರೀಕ್ಷೆ ಕೋವಿಡ್ 19ನ ಸಣ್ಣ-ಪುಟ್ಟ ಲಕ್ಷಣಗಳು ಕಂಡು ಬಂದಿದ್ದರೆ ಆ ರೋಗಿ ಮನೆಯಲ್ಲಿಯೇ ಕ್ವಾರೆಂಟೈನ್‌ ಆಗುವುದನ್ನು ಆಯ್ಕೆ ಮಾಡಬಹುದು ಹಾಗೂ ಅವರು ಈ ಸೂಚನೆಗಳನ್ನು ಪಾಲಿಸಬೇಕು.

  • ರೋಗಿಯು ಟ್ರಿಪಲ್ ಲೇಯರ್ ಮೆಡಿಕಲ್ ಮಾಸ್ಕ್ ಎಲ್ಲಾ ಸಮಯ ಳಸಬೇಕು. ಮಾಸ್ಕ್‌ 8 ಗಂಟೆಯಷ್ಟೇ ಬಳಸಿ ನಂತರ ಅದನ್ನು ಕಸದ ಬುಟ್ಟಿಗೆ ಹಾಕಿ ಬೇರೆ ಮಾಸ್ಕ್ ಬಳಸಬೇಕು. ಒಂದು ವೇಳೆ ಮಾಸ್ಕ್‌ ಒದ್ದೆಯಾದರೆ 8 ಗಂಟೆ ಕಾಯಬಾರದು, ಕೂಡಲೇ ಬೇರೆ ಮಾಸ್ಕ್ ಧರಿಸಬೇಕು.
  • ಮಾಸ್ಕ್‌ ಕಸದ ಉಟ್ಟಿಗೆ ಹಾಕುವ ಮುನ್ನ 1 ಪರ್ಸೆಂಟ್ ಸೋಡಿಯಂ ಹೈಪೋಕ್ಲೋರೈಟ್ ಹಾಕಿ ಬಿಸಾಡಬೇಕು.
  • ರೋಗಿ ತನಗೆ ನಿಗದಿ ಪಡಿಸಿದ ಕೋಣೆಯನ್ನಷ್ಟೇ ಬಳಸಬೇಕು. ಅದರಿಂದ ಹೊರಗೆ ಬರುವಂತಿಲ್ಲ. ಅದರಲ್ಲೂ ಮನೆಯಲ್ಲಿ ವಯಸ್ಸಾದವರು, ಮಕ್ಕಳು, ಹೃದಯ ಸಂಬಂಧಿ, ಮಧುಮೇಹ ರೋಗಗಳಿದ್ದರೆ ಅವರಿಂದ ದೂರವಿರಬೇಕು.
  • ವೈದ್ಯರ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
  • ರೋಗಿ ತನ್ನ ಆರೋಗ್ಯದ ಕಡೆ ಗಮನ ನೀಡಬೇಕು,ಏನಾದರೂ ಬೇರೆ ಲಕ್ಷಣಗಳು ಕಂಡು ಬಂದರೆ ಕೂಡಲೇ ತನ್ನನ್ನು ಆರೈಕೆ ಮಾಡುವವರಿಗೆ ಮಾಹಿತಿ ನೀಡಬೇಕು.
  • ರೋಗಿ ತನ್ನ ವಸ್ತುಗಳನ್ನು ಇತರರಿಗೆ ನೀಡಬಾರದು.
  • ರೋಗಿ ನಾನ್‌ಆ್ಯಂಟಿಮೈಕ್ರೋಬಯಲ್ ಸೋಪ್ ಮತ್ತು ನೀರು ಬಳಸಿ ಕೈ ತೊಳೆಯಬೇಕು. ಆಲ್ಕೋಹಾಲ್ ಅಂಶವಿರುವ ಹ್ಯಾಂಡ್‌ಸ್ಯಾನಿಟೈಸರ್ ಬಳಸಬೇಕು.
  • ರೋಗಿ ಸಾಕಷ್ಟು ವಿಶ್ರಾಂತಿ ಪಡೆಯಬೇಕುಮತ್ತು ಸಾಕಷ್ಟು ನೀರಿನಂಶವಿರುವ ಆಹಾರ, ಜ್ಯೂಸ್ ತೆಗೆದುಕೊಳ್ಳಬೇಕು.

