Back
Home » ಇತ್ತೀಚಿನ
ಜಿಮೇಲ್ ಫೋಟೋಗಳನ್ನು ಗೂಗಲ್ ಫೋಟೋಗೆ ಟ್ರಾನ್ಸ್ಫರ್ ಮಾಡುವುದು ಹೇಗೆ?
Gizbot | 23rd Mar, 2020 06:30 PM

ಜಿಮೇಲ್ ನಲ್ಲಿ ಗೂಗಲ್ ಡ್ರೈವ್ ಆಫರ್ ಮಾಡುವ ಉಚಿತ ಜಾಗವು 15ಜಿಬಿ ಗೆ ಸೀಮಿತವಾಗಿರುತ್ತದೆ. ನೀವು ಯಾವಾಗ ದೊಡ್ಡ ಅಟ್ಯಾಚ್ ಮೆಂಟ್ ಇರುವ ಇಮೇಲ್ ನ್ನು ಪಡೆದಾಗ ಗೂಗಲ್ ಡ್ರೈವ್ ನಲ್ಲಿರುವ ಖಾಲಿ ಜಾಗವು ಭರ್ತಿಯಾಗುತ್ತದೆ. ಒಂದು ವೇಳೆ ನೀವು ಇಮೇಲ್ ನಲ್ಲಿ ಅತೀ ಹೆಚ್ಚು ಫೋಟೋಗಳನ್ನು ರಿಸೀವ್ ಮಾಡಿದರೆ 15ಜಿಬಿ ಜಾಗವು ಬಹಳ ಬೇಗನೆ ತುಂಬಿ ಬಿಡುತ್ತದೆ.

ಹಾಗಾಗಿ ಇದಕ್ಕೆ ಪರಿಹಾರ ಏನಿದೆ? ಎಸ್ ನಿಮ್ಮ ಊಹೆ ನಿಜವಾಗಿದೆ.ಗೂಗಲ್ ಫೋಟೋಗೆ ನಿಮ್ಮೆಲ್ಲಾ ಫೋಟೋಗಳನ್ನು ಅಪ್ ಲೋಡ್ ಮಾಡಿಟ್ಟುಕೊಳ್ಳಿ ಯಾಕೆಂದರೆ ಗೂಗಲ್ ಇದಕ್ಕಾಗಿ ಅನಿಯಮಿತ ಸ್ಟೋರೇಜ್ ಜಾಗವನ್ನು ನೀಡುತ್ತದೆ ಮತ್ತು ಅತ್ಯುತ್ತಮ ಗುಣಮಟ್ಟವನ್ನು ಇದು ಹೊಂದಿದೆ.

ಆದರೆ ಇದನ್ನು ಮಾಡುವುದು ಹೇಗೆ? ಗೂಗಲ್ ಫೋಟೋಸ್ ನಲ್ಲಿ ನೇರವಾಗಿ ಸೇವ್ ಮಾಡುವುದಕ್ಕೆ ಜಿಮೇಲ್ ನಲ್ಲಿ ಯಾವುದೇ ವಿಧಾನವನ್ನು ಕೂಡ ಗೂಗಲ್ ಆಫರ್ ಮಾಡಿಲ್ಲ. ಈ ಕ್ರಮಕ್ಕಾಗಿ ಒಂದು ಸಣ್ಣ ಕೆಲಸವನ್ನು ನೀವು ಮಾಡಬೇಕಾಗುತ್ತದೆ. ಹಾಗಾದ್ರೆ ಏನು ಮಾಡಬೇಕಾಗುತ್ತದೆ ಎಂಬುದನ್ನು ತಿಳಿಯುವುದಕ್ಕಾಗಿ ಮುಂದೆ ಓದಿ.

