Back
Home » ಆರೋಗ್ಯ
ನೆಟ್ಟಿಗರ ಗಮನ ಸೆಳೆಯುತ್ತಿದೆ ರೋಗ ನಿರೋಧಕ ಶಕ್ತಿಯಿರುವ ಈ ಸೈಲೋನ್ ಟೀ
Boldsky | 27th Apr, 2020 09:25 AM
 • ಚೀನಾದ ರಾಯಬಾರಿಗೆ ಶ್ರೀಲಂಕಾ ಅಧ್ಯಕ್ಷನ ಉಡುಗೊರೆ

  ಸೈಲೋನ್‌ ಟೀ ನೆಟ್ಟಿಗರ ಗಮನ ಸೆಳೆದಿದ್ದು ಚೀನಾದ ರಾಯಬಾರಿಗೆ ಶ್ರೀಲಂಕಾದ ಅಧ್ಯಕ್ಷ ಸೈಲೋನ್ ಟೀ ಪುಡಿ ಉಡುಗೊರೆ ನೀಡಿದ್ದರು. ಅದನ್ನು ಅಲ್ಲಿನ ವಿದೇಶಾಂಗ ಇಲಾಖೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಹೇಳುತ್ತಾ ಈ ಬ್ಲ್ಯಾಕ್ ಟೀ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬ ಮಾಹಿತಿ ನೀಡಿದ್ದರು. ಅಲ್ಲಿಂದ ಈ ಟೀಗೆ ಹೆಚ್ಚಿನ ಪ್ರಚಾರ ಸಿಕ್ಕಿದ್ದು, ಜನರು ಈ ಟೀ ರುಚಿ ನೋಡಲು ಬಯಸುತ್ತಿದ್ದಾರೆ. ಕೋ ವಿಡ್ 19 ವಿರುದ್ಧ ಹೋರಾಡಲು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಟೀ ಸಹಕಾರಿ ಎಂದು ಹೇಳಲಾಗುತ್ತಿದೆ.


 • ಸೈಲೋನ್ (Ceylon tea) ಎಂದರೇನು?

  ಈ ಟೀ ಪುಡಿಯನ್ನು ಶ್ರೀಲಂಕಾದಲ್ಲಿ ಬೆಳೆಯಲಾಗುವುದು. ಇದನ್ನು ಕೆಮಲಿಯಾ ಸೈನಾಸಿಸ್ ಗಿಡದಿಂದ ತಯಾರಿಸಲಾಗುವುದು. ಇದು ಕಪ್ಪು, ಬಿಳಿ, ಹಸಿರು ಹೀಗೆ ವಿವಿಧ ಬಣ್ಣದಲ್ಲಿ ದೊರೆಯುತ್ತದೆ. ಈ ಟೀ ರುಚಿ ಬೆಳೆಯುವ ಭೌಗೋಳಿಕ ಕ್ಷೇತ್ರಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ.

  ಇದರಲ್ಲಿರುವ ಪೋಷಕಾಂಶಗಳ ಗುಣದಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಇದರಲ್ಲಿ ಪಾಲಿಫೀನೋಲ್ ಹಾಗೂ ಫ್ಲೇವೋನಾಯ್ಡ್ ಅಧಿಕವಿರುವುದರಿಂದ ಆ್ಯಂಟಿಬಾಡಿಗಳ ರಕ್ಷಣೆ ಮಾಡುತ್ತವೆ. ಅಲ್ಲದೆ ಇದರಲ್ಲಿರುವ myricetin ಹಾಗೂ quercetin ಎಂಬ ಪ್ಲೇವೋನಾಯ್ಡ್ ಅಂಶ ಒತ್ತಡ, ಉರಿಯೂತ, ಸೋಂಕು ಹೀಗೆ ಅನೇಕ ರೋಗಗಳ ವಿರುದ್ಧ ಹೋರಾಡುತ್ತವೆ.


