Back
Home » ಆರೋಗ್ಯ
ಈ 9 ಆಹಾರಗಳನ್ನು ತಿಂದರೆ ಭ್ರಮೆ ಉಂಟಾಗುವುದು
Boldsky | 21st Mar, 2020 09:55 AM
 • 1. ಜಾಯಿಕಾಯಿ (Nutmeg (Jaayphal)

  ಇದರಲ್ಲಿ ಮೈರಿಸ್ಟಿಸಿನ್ ಎಂಬ ರಾಸಾಯನಿಕ ಸಂಯುಕ್ತ ಪದಾರ್ಥವಿದೆ. ಇದರ ಹೆಚ್ಚಿನ ಸೇವನೆಯಿಂದ ನಿಮಗೆ ತಲೆ ಸುತ್ತುತ್ತಿರುವ ಅನುಭವ ಎದುರಾಗಬಹುದು. ಸುಮಾರು ಐದರಿಂದ ಹದಿನೈದು ಗ್ರಾಂ ಅಥವಾ ಎರಡು ದೊಡ್ಡ ಚಮಚದಷ್ಟು ಜಾಯಿಕಾಯಿ ಪುಡಿ ನಿಮಗೆ ಭ್ರಾಂತಿ ಮೂಡಿಸಲು ಮತ್ತು ತಲೆ ಸುತ್ತುತ್ತಿರುವ ಅನುಭವ ಮೂಡಿಸಲು ಸಾಕು. ಇದರ ಪ್ರಭಾವದಿಂದ ಪೂರ್ಣವಾಗಿ ಹೊರಬರಲು ಹಲವಾರು ದಿನಗಳೇ ಬೇಕಾಗುತ್ತದೆ. ಇದರ ಪ್ರಭಾವಗಳು ಸರಿಸುಮಾರಾಗಿ ಭ್ರಾಂತಿ ಮೂಡಿಸುವ ಮಾದಕ ಪದಾರ್ಥವಾದ ಎಲ್ ಎಸ್ ಡಿ (Lysergic acid diethylamide (LSD)) ಯ ಪ್ರಭಾವಕ್ಕೆ ಹತ್ತಿರ ಹತ್ತಿರ ಇರುತ್ತದೆ.

  ಅಡ್ಡಪರಿಣಾಮಗಳು: ವಾಕರಿಕೆ, ಬಾಯಿ ಒಣಗುವಿಕೆ, ತಲೆ ಸುತ್ತುವಿಕೆ, ಹೃದಯದ ಬಡಿತದಲ್ಲಿ ಏರುಪೇರು, ಉದ್ವೇಗ ಮತ್ತು ಭ್ರಾಂತಿಗಳು. ಕೆಲವು ಸಂದರ್ಭಗಳಲ್ಲಿ ಈ ಮಾನಸಿಕ ಒತ್ತಡ ಸಾವಿಗೂ ಕಾರಣವಾಗಿದೆ.


 • 2. ಕಾಫಿ

  ಕರ್ನಾಟಕದ ಬಹುತೇಕ ಜನತೆಯ ದಿನದ ಮೊದಲಿನ ಪೇಯವೇ ಕಾಫಿ. ಇದರಲ್ಲಿರುವ ಕೆಫೀನ್ ಮೆದುಳಿಗೆ ಮುದನೀಡುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ದಿನಕ್ಕೆ ಗರಿಷ್ಟ ಎಂದರೆ ಸುಮಾರು ಏಳು ಕಪ್ (ಇನ್ಸ್ಟಂಟ್ ಕಾಫಿ) ಗೂ ಮೀರಿ ಕಾಫಿ ಕುಡಿದರೆ ಈ ಪ್ರಮಾಣದ ಕೆಫೀನ್ ಭ್ರಾಂತಿ ಮೂಡಿಸಬಹುದು. ಇದರ ಪರಿಣಾಮ ನೀವು ಎಣಿಸಿದ್ದಕ್ಕಿಂತಲೂ ಮುನ್ನವೇ ಎದುರಾಗಬಹುದು. ಏಳು ಕಪ್ ನಲ್ಲಿ ಸುಮಾರು 315 ಮಿಲಿಗ್ರಾಂ ಕೆಫೀನ್ ದೇಹ ಸೇರುತ್ತದೆ ಎಂದು ಒಂದು ಅಧ್ಯಯನ ತಿಳಿಸಿದೆ.

