Back
Home » ಆರೋಗ್ಯ
ಅಧ್ಯಯನ ವರದಿ: 'ಎ' ಗುಂಪಿನ ರಕ್ತದವರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚು
Boldsky | 19th Mar, 2020 12:00 PM
 • ಕೊರೊನಾ ಅಪಾಯ ಯಾರಿಗೆ ಹೆಚ್ಚು?

  ಕೊರೊನಾ ಸೋಂಕು ಒಬ್ಬ ವ್ಯಕ್ತಿಗೆ ಬಂದರೆ ಆತನ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಹರಡುವುದು, ಆ ವ್ಯಕ್ತಿಗಳಿಂದ ಮತ್ತಷ್ಟು ಮಂದಿಗೆ ಹರಡುವುದು. ಈ ಭಯದಿಂದಲೇ ಸರಕಾರ ಜನರಿಗೆ ಆರೋಗ್ಯದ ಬಗ್ಗೆ ಎಚ್ಚರವಹಿಸಿ, ನಿರ್ಲಕ್ಷ್ಯ ಮಾಡಿದರೆ ದೊಡ್ಡ ಅಪಾಯ ಕಾದಿದೆ ಎಂಬ ಎಚ್ಚರ ನೀಡಿದೆ. ಕೊರೊನಾ ವೈರಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬಂದರೆ ಅಪಯ ಹೆಚ್ಚು. ಕೊರೊನಾ ವೈರಸ್‌ ಯಾರಿಗೆ ಹರಡುತ್ತದೆ ಎಂಬ ಅಧ್ಯಯನದಲ್ಲಿ ಮಹತ್ವದ ಅಂಶ ಬೆಳಕಿಗೆ ಬಂದಿದೆ.


 • 'ಎ' ಗುಂಪಿನ ರಕ್ತ

  ಕೊರೊನಾ ವೈರಸ್ ಕೆಲವೊಂದು ಗುಂಪಿನ ರಕ್ತದವರಿಗೆ ಬೇಗನೆ ಹರಡುತ್ತದೆ, ಕೆಲವೊಂದು ಗುಂಪಿನವರಿಗೆ ಕೊರೊನಾ ಸೋಂಕು ಹರಡುವ ಅಪಾಯ ಕಡಿಮೆ ಎಂದು ಅಧ್ಯಯನ ಹೇಳಿದೆ.

  'ಎ' ಗುಂಪಿನ ರಕ್ತದವರಿಗೆ ಕೊರನಾ ವೈರಸ್ (ಕೋವಿಡ್ 19) ಹರಡುವ ಅಪಾಯ ಹೆಚ್ಚು, ' ಒ' ಗುಂಪಿನ ರಕ್ತದವರಿಗೆ ಕೊರೊನಾ ಸೋಂಕಿನ ಅಪಾಯ ಕಡಿಮೆ ಎಂದು ಮಂಗಳವಾರ(ಮಾರ್ಚ್ 17) ಅಧ್ಯಯನವೊಂದು ಹೇಳಿದೆ.


 • ಅಧ್ಯಯನ ವರದಿ

  ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ (SCMP)ಚೀನಾದಲ್ಲಿ ಕೊರೊನಾ ಸೋಂಕು ತಗುಲಿದವರ ರಕ್ತ ಗುಂಪನ್ನು ಪರಿಶೀಲಿಸಿ ಈ ವರದಿ ನೀಡಿದೆ. ಚೀನಾದಲ್ಲಿ ಕೊರೊನಾ ವೈರಸ್ ಸೋಂಕು 'ಒ' ಗುಂಪಿನ ರಕ್ತದವರಿಗಿಂತ ಎ ಗುಂಪಿನ ರಕ್ತದವರಲ್ಲಿ ಹೆಚ್ಚಾಗಿ ಕಂಡು ಬಂದಿತ್ತು.

  ವುಹಾನ್‌ನಲ್ಲಿ ಕೊರೊನಾ ಸೋಂಕಿತರಾಗಿ ನಿರ್ಮಿಸಲಾದ ಆಸ್ಪತ್ರೆಯಲ್ಲಿನ 2000ಕ್ಕೂ ಅಧಿಕ ಸೋಂಕಿತ ರೋಗಿಗಳನ್ನು ಪರಿಶೀಲಿಸಿ ಈ ಅಧ್ಯಯನ ವರದಿ ನೀಡಿದೆ. ಎ ಗುಂಪಿನ ರಕ್ತದವರಲ್ಲಿ ಸೋಂಕಿನ ಅಪಾಯ ಹೆಚ್ಚಾಗಿರುವುದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ. ಎ ಗುಂಪಿನ ರಕ್ತ ಇರುವವರಲ್ಲಿ ಈ ಸೋಂಕು ತಾಗಿದಾಗ ಆರೋಗ್ಯ ತುಂಬಾ ಹದಗೆಡುವುದಾಗಿ ಈ ಅಧ್ಯಯನ ವರದಿ ಹೇಳಿದೆ.

