Back
Home » ಸಿನಿ ಸಮಾಚಾರ
ಶಿವರಾತ್ರಿ ಹಬ್ಬದ ಪ್ರಯುಕ್ತ 'ಶಿವಾಜಿ ಸುರತ್ಕಲ್' ಆಗಿ ರಮೇಶ್ ನಿಮ್ಮ ಮುಂದೆ
Oneindia | 17th Jan, 2020 07:04 AM

ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ನಟ ರಮೇಶ್ ಅರವಿಂದ್ ರವರ 101ನೇ ಚಿತ್ರ 'ಶಿವಾಜಿ ಸುರತ್ಕಲ್' ಮುಂದಿನ ತಿಂಗಳು ಅಂದ್ರೆ ಫೆಬ್ರವರಿ 21 ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.

'ಶಿವಾಜಿ ಸುರತ್ಕಲ್' ಚಿತ್ರ ಸೆನ್ಸಾರ್ ಅಂಗಳದಿಂದ ಪಾಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ ನಟ ರಮೇಶ್ ಅರವಿಂದ್. ''ನನ್ನ ಮೂವತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಈ ರೀತಿಯ ಪಾತ್ರ ಮಾಡಿದ್ದು ಇದೇ ಮೊದಲು. ಈ ರೀತಿಯ ಪಾತ್ರ ಮಾಡಲು ಮುಂಚಿನಿಂದಲೂ ಆಸೆ ಇತ್ತು. ಆ ಆಸೆ ಆಕಾಶ್ ಶ್ರೀವತ್ಸ ಮೂಲಕ ಈಡೇರಿತು'' ಅಂತಾರೆ ನಟ ರಮೇಶ್ ಅರವಿಂದ್.

'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಜೊತೆಗೆ ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ವಿಂಗ್ ಕಮಾಂಡರ್ ಅಭಿನಂದನ್ ಗೆಟಪ್ ನಲ್ಲಿ ನಟ ರಮೇಶ್ ಅರವಿಂದ್

ಆಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಮತ್ತು ಆಕಾಶ್ ಶ್ರೀವತ್ಸ ರಚಿಸಿರುವ ಸಿನಿಮಾದ ಹಾಡುಗಳಿಗೆ ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ದನಿಯಾಗಿದ್ದಾರೆ.

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ನಿರ್ಮಿಸಿರುವ 