  ಅಡ್ಡಪರಿಣಾಮಗಳು: ನಿದ್ರಾಹೀನತೆ, ಹೆದರಿಕೆ ಮತ್ತು ಚಡಪಡಿಕೆ, ಹೊಟ್ಟೆ ಉಬ್ಬರಿಕೆ, ವಾಕರಿಕೆ ಮತ್ತು ವಾಂತಿ, ಹೃದಯ ಬಡಿತದಲ್ಲಿ ಮತ್ತು ಉಸಿರಾಟದಲ್ಲಿ ತೀವ್ರತೆ.


 • 3. ರೈ ಬ್ರೆಡ್:

  ಗೋಧಿಯ ಹೃಸ್ವರೂಪದಂತಿರುವ ಸಣ್ಣ ಗೋಧಿ ಅಥವಾ ರೈ ಹಿಟ್ಟಿನಿಂದ ತಯಾರಿಸಿದ ಬ್ರೆಡ್ ಸೇವನೆಯಿಂದಲೂ ತಲೆ ಸುತ್ತುವುದು ಕಾಣಿಸಿಕೊಳ್ಳುತ್ತದೆ. ಏಕೆಂದರೆ ಈ ಧಾನ್ಯದಲ್ಲಿರುವ ಶಿಲೀಂಧ್ರ (ಎರ್ಗಟ್ ರೈ ಶಿಲೀಂಧ್ರ - fungus ergot) ಪ್ರತಿ ಕಾಳಿನಲ್ಲಿಯೂ ಇರುತ್ತದೆ. ಇವುಗಳನ್ನು ಸೇವಿಸಿದಾಗ ಇದರಲ್ಲಿರುವ ಮೆದುಳಿನ ಚಟುವಟಿಕೆಗಳನ್ನು ಬದಲಿಸುವ ರಾಸಾಯನಿಕಗಳು (psychoactive chemicals) ತಲೆಸುತ್ತುವಿಕೆ ಮತ್ತು ಗೊಂದಲಕ್ಕೆ ಕಾರಣವಾಗುತ್ತವೆ.

  ಅಡ್ಡ ಪರಿಣಾಮಗಳು: ಹೊಟ್ಟೆಯುಬ್ಬರಿಕೆ, ಅಧಿಕ ಹೆಚ್ಚುವರಿ ಸಕ್ಕರೆ ಮತ್ತು ವಿರುದ್ದ ಫಲಿತಾಂಶ ನೀಡುವ ಪೋಷಕಾಂಶಗಳು.


 • 4. ಗಸಗಸೆ (Khasakhas)

  ವಾಸ್ತವದಲ್ಲಿ ಗಸಗಸೆ ಎಂದರೆ ಅಫೀಮು (opium poppy) ಕಾಯಿಯ ಬೀಜ. ಭಾರತದಲ್ಲಿ ಇದನ್ನು ಮಾದಕವಸ್ತು ಎಂದು ಪರಿಗಣಿಸದೇ ಇದ್ದರೂ ಕೊಲ್ಲಿ ರಾಷ್ಟ್ರಗಳಿಗೆ ಹೋಗುವವರು ತಪ್ಪಿಯೂ ಇದನ್ನು ಕೊಂಡೊಯ್ದರೆ ಕಾನೂನಿನ ಶಿಕ್ಷೆ ಕಾದಿದೆ. ಗಸಗಸೆ ಪಾಯಸ ರುಚಿಕರವಂತೂ ಹೌದು, ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮನೋಭಾವದ ಮೇಲೆ ಪರಿಣಾಮ ಬೀರುತ್ತದೆ. ಅಫೀಮು ಕಾಯಿಯ ತಿರುಳನ್ನು ಮಾದಕ ಪದಾರ್ಥದ ಬಳಕೆಗೆ ಬಳಸಲಾಗುತ್ತದೆ.

  ಅಡ್ಡ ಪರಿಣಾಮಗಳು: ವಾಂತಿ, ಬಾಯಿಳ ಒಳಭಾಗದಲ್ಲಿ ಊದಿಕೊಳ್ಳುವುದು, ದದ್ದುಗಳು, ಕಣ್ಣುಗಳ ಊದಿಕೊಳ್ಳುವಿಕೆ ಮತ್ತು ಉಸಿರಾಟದಲ್ಲಿ ಕಷ್ಟವಾಗುವಿಕೆ.


