Back
Home » ಸಿನಿ ಸಮಾಚಾರ
ರಶ್ಮಿಕಾ ಮನೆ ಮೇಲೆ ಐಟಿ ದಾಳಿ: ಇಂದು ಮುಂದುವರಿದ ವಿಚಾರಣೆ
Oneindia | 17th Jan, 2020 10:06 AM

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ನಿನ್ನೆ(ಜನವರಿ 16) ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ರಶ್ಮಿಕಾ ನಿವಾಸದಲ್ಲಿ ಅಧಿಕಾರಿಗಳು ನಿನ್ನೆಯಿಂದ ನಡೆಸುತ್ತಿರುವ ಪರಿಶೀಲನೆ ಇವತ್ತು ಮಂದು ವರೆಸಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಅಧಿಕಾರಿಗಳು ಮತ್ತೆ ವಿಚಾರಣೆ ಪ್ರಾರಂಭಿಸಿದ್ದಾರೆ.

ನಿನ್ನೆ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ರಾತ್ರಿ ಮಂದಣ್ಣ ಒಡೆತನದ ಸೆರೆನಿಟಿ ಹಾಲ್ ನಲ್ಲಿಯೆ ಉಳಿದುಕೊಂಡಿದ್ದರು. ನಿನ್ನೆಯೆ ಮುಖ್ಯವಾದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ನಟಿ ರಶ್ಮಿಕಾ ಅವರನ್ನು ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.

ರಶ್ಮಿಕಾ ಇಷ್ಟು ದೊಡ್ಡ ಶ್ರೀಮಂತರಾ? ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರ

ಚೆನ್ನೈನಿಂದ ಹೊರಟು ರಶ್ಮಿಕಾ ರಾತ್ರಿ ವಿರಾಜಪೇಟೆ ನಿವಾಸಕ್ಕೆ ಆಗಮಿಸಿದ್ದಾರೆ. ರಶ್ಮಿಕಾ ತಾಯಿ ಸುಮನ್ ಮಂದಣ್ಣ ಕೂಡ ಮನೆಗೆ ಆಗಮಿಸಿದ್ದು, ಇಬ್ಬರನ್ನು ತಡರಾತ್ರಿವರೆಗೂ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇವತ್ತು ರಶ್ಮಿಕಾಗೆ ಎಲ್ಲೂ ಹೋಗದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇಂದು ಕೂಡ ವಿಚಾರಣೆ ನಡೆಸುತ್ತಿರುವ ಹಿನ್ನಲೆ ರಶ್ಮಿಕಾ ಮನೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಶ್ಮಿಕಾ ಸದ್ಯ ತಮಿಳಿನ ಸುಲ್ತಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆದ ಸರಿಲೇರು ನೀಕೆವ್ವರು ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.

   
 
ಟೆಕ್ನಾಲಜಿ