Back
Home » ಇತ್ತೀಚಿನ
ಶಿಯೋಮಿಯ 'ರೆಡ್ಮಿ ಕೆ30 ಪ್ರೊ' ಬಿಡುಗಡೆಗೆ ವೇದಿಕೆ ಸಜ್ಜು!
Gizbot | 27th Feb, 2020 11:00 AM
 • ಶಿಯೋಮಿ ಲಾಂಚ್

  ಹೌದು, ಶಿಯೋಮಿ ಲಾಂಚ್ ಮಾಡಲಿರುವ ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಈ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ, ಕ್ಯಾಮೆರಾ, ಪ್ರೊಸೆಸರ್ ಮತ್ತು ಬ್ಯಾಟರಿ ಪಾಯಿಂಟ್ಸ್‌ಗಳಿಂದ ಭಾರಿ ಸುದ್ದಿ ಮಾಡಲಿರುವ ಲಕ್ಷಣಗಳನ್ನು ಸೂಚಿಸಿದೆ. ಈ ಫೋನ್ ಇದೇ ಮಾರ್ಚ್‌ನಲ್ಲಿ ಲಾಂಚ್ ಆಗುವುದು ಬಹುತೇಕ ಖಚಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬೆಲೆಯು ಸ್ಪರ್ಧಾತ್ಮಕ ದರವಾಗಿರಲಿದೆ ಎಂದು ಊಹಿಸಲಾಗಿದೆ. ಹಾಗಾದರೇ ರೆಡ್ಮಿ ಕೆ30 ಪ್ರೊ ಯಾವೆಲ್ಲಾ ಫೀಚರ್ಸ್‌ಗಳಿಂದ ಸೌಂಡ್ ಮಾಡಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.


 • ಡಿಸ್‌ಪ್ಲೇ: ಉನ್ನತ ರಿಫ್ರೇಶ್ ರೇಟ್

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯು ಉನ್ನತ ಮಟ್ಟದಲ್ಲಿರಲಿದ್ದು, ಇದರ ರಿಫ್ರೇಶ್ ರೇಟ್ ಸಹ 120Hz ಆಗಿರಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಡಿಸ್‌ಪ್ಲೇಯು 6.6 ಇಂಚಿನ AMOLED ಮಾದರಿಯನ್ನು ಒಳಗೊಂಡಿರಲಿದ್ದು, ಪೂರ್ಣ ಹೆಚ್‌ಡಿ ಪ್ಲಸ್‌ ಆಗಿರಲಿದೆ. ಹಾಗೆಯೇ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡುವ ಸಾಧ್ಯತೆಗಳು ಇವೆ.


 • ಪ್ರೊಸೆಸರ್: ವೇಗದ ನಿರೀಕ್ಷೆ

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಒಳಗೊಂಡಿರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಸಹ ಪಡೆದಿರಲಿದೆ. ಜೊತೆಗೆ MIUI 11 ಸಪೋರ್ಟ್‌ ಸಹ ಇರಲಿದೆ. ಇವೆಲ್ಲದುರ ಹೊಂದಾಣಿಕೆಯಿಂದ ಫೋನ್ ಕಾರ್ಯವೈಖರಿ ವೇಗವಾಗಿರಲಿದೆ. ಸುಮಾರು 256GB ವರೆಗೂ ಆಂತರಿಕ ಸ್ಟೋರೇಜ್ ಆಯ್ಕೆ ಲಭ್ಯವಾಗಲಿದೆ.


 • ಕ್ಯಾಮೆರಾ: ಪೂರ್ಣ ಹೈ ರೇಂಜ್

  ಮೊದಲಿಂದಲು ಕ್ಯಾಮೆರಾಗೆ ಹೆಚ್ಚು ಒತ್ತು ನೀಡುತ್ತಾ ಸಾಗಿರುವ ಶಿಯೋಮಿ ಹೊಸ ರೆಡ್ಮಿ ಕೆ30 ಪ್ರೊ ಫೋನಿನಲ್ಲಿಯೂ ಸಹ ಅಧಿಕ ಪಿಕ್ಸಲ್ ಕ್ಯಾಮೆರಾ ನೀಡುವ ಸಾಧ್ಯತೆಗಳು ಇವೆ. ಕ್ವಾಡ್‌ ಕ್ಯಾಮೆರಾ ಆಯ್ಕೆ ಇರಲಿದ್ದು, ಮುಖ್ಯ 108ಎಂಪಿ ಸೆನ್ಸಾರ್‌ನಲ್ಲಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಇರಲಿದೆ ಎಂದು ಹೇಳಲಾಗುತ್ತಿದೆ.


 • ಬ್ಯಾಟರಿ: ಅಧಿಕ ಲೈಫ್

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಸರಣಿಯು 4500mAh ಬ್ಯಾಟರಿ ಹೊಂದಿರಲಿರುವ ನಿರೀಕ್ಷೆಗಳಿದ್ದು, ಅದರೊಂದಿಗೆ 33W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಒದಗಿಸುವ ಸಾಧ್ಯತೆಗಳಿ ಇವೆ.


 • ಬೆಲೆ: ಸ್ಪರ್ಧಾತ್ಮಕ ರೇಂಜ್

  ರೆಡ್ಮಿ ಕೆ30 ಪ್ರೊ ಸ್ಮಾರ್ಟ್‌ಫೋನ್ ಸದ್ಯದಲ್ಲಿಯೇ ಬಿಡುಗಡೆ ಆಗಲಿದ್ದು, ಬೆಲೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಫ್ಲ್ಯಾಗ್‌ಶಿಫ್‌ ಫೋನಿನ ಬೆಲೆಯು ಸುಮಾರು 30,000ರೂ ಆಸುಪಾಸಿನಲ್ಲಿರಲಿದೆ ಎಂದು ಊಹಿಸಲಾಗುತ್ತಿದೆ. ಇದೇ ಮಾರ್ಚ್ ತಿಂಗಳಿನಲ್ಲಿ ಲಾಂಚ್ ಆಗುವುದು ಬಹುತೇಕ ಖಚಿತವಾಗಿದೆ.
ಜನಪ್ರಿಯ ಶಿಯೋಮಿ ಸಂಸ್ಥೆಯು ಇತ್ತೀಚಿಗೆ ರೆಡ್ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ರೆಡ್ಮಿ ಕೆ20 ಸರಣಿಯ ಮುಂದುವರಿದ ಭಾಗವಾಗಿ ಇದೀಗ ರೆಡ್ಮಿ ಕೆ30 ಪ್ರೊ ದೈತ್ಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿದೆ. ಈ ಫೋನ್ ಹೈ ರೇಂಜ್ ಫೀಚರ್ಸ್‌ಗಳನ್ನು ಹೊಂದಿರಲಿದ್ದು, ಮಾರುಕಟ್ಟೆಯಲ್ಲಿ ನೇರವಾಗಿ ವಿವೋ iQOO 3 ಫೋನಿಗೆ ಫೈಟ್ ನೀಡಲಿದೆ.

   
 
ಟೆಕ್ನಾಲಜಿ