 • 5. ಮಲ್ಬೆರಿ ಹಣ್ಣು (Shahatoot)

  ಈ ಹಣ್ಣುಗಳು ಇನ್ನೂ ಕಾಯಿ ಇದ್ದಾಗಲೇ ತಿಂದಾಗ ಲಘುವಾದ ಭ್ರಾಂತಿ ಕಾಣಿಸಿಕೊಳ್ಳುತ್ತದೆ. ಟಾಮ್ ಬ್ರೌಮ್ ರವರ Guide to Wild Edible and Medicinal Plants ಎಂಬ ಕೃತಿಯಲ್ಲಿ ಈ ಹಣ್ಣಿನ ಸೇವನೆಯ ಮೂಲಕ ಎದುರಾಗುವ ಮನೋಭಾವ ಬದಲಾವಣೆಯ ಪರಿಣಾಮಗಳನ್ನು ವಿವರಿಸಲಾಗಿದೆ.

  ಅಡ್ಡ ಪರಿಣಾಮಗಳು: ಲಘುಪ್ರಮಾಣದ ಬೇಧಿ, ತಲೆ ಸುತ್ತುವಿಕೆ, ಮಲಬದ್ದತೆ ಮತ್ತು ಹೊಟ್ಟೆಯುಬ್ಬರಿಕೆ.


 • 6. ಕೆಂಪು ಮೆಣಸು (Laal mirch)

  ಅಧ್ಯಯನಗಳ ಪ್ರಕಾರ, ಒಣಮೆಣಸಿನಲ್ಲಿ ಯಾವುದೇ ಮೆದುಳಿನ ಚಟುವಟಿಕೆಗಳನ್ನು ಬದಲಿಸುವ ರಾಸಾಯನಿಕಗಳು (psychoactive chemicals) ಇಲ್ಲ. ಆದರೂ ಮೆಣಸಿನಕಾಯಿಯಂತಹ ಅತ್ಯಂತ ಖಾರಯಾದ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಎದುರಾಗುವ ಉರಿ ಮತ್ತು ಈ ಉರಿಯಿಂದ ಉಂಟಾಗುವ ಭೀತಿ ಮತ್ತು ಮುದಗೊಳಿಸುವ ಭಾವನೆ ಮೂಡಿಸುವ ಎಂಡಾರ್ಫಿನ್‌ ಗಳು ಒಮ್ಮೆಲೇ ವಿಪರೀತ ಪ್ರಮಾಣದಲ್ಲಿ ಮಿಶ್ರಣಗೊಂಡು ಭ್ರಮೆಯನ್ನು ಉಂಟುಮಾಡಬಹುದು ್

  ಅಡ್ಡಪರಿಣಾಮಗಳು: ಇದು ಕಣ್ಣು ಅದುರುವುದು, ಬೆವರುವುದು, ಅತಿಸಾರ, ಉಸಿರುಗಟ್ಟುವಿಕೆ ಮತ್ತು ವಾಂತಿಗೆ ಕಾರಣವಾಗಬಹುದು.


 • 7. ಬ್ರೀಮ್ ಜಾತಿಯ ಮೀನುಗಳು (Rani/Kandal meen/Navara)

  ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯವಾಗಿ ಸೇವಿಸಲ್ಪಡುವ ಮೀನು, ಸಮುದ್ರ ಬ್ರೀಮ್ ಒಂದು ಸೂಕ್ಷ್ಮವಾದ ಬಿಳಿ ಯಾದ ಮೀನಿನ ಪ್ರಬೇಧವಾಗಿದ್ದು ಇದರ ಸೇವನೆಯಿಂದ ಭ್ರಮೆ ಉಂಟಾಗುತ್ತದೆ. ಈ ಭ್ರಮೆಗೆ ಪಾಚಿಗಳಲ್ಲಿ ಕಂಡುಬರುವ ಇಂಡೋಲ್ ಎಂಬ ವಸ್ತು ಕಾರಣ, ಈ ಪಾಚಿಯನ್ನು ಸೇವಿಸಿದ ಮೀನುಗಳಲ್ಲಿ ಈ ರಾಸಾಯನಿಕವೂ ಬೆರೆತುಕೊಳ್ಳುತ್ತದೆ.