  ಆದ್ದರಿಂದ ಎ ಗುಂಪಿನ ರಕ್ತ ಹೊಂದಿರುವವರು ಈ ಸೋಂಕು ಬರದಂತೆ ತುಂಬಾ ಎಚ್ಚರಿಕೆವಹಿಸಬೇಕು. ಒಂದು ವೇಳೆ ಸೋಂಕು ತಗುಲಿದರೆ ಒಂದಿಷ್ಟೂ ತಡಮಾಡದೆ ಚಿಕಿತ್ಸೆ ತೆಗೆದುಕೊಳ್ಳಬೇಕಾಗಿದೆ, ಇವರಲ್ಲಿ ಈ ಸೊಂಕು ವಿರುದ್ಧ ಹೋರಾಡುವ ಸಾಮಾರ್ಥ್ಯ ಕಡಿಮೆ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಅಧ್ಯಯನ ಹೇಳಿದೆ.

  ಇತರ ಗುಂಪಿನ ರಕ್ತದವರಿಗೆ ಹೋಲಿಸಿದರೆ 'ಒ' ಗುಂಪಿನ ರಕ್ತ ಹೊಂದಿರುವವರಿಗೆ ಕೊರೊನಾ ವೈರಸ್ ಸೋಂಕಿನ ಅಪಾಯ ಕಡಿಮೆ ಎಂದು ಅಧ್ಯಯನ ಹೇಳಿದೆ. ಆದರೆ ಇದೇ ಅಂತಿಮ ವರದಿಯಲ್ಲ, ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಅಧ್ಯನ ಹೇಳಿದೆ.


 • NCBI ವರದಿ

  ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನೋಲಜಿ ಇನ್‌ಫಾರ್ಮೇಷನ್ ((NCBI) ಪ್ರಕಾರ ' ಒ' ರಕ್ತದ ಗುಂಪು ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಕಂಡು ಬರುವ ರಕ್ತದ ಗುಂಪು ಆಗಿದೆ. ಭಾರತದಲ್ಲಿ ಶೇ.37.12ರಷ್ಟು ಜನರು O ರಕ್ತದ ಗುಂಪು ಹೊಂದಿದ್ದಾರೆ, ಇನ್ನು ಶೇ.41ರಷ್ಟು ಜನರು A ಗುಂಪಿನವರಾಗಿದ್ದಾರೆ.
  ಅಮೆರಿಕದಲ್ಲಿ ಶೇ.44ರಷ್ಟು ಜನರು O ಗುಂಪಿನವರಾಗಿದ್ದು, ಶೇ.41ರಷ್ಟು ಜನರು A ಗುಂಪಿನವರಾಗಿದ್ದಾರೆ.

  ಕೊರೊನಾ ಸೋಂಕಿತರ ರಕ್ತದ ಗುಂಪಿನ ಕಡೆಗೂ ಗಮನ ಹರಿಸುವುದರಿಂದ ಈ ರೋಗದ ಕುರಿತು ಮತ್ತಷ್ಟು ತಿಳಿಯಲು ಸಹಕಾರಿಯಾಗಿದೆ. ಕೊರೊನಾ ವೈರಸ್ ಸೋಂಕು ಮಧುಮೇಹಿಗಳಿಗೆ ಕಾಣಿಸಿದರೆ ಅಪಾಯ ಹೆಚ್ಚು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಕೊರೊನಾ ವೈರಸ್‌ ಸೋಂಕು ಹರಡಲು ಪ್ರಾರಂಭಿಸಿದರೆ ಪರಿಸ್ಥಿತಿ ಗಂಭೀರವಾಗುವುದು.


