Back
Home » ಆರೋಗ್ಯ
ಈ ಆಹಾರಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದರ ಸತ್ವವೇ ಹಾಳಾಗುತ್ತದೆ
Boldsky | 26th Feb, 2020 01:00 PM
 • ಕಲ್ಲಂಗಡಿ ಹಣ್ಣು

  ಒಂದು ಅಧ್ಯಯನದ ಪ್ರಕಾರ ನಿಮ್ಮ ಮನೆಯ ರೆಫ್ರಿಜರೇಟರ್ ಆಹಾರ ಪದಾರ್ಥಗಳ ಆಂಟಿ -ಆಕ್ಸಿಡೆಂಟ್ ಅಂಶಗಳನ್ನು ಕ್ರಮೇಣ ಅರ್ಧದಷ್ಟು ಕಡಿಮೆಗೊಳಿಸುತ್ತದೆ ಯು ಎಸ್ ಡಿ ಎ ನ ಒಂದು ಸಂಶೋಧನೆ ಈ ವಿಷಯವನ್ನು ಬಹಿರಂಗಪಡಿಸಿದ್ದು, ಕಲ್ಲಂಗಡಿ ಹಣ್ಣುಗಳು ರೆಫ್ರಿಜರೇಟರ್ ನ ಹೊರಗಿನ ಕೊಠಡಿಯ ತಾಪಮಾನದಲ್ಲಿ ಮನುಷ್ಯನ ಕಣ್ಣಿನ ದೃಷ್ಟಿ ಮತ್ತು ಆರೋಗ್ಯಕರ ಚರ್ಮದ ಹೊಳಪಿಗೆ ಉಪಯೋಗವಾಗುವಂತಹ ತಮ್ಮೊಳಗಿನ ಪೌಷ್ಟಿಕ ಸತ್ವಗಳಾದ ಬೀಟಾ-ಕ್ಯಾರೋಟಿನ್ ಎಂಬ ಅಂಶಗಳನ್ನು ದುಪ್ಪಟ್ಟು ಅಭಿವೃದ್ಧಿಪಡಿಸಿಕೊಳ್ಳುತ್ತವೆ.

  ರೆಫ್ರಿಜರೇಟರ್ ನಲ್ಲಿ ಬಿಟ್ಟಂತಹ ಕಲ್ಲಂಗಡಿ ಹಣ್ಣುಗಳು ಇಂತಹ ಶಕ್ತಿಯನ್ನು ಪಡೆದಿರುವುದಿಲ್ಲ. ಏಕೆಂದರೆ ಫ್ರಿಡ್ಜ್ ನಲ್ಲಿರುವ ತಣ್ಣನೆಯ ಗಾಳಿ ಆಂಟಿಆಕ್ಸಿಡೆಂಟ್ ಅಂಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಕೇವಲ ಹೆಚ್ಚಿದ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್ ನಲ್ಲಿ ಇಟ್ಟು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಪ್ಪಿಸಬಹುದು ಅಷ್ಟೇ.


 • ತುಳಸಿ

  ತುಳಸಿ ಒಂದು ಉಷ್ಣವಲಯದಲ್ಲಿ ಬೆಳೆಯುವ ಗಿಡವಾಗಿದ್ದು ಇದನ್ನು 4 ಡಿಗ್ರಿ ತಾಪಮಾನಕ್ಕಿಂತ ಕಡಿಮೆ ತಾಪಮಾನದಲ್ಲಿ ಇಟ್ಟರೆ ಬಹಳ ಬೇಗನೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಆದ್ದರಿಂದ ನಮ್ಮ ಸಾಮಾನ್ಯ ಕೊಠಡಿಯ ತಾಪಮಾನದಲ್ಲಿ ನೆರಳಿನ ವಾತಾವರಣದಲ್ಲಿ ಒಂದು ಗ್ಲಾಸ್ ನಲ್ಲಿ ನೀರು ತುಂಬಿ ತುಳಸಿಯ ಬೇರುಗಳನ್ನು ಅದರಲ್ಲಿ ಅದ್ದಿ ಗಿಡದ ಎಲೆಗಳನ್ನು ಮೇಲ್ಬಾಗಕ್ಕೆ ಬರುವಂತೆ ಇಡಬೇಕು. ತುಳಸಿ ಗಿಡದ ಮೇಲೆ ಜಿಪ್ ಟಾಪ್ ಪ್ಲಾಸ್ಟಿಕ್ ಚೀಲವನ್ನು ಕವರ್ ಮಾಡಿದರೆ ತುಳಸಿ ಗಿಡ ಆರಾಮವಾಗಿ ಗಾಳಿಯ ಸಂವಹನದೊಂದಿಗೆ ತೇವದಿಂದ ತಾಜಾ ಆಗಿರುತ್ತದೆ.


