Back
Home » ಇತ್ತೀಚಿನ
ಭಾರತದಲ್ಲಿ 9,999 ರುಪಾಯಿಗೆ ಖರೀದಿಸಬಹುದಾದ ಬೆಸ್ಟ್ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಮಾ್ಟ್ ಫೋನ್
Gizbot | 27th Feb, 2020 07:00 AM
 • 9,999 ರುಪಾಯಿ

  9,999 ರುಪಾಯಿ ಬೆಲೆಗೆ ಲಭ್ಯವಿರುವ ಕೆಲವು ಇನ್- ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ನಾವಿಲ್ಲಿ ಲಿಸ್ಟ್ ಮಾಡಿದ್ದೇವೆ. ಹಲವು ಆಪ್ ಗಳಿಗೆ ಅಥೆಂಟಿಕೇಷ್ ನ್ನು ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ ಆ ಮೂಲಕ ಆಪ್ಸ್ ಗಳು ಬೇಡುವ ಕ್ರಿಡೆನ್ಶಿಯಲ್ಸ್ ನ್ನು ನೀವು ತುಂಬಿಸುತ್ತಾ ಕೂರುವ ಅಗತ್ಯತೆಯನ್ನು ನಿಲ್ಲಿಸುತ್ತದೆ. ಫ್ಯೂಚರ್ ಪ್ರೂಫ್ ತಂತ್ರಗಾರಿಕೆಯೊಂದಿಗೆ ಈ ವೈಶಿಷ್ಟ್ಯತೆ ಲಭ್ಯವಿರುತ್ತದೆ. ಆ ಮೂಲಕ ಸರ್ಫೇಸ್ ಲೆವೆಲ್ ನಲ್ಲಿ ಫಿಸಿಕಲ್ ಕಾಂಪೋಟೆಂಟ್ ನ್ನು ಫೋನ್ ಬೇಡುವುದಿಲ್ಲ.ಹಾಗಾಗಿ ದೊಡ್ಡ ಡಿಸ್ಪ್ಲೇ ಏರಿಯಾದ ಅಗತ್ಯವಿರುವುದಿಲ್ಲ. ಡಿಸ್ಪ್ಲೇಯಲ್ಲೇ ಸೆನ್ಸರ್ ನ್ನು ಮೌಂಟ್ ಮಾಡಿರುವುದರಿಂದಾಗಿ ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.


 • ರಿಯಲ್ ಮಿ ಎಕ್ಸ್2 ಪ್ರೋ 6GB RAM

  ಈ ಹ್ಯಾಂಡ್ ಸೆಟ್ ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ SoC, 50W ಸೂಪರ್VOOC ಫ್ಲ್ಯಾಶ್ ಚಾರ್ಚ್ ತಂತ್ರಜ್ಞಾನವಿದೆ. 90Hz ಸ್ಮೂತ್ ಡಿಸ್ಪ್ಲೇ ಮತ್ತು 64MP ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ.


 • ವಿವೋ Z1x 8GB RAM

  ಈ ಫೋನ್ ನ್ನು ಕೇವಲ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಗಾಗಿ ಮಾತ್ರವಲ್ಲ ಬದಲಾಗಿ 48MP ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಜೊತೆಗೆ 4500mAh ಬ್ಯಾಟರಿಗೊಸ್ಕರವೂ ಕೂಡ ಖರೀದಿಸಲಾಗುತ್ತದೆ.


 • ಒಪ್ಪೋ ಕೆ3 128GB

  ಡುಯಲ್ ಕ್ಯಾಮರಾವು ಎಐ ವಿಸ್ ಡಂ ಬ್ಯೂಟಿ ಫೀಚರ್ ನೊಂದಿಗೆ ಜೊತೆಗೆ ಮುಂಭಾಗದ HDR, ಫೇಶಿಯಲ್ ರೆಕಗ್ನಿಷನ್ ಮತ್ತು ಮುಂಭಾಗದ ಪ್ರೊಟ್ರೈಟ್ ಸ್ಟೈಲ್ ನ್ನು ಇದು ಹೊಂದಿದೆ. ಇದು ದೊಡ್ಡ AMOLED ಡಿಸ್ಪ್ಲೇಯನ್ನು ಹೊಂದಿದೆ.


