Back
Home » ಇತ್ತೀಚಿನ
ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಿಗ್ ಶಾಕ್!..ವ್ಯಾಲಿಡಿಟಿ ಅವಧಿಗೆ ಕತ್ತರಿ!
Gizbot | 28th Mar, 2020 11:57 AM
 • ಬಿಎಸ್‌ಎನ್‌ಎಲ್‌ ತನ್ನ 1699ರೂ

  ಹೌದು, ಬಿಎಸ್‌ಎನ್‌ಎಲ್‌ ತನ್ನ 1699ರೂ ಪ್ರೀಪೇಯ್ಡ್ ವಾರ್ಷಿಕ ಯೋಜನೆಯಲ್ಲಿ ಇದೀಗ ಬದಲಾವಣೆ ಮಾಡಿದ್ದು, 365 ದಿನಗಳ ವ್ಯಾಲಿಡಿಟಿಯಲ್ಲಿ 65 ದಿನಗಳನ್ನು ಕಡಿತ ಮಾಡಿದೆ. ಹೀಗಾಗಿ ಪ್ರಸ್ತುತ ಇದ್ದ 365 ದಿನಗಳ ವ್ಯಾಲಿಡಿಟಿಯನ್ನು ಈಗ 300 ದಿನಗಳಿಗೆ ಇಳಿಕೆ ಆಗಿದೆ.. ಆದ್ರೆ ಡೇಟಾ ಪ್ರಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಿಎಸ್‌ಎನ್ಎಲ್ ಈ ಹಿಂದೆ ಈ ಪ್ಲ್ಯಾನಿನಲ್ಲಿ ಎರಡು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಹೆಚ್ಚಿಸಿದೆ.


 • 1699ರೂ. ಪ್ಲ್ಯಾನ್ ಪ್ರಯೋಜನಗಳು

  ಬಿಎಸ್‌ಎನ್‌ಎಲ್‌ನ ಹೊಸ 1699ರೂ. ಯೋಜನೆಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ ಒಟ್ಟು 2GB ಡೇಟಾ ಸಿಗಲಿದ್ದು, ಜೊತೆಗೆ ಅನಿಯಮಿತ ಕರೆಗಳ (250 ನಿಮಿಷ) ಸೌಲಭ್ಯ ಸಹ ಇರಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು, ಲಭ್ಯ ಇರಲಿದ್ದು, ಒಟ್ಟು 300 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಸಿಗಲಿದೆ.


 • ವ್ಯಾಲಿಡಿಟಿಯಲ್ಲಿ ಇಳಿಕೆ

  ಈ ಮೊದಲು ಬಿಎಸ್‌ಎನ್‌ಎಲ್‌ನ 1699ರೂ.ಗಳ ವಾರ್ಷಿಕ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಅವಧಿ ದೊರೆಯುತ್ತಿತ್ತು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಲಭ್ಯ ಪ್ರಯೋಜನವಿತ್ತು. ಹಾಗೆಯೇ ಉಚಿತ 100 ಎಸ್‌ಎಮ್‌ಎಸ್‌ಗಳು, ಉಚಿತ ಕರೆಗಳ ಸೌಲಭ್ಯ ಸಹ ಲಭ್ಯವಿತ್ತು. ಆದರೆ ಪರಿಷ್ಕೃತ ವ್ಯಾಲಿಡಿಟಿಯು 300 ದಿನಗಳು ಮಾತ್ರ ಆಗಿದೆ.


 • ಇತರೆ ಪ್ಲ್ಯಾನ್‌ಗಳ ವ್ಯಾಲಿಡಿಟಿಯು ಕಡಿತ

  ಬಿಎಸ್‌ಎನ್ಎಲ್ 1699ರೂ. ಪ್ಲ್ಯಾನಿನೊಂದಿಗೆ ಇತರೆ ಕೆಲವು ಯೋಜನೆಗಳ ವ್ಯಾಲಿಡಿಟಿಗೆ ಕತ್ತರಿ ಹಾಕಿದೆ. ಅವುಗಳೆಂದರೇ STV 98ರೂ ಪ್ಲ್ಯಾನ್‌ ವ್ಯಾಲಿಡಿಟಿ ಅವಧಿ ಇದೀಗ 22 ದಿನಗಳು ಆಗಿದೆ. ಈ ಮೊದಲು 24 ದಿನಗಳು ಆಗಿತ್ತು. ಹಾಗೆಯೇ 84 ದಿನಗಳ ವ್ಯಾಲಿಡಿಟಿಯ ಬಿಎಸ್‌ಎನ್ಎಲ್ STV 319ರೂ ಪ್ಲ್ಯಾನ್‌ ಇದೀಗ 75 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ.
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಈಗಾಗಲೇ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದೆ. ಹೆಚ್ಚಿನ ಡೇಟಾ ಸೌಲಭ್ಯ, ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಅಗತ್ಯ ಪ್ರಯೋಜನಗಳನ್ನು ನೀಡಿದೆ. ಆದ್ರೆ ಇದೀಗ ಬಿಎಸ್‌ಎನ್ಎಲ್ ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದು, ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಭಾರಿ ಬದಲಾವಣೆಯನ್ನು ತಂದಿದೆ.

   
 
ಟೆಕ್ನಾಲಜಿ