Back
Home » ಆರೋಗ್ಯ
ಕೊರೊನಾವೈರಸ್: ಮಧುಮೇಹಿಗಳು ತಿಳಿದಿರಲೇಬೇಕಾದ ಅಂಶಗಳಿವು
Boldsky | 23rd Mar, 2020 06:00 PM
 • ಮಧುಮೇಹ ಮತ್ತು ಕೊರೊನಾವೈರಸ್

  ಮಧುಮೇಹಿಗಳು ಅಂದರೆ ದೇಹದಲ್ಲಿ ಗ್ಲೈಸೆಮಿಕ್ ನಿಯಂತ್ರಣ ಸಾಮಾರ್ಥ್ಯ ಕಡಿಮೆ ಇರುವವರಿಗೆ ಕೊರೊನಾ ಸೋಂಕು ತಗುಲುವ ಸಾಮಾರ್ಥ್ಯ ಹೆಚ್ಚು ಎಂದು ಸಿಡಿಸಿ (Centers for Disease Control and Prevention) ಹೇಳಿದೆ.

  ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊರೊನಾ ವೈರಸ್‌ ಸೋಂಕು ತಗುಲಿದರೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದು.

  ಅಧ್ಯಯನ ವರದಿ

  ಅಮೆರಿಕದ ಡಯಾಬಿಟಿಕ್ ಅಸೋಸಿಯೇಷನ್ ಕೋವಿಡ್ 19 ಬಗ್ಗೆ ನೀಡಿರುವ ವರದಿ ಪ್ರಕಾರ' ಕೊರೊನಾ ಸೋಂಕಿತರ ಪ್ರಾಥಮಿಕ ಡಾಟ ನೋಡುವುದಾದರೆ ವಯಸ್ಸಾದವರಿಗೆ, ಮಧುಮೇಹಿಗಳಿಗೆ, ಹೃದಯ ಹಾಗೂ ಇತರ ಶ್ವಾಸಕೋಶ ಸಮಸ್ಯೆ ಇರುವವರಿಗೆ ಕೊರೊನಾವೈರಸ್‌ ಸೋಂಕಿನ ಅಪಾಯ ಹೆಚ್ಚು. ಇವರಿಗೆ ಸೋಂಕು ತಗುಲಿದರೆ ದೇಹ ಚೇತರಿಸಿಕೊಳ್ಳುವುದು ಕಷ್ಟ.ಅದರ ಜೊತೆಗೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದರ ಬಗ್ಗೆಯೂ ಗಮನ ಹರಿಸಬೇಕು, ಇದರಿಂದಾಗಿ ದೇಹ ವೈರಸ್‌ ವಿರುದ್ಧ ಹೋರಾಡುವ ಸಾಮಾರ್ಥ್ಯ ಕಳೆದುಕೊಳ್ಳುತ್ತದೆ ಎಂದು ಹೇಳಿದೆ.

  ಆದ್ದರಿಂದ ಮೊದಲು ಮಾಡಬೇಕಾಗಿರುವುದು ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು ಹಾಗೂ ವೈದ್ಯರಿಗೆ ಕರೆ ಮಾಡಿ ಕೊರೊನಾವೈರಸ್ ಸೋಂಕಿನ ಅಪಾಯ ತಗ್ಗಿಸಲು ಏನು ಮಾಡಬೇಕೆಂದು ಸಲಹೆ ಪಡೆಯುವುದು ಒಳ್ಳೆಯದು.


 • ಮಧುಮೇಹಿಗಳು ಕಡ್ಡಾಯವಾಗಿ ಮಾಡಬೇಕಾದ ಪ್ಲಾನ್‌ಗಳಿವು

  ಮಧುಮೇಹ ಬಂದರೆ ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ, ನಿಯಂತ್ರಣದಲ್ಲಿ ಇಡಬಹುದು. ಆದರೆ ಈಗ ಹೊಸದಾಗಿ ಕಂಡು ಬಂದ ಈ ಕೊರೊನಾವೈರಸ್ ದೇಹ ಹೊಕ್ಕದಂತೆ ಮಧುಮೇಹಿಗಳು ತುಂಬಾ ಎಚ್ಚರವಹಿಸಬೇಕು. ನಂತರ ಈ ಪ್ಲಾನ್‌ಗಳನ್ನು ಪಾಲಿಸಿ.