 • ಆಲೂಗಡ್ಡೆಗಳು

  ತೀರಾ ತಣ್ಣಗಿನ ತಾಪಮಾನ ಆಲೂಗಡ್ಡೆಯ ಸ್ಟಾರ್ಚ್ ಅಂಶವನ್ನು ಸಕ್ಕರೆಯ ಅಂಶಕ್ಕೆ ಪರಿವರ್ತನೆ ಮಾಡುತ್ತದೆ. ಇದು ಆಲೂಗಡ್ಡೆಗಳಲ್ಲಿ ಸಮಗ್ರ ವಿನ್ಯಾಸ ಮತ್ತು ಸ್ವಲ್ಪ ಸಿಹಿಯನ್ನು ಹೆಚ್ಚು ಮಾಡುತ್ತದೆ. ಸಂಶೋಧನೆಯ ಪ್ರಕಾರ ಆಲೂಗಡ್ಡೆಗಳು 7 ಡಿಗ್ರಿ ತಾಪಮಾನದಲ್ಲಿ ಚೆನ್ನಾಗಿರುತ್ತವೆ. ಆದರೆ ನಮ್ಮ ಮನೆಗಳ ರೆಫ್ರಿಜರೇಟರ್ ಗಳಲ್ಲಿ ನಾವು ಬೇರೆ ಆಹಾರಗಳನ್ನು ಗಮನದಲ್ಲಿಟ್ಟುಕೊಂಡು ಅದರ ತಾಪಮಾನವನ್ನು 2 ರಿಂದ 3 ಡಿಗ್ರಿಗಳಿಗೆ ಸೆಟ್ ಮಾಡಿರುತ್ತೇವೆ.

  ಆಲೂಗಡ್ಡೆಗಳನ್ನು ಬಹಳ ದಿನಗಳ ಕಾಲ ಹಾಳಾಗದಂತೆ ಇಡಬೇಕಾದರೆ ಪೇಪರ್ ಬ್ಯಾಗ್ ನ ಉಪಯೋಗ ಮಾಡಿಕೊಳ್ಳಬೇಕು. ಸ್ವಲ್ಪ ಬಿಸಿಲಿನಿಂದ ದೂರ ಇಟ್ಟರೆ ಒಳ್ಳೆಯದು. ಏಕೆಂದರೆ ಬಿಸಿಲು ಆಲೂಗಡ್ಡೆಗಳಲ್ಲಿ ಕ್ಲೋರೋಫಿಲ್ ಅಂಶವನ್ನು ಸೇರಿಸಿ ಹಸಿರು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ಇದರಿಂದ ಆಲೂಗಡ್ಡೆಯ ರುಚಿ ಸ್ವಲ್ಪ ಕಹಿಯಾಗಿ ಬದಲಾಗುತ್ತದೆ.