ಈ ವಿಧಾನವನ್ನು ಅನುಸರಿಸುವುದಕ್ಕಿಂತ ಮುಂಚೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರವೇನೆಂದರೆ ಯಾವುದೇ ಕಾರಣಕ್ಕೂ ಜೀಮೇಲ್ ನಲ್ಲಿರುವ ಎಲ್ಲಾ ಫೋಟೋಗಳನ್ನು ಒಂದೇ ಬಾರಿ ಕಲೆಕ್ಟ್ ಮಾಡಿ ಅಪ್ ಗೂಗಲ್ ಫೋಟೋಸ್ ಗೆ ಅಪ್ ಲೋಡ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿದೆ. ಹಾಗಾಗಿ ಒಂದಾದ ನಂತರ ಒಂದರಂತೆ ಮ್ಯಾನುವಲ್ ಆಗಿ ನೀವು ಈ ಕೆಲಸವನ್ನು ಸಾಧಿಸಬೇಕಾಗುತ್ತದೆ.

ಜಿಮೇಲ್ ನಿಂದ ಗೂಗಲ್ ಫೋಟೋಸ್ ಗೆ ಹಂತಹಂತವಾಗಿ ಫೋಟೋವನ್ನು ಚಲಿಸುವುದಕ್ಕೆ ಈ ಕೆಳಗಿನ ವಿಧಾನ ಅನುಸರಿಸಿ

1.ನಿಮ್ಮ ಪಿಸಿಯಲ್ಲಿ ಜಿಮೇಲ್ ನ್ನು ತೆರೆಯಿರಿ ಮತ್ತು ಲಾಗಿನ್ ಆಗಿ

2.ಫೋಟೋ ಅಟ್ಯಾಚ್ ಆಗಿರುವ ಯಾವುದೇ ಇಮೇಲ್ ನ್ನು ಇದೀಗ ತೆರೆಯಿರಿ.

3.ಇದೀಗ ಅಟ್ಯಾಚ್ಮೆಂಟ್ ಸೆಕ್ಷನ್ ಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು ಡೌನ್ ಲೋಡ್ ಐಕಾನ್ ನ ಬದಿಯಲ್ಲಿರುವ ಡ್ರೈವ್ ಐಕಾನ್ ನ್ನು ಕ್ಲಿಕ್ಕಿಸಿ.

4.ಒಮ್ಮೆ ಮುಗಿದ ನಂತರ, ಜಿಮೇಲ್ ನಲ್ಲಿರುವ ಇತರೆ ಫೋಟೋಗಳಿಗಾಗಿ ಇದೇ ವಿಧಾನವನ್ನು ಪುನರಾವರ್ತಿಸಿ.

5.ಇದೀಗ ಫೋಟೋಸ್.ಗೂಗಲ್.ಕಾಮ್ ನ್ನು ತೆರೆಯಿರಿ ಮತ್ತು ಲಾಗಿನ್ ಆಗಿ

6.ಅಪ್ ಲೋಡ್ ಬಟನ್ ನ್ನು ಕ್ಲಿಕ್ಕಿಸಿ ಮತ್ತು ಗೂಗಲ್ ಡ್ರೈವ್ ನ್ನು ಆಯ್ಕೆ ಮಾಡಿ.

7.ನೀವು ಅಪ್ ಲೋಡ್ ಮಾಡಲು ಇಚ್ಛಿಸುವ ಎಲ್ಲಾ ಫೋಟೋಗಳನ್ನು ಸೆಲೆಕ್ಟ್ ಮಾಡಿ.

8.ಒಮ್ಮೆ ಅಪ್ ಲೋಡ್ ಪ್ರೊಸೆಸ್ ಸಂಪೂರ್ಣಗೊಂಡ ನಂತರ ಗೂಗಲ್ ಡ್ರೈವ್ ಗೆ ಹೆಡ್ ಬ್ಯಾಕ್ ಆಗಿ ಮತ್ತು ಫೋಟೋಸ್ ನ್ನು ಡಿಲೀಟ್ ಮಾಡಿ.

 
ಟೆಕ್ನಾಲಜಿ