Back
Home » ಸಿನಿ ಸಮಾಚಾರ
ಆಂಜನೇಯನ ಅವತಾರವೆತ್ತಲು ಮಾಂಸಾಹಾರ ತ್ಯಜಿಸಿದ್ದ 'ರಾಬರ್ಟ್' ದರ್ಶನ್.!
Oneindia | 17th Jan, 2020 04:08 PM
 • ಮಾಂಸಾಹಾರ ತ್ಯಜಿಸಿದ್ದ ದರ್ಶನ್

  'ರಾಬರ್ಟ್' ಚಿತ್ರದಲ್ಲಿ ಆಂಜನೇಯ ವೇಷ ಧರಿಸಲು ನಟ ದರ್ಶನ್ ಮಾಂಸಾಹಾರ ತ್ಯಜಿಸಿದ್ದರು. 'ರಾಬರ್ಟ್' ಚಿತ್ರದಲ್ಲಿ ರಾಮ ಮತ್ತು ಆಂಜನೇಯನ ಸನ್ನಿವೇಶ ಬಹಳ ಮುಖ್ಯವಾದದ್ದು. ಇದರ ಚಿತ್ರೀಕರಣ ಎಂಟು ದಿನಗಳ ಕಾಲ ನಡೆದಿದ್ದು, ಆ ಎಂಟೂ ದಿನಗಳಲ್ಲಿ ಮಾಂಸಾಹಾರವನ್ನು ದರ್ಶನ್ ಮುಟ್ಟಿರಲಿಲ್ಲ.

  'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?


 • ಬೃಹತ್ ಸೆಟ್ ನಿರ್ಮಾಣ.!

  'ರಾಬರ್ಟ್' ಸಿನಿಮಾದಲ್ಲಿ ಹೈಲೈಟ್ ಆಗಿರುವ ರಾಮ-ಹನುಮನ ಸನ್ನಿವೇಶಕ್ಕಾಗಿ ರಾಮ ಮತ್ತು ರಾವಣನ ಬೃಹತ್ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ನೂರಾರು ಡ್ಯಾನ್ಸರ್ಸ್ ಮತ್ತು ಜೂನಿಯರ್ ಆರ್ಟಿಸ್ಟ್ ಗಳು ಈ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ. ಅಚ್ಚರಿ ಅಂದ್ರೆ, ಈ ಸನ್ನಿವೇಶಕ್ಕಾಗಿ ಎಲ್ಲರೂ ಸೆಟ್ ನಲ್ಲಿ ಮಾಂಸಾಹಾರ ಸೇವಿಸುವುದನ್ನು ತ್ಯಜಿಸಿದ್ದರು.


  'ರಾಬರ್ಟ್' ಸಿನಿಮಾದ ಪುಟ್ಟ ರಾಮನ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿ


 • ನಿರ್ಮಾಪಕ ಏನಂತಾರೆ.?

  ''ಆ ಸನ್ನಿವೇಶ ತುಂಬಾ ಮುಖ್ಯವಾಗಿದ್ದು, ರಾಮ-ಆಂಜನೇಯನ ಮೇಲಿನ ಭಕ್ತಿಯಿಂದ ಸೆಟ್ ನಲ್ಲಿ ಮಾಂಸಾಹಾರ ಸೇವಿಸದಂತೆ ಎಲ್ಲರಿಗೂ ಸೂಚಿಸಲಾಗಿತ್ತು. ದರ್ಶನ್ ಕೂಡ 8 ದಿನ ನಾನ್ ವೆಜ್ ತಿಂದಿರಲಿಲ್ಲ. ಡ್ಯಾನ್ಸರ್ಸ್ ಮತ್ತು ಜೂನಿಯರ್ ಆರ್ಟಿಸ್ಟ್ ಗಳಿಗೂ ಸೆಟ್ ನಲ್ಲಿ ನಾನ್ ವೆಜ್ ತಿನ್ನದಂತೆ ಸೂಚನೆ ನೀಡಲಾಗಿತ್ತು'' ಅಂತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್.


 • ಸದ್ಯದಲ್ಲೇ ಡಬ್ಬಿಂಗ್ ಶುರು

  'ರಾಬರ್ಟ್' ಚಿತ್ರದ ಶೂಟಿಂಗ್ ಈಗ ಆಲ್ಮೋಸ್ಟ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ದರ್ಶನ್ ಜೊತೆಗೆ ಆಶಾ ಭಟ್ ಜೋಡಿಯಾಗಿರುವ 'ರಾಬರ್ಟ್' ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ.
ನಟರೆಂದರೆ ಕೇವಲ ಅಭಿನಯ ಮಾಡುವುದು ಮಾತ್ರ ಅಲ್ಲ. ಪಾತ್ರಕ್ಕೆ ನ್ಯಾಯ ಒದಗಿಸಲು ಪರಕಾಯ ಪ್ರವೇಶ ಮಾಡಬೇಕು. ಡಾ.ರಾಜ್ ಕುಮಾರ್ ರವರನ್ನೇ ತೆಗೆದುಕೊಳ್ಳಿ.. 'ಮಂತ್ರಾಲಯ ಮಹಾತ್ಮೆ' ಸಿನಿಮಾದಲ್ಲಿ ನಟಿಸುವಾಗ ಅಣ್ಣಾವ್ರು ಮಾಂಸಾಹಾರವನ್ನು ತ್ಯಜಿಸಿದ್ದರು.

ಇದೇ ಡೆಡಿಕೇಷನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಲ್ಲೂ ಇದೆ.! 'ದಾಸ' ದರ್ಶನ್ ಸದ್ಯ 'ರಾಬರ್ಟ್' ಸಿನಿಮಾದಲ್ಲಿ ಬಿಜಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ 'ರಾಬರ್ಟ್' ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.

ಈ ಪೋಸ್ಟರ್ ನಲ್ಲಿ ದರ್ಶನ್ ಆಂಜನೇಯನ ಅವತಾರ ತಾಳಿದ್ದಾರೆ. ಬಾಲಕ ರಾಮನನ್ನು ಹೆಗಲ ಮೇಲೆ ಕೂರಿಸಿಕೊಂಡು, ಕೈಯಲ್ಲಿ ಗದೆ ಹಿಡಿದು ಆಂಜನೇಯನಂತೆ ಕಟ್ಟುಮಸ್ತಾದ ದೇಹದಿಂದ ದರ್ಶನ್ ಕಂಗೊಳಿಸಿದ್ದಾರೆ. ಈಗ ಇದೇ ಟಾಪಿಕ್ ಬಗ್ಗೆ ಹೊಸ ಸುದ್ದಿ ಬಹಿರಂಗವಾಗಿದೆ. ಆಂಜನೇಯನ ಪಾತ್ರ ಮಾಡಲು ನಟ ದರ್ಶನ್ ಮಾಂಸಾಹಾರ ಸೇವಿಸಿರಲಿಲ್ಲವಂತೆ.! ಮುಂದೆ ಓದಿರಿ...

   
 
ಟೆಕ್ನಾಲಜಿ