Back
Home » ಸುದ್ದಿ
ರೆಡ್ಡಿ ವಿವಾದಾತ್ಮಕ ಹೇಳಿಕೆ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಶ್ರೀರಾಮುಲು
Oneindia | 17th Jan, 2020 08:35 PM

ಬಳ್ಳಾರಿ, ಜನವರಿ 17: ಜನವರಿ ೩ ರಂದು ಬಳ್ಳಾರಿ ಬಿಜೆಪಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮುಸ್ಲಿಂರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಜೊತೆಗೆ ಇಲ್ಲಿನ ಸ್ಥಳೀಯ ನಾಯಕರಿಗೆ ಸಾಕಷ್ಟು ಇರಿಸು ಮುರಿಸು ತಂದಿದೆ. ಈ ವಿವಾದವನ್ನು ತೆರೆ ಎಳೆಯಲು ಸಚಿವ ಬಿ.ಶ್ರೀರಾಮುಲು ಮುಂದಾಗಿದ್ದಾರೆ.

ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದ ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ಅಂದು ಮಾತನಾಡಿದ ಮಾತುಗಳು ಹಿಂದೂ ಮುಸ್ಲಿಂರ ಮಧ್ಯೆ ದೊಡ್ಡ ಕಂದಕ ನಿರ್ಮಾಣ ಮಾಡಿದೆ. ಇದೇ ಕಾರಣಕ್ಕೆ ಜಮೀರ್ ಅಹ್ಮದ್ ಕಾನ್ ಬಳ್ಳಾರಿಗೆ ಬಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ವಿವಾದಾತ್ಮಕ ಹೇಳಿಕೆ: ಉಲ್ಟಾ ಹೊಡೆದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿಯ ಪ್ರಭಾವಿ ನಾಯಕ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಸೋಮಶೇಖರ್ ರೆಡ್ಡಿ ಅಂದು ಮಾತನಾಡಿದ್ದು ಸಾಕಷ್ಟು ಸಂಕಷ್ಟ ತಂದೊಡ್ಡಿದೆ. ಇದೇ ಕಾರಣಕ್ಕೆ ಶ್ರೀರಾಮುಲು ಅವರು ನಗರದಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಾರೆ.

ನಗರದ ಬಹುತೇಕ ಮುಸ್ಲಿಂ ಮುಖಂಡರನ್ನು ಕರೆದು ಗೌಪ್ಯವಾಗಿ ಸಭೆ ಮಾಡಿ, ಸೋಮಶೇಖರ್ ರೆಡ್ಡಿ ಅವರ ಮಾತನ್ನು ಸಿರಿಯಸ್ ಆಗಿ ತೆಗೆದುಕೊಳ್ಳಬೇಡಿ. ಈ ಬಗ್ಗೆ ನಾ ಅವರೊಂದಿಗೆ ಮಾತನಾಡುವೆ ಎಂದು ಭರವಸೆ ನೀಡಿದ್ದಾರೆ.

ರಾಜಕಾರಣಿಗಳು ಏನೇ ಮಾಡಿದರೂ ಅದರ ಹಿಂದೆ ಚುನಾವಣೆ ಲೆಕ್ಕಾಚಾರ ಇದ್ದೇ ಇರುತ್ತದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರ ಶ್ರೀರಾಮುಲು ಅವರಿಗೆ ರಾಜಕೀಯವಾಗಿ ಮರು ಜೀವ ಕೊಟ್ಟ ಕ್ಷೇತ್ರ. ಸದ್ಯ ಈಗ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿ ಬಿ.ನಾಗೇಂದ್ರ ಇದ್ದಾರೆ.

ಇನ್ನು ನಾಗೇಂದ್ರ ಅವರು ಬಿಜೆಪಿ ಬರುವುದು ಬಹುತೇಕ ಖಚಿತವಾಗಿದೆ. ಮುಂಬರುವ ಚುನಾವಣೆಯಲ್ಲಿ ನಾಗೇಂದ್ರ ಅವರು ಬಿಜೆಪಿಯಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ ಗ್ರಾಮೀಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರ ಸಂಖ್ಯೆ ಹೆಚ್ಚಿದೆ.

ಸಿಎಎ ಬೆಂಬಲಿಸಿ ರ‍್ಯಾಲಿ: ನಖ್ರಾ ಮಾಡಿದರೆ ಸರಿಯಿರೋಲ್ಲ, ರೊಚ್ಚಿಗೇಳಬೇಕಾಗುತ್ತೆ

ಒಂದು ವೇಳೆ ಬಿಜೆಪಿಯಿಂದ ನಾಗೇಂದ್ರ ಅವರು ಸ್ಪರ್ಧೆ ಮಾಡಿದರೆ ಅವರಿಗೆ ಮುಸ್ಲಿಂ ಮತದಾರರು ಬೇಕೇ ಬೇಕು. ಹೀಗಾಗಿ ನಾಗೇಂದ್ರ ಅವರಿಗೆ ತಮ್ಮ ಮುಂದಿನ ರಾಜಕೀಯ ಚಿಂತೆ ಉಂಟಾಗಿದೆ. ಇತ್ತ ಗಾಲಿ ಸೋಮಶೇಖರ್ ರೆಡ್ಡಿ ಅವರನ್ನು ೧೦ ದಿನಗಳಲ್ಲಿ ಬಂಧನ ಮಾಡದೇ ಹೋದಲ್ಲಿ ಬಳ್ಳಾರಿಗೆ ಮತ್ತೆ ಬರುವೆ ಅಂತಾ ಕಾಂಗ್ರೆಸ್ ನ ಜಮೀರ್ ಅಹ್ಮದ್ ಅವರು ಎಚ್ಚರಿಕೆ ನೀಡಿದ್ದಾರೆ.

ಆದರೆ ಸೋಮಶೇಖರ್ ರೆಡ್ಡಿ ಅವರು ನಾ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲಾ ಅಂತಾ ಪಟ್ಟು ಹಿಡಿದಿದ್ದಾರೆ. ಸಚಿವ ಶ್ರೀರಾಮುಲು ಅವರು ರೆಡ್ಡಿ ಮಾಡಿದ ಡ್ಯಾಮೇಜ್ ನ್ನು ಕಂಟ್ರೋಲ್‌ ಮಾಡವುದೇ ಕೆಲಸ ಎಂಬಂತೆ ಮುಸ್ಲಿಂ ಮುಖಂಡರನ್ನು ಕರೆಸಿ ಗುಪ್ತ ಸಭೆ ನಡೆಸಿದ್ದಾರೆ.

   
 
ಟೆಕ್ನಾಲಜಿ