 • ಸೈಲೋನ್ ಟೀ ಹಾಗೂ ಕೋವುಡ್ 19

  ಶ್ರೀಲಂಕಾದ ರಾಯಬಾರಿಯ ವೆಬ್‌ಸೈಟ್‌ನಲ್ಲಿ ಏಪ್ರಿಲ್ 4ಕ್ಕೆ ಪ್ರಕಟವಾದ ಮಾಹಿತಿಯ ಅನುಸಾರ ಕೋವಿಡ್ 19 ಪಿಡುಗಿನ ಈ ಸಂದರ್ಭದಲ್ಲಿ ಈ ಟೀ ಕುಡಿಯುವುದು ಪರಿಣಾಮಕಾರಿ ಎಂದು ಹೆಳಿದೆ. ಶ್ರೀಲಂಕಾದಲ್ಲಿ ದಿನದಲ್ಲಿ ಈ ಟೀಯನ್ನು 3-4 ಕಪ್ ಕುಡಿಯಲಾಗುವುದು ಎಂದಿದೆ.

  ಸೈಲೋನ್‌ನಲ್ಲಿರುವ Theaflavins ಅಂಶ ಅಸ್ತಮಾ, ಶ್ವಾಸಕೋಶದ ಸಮಸ್ಯೆ, ಉಸಿರಾಟದ ತೊಂದರೆ ಇವುಗಳನ್ನು ತಡೆಗಟ್ಟುತ್ತದೆ. ಇದು ಶ್ವಾಸಕೋಶವನ್ನು ಶುದ್ಧ ಮಾಡುತ್ತದೆ ಹಾಗೂ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ಶ್ವಾಸಕೋಶದ ಆರೋಗ್ಯ ಹೆಚ್ಚಾಗುವುದು. ಅಲ್ಲದೆ ಮೂಗು ಕಟ್ಟುವುದು, ಶೀತ ಈ ಸಮಸ್ಯೆಯನ್ನೂ ಹೋಗಲಾಡಿಸುತ್ತದೆ.

  ಇದರ ಗುಣಗಳನ್ನು ನೋಡಿ ಇಂಗ್ಲಿಷ್‌ನಲ್ಲಿ ಒಂದು ಮಾತಿದೆ ''prevention is better than cure' ಅಂದರೆ ರೋಗ ಬಂದು ಗುಣಪಡಿಸುವ ಬದಲಿಗೆ ರೋಗ ಬರದಂತೆ ತಡೆಯುವುದು ಒಳ್ಳೆಯದು ಎಂದು ಈ ಟೀ ಕುಡಿಯುವಂತೆ ಶ್ರೀಲಂಕಾದ ಟಿಆರ್‌ಐ (Tea Research Institute of Sri Lanka) ಹೇಳಿದೆ.


 • ಸಾರ್ಸ್‌ -COv ಮತ್ತು ಸೈಲೋನ್ ಟೀ

  ಕೋವಿಡ್‌ 19 ರೀತಿಯಲ್ಲಿ 2003ರಲ್ಲಿ ಸಾರ್ಸ್ ರೋಗ ಬಂದಿತ್ತು. ಆಗ ಸಾಕಷ್ಟು ಜನರಲ್ಲಿ ಉಸಿರಾಟದ ತೊಂದರೆ ಕಾಣಿಸಿತ್ತು. ಉಸಿರಾಟದ ತೊಂದರೆ ಕಡಿಮೆ ಮಾಡುವಲ್ಲಿ ಈ ಟೀ ಸಹಕಾರಿಯಾಗಿತ್ತು. ಈ ಟೀಯ ಮತ್ತೊಂದು ಪ್ರಯೋಜನವೆಂದರೆ ಇದು ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ, ಉರಿಯೂತ ಸಮಸ್ಯೆ ಕಡಿಮೆಯಾಗುವುದು ಹಾಗೂ ಸೋಂಕು ಮತ್ತು ದೇಹದಲ್ಲಿ ಗಡ್ಡೆಗಳು ಬೆಳೆಯದಂತೆ ತಡೆಯುತ್ತದೆ.


 • ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೈಲೋನ್ ಟೀ

  ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಇದನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಿಳಿ ರಕ್ತಕಣಗಳ ಉತ್ಪತ್ತಿ ಹೆಚ್ಚಾಗುವುದು. ಸೋಂಕು ಹಾಗೂ ಇತರ ಕಾಯಿಲೆಯಿಂದ ಉಂಟಾದ ಉರಿಯೂತ ಕಡಿಮೆಯಾಗುವುದು. ಇನ್ನು ಪಾಶ್ವವಾರ್ಯ ಬಂದವರು ಬೇಗನೆ ಚೇತರಿಸಿಕೊಳ್ಳುವಂತೆ ಈ ಟೀ ಮಾಡುವುದು.