  • ನೀವು ತೆಗೆದುಕೊಳ್ಳುತ್ತಿರುವ ಔಷಧಿಯ ಹೆಸರು ಹಾಗೂ ಡೋಸೇಜ್ ಬರೆದಿಟ್ಟುಕೊಳ್ಳಿ.
  • ಒಂದು ತಿಂಗಳಿಗೆ ಸಾಕಾಗುವಷ್ಟು ಔಷಧಿ ನಿಮ್ಮ ಬಳಿ ಇರಲಿ, ಅದಕ್ಕಾಗಿ ಆಸ್ಪತ್ರೆಗೆ ಅಥವಾ ಮೆಡಿಕಲ್‌ ಶಾಪ್‌ಗೆ ಓಡಾಡಬೇಡಿ.
  • ನಿಮ್ಮ ವೈದ್ಯರ ನಂಬರ್‌ ಇಟ್ಟುಕೊಳ್ಳಿ, ಸುಮ್ಮಸುಮ್ಮನೆ ಮಾಡಬೇಡಿ, ಅಷ್ಟೊಂದು ಅಗ್ಯತ ಬಿದ್ದಾಗ ಮಾತ್ರ ಕರೆಮಾಡಿ.
  • ಇನ್ನು ಹ್ಯಾಂಡ್‌ ಸ್ಯಾನಿಟೈಸರ್, ಸೋಪ್‌ನಿಂದ ಆಗಾಗ ಕೈಯನ್ನು ಸ್ವಚ್ಛವಾಗಿಡಿ.
  • ಇನ್ನು ಕೆಲವರಿಗೆ ದೇಹದಲ್ಲಿ ಸಕ್ಕರೆಯಂಶ ತುಂಬಾ ಕಡಿಮೆಯಾಗುತ್ತದೆ, ಅಂಥವರು ಗ್ಲೂಕೋಸ್ ಟ್ಯಾಬ್ಲೆಟ್ ಇಟ್ಟುಕೊಳ್ಳುವುದು ಒಳ್ಳೆಯದು.

 • ಕೊರೊನಾವೈರಸ್ ಸೋಂಕು ತಗುಲುವುದನ್ನು ತಡೆಗಟ್ಟಲು ಏನು ಮಾಡಬೇಕು?

  • ನಿಮ್ಮ ಕೈಗಳನ್ನು ಸೋಪ್ ಬಳಸಿ ಆಗಾಗ ತೊಳೆದುಕೊಳ್ಳಿ.
  • ಕಣ್ಣು,ಮೂಗು, ಬಾಯಿ ಆಗಾಗ ಮುಟ್ಟಬೇಡಿ.
  • ನೀವು ಮುಟ್ಟುವ ವಸ್ತುಗಳನ್ನು ಸ್ವಚ್ಛ ಮಾಡಿ.
  • ಜನ ಸೇರಿರುವ ಕಡೆ ಓಡಾಡಬೇಡಿ. ಇನ್ನು ಯಾರಾದರೂ ಕೆಮ್ಮುತ್ತಿದ್ದರೆ, ಜ್ವರ ಇದ್ದರೆ ಅವರಿಂದ ದೂರವಿರಿ.
  • ನೀವು ವೈದ್ಯರ ಬಳಿ ಈಗಾಗಲೇ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡಿದ್ದರೆ ಅವರನ್ನು ಆನ್‌ಲೈನ್‌ ಮೂಲಕ ಕಾಂಟ್ಯಾಕ್ಟ್ ಮಾಡಿ.
  • ನಿಮಗೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿದರೆ ಕೂಡಲೇ ಮಾಸ್ಕ್‌ ಧರಿಸಿ ಕೋವಿಡ್ 19 ಪರೀಕ್ಷೆ ಮಾಡಿಸಿ.

  ಆರೋಗ್ಯದ ಕಡೆ ಎಚ್ಚರವಹಿಸಿ, ಕೊರೊನಾವೈರಸ್ ಸೋಂಕಿನಿಂದ ಪಾರಾಗಿ.
ಕೋವಿಡ್ 19 ಹರಡುತ್ತಿರುವ ರೀತಿ ನೋಡುತ್ತಿದ್ದರೆ ಜನರು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಾತ್ರ ಕೊರೊನಾವೈರಸ್ ಸೋಂಕು ತಡೆಗಟ್ಟಲು ಸಾಧ್ಯ. ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಸುಮಾರು 80 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲು ಮುಂದಾಗಿದೆ.

ಕರ್ನಾಟಕದಲ್ಲಿ ಈಗಾಗಲೇ 9 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲಾಗಿದ್ದು, ಪರಿಸ್ಥಿತಿ ನಿಭಾಯಿಸಲು ಕರ್ನಾಟಕವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲು ಸರಕಾರ ಮುಂದಾಗಿದೆ. ಅದಲ್ಲದೆ 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.

ಅಲ್ಲದೆ ಕರ್ನಾಟಕ ಸಾರಿಗೆ ಇಲಾಖೆ ಕೂಡ ಮಧುಮೇಹ ಕಾಯಿಲೆ ಇರುವ ಸಿಬ್ಬಂದಿಗಳಿಗೆ ರಜೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್‌ ಹರಡುತ್ತಿರುವ ಈ ಸಂದರ್ಭದಲ್ಲಿ ಮಧುಮೇಹಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಏಕೆಂದರೆ ಕೊರೊನಾವೈರಸ್ ಮಧುಮೇಹಿಗಳಿಗೆ ಸೋಂಕಿದರೆ ಪರಿಸ್ಥಿತಿ ತುಂಬಾ ಗಂಭೀರವಾಗುವುದು. ಇಲ್ಲಿ ಮಧುಮೇಹಿಗಳು ಕೊರೊನಾ ಸೋಂಕು ತಡೆಗಟ್ಟಲು ಏನು ಮಾಡಬೇಕೆಂದು ಟಿಪ್ಸ್ ನೀಡಿದ್ದೇವೆ ನೋಡಿ:

 
ಟೆಕ್ನಾಲಜಿ