 • ಈರುಳ್ಳಿ

  ಈರುಳ್ಳಿಗಳು ತರಕಾರಿ ಗುಂಪಿಗೆ ಸೇರಿದ ಆಹಾರ ಪದಾರ್ಥಗಳಾಗಿದ್ದು, ಇವುಗಳ ತಾಜಾತನ ಗಾಳಿಯ ಮೇಲೆ ಅವಲಂಬಿತವಾಗಿರುತ್ತದೆ. ಈರುಳ್ಳಿಗಳಿಗೆ ಗಾಳಿಯ ಸಂಪರ್ಕ ಹೆಚ್ಚಾದಷ್ಟು ಈರುಳ್ಳಿಗಳ ಆರೋಗ್ಯ ಚೆನ್ನಾಗಿರುತ್ತದೆ. ಈರುಳ್ಳಿಗಳನ್ನು ಪ್ಯಾಂಟ್ರಿ ಬ್ಯಾಸ್ಕೆಟ್ ನಲ್ಲಿ ತೂತುಗಳನ್ನು ಒಳಗೊಂಡ ಪೇಪರ್ ಬ್ಯಾಗ್ ನಲ್ಲಿ ಇಡಿ.

  ಆದರೆ ಯಾವುದೇ ಕಾರಣಕ್ಕೂ ಆಲೂಗಡ್ಡೆಗಳ ಬಳಿ ಇಡಬೇಡಿ. ಏಕೆಂದರೆ ಈರುಳ್ಳಿಗಳು ಒಂದು ಬಗೆಯ ಅನಿಲವನ್ನು ಹೊರಸೂಸುತ್ತವೆ ಮತ್ತು ತಮ್ಮಲ್ಲಿನ ತೇವಾಂಶದಿಂದ ಆಲೂಗಡ್ಡೆಗಳನ್ನು ಸುಲಭವಾಗಿ ಕೆಟ್ಟು ಹೋಗುವಂತೆ ಮಾಡುತ್ತವೆ. ಹೆಚ್ಚಿದ ಈರುಳ್ಳಿಯನ್ನು ಬಹಳ ಹೊತ್ತಿನ ತನಕ ಇಡಬೇಡಿ. ನೀವು ಬಳಸುವುದು ತಡವಾದರೆ ಅದನ್ನು ಒಂದು ಪ್ಲೇಟ್ ನಲ್ಲಿ ಹಾಕಿ ರೆಫ್ರಿಜರೇಟರ್ ನಲ್ಲಿ ಇಡಿ.


 • ಟೊಮೆಟೊಗಳು

  ನಮ್ಮ ಮನೆಯ ಸಾಂಬಾರ್ ಆಹಾರಗಳಿಗೆ ಏನಿಲ್ಲ ಎಂದರೂ ಟಮೋಟೊಗಳು ಇರಲೇಬೇಕು. ಇಂತಹ ಮೆತ್ತಗಿನ ಅಡುಗೆಗೆ ತನ್ನದೇ ರುಚಿಯ ಮೆರುಗಿನಿಂದ ಸ್ವಾದವನ್ನು ಹೆಚ್ಚಿಸುವಂತಹ ಟೊಮೆಟೊಗಳನ್ನು ಇರುವಷ್ಟು ದಿನವಾದರೂ ಚೆನ್ನಾಗಿ ಕಾಪಾಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ.

  ರೆಫ್ರಿಜರೇಟರ್ ನಲ್ಲಿ ಟೊಮೆಟೊಗಳನ್ನು ಸ್ಟೋರ್ ಮಾಡಿದರೆ ತಣ್ಣನೆಯ ಗಾಳಿ ಟೊಮೆಟೊಗಳ ಒಳಗಿನ ರಾಸಾಯನಿಕ ಚಲನೆಗಳನ್ನು ಮಾರ್ಪಾಡು ಮಾಡುತ್ತದೆ ಎಂದು ಹೇಳುತ್ತಾರೆ. ಇದರಿಂದ ಟೊಮೆಟೊಗಳ ರುಚಿ ಬಹಳ ಬೇಗನೆ ಹಾಳಾಗುತ್ತದೆ. ಕೇವಲ ನಿಮ್ಮ ಅಡುಗೆ ಮನೆಯ ಸೆಲ್ಫ್ ಗಳಲ್ಲಿ ಜಿರಲೆಗಳು ಹೋಗದೆ ಇರುವ ಜಾಗದಲ್ಲಿ ಸ್ಟೋರ್ ಮಾಡಿದರೆ ಟೊಮೆಟೊಗಳು ಹಾಳಾಗುವುದಿಲ್ಲ.