 • ಕೊರೊನಾ ಸೋಂಕು ವಿರುದ್ಧ ಹೋರಾಡಿ

  ಈಗಾಗಲೇ 150 ಜನರಲ್ಲಿ ಸೋಂಕು ದೃಢಪಟ್ಟಿದ್ದು, 3 ಸಾವು ಸಂಭವಿಸಿದೆ. ಜನರು ಹಾಗೂ ಸರಕಾರ ಈ ಸೋಂಕು ಮಟ್ಟಹಾಕಲು ಚೀನಾದ ರೀತಿಯಲ್ಲಿಯೇ ಹೋರಾಡಬೇಕಾಗಿದೆ. ಸೋಂಕಿತರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ವಿದೇಶದಿಂದ ಬರುವವರ ಮೇಲೆ ಸಂಪೂರ್ಣ ನಿಗಾವಹಿಸಬೇಕಾಗಿದೆ.

  ಚೀನಾದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ, ಆದರೆ ಇಟಲಿ ಮತ್ತಿತರ ರಾಷ್ಟ್ರಗಳು ಪ್ರಾರಂಭದಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದ ಕಾರಣ ಸಾವಿನ ಸಂಖ್ಯೆ ಏರುತ್ತಿದೆ. ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಸ್ಟೇಜ್ 1 ಹಾಗೂ ಸ್ಟೇಕ್ 2ರಲ್ಲಿದ್ದು ಇದ್ದು ಇದು ಸ್ಟೇಜ್ 3 ತಲುಪಿದರೆ ಅಪಾಯ ಹೆಚ್ಚು,ಹಾಗಾದಂತೆ ಎಚ್ಚರವಹಿಸಬೇಕಾಗಿದೆ.


 • O ಗುಂಪಿನ ರಕ್ತವೊಂದು ಅಸಡ್ಡೆ ಬೇಡ

  ಇನ್ನು ನಿಮ್ಮದು O ಗುಂಪಿನ ರಕ್ತವೊಂದು ಅಸಡ್ಡೆ ಬೇಡ, ಆರೋಗ್ಯದ ಕಡೆ ಈ ಸಮಯದಲ್ಲಿ ತುಂಬಾ ಎಚ್ಚರವಹಿಸಿ. ಗುಂಪು ಇರುವ ಕಡೆ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬೇಡಿ. ಜ್ವರ, ಶೀತ, ಗಂಟಲು ಕೆರೆತ, ತಲೆನೋವು ಹೀಗೆ ಯಾವುದೇ ಲಕ್ಷಣಗಳು ಕಾಣಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಈ ರೀತಿ ಲಕ್ಷಣಗಳು ಕಾಣಿಸಿದ ತಕ್ಷಣ ಮಾಸ್ಕ್ ಧರಿಸಿ.

  ಮನೆಯಲ್ಲಿ ಹುಷಾರು ಇಲ್ಲದವರನ್ನು ಆರೈಕೆ ಮಾಡುವಾಗ ಮಾಸ್ಕ್ ಧರಿಸಿ. ಚೆನ್ನಾಗಿ ನೀರು ಕುಡಿಯಿರಿ, ಆರೋಗ್ಯಕರ ಆಹಾರ ಸೇವನೆ ಮಾಡಿ. ಆರೋಗ್ಯವಾಗಿರಿ.
ವಿಶ್ವದೆಲ್ಲಡೆ ಕೊರೊನಾ ವೈರಸ್‌ ಸೋಂಕಿನ ಭೀತಿ ಎದುರಾಗಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ಮಾರಾಣಾಂತಿಕ ವೈರಸ್ ಇದೀಗ ವಿಶ್ವದ ಹಲವು ರಾಷ್ಟ್ರಗಳಿಗೆ ಹರಡಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಾ ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಭಾರತದಲ್ಲಿ ಒಂದೆರಡು ಪ್ರಕರಣಗಳು ಕಂಡಾಗ ಅಷ್ಟೇನು ಭಯಭೀತರಾಗಿರಲಿಲ್ಲ, ಆದರೆ ಇದೀಗ ಸಂಖ್ಯೆ 150 ದಾಟಿರುವುದು ದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.

ಕರ್ನಾಟಕ ಸರಕಾರ ಕೊರೊನಾ ವೈರಸ್‌ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಮಾರ್ಚ್‌ 31ರವರೆಗೆ ಮಾಲ್‌, ಥಿಯೇಟರ್ ಎಲ್ಲವನ್ನೂ ಬಂದ್‌ ಮಾಡಿ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಜನರು ಗುಂಪಾಗಿ ಸೇರದಂತೆ, ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶಿಸಲಾಗಿದೆ.

 
ಟೆಕ್ನಾಲಜಿ