 • ಕೊನೆಯಾದಾಗಿ...

  ಕೋವಿಡ್‌ 19 ಲಕ್ಷಣ ಕಂಡು ಬಂದು ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದರೆ ತುಂಬಾ ಮುನ್ನೆಚ್ಚರಿಕೆವಹಿಸಬೇಕು. ಏನಾದರೂ ಉಸಿರಾಟದಲ್ಲಿ ತೊಂದರೆ, ರೋಗ ಲಕ್ಷಣ ಉಲ್ಭಣವಾದರೆ ಕೂಡಲೇ ವೈದ್ಯಾಧಿಕಾರಿಗೆ ಮಾಹಿತಿ ನೀಡಬೇಕು. ಎದೆ ಭಾರವಾಗುವುದು, ಎದೆಯಲ್ಲಿ ನೋವು ಕಂಡು ಬಂದರೆ, ಏನೋ ಗೊಂದಲ, ಎದ್ದೇಳಕ್ಕೆ ಕಷ್ಟವಾಗುವುದು, ಮೈಯಲ್ಲಿ ಗುಳ್ಳೆಗಳು ಏಳುವುದು, ತುಟಿಯಲ್ಲಿ ಬಣ್ಣ ಬದಲಾವಣೆ ಉಂಟಾದರೆ ವೈದ್ಯರಿಗೆ ಮಾಹಿತಿ ನೀಡಬೇಕು.
ಮೇ 27ಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (MoHFW) ಕೊರೊನಾಸೋಂಕಿನ ಅತ್ಯಲ್ಪ ಪ್ರಮಾಣದ ಲಕ್ಷಣವಿರುವವರಿಗೆ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಆ ರೋಗಿಯ ಮನೆಯಲ್ಲಿ ಪ್ರತ್ಯೇಕವಾಗಿರಲು ಹಾಗೂ ಇತರ ಸದಸ್ಯರಿಗೆ ಹರಡದಿರಲು ಸೂಕ್ತ ಸೌಲಭ್ಯಗಳನ್ನು ಹೊಂದಿರಬೇಕು ಅಷ್ಟೇ.

ಎಲ್ಲಾ ಕೊರೊನಾ ಶಂಕಿತರನ್ನು ಕರೆದುಕೊಂಡು ಹೋಗಿ ಕಂಟೇನ್‌ಮೆಂಟ್‌ ಝೋನ್‌ಗಳಲ್ಲಿ ಕ್ವಾರೆಂಟೈನ್‌ನಲ್ಲಿಡಲಾಗಿತ್ತು. ನಂತರ ರೋಗ ಲಕ್ಷಣಗಳು ಹೆಚ್ಚಾದರೆ ಕೊರೊನ ಚಿಕಿತ್ಸೆ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಸೇರಿಸಲಾಗುತ್ತಿತ್ತು.

ಆದರೆ ಇದೀಗ ಸಣ್ಣ-ಪುಟ್ಟ ಲಕ್ಷಣಗಳಿರುವ ರೋಗಿಗಳಿಗೆ ಮನೆಯಲ್ಲಿಯೇ ಕ್ವಾರೆಂಟೈನ್‌ ಆಗಬಹುದಾಗಿದೆ. ಆದರೆ ಆತ/ ಆಕೆಯ ಮನೆ ಸೆಲ್ಫ್‌ ಕ್ವಾರೆಂಟೈನ್‌ಗೆ ಅವಶ್ಯಕವಾದ ಸೌಲಭ್ಯಗಳನ್ನು ಹೊಂದಿರೇಕು. ಯಾರು ಮನೆಯಲ್ಲಿಯೇ ಕ್ವಾರೆಂಟೈನ್‌ನಲ್ಲಿರಬಹುದು, ಅದಕ್ಕಾಗಿ ಅವರ ಮನೆ ಹೇಗಿರಬೇಕು ಎಂದು ನೋಡೋಣ ಬನ್ನಿ:

 
ಟೆಕ್ನಾಲಜಿ