 • ಕಾಫಿ ಬೀಜಗಳು ಅಥವಾ ಪುಡಿ

  ನಿಮ್ಮ ರೆಫ್ರಿಜರೇಟರ್ ನಲ್ಲಿನ ಹೆಚ್ಚಿನ ತೇವಾಂಶ ಕಾಫಿ ಪುಡಿಯನ್ನು ಬಹಳ ಬೇಗನೆ ಕೊಳೆಯುವಂತೆ ಮಾಡುತ್ತದೆ. ಅಂದರೆ ನೀವು ಬೆಳಗಿನ ಸಮಯದಲ್ಲಿ ಆಸ್ವಾದಿಸುವ ಕಾಫಿಯ ರುಚಿ ನಿಮಗೆ ಸಿಗುವುದಿಲ್ಲ.

  ಜೊತೆಗೆ ನೀವು ಫ್ರಿಡ್ಜ್ ನ ಬಾಗಿಲನ್ನು ಆಗಾಗ ತೆಗೆದು ಹಾಕುವುದರಿಂದ ಅದರೊಳಗಿನ ತಾಪಮಾನ ಬದಲಾಗುತ್ತಲೇ ಇರುತ್ತದೆ. ಇದರಿಂದ ಕಾಫಿ ಪುಡಿ ಇನ್ನಷ್ಟು ತೇವವನ್ನು ತನ್ನಲ್ಲಿ ಹಿಡಿದಿಟ್ಟುಕೊಂಡು ಗಟ್ಟಿಯಾಗಿ ಕಲ್ಲಿನ ರೂಪ ತಾಳುವಂತೆ ಮಾಡುತ್ತದೆ. ಕಾಫಿ ಬೀಜಗಳಿಗೂ ಇದೇ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ಕಾಫಿ ಬೀಜಗಳನ್ನು ಸ್ಟೋರ್ ಮಾಡುವ ಇರಾದೆ ನಿಮ್ಮದಾಗಿದ್ದರೆ ಅದನ್ನು ಒಂದು ಗಾಳಿ ರಹಿತ ಕಂಟೈನರ್ ನಲ್ಲಿ ಹಾಕಿ ಪ್ಯಾಂಟ್ರಿಯಲ್ಲಿ ಎತ್ತಿಡಿ.


 • ಬೆಳ್ಳುಳ್ಳಿ

  ಬೆಳ್ಳುಳ್ಳಿ ಎಸಳುಗಳಿಗೆ ಸೂಕ್ತವಾದ ತಾಪಮಾನ ಎಂದರೆ ಅದು 15 ರಿಂದ 18 ಡಿಗ್ರಿ ಸೆಲ್ಸಿಯಸ್. ಬೆಳ್ಳುಳ್ಳಿಗಳನ್ನು ಬಹಳ ದಿನಗಳ ಕಾಲ ಕೆಡದಂತೆ ಇಡಬೇಕಾದರೆ ಒಂದು ಗಾಳಿಯಾಡುವ ಕಂಟೈನರ್ ನಲ್ಲಿ ಹಾಕಿಡಿ. ಒಂದು ತಂಪಾದ ಜಾಗದಲ್ಲಿ ಈ ಬೆಳ್ಳುಳ್ಳಿ ಹಾಕಿದ ಕಂಟೈನರ್ ಅನ್ನು ಇಡುವುದರಿಂದ ಬೆಳ್ಳುಳ್ಳಿಯ ತೇವಾಂಶ ಹಾಳಾಗುವುದಿಲ್ಲ


 • ಸಾಸ್

  ನೀವು ಶಾಪಿಂಗ್ ಸ್ಟಾಲ್ ಗಳಲ್ಲಿ ತೆಗೆದುಕೊಂಡು ಬಂದ ವಿನೆಗರ್ ಮತ್ತು ಫುಡ್ ಪ್ರೆಸೆರ್ವಾಟಿವ್ಸ್ ನಂತಹ ವಸ್ತುಗಳು ಜೊತೆಗೆ ಸಾಸ್ ನಂತಹ ಆಹಾರ ಪದಾರ್ಥಗಳು ಪ್ಯಾಂಟ್ರಿ ಬ್ಯಾಸ್ಕೆಟ್ ನಲ್ಲಿ ಹಾಳಾಗುವುದಿಲ್ಲ.