 • 8. ಸೇಜ್ ಎಲೆಗಳು (Kamrkash/Samundarsok/Sathi)

  ಸೇಜ್ ಸಸ್ಯ ರೋಸ್ಮರಿ ಸಸ್ಯದೊಂದಿಗೆ ನಿಕಟ ಸಂಬಂಧ ಹೊಂದಿರುವ ನೈಸರ್ಗಿಕ ಸಸ್ಯವಾಗಿದೆ. ಇದು ಅಸಂಖ್ಯಾತ ಆರೋಗ್ಯಕರ ಪ್ರಯೋಜನಗಳನ್ನು ಪಡೆದಿದೆ ಆದರೆ ಇದರ ಪ್ರಮಾಣ ಹೆಚ್ಚಾದರೆ ಭ್ರಮೆಯನ್ನು ಉಂಟುಮಾಡುತ್ತದೆ. ಸಸ್ಯದ ಎಲೆಗಳು ಮನೋ-ಸಕ್ರಿಯ ಗುಣಗಳನ್ನು ಹೊಂದಿದ್ದು, ಅವುಗಳನ್ನು ಅಗಿಯುವ , ಧೂಮಪಾನ ಅಥವಾ ಚಹಾದಂತೆ ಸೇವಿಸಿದಾಗ ಸಕ್ರಿಯಗೊಳ್ಳುತ್ತವೆ. ಈ ಎಲೆಗಳು ಒಪಿಯಾಡ್ ಎಂಬ ಒಂದು ಬಗೆಯ ಸಂಯುಕ್ತಗಳನ್ನು ಹೊಂದಿರುತ್ತವೆ, ಈ ಓಪಿಯಾಡ್ ಭ್ರಮೆಯನ್ನು ಉಂಟುಮಾಡುತ್ತದೆ

  ಅಡ್ಡಪರಿಣಾಮಗಳು: ಜೀರ್ಣಕ್ರಿಯೆಯಲ್ಲಿ ಲಘುವಾದ ಬಾಧೆ, ವಾಕರಿಕೆ, ವಾಂತಿ, ಉದ್ವೇಗ, ಉಬ್ಬಸ, ಚರ್ಮ ಕೆಂಪಗಾಗುವುದು, ರಕ್ತದೊತ್ತಡದಲ್ಲಿ ಏರುಪೇರು, ಅಲರ್ಜಿಯ ಪ್ರತಿಕ್ರಿಯೆಗಳು ಮತ್ತು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಇಳಿಯುವುದು.


 • 9. ಸ್ಟಿಲ್ಟನ್ ಚೀಸ್

  ಭಾರತೀಯ ಪಾಕಪದ್ಧತಿಯ ಸಾಮಾನ್ಯ ಭಾಗವಲ್ಲದಿದ್ದರೂ, ಈ ಬಗೆಯ ಚೀಸ್ ಚಿತ್ತಭ್ರಮಿಗೆ ತಾತ್ಕಾಲಿಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. 2005 ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, ಶೇಕಡಾ 75 ರಷ್ಟು ಪುರುಷರು ಮತ್ತು 85 ಪ್ರತಿಶತ ಮಹಿಳೆಯರು ನಿದ್ರೆಗೆ ಮುನ್ನ ಸ್ಟಿಲ್ಟನ್ ಚೀಸ್ ಸೇವಿಸಿದಾಗ ಅಸಾಮಾನ್ಯ ಮತ್ತು ಹೆದರಿಕೆ ಹುಟ್ಟಿಸುವ ಕನಸುಗಳನ್ನು ಕಂಡಿದ್ದಾರೆ ಎಂದು ವರದಿಯಾಗಿದೆ [15].

  ಅಡ್ಡಪರಿಣಾಮಗಳು: ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು

  ಅಂತಿಮವಾಗಿ:....

