Back
Home » ಸುದ್ದಿ
ಅಮಿತ್ ಶಾ ಕರ್ನಾಟಕ ಭೇಟಿ; ಎಚ್‌ಡಿಕೆ ಸರಣಿ ಟ್ವೀಟ್‌
Oneindia | 17th Jan, 2020 09:48 PM
 • ಪರಿಹಾರ ನಿರೀಕ್ಷೆಯಲ್ಲಿ 'ಜಾಗರಣೆ'

  "ಬೀದಿಗೆ ಬಿದ್ದಿರುವ ರಾಜ್ಯದ ನೆರೆ ಸಂತ್ರಸ್ತರು ಸರ್ಕಾರದ ಪರಿಹಾರ ನಿರೀಕ್ಷೆಯಲ್ಲಿ 'ಜಾಗರಣೆ' ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನ ಜಾಗರಣ ಅಭಿಯಾನಕ್ಕೆ ಆಗಮಿಸುತ್ತಿರುವುದು ಚೋದ್ಯವೇ ಸರಿ" ಎಂದು ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.


 • ಹಣಕಾಸು ನೆರವಿನ ಬಗ್ಗೆ

  "ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಿರುವ ಹಣಕಾಸು ನೆರವಿನ ಬಗ್ಗೆ ತುಟಿಬಿಚ್ಚದೆ, ನೆರೆ ಸಂತ್ರಸ್ತರ ಗೋಳು ಕೇಳದ ಕೇಂದ್ರ-ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಅಭಿಯಾನ ನಡೆಸುವ ಮೂಲಕ ಸ್ವಯಂಕೃತ ಅಪರಾಧ ಮುಚ್ಚಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡು" ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.


 • ತಕ್ಷಣ ಸ್ಪಂದಿಸಲು ಮುಂದಾಗಲಿ

  "ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ನಾಳಿನ ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ" ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.


 • ಹುಬ್ಬಳ್ಳಿಗೆ ಭೇಟಿ

  ಶನಿವಾರ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹುಬ್ಬಳ್ಳಿಯಲ್ಲಿ ಜನ ಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಅಮಿತ್ ಶಾ ಹುಬ್ಬಳ್ಳಿಗೂ ಆಗಮಿಸಲಿದ್ದು, ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರು, ಜನವರಿ 17 : "ಬೀದಿಗೆ ಬಿದ್ದಿರುವ ರಾಜ್ಯದ ನೆರೆ ಸಂತ್ರಸ್ತರು ಸರ್ಕಾರದ ಪರಿಹಾರ ನಿರೀಕ್ಷೆಯಲ್ಲಿ ಜಾಗರಣೆ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನ ಜಾಗರಣ ಅಭಿಯಾನಕ್ಕೆ ಆಗಮಿಸುತ್ತಿರುವುದು ಚೋದ್ಯವೇ ಸರಿ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 18ರ ಶನಿವಾರ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಅಮಿತ್ ಶಾ ಆಗಮನಕ್ಕೂ ಒಂದು ದಿನ ಮೊದಲು ಎಚ್. ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಮರಗಳಿಗೆ ಕೊಡಲಿ: ಆಕ್ರೋಶ

ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಬಗ್ಗೆ ಕುಮಾರಸ್ವಾಮಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರವನ್ನು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಅಮಿತ್ ಶಾ ಆಗಮನಕ್ಕೂ ಮುನ್ನ ಚರ್ಚೆ ಹುಟ್ಟು ಹಾಕಿದ್ದಾರೆ.

ಅಮಿತ್ ಶಾ ರಾಜ್ಯಕ್ಕೆ ಬಂದೋದ ಮೇಲೆಯೇ ಸಂಪುಟ ವಿಸ್ತರಣೆ: ಬಿಎಸ್ವೈ

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹುಬ್ಬಳ್ಳಿಯಲ್ಲಿ ಜನ ಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿದೆ. ಇದನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ. ನೆರೆ ಪರಿಹಾರದ ಬಗ್ಗೆ ಮಾತನಾಡಲಿದ್ದಾರೆಯೇ? ಕಾದು ನೋಡಬೇಕು.

ಪೌರತ್ವ ತಿದ್ದುಪಡಿ ಕಾಯ್ದೆ: ಗಾಳಿಸುದ್ದಿ ಗುಟ್ಟು ರಟ್ಟುಗೊಳಿಸಿದ ಮೋದಿ

   
 
ಟೆಕ್ನಾಲಜಿ