  ರೆಫ್ರಿಜರೇಟರ್ ನಲ್ಲಿ ಇವುಗಳನ್ನು ಇಟ್ಟರೆ ಇವುಗಳ ಮಸಾಲೆ ಸುವಾಸನೆಗಳು ತಣ್ಣಗಿನ ಗಾಳಿಗೆ ಹುದುಗಿದಂತಾಗಿ ಬಿಸಿ ಕೂಡ ಇಲ್ಲವಾಗುತ್ತದೆ. ಆದರಿಂದ ಇಂತಹ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್ ನ ಹೊರಗಡೆ ಇಟ್ಟರೆ ಸೂಕ್ತ.


 • ಜೇನು ತುಪ್ಪ

  ಈ ನಿಮ್ಮ ನೆಚ್ಚಿನ ಸಿಹಿಯಾದ ದ್ರವ ಎಂದಿಗೂ ರೆಫ್ರಿಜರೇಟರ್ ನ ಒಳಗ್ ಇರಬಾರದು. ಏಕೆಂದರೆ ತಾಪಮಾನ ಕಡಿಮೆಯಾದಷ್ಟು ಜೇನುತುಪ್ಪ ಗಟ್ಟಿಯಾಗುತ್ತದೆ. ಆದ್ದರಿಂದ ನಮ್ಮ ಸಾಮಾನ್ಯ ಕೊಠಡಿ ತಾಪಮಾನದಲ್ಲಿ ಜೇನು ತುಪ್ಪವನ್ನು ಯಾವುದೇ ಅನುಮಾನವಿಲ್ಲದೆ ಇಡಬಹುದು ಮತ್ತು ಬೇಕೆಂದಾಗ ಅದೇ ತಾಜಾತನವಿರುವ ಹಸಿ ಜೇನುತುಪ್ಪವನ್ನು ಉಪಯೋಗಿಸಿಕೊಳ್ಳಬಹುದು.

  ಕಟ್ ಮಾಡಿದ ಬ್ರೆಡ್ ಪೀಸ್
  ಸಾಮಾನ್ಯವಾಗಿ ಕತ್ತರಿಸಿದ ಬ್ರೆಡ್ ತುಂಡುಗಳ ಮೇಲೆ ಫಂಗಸ್ ಬೆಳವಣಿಗೆ ಉಂಟಾಗುತ್ತದೆ. ಆದರೆ ರೆಫ್ರಿಜರೇಟರ್ ನಲ್ಲಿ ಬ್ರೆಡ್ ಪೀಸ್ ಗಳನ್ನು ಇಟ್ಟರೆ ಈ ಸಮಸ್ಯೆ ಇರುವುದಿಲ್ಲ.

  ಇದರ ಜೊತೆಯಲ್ಲಿ ಬ್ರೆಡ್ ಪೀಸ್ ಗಳ ಮೇಲಿನ ಪದರವನ್ನು ಒಣಗುವಂತೆ ಮಾಡುತ್ತದೆ. ಇದರ ಬದಲು ಮಿಕ್ಕುಳಿದಂತಹ ಬ್ರೆಡ್ ಪೀಸ್ ಗಳನ್ನು ಫ್ರೀಜರ್ನಲ್ಲಿ ಇಟ್ಟು ತಿನ್ನುವ ಮೊದಲು ಕೊಠಡಿಯ ತಾಪಮಾನಕ್ಕೆ ತಂದು ನಂತರ ತಿನ್ನಬಹುದು. ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಬ್ರೆಡ್ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರೆ, ಫ್ರಿಡ್ಜ್ ನ ಹೊರಗಡೆ ಸ್ವಲ್ಪ ಗಾಳಿಯಾಡುವ ವಾತಾವರಣದಲ್ಲಿ ಅಂದರೆ ನಿಮ್ಮ ಡೈನಿಂಗ್ ಟೇಬಲ್ ಮೇಲೆ ಇಡಬಹುದು.


