Back
Home » ಬಾಲಿವುಡ್
ಲೈಂಗಿಕ ಕಿರುಕುಳ ಪ್ರಕರಣದಿಂದ ಮುಕ್ತಿ ಪಡೆದ ಖ್ಯಾತ ಗಾಯಕ
Oneindia | 17th Jan, 2020 01:40 PM

ಬಾಲಿವುಡ್ ನ ಗಾಯಕ ಅನು ಮಲಿಕ್ ಲೈಂಗಿಕ ಕಿರುಕುಳ ಪ್ರಕರಣ ಆರೋಪದಿಂದ ಮುಕ್ತಿ ಪಡೆದಿದ್ದಾರೆ. ಮಲಿಕ್ ವಿರುದ್ಧ ಸೂಕ್ತ ಸಾಕ್ಷ್ಯ ಸಿಗದ ಕಾರಣ ಕಿರುಕುಳ ಆರೋಪ ಪ್ರಕರಣ ವಜಾಗೊಂಡಿದೆ. ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಇದರ ವಿಚಾರಣೆ ನಡೆಯುತ್ತಿತ್ತು. ಆದರೆ ಸಾಕ್ಷ್ಯ ಕೊರತೆಯಿಂದ ಪ್ರಕರಣದ ವಿಚಾರಣೆ ತಾತ್ಕಾಲಿಕ ರದ್ದು ಮಾಡಲಾಗಿದೆ.

ಅನು ಮಲಿಕ್ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಸೋನು ಮಲ್ಹೋತ್ರ ಎನ್ನುವವರು ಮಲಿಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದ ಸೋನು ಅನು ಮಲಿಕ್ ಅನೇಕ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದರು.

ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ನಿರ್ದೇಶಕನ ಬಂಧನ: ಇಬ್ಬರು ಹೆಣ್ಣುಮಕ್ಕಳ ರಕ್ಷಣೆ

ಅನು ಮಲಿಕ್ ಟಿವಿಯಲ್ಲಿ ಸಿಂಗಿಂಗ್ ಕಾರ್ಯಕ್ರಮದ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈ ಆರೋಪದ ನಂತರ ಅವರನ್ನು ಜಡ್ಜ್ ಸ್ಥಾನದಿಂದ ಕೆಳಗಿಳಿಯಬೇಕಾಯಿತು. 2018ರಲ್ಲಿ ನಡೆದ ಈ ಘಟನೆಗೆ ಈಗ ಬಹುತೇಕ ತೆರೆ ಬೀಳುವ ಹಂತಕ್ಕೆ ಬಂದಿದೆ. ಹಾಗಾಗಿ ಅನು ಮಲಿಕ್ ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

"ಸೋನು ಮಲ್ಹೋತ್ರಾ ಆರೋಪ ಮಾಡಿದ್ದಂತೆ ಅನು ಮಲಿಕ್ ವಿರುದ್ಧ ಯಾರು ಮುಂದೆ ಬಂದು ಸಾಕ್ಷ್ಯ ಹೇಳದ ಕಾರಣ ಈ ಪ್ರಕರಣವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಒಂದು ವೇಳೆ ಮಲಿಕ್ ವಿರುದ್ಧ ಯಾರಾದ್ರು ದೂರು ನೀಡಿದೆ ಮತ್ತೆ ಪ್ರಕರಣ ತೆರೆಯಬಹುದು" ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

   
 
ಟೆಕ್ನಾಲಜಿ