  ಯಾವ ಆಹಾರಗಳು ನಿಮಗೆ ಸೂಕ್ತವಲ್ಲ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಲ್ಲ ಎಂದು ಈಗ ನಿಮಗೆ ತಿಳಿದಿದೆ. ಇವುಗಳಿಂದ ಆದಷ್ಟೂ ದೂರವಿರುವುದು ಹಾಗೂ ನಿಮ್ಮ ಆಪ್ತರಲ್ಲಿ ಯಾರಿಗಾದರೂ ಅರಿವಿಲ್ಲದೇ ಇವುಗಳ ಸೇವನೆಯ ಅಭ್ಯಾಸವಿದ್ದರೆ ಈ ಬಗ್ಗೆ ಎಚ್ಚರಿಕೆ ನೀಡುವುದು ನಿಮ್ಮ ಕರ್ತವ್ಯವೂ ಆಗಿದೆ. ಈ ಆಹಾಗಳಲ್ಲಿ ಯಾವುದನ್ನೂ ಅತಿಯಾಗಿ ಸೇವಿಸಿದರೆ ಕೇವಲ ಭ್ರಾಂತಿ ಮಾತ್ರವಲ್ಲ, ಅನಾರೋಗ್ಯವೂ ಎದುರಾಗಬಹುದು.
ಕೆಲವು ಆಹಾರಗಳು ನಮ್ಮ ಮನೋಭಾವನೆಯ ಮೇಲೆ ಪ್ರಭಾವ ಬೀರುತ್ತದೆ. ಕೆಲವು ಮನಸ್ಸನ್ನು ಮುದಗೊಳಿಸಿದರೆ ಕೆಲವು ಮನಸ್ಸನ್ನು ಕೆಡಿಸಬಹುದು. ಕೆಲವು ಗೊಂದಲ ಮೂಡಿಸಿದರೆ ಕೆಲವು ಭ್ರಾಂತಿ ಉಂಟು ಮಾಡಬಹುದು. ಇವುಗಳಲ್ಲಿ ಕೆಲವು ಆರೋಗ್ಯಕ್ಕೆ ಪೂರಕವಾಗಿದ್ದರೆ ಕೆಲವು ಮಾರಕವೂ ಆಗಿವೆ. ಇವುಗಳನ್ನು ಅನಗತ್ಯ ಎಂದು ಒಂದೇ ಮಾತಿನಲ್ಲಿ ಬೇಡ ಎನ್ನುವಂತಿಲ್ಲ. ಏಕೆಂದರೆ ಅಲ್ಪ ಪ್ರಮಾಣದಲ್ಲಿ ಇವೂ ನಮಗೆ ಬೇಕು.

ಉದಾಹರಣೆಗೆ ಕೆಫೀನ್. ಇದು ಒಂದು ಮಾದಕ ಪದಾರ್ಥವೂ ಆಗಿದ್ದು ಔಷಧಿಗಳಲ್ಲಿಯೂ ಬಳಸಲ್ಪಡುತ್ತದೆ. ಆದರೆ ಇದರ ಪ್ರಮಾಣ ಮಿತಿ ಮೀರಬಾರದು ಅಷ್ಟೇ. ಇನ್ನೂ ಕೆಲವು ಪ್ರಚೋದನೆ ನೀಡಿದರೆ ಕೆಲವು ಆಯಾಸವುಂಟು ಮಾಡುತ್ತವೆ. ಕೆಲವು ದುಃಸ್ವಪ್ನಗಳನ್ನು ಉಂಟುಮಾಡಿದರೆ ಕೆಲವು ಅನಪೇಕ್ಷಿತ ಮತ್ತು ಅನಿರೀಕ್ಷಿತ ಪರಿಣಾಮಗಳನ್ನೂ ಉಂಟು ಮಾಡಬಹುದು. ಇಂತಹ ಒಂಭತ್ತು ಆಹಾರಗಳನ್ನು ಇಂದಿನ ಲೇಖನದಲಿ ವಿವರಿಸಲಾಗಿದೆ. ಇವುಗಳಲ್ಲಿ ನಮಗೆ ಕೆಲವು ತೀರಾ ಪರಿಚಿತವಾಗಿದ್ದು ಇವುಗಳೂ ಭ್ರಮೆ ಮೂಡಿಸಬಹುದೇ ಎಂದು ಅಚ್ಚರಿ ಮೂಡಿಸಬಹುದು.

 
ಟೆಕ್ನಾಲಜಿ