 • ಅಡಿಕೆ

  ಇವುಗಳ ಸುವಾಸನೆಯನ್ನು ಸದಾ ಕಾಪಾಡಿಕೊಳ್ಳಬೇಕಾದರೆ ಗಾಳಿಯಾಡದ ಒಂದು ಕಂಟೈನರ್ ನಲ್ಲಿ ಪ್ಯಾಂಟ್ರಿ ಬಾಕ್ಸ್ ಅಥವಾ ಕಬೋರ್ಡ್ ನಲ್ಲಿ ಇಡಬಹುದು. ರೆಫ್ರಿಜರೇಟರ್ ನಲ್ಲಿ ಅಡಿಕೆಗಳನ್ನು ಸ್ಟೋರ್ ಮಾಡಿದರೆ ಮೇಲಿನ ಪದರಗಳು ರೆಫ್ರಿಜರೇಟರ್ ನ ವಾಸನೆಯನ್ನು ಹೀರಿಕೊಂಡು ಸೇವಿಸುವಾಗ ಸಹ ಅದೇ ವಾಸನೆಯನ್ನು ಹೊರಸೂಸುತ್ತವೆ. ಜೊತೆಗೆ ಫ್ರಿಡ್ಜ್ ನಲ್ಲಿನ ಹೆಚ್ಚಿನ ತಂಪಾದ ವಾತಾವರಣ ಅಡಿಕೆ ಸುವಾಸನೆಯನ್ನು ಇಲ್ಲವಾಗಿಸುತ್ತದೆ.


 • ಕಟ್ ಮಾಡಿದ ಬ್ರೆಡ್ ಪೀಸ್

  ಸಾಮಾನ್ಯವಾಗಿ ಕತ್ತರಿಸಿದ ಬ್ರೆಡ್ ತುಂಡುಗಳ ಮೇಲೆ ಫಂಗಸ್ ಬೆಳವಣಿಗೆ ಉಂಟಾಗುತ್ತದೆ. ಆದರೆ ರೆಫ್ರಿಜರೇಟರ್ ನಲ್ಲಿ ಬ್ರೆಡ್ ಪೀಸ್ ಗಳನ್ನು ಇಟ್ಟರೆ ಈ ಸಮಸ್ಯೆ ಇರುವುದಿಲ್ಲ.

  ಇದರ ಜೊತೆಯಲ್ಲಿ ಬ್ರೆಡ್ ಪೀಸ್ ಗಳ ಮೇಲಿನ ಪದರವನ್ನು ಒಣಗುವಂತೆ ಮಾಡುತ್ತದೆ. ಇದರ ಬದಲು ಮಿಕ್ಕುಳಿದಂತಹ ಬ್ರೆಡ್ ಪೀಸ್ ಗಳನ್ನು ಫ್ರೀಜರ್ನಲ್ಲಿ ಇಟ್ಟು ತಿನ್ನುವ ಮೊದಲು ಕೊಠಡಿಯ ತಾಪಮಾನಕ್ಕೆ ತಂದು ನಂತರ ತಿನ್ನಬಹುದು. ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಬ್ರೆಡ್ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರೆ, ಫ್ರಿಡ್ಜ್ ನ ಹೊರಗಡೆ ಸ್ವಲ್ಪ ಗಾಳಿಯಾಡುವ ವಾತಾವರಣದಲ್ಲಿ ಅಂದರೆ ನಿಮ್ಮ ಡೈನಿಂಗ್ ಟೇಬಲ್ ಮೇಲೆ ಇಡಬಹುದು.