 • ಬ್ಲಾಕ್ ಶಾರ್ಕ್ 2

  ಈ ಗೇಮಿಂಗ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 SoCನ್ನು ಹೊಂದಿದ್ದು ಗ್ರಾಫಿಕ್ ಪ್ರದರ್ಶನವನ್ನು ಉನ್ನತಕ್ಕೇರಿಸುತ್ತದೆ.ಅತ್ಯುತ್ತಮ ಗೇಮಿಂಗ್ ಅನುಭವವನ್ನು ಇದು ನೀಡುತ್ತದೆ. 4000mAh ಬ್ಯಾಟರಿ ಮತ್ತು 48MP ಪ್ರೈಮರಿ ಕ್ಯಾಮರಾವನ್ನು ಇದು ಹೊಂದಿದೆ.


 • ಒಪ್ಪೋ ಕೆ1

  ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಜೊತೆಗೆ ಇದರಲ್ಲಿ AMOLED ಡಿಸ್ಪ್ಲೇ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್ ನ್ನು ಇದು ಹೊಂದಿದೆ.


 • ಒನ್ ಪ್ಲಸ್ 6ಟಿ

  ಸಾಕಷ್ಟು ಆಕರ್ಷಕ ಫೀಚರ್ ಗಳ ಗುಚ್ಛ ಈ ಫೋನ್. ಅಪ್ ಗ್ರೇಡ್ ಗಾಗಿ ನೀವು 7ಟಿ ಸರಣಿ ಸ್ಮಾರ್ಟ್ ಫೋನ್ ನ್ನು ಕೂಡ ನೋಡಬಹುದು. ನಿಮ್ಮ ಗಮನಕ್ಕೆ ಇರಲಿ ಎಂದು ಹೇಳುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಒನ್ ಪ್ಲಸ್ 8 ಮಾಡೆಲ್ ಕೂಡ ಪ್ರವೇಶಿಸಲಿದೆ.
ಇಂದಿನ ದಿನಗಳಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಆಧಾರಿತ ಫೋನ್ ಗಳು ಸಾಮಾನ್ಯವಾಗಿ ಬಿಟ್ಟಿದೆ. ಡಿಸ್ಪ್ಲೇಯಲ್ಲಿ ಬೆರಳುಗಳನ್ನು ಆಡಿಸುತ್ತಾ ಸಮಯ ವ್ಯಯಿಸುವುದನ್ನು ಈ ಫೀಚರ್ ನಿಂದಾಗಿ ಉಳಿಸಬಹುದು. ಸಾಂಪ್ರದಾಯಿಕ ಸೆನ್ಸರ್ ನಿಂದ ಸ್ಮಾರ್ಟ್ ಫೋನ್ ನ್ನು ಅನ್ ಲಾಕ್ ಮಾಡುವುದನ್ನು ಈ ಫೀಚರ್ ಇಲ್ಲವಾಗಿಸಿದೆ.ಇನ್-ಡಿಸ್ಪ್ಲೇ ಸೆನ್ಸರ್ ಮಾರುಕಟ್ಟೆಗೆ ಬಂದಾಗ ಬಹಳ ದುಬಾರಿ ಎನ್ನಿಸಿದ್ದವು. ಇದೀಗ ಈ ವೈಶಿಷ್ಟ್ಯತೆ ಇರುವ ಫೋನ್ ಗಳು ಬಹಳ ಕಡಿಮೆ ಬೆಲೆಗೆ ಲಭ್ಯವಿದೆ.

   
 
ಟೆಕ್ನಾಲಜಿ