Back
Home » ಆರೋಗ್ಯ
ಇವುಗಳಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು
Boldsky | 27th Feb, 2020 05:07 PM
 • 1. ಏರ್‌ ಫ್ರೆಷನರ್ ಬಳಸುವುದು

  ಏರ್‌ ಫ್ರೆಷನರ್‌ ತುಂಬಾ ಮನೆಗಳಲ್ಲಿ ಬಳಸುತ್ತಾರೆ. ಗಾಳಿಯನ್ನು ಶುದ್ಧ ಮಾಡುತ್ತದೆ, ಸುವಾಸನೆ ಬೀರುತ್ತದೆ ಎಂದು ಎಂದು ಇದನ್ನು ಬಳಸುತ್ತೇವೆ. ಏರ್‌ ಫ್ರೆಷನರ್ ಬಳಸುವುದರಿಂದ ದುರ್ವಾಸನೆ ತಡೆಯಬಹುದೇ ಹೊರತು, ಗಾಳಿಯನ್ನು ಶುದ್ಧ ಮಾಡಲು ಸಾಧ್ಯವಿಲ್ಲ. ಏರ್‌ ಫ್ರೆಷನರ್‌ನಲ್ಲಿರುವ ರಾಸಾಯನಿಕವನ್ನು ಉಸಿರಾಡುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚು.


 • 2. ಡೀಸೆಲ್, ಪೆಟ್ರೋಲ್‌ ಗಾಡಿಯ ಹೊಗೆಯನ್ನು ಉಸಿರಾಡುವುದರಿಂದ

  ಮೆಕ್ಯಾನಿಕ್ಸ್ ಹಾಗೂ ಡ್ರೈವರ್‌ಗಳು ಡಿಸೆಲ್, ಪೆಟ್ರೋಲ್ ಗಾಡಿಯ ಹೊಗೆಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ಡೀಸೆಲ್ , ಪೆಟ್ರೋಲ್ ಗಾಡಿಗಳು ಮೋನೋಕ್ಸೈಡ್ ಹಾಗೂ ಹೈಡ್ರೋಕಾರ್ಬನ್ ಎಂಬ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಇದನ್ನು ಉಸಿರಾಡುವುದರಿಂದ ಶ್ವಾಸಕೋಶದ ಆರೋಗ್ಯ ಹಾಳಾಗುವುದು.


 • 3. ಸುಟ್ಟ ಮಾಂಸ ತಿನ್ನುವುದು

  ಮೀನು, ಚಿಕನ್, ಇತರ ಮಾಂಸಗಳನ್ನು ಗ್ರಿಲ್ಡ್ ಮಾಡಿದಾಗ ಅದರ ಒಂದೊಂದು ಕಡೆ ಸ್ವಲ್ಪ ಅಧಿಕ ಸುಟ್ಟು ಹೋಗಿ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ, ಇದರಿಂದ ಸುಟ್ಟ ವಾಸನೆ ಬೀರುವುದು. ಮಾಂಸ ಸುಟ್ಟು ಕಪ್ಪಾದಾಗ ಪಾಲಿಸೈಕ್ಲಿಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ (PAHs) ಮತ್ತು ಹೆಟ್ರೋಸೈಕ್ಲಿಲಿಕ್ ಅಮೈನ್ಸ್ ಎಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದನ್ನು ತಿನ್ನುವುದರಿಂದ ಕರಳು ಹಾಗೂ ಜಠರ, ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.


 • 4. ಸಂಗ್ರಹಿಸಿಟ್ಟ ಆಹಾರ ಸೇವನೆ

  ಈಗೆಲ್ಲಾ ರೆಡಿಮೇಡ್ ಆಹಾರಗಳು ಸಿಗುತ್ತವೆ. ಈ ಆಹಾರಗಳು ಅನಾರೋಗ್ಯಕರ, ಏಕೆಂದರೆ ಪ್ಲಾಸ್ಟಿಕ್ ಮುಚ್ಚಳವಿರುವ ಮೆಟಲ್‌ ಡಬ್ಬದಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ. ಇಂಥ ಆಹಾರಗಳ ಸೇವನೆಯಿಂದ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.