 • ಅವಕ್ಯಾಡೊ ಗಳು

  ತನ್ನಲ್ಲಿ ಕ್ರೀಮ್ ಹೊಂದಿದ ಈ ಹಸಿರು ಹಣ್ಣು ಕೊಠಡಿಯ ತಾಪಮಾನದಲ್ಲಿ ಬಹಳಷ್ಟು ತಾಜಾ ಆಗಿರುತ್ತದೆ. ಇದು ಗಟ್ಟಿಯಾದಷ್ಟು ಅಥವಾ ಹಣ್ಣಾದಷ್ಟು ರುಚಿ ಹೆಚ್ಚಿಸುತ್ತದೆ. ಆದ್ದರಿಂದ ರೆಫ್ರಿಜರೇಟರ್ ನಲ್ಲಿ ಅವಕಾಡೊ ಕಾಯಿಗಳು ಮತ್ತು ಹಣ್ಣುಗಳು ಸುಲಭವಾಗಿ ತಮ್ಮ ತಾಜಾತನವನ್ನು ಕಾಪಾಡಿಕೊಳ್ಳುತ್ತವೆ.


 • ಆಲಿವ್ ಆಯಿಲ್

  ಅಡುಗೆಗಾಗಿ ಬಳಸುವ ಆಲಿವ್ ಆಯಿಲ್ ತಂಪಾದ ವಾತಾವರಣದಲ್ಲಿ ಮತ್ತು ಬೆಳಕು ರಹಿತ ಪ್ರದೇಶದಲ್ಲಿ ಇದ್ದರೆ ಸೂಕ್ತ. ರೆಫ್ರಿಜರೇಟರ್ ನಲ್ಲಿ ಇದು ಗಟ್ಟಿಯಾಗಿ ಬೆಣ್ಣೆಯ ರೂಪಕ್ಕೆ ಮಾರ್ಪಾಡಾಗುತ್ತದೆ ಆದ್ದರಿಂದಲೇ ಸೂಪರ್ ಮಾರ್ಕೆಟ್ ಗಳಲ್ಲಿ ತಾಜಾ ಆಲಿವ್ ಗಳು ಲಭ್ಯವಾಗುವುದಿಲ್ಲ.


 • ಸ್ಟೋನ್ ಫ್ರೂಟ್

  ಪೀಚ್, ಪ್ಲಮ್, ನೆಕ್ಟರಿನ್ ಮತ್ತು ಏಪ್ರಿಕಾಟ್ ಗಳು ರೆಫ್ರಿಜರೇಟರ್ ಗಿಂತ ಕೊಠಡಿಯ ತಾಪಮಾನದಲ್ಲಿ ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಸರಿಯಾದ ರೀತಿಯಲ್ಲಿ ಹಣ್ಣಾಗುತ್ತವೆ.


 • ಸೌತೆಕಾಯಿಗಳು

  ಸೌತೆಕಾಯಿಗಳು ನಮಗೆಲ್ಲ ಗೊತ್ತಿರುವ ಹಾಗೆ ಹೆಚ್ಚಿನ ನೀರಿನ ಅಂಶ ಹೊಂದಿದ ತರಕಾರಿ ಪದಾರ್ಥಗಳು. ಇವುಗಳನ್ನು ರೆಫ್ರಿಜರೇಟರ್ ನಲ್ಲಿ ಇಟ್ಟರೆ ಹಾಳಾಗುವುದಿಲ್ಲ ಎಂಬ ಭಾವನೆಯಿಂದ ನಾವು ಅಂಗಡಿಯಿಂದ ತಂದ ತಕ್ಷಣ ಫ್ರಿಜ್ಜಿನಲ್ಲಿ ಇಡುತ್ತೇವೆ ಆದರೆ ಇದು ತಪ್ಪು ರೆಫ್ರಿಜರೇಟರ್ ನ ತಂಪಾದ ವಾತಾವರಣದಿಂದ ಹೆಚ್ಚಿನ ನೀರಿನ ಅಂಶ ಸೌತೆಕಾಯಿ ಗಳಿಗೆ ಸೇರಿಕೊಂಡು ಇವುಗಳ ಇನ್ನಷ್ಟು ಹಾಳಾಗುತ್ತವೆ.