 • ಕೋವಿಡ್‌ 19 ತಡೆಯುವಲ್ಲಿ ಪರಿಣಾಮಕಾರಿಯೇ?

  ಕೋವಿಡ್ 19 ತಡೆಯುವಲ್ಲಿ ಯಾವುದು ಪರಿಣಾಮಕಾರಿ ಎಂದು ಇನ್ನು ತಿಳಿದು ಬಂದಿಲ್ಲ. ಸದ್ಯಕ್ಕೆ ಕೋವಿಡ್‌ 19 ಬರದಂತೆ ತಡೆಯಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಈ ಟೀ ಪರಿಣಾಮಕಾರಿಯಾಗಿದೆ.


 • ಸೈಲೋನ್‌ ಟೀ ಮಾಡುವುದು ಹೇಗೆ?

  • ಸೈಲೋನ್ ಟೀ
  • ನೀರು
  • ಸಕ್ಕರೆ (ಆಯಕ್ಎ ಬಿಟ್ಟದ್ದು)

  ಟೀ ಪುಡಿ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ ಸಕ್ಕರೆ ಹಾಕಿ ಅಥವಾ ಇಲ್ಲದೆಯೂ ಸವಿಯಬಹುದು. ಹಾಲು ಸೇರಿಸಿ ಕೂಡ ಇದನ್ನು ತಯಾರಿಸಬಹುದು. ಆದರೆ ಬ್ಲ್ಯಾಕ್‌ ಟೀ ತುಂಬಾ ಒಳ್ಳೆಯದು.

  ಭಾರತದಲ್ಲಿ ದೊರೆಯುವುದೇ?

  ಈ ಟೀ ಪುಡಿ ಭಾರತದ ಮಾರುಕಟ್ಟೆಯೂ ಇದೆ. ಇದನ್ನು ಆನ್‌ಲೈನ್‌ ನೋಡಿ ತರಿಸಿಕೊಳ್ಳಬಹುದು.
ಈಗಾಗಲೇ ಕೇಂದ್ರ ಆಯಿಷ್ ಇಲಾಖೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ? ನಮ್ಮ ಆಹಾರದಲ್ಲಿ ಯಾವ ಸಾಮಗ್ರಿ ಸೇರಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂಬುವುದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ.

ಜನರು ಆರೋಗ್ಯ 'ಸೇತು ಆ್ಯಪ್‌' ಮೂಲಕವೂ ಸಾಕಷ್ಟು ಮಾಹಿತಿಯನ್ನು ಪಡೆಯಬಹುದಾಗಿದೆ. ಜನರು ಬೇರೆ ಎಲ್ಲಾ ಸಮಯಕ್ಕಿಂತ ಇದೀಗ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗಿಡಮೂಲಿಕೆಗಳ ಸೇವನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ನಮ್ಮಲ್ಲಿರುವ ಟೀ, ಮಸಾಲೆ ಸಾಮಗ್ರಿ, ಹಾಲಿಗೆ ಅರಿಶಿಣ ಹಾಕಿ ಕುಡಿಯುವುದು ಇವೆಲ್ಲಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

ಇವುಗಳ ಜೊತೆಗೆ ಇತ್ತೀಚೆಗೆ ಸೈಲೋನ್ ಟೀ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಟೀ ಬಗ್ಗೆ ನೆಟ್ಟಿಗರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಸೈಲೋನ್ ಟೀ ಎಂದರೇನು? ಇದು ಭಾರತದಲ್ಲಿ ದೊರೆಯುತ್ತದೆಯೇ? ಇದನ್ನು ಮಾಡುವುದು ಹೇಗೆ ಎಂಬ ಮಾಹಿತಿ ಈ ಲೇಖನದಲ್ಲಿದೆ ನೋಡಿ:

 
ಟೆಕ್ನಾಲಜಿ