 • 5. ಡಯಟ್ ಸೋಡಾ ಕುಡಿಯುವುದು

  ಸಾಮಾನ್ಯವಾಗಿ ಸೋಡಾದಲ್ಲಿ 4-methylimidazole (4-MI)ಅಗ್ಯತಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇನ್ನು ಸೋಡಾದಲ್ಲಿ ಕೃತಕ ಸಿಹಿ ಕೂಡ ಬಳಸಲಾಗಿರುತ್ತದೆ ಇದರಿಂದ ಪ್ಯಾಂಕ್ರಿಯಾಟೈಟಿಸ್ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಡಯಟ್ ಸೋಡಾ ಕುಡಿಯುವುದರಿಂದ ಕರುಳಿನ ಕ್ಯಾನ್ಸರ್, ಬ್ರೈನ್ ಟ್ಯೂಮರ್ ಬರುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಹೇಳಿವೆ.


 • 6. ಸನ್‌ಸ್ಕ್ರೀನ್‌ ಲೋಷನ್ ಬಳಸುವುದು

  ಬಿಸಿಲಿಗೆ ಹೋಗುವಾಗ ಸೂರ್ಯನ ಕಿರಣಗಳಿಂದ ತ್ವಚೆ ರಕ್ಷಣೆ ಮಾಡಲು ಸನ್‌ಸ್ಕ್ರೀನ್ ಲೋಷನ್ ಬಳಸುತ್ತೇವೆ. ಆದರೆ ಅದೇ ಸನ್‌ಸ್ಕ್ರೀನ್‌ ಕ್ಯಾನ್ಸರ್‌ಕಾರಕ ಎಂದರೆ ಅಚ್ಚರಿಯಾಗುತ್ತಿದೆಯೇ? ಹೌದು ಸನ್‌ಸ್ಕ್ರೀನ್‌ನಲ್ಲಿ ಬಳಸುವ ಜಿಂಕ್‌ ಆಕ್ಸೈಡ್ ಇದು DNA ಹಾನಿ ಮಾಡಿ ಕ್ಯಾನ್ಸರ್ ಕಣಗಳನ್ನು ಉಂಟು ಮಾಡುತ್ತವೆ.


 • 7. ಸುಗಂಧ ವಾಸನೆ ಬೀರುವ ಮೇಣದ ಬತ್ತಿಗಳನ್ನು ಬಳಸುವುದು

  ಕ್ಯಾಂಡಲ್‌ ಲೈಟ್‌ ಡಿನ್ನರ್‌ನಲ್ಲಿ ಬಣ್ಣದ ಮೇಣದ ಬತ್ತಿಗಳು ಹೊತ್ತಿ ಉರಿಯುವುದನ್ನು ನೋಡುವುದು ತುಂಬಾ ಚೆನ್ನಾಗಿರುತ್ತದೆ. ಆದರೆ ಸುಗಂಧವಾಸನೆ ಬೀರುವ ಈ ಕ್ಯಾಂಡಲ್‌ಗಳು ಆರೋಗ್ಯಕರವಲ್ಲ ಎಂದು ಇತ್ತೀಚಿಗೆ ನಡೆಸಿದ ಅಧ್ಯಯನಗಳು ಹೇಳಿವೆ. ಈ ಪಾರ್ಫಿನ್ ವ್ಯಾಕ್ಸ್‌ಗಳಲ್ಲಿ ಕಾರ್ಸಿನೋಜೆನ್ಸ್ ಅಂಶವಿದ್ದು ಇದು ಕ್ಯಾನ್ಸರ್‌ಕಾರಕವಾಗಿದೆ. ಕ್ಯಾಂಡಲ್‌ಲೈಟ್ ಡಿನ್ನರ್ ಅಥವಾ ರೊಮ್ಯಾಂಟಿಕ್ ಬೆಡ್‌ರೂಂ ಐಡಿಯಾಗಳಿಗೆ ಸಾದಾ ಮೇಣದ ಬತ್ತಿ ಬಳಸುವುದು ಒಳ್ಳೆಯದು.


 • 8. ಮೌಖಿಕ ಸೆಕ್ಸ್ ಮಾಡುವುದರಿಂದ

  ಜರ್ನಲ್ ಆಫ್ ಕ್ಲಿನಿಕಲ್ ಆ್ಯಂಕಾಲಿಜಿ ವರದಿ ಪ್ರಕಾರ ಒರೊಫಾರ್ಂಜಿಯಲ್ ಕ್ಯಾನ್ಸರ್HPV ಸೋಂಕಿನಿಂದ ಉಂಟಾಗುತ್ತದೆ. ಮೌಖಿಕ ಸೆಕ್ಸ್ ಮಾಡುವವರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ.


 • 9. ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುವವರಿಗೆ

  ಹೌದು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುವುದರಿಂದ ಕೂಡ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಬ್ರಿಟಿಷ್ ಮೆಡಿಕಲ್ ಜರ್ನಲ್ ಪ್ರಕಾರ ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುವುದರಿಂದ ಸ್ತನ ಕ್ಯಾನ್ಸರ್ ಹಾಗೂ ಖಿನ್ನತೆ ಕಾಡುವ ಸಾಧ್ಯತೆ ಹೆಚ್ಚು.


 • 10. ಮದ್ಯಪಾನ ಮತ್ತು ಧೂಮಪಾನ, ತಂಬಾಕು ಸೇವನೆ

  ಈ ಚಟ ಇರುವವರಿಗೆ ಕ್ಯಾನ್ಸರ್ ಅಪಾಯ ಹೆಚ್ಚು. ಈ ಕೆಟ್ಟ ಚಟ ಇರುವವರಲ್ಲಿ ಅನ್ನನಾಳದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು. ಮದ್ಯಪಾನ ಮಾಡುವುದರಿಂದ ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿ ಹೆಚ್ಚಾಗಿ ಜೀರ್ಣಾಂಗವ್ಯೂಹಕ್ಕೆ ಹಾನಿಯುಂಟು ಮಾಡುತ್ತದೆ.
ಕ್ಯಾನ್ಸರ್ ಎಂಬ ಮಾರಕ ಈ ಹಿಂದೆ ಅಪರೂಪದ ಕಾಯಿಲೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನೋಡಿದರೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಾತಾವರಣದಲ್ಲಿ ಹಾಗೂ ನಮ್ಮ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳು.

Top 10 habits that cause cancer in Kannada | Boldsky Kannada

2014ರ ಅಂಕಿ ಅಂಶ ನೋಡಿದಾಗ ವಿಶ್ವದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ 14.5 ಮಿಲಿಯನ್ ಇತ್ತು. 2024 ಆಗುವಷ್ಟರಲ್ಲಿ ಈ ಸಂಖ್ಯೆ ಸುಮಾರು 19 ಮಿಲಿಯನ್ ತಲುಪಲಿದೆ ಎಂದು ಅಂದಾಜಿಸಲಿದೆ, ಇನ್ನೂ ಎರಡು ದಶಕಗಳಲ್ಲಿ ಈ ಸಂಖ್ಯೆ 22 ಮಿಲಿಯನ್ ಆಗುವ ಸಾಧ್ಯತೆ ಇದೆ.

ವಿಶ್ವದಲ್ಲಿ ಕಾಯಿಲೆಯಿಂದ ಸಾವನ್ನಪ್ಪುವರ ಸಂಖ್ಯೆಯಲ್ಲಿ ಕ್ಯಾನ್ಸರ್‌ನಿಂದ ಸಾವನ್ನಪ್ಪುವವರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಅದರಲ್ಲಿ ಮೂರನೇಯ ಒಂದು ಭಾಗದಷ್ಟು ಜನರಿಗೆ ಅಹಾರಕ್ರಮ, ಮೈ ತೂಕ, ಕಡಿಮೆ ಹಣ್ಣು, ತರಕಾರಿಗಳನ್ನು ತಿನ್ನುವುದರಿಂದ, ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯಿಂದ ಬಂದಿರುತ್ತದೆ.

ಇಲ್ಲಿ ನಾವು ಯಾವೆಲ್ಲಾ ಅಭ್ಯಾಸದಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳಿದ್ದೇವೆ ನೋಡಿ:

   
 
ಟೆಕ್ನಾಲಜಿ