 • ದಪ್ಪಮೆಣಸಿನಕಾಯಿ

  ಇವುಗಳನ್ನು ರೆಫ್ರಿಜರೇಟರ್ ನಲ್ಲಿ ಇಟ್ಟರೆ ಖಂಡಿತ ಇನ್ನೊಮ್ಮೆ ನೀವು ಅಡುಗೆಗೆ ಬಳಸಿದಾಗ ಯಾವುದೇ ಮಸಾಲೆ ರುಚಿ ಲಭ್ಯವಾಗುವುದಿಲ್ಲ. ಅತ್ಯಂತ ಕಡಿಮೆ ತಾಪಮಾನ ಕ್ಯಾಪ್ಸಿಕಂ ಗಳ ಕುರುಕಲುತನವನ್ನು ಹಾಳು ಮಾಡುತ್ತದೆ.


 • ಉಪ್ಪಿನಕಾಯಿ

  ಉಪ್ಪಿನಕಾಯಿಗಳನ್ನು ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ನಲ್ಲಿ ಇಡಬೇಡಿ. ಏಕೆಂದರೆ ಅವುಗಳು ಬಹಳ ಕಾಲ ಉಳಿಯುವಂತೆ ಮತ್ತು ತಮ್ಮ ರುಚಿಯನ್ನು ಉಳಿಸಿಕೊಳ್ಳುವಂತೆ ತಯಾರು ಮಾಡಿರುವುದರಿಂದ ಸಾಮಾನ್ಯ ಕೊಠಡಿ ತಾಪಮಾನದಲ್ಲಿ ಆರಾಮವಾಗಿ ಇಡಬಹುದು ಮತ್ತು ಬೇಕೆಂದಾಗ ಸೇವಿಸಬಹುದು.
ನಮ್ಮ ಮನೆಯ ರೆಫ್ರೆಜರೇಟರ್ ನಮ್ಮ ಅಳಿದುಳಿದ ಆಹಾರ ಪದಾರ್ಥಗಳನ್ನು ಹಾಳಾಗದಂತೆ ಕಾಪಾಡಿ ಇನ್ನೊಮ್ಮೆ ಸೇವನೆ ಮಾಡಲು ನಮಗೆ ಅವಕಾಶ ಮಾಡಿ ಕೊಡುತ್ತದೆ ನಿಜ. ಹಾಗೆಂದು ಸಿಕ್ಕ ಸಿಕ್ಕ ಎಲ್ಲಾ ಆಹಾರ ಪದಾರ್ಥಗಳನ್ನೂ ಫ್ರಿಡ್ಜ್ ನಲ್ಲಿ ಇಡಬಹುದೆಂದು ಅಂದುಕೊಂಡಿದ್ದರೆ, ಅದು ತಪ್ಪು ಭಾವನೆ.

ಏಕೆಂದರೆ ಕೆಲವೊಂದು ಆಹಾರಗಳು ಫ್ರಿಡ್ಜ್ ನಲ್ಲಿ ಇರುವುದಕ್ಕಿಂತ ಹೊರಗೆ ಇದ್ದರೆ ತಿನ್ನಲು ರುಚಿ ಮತ್ತು ಬಹಳ ಕಾಲ ಉಳಿಯುತ್ತವೆ. ಈ ಲೇಖನದಲ್ಲಿ ಅಂತಹ ಕೆಲವೊಂದರ ಪಟ್ಟಿ ಮತ್ತು ಅವುಗಳ ಸಂರಕ್ಷಣೆ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿನ ಕಾಲ ಹಾಳಾಗದಂತೆ ಇಟ್ಟುಕೊಳ್ಳಲು ಕೆಲವೊಂದು ಟ್ರಿಕ್ಸ್ ಗಳನ್ನು ನೀಡಲಾಗಿದೆ.

   
 
ಟೆಕ್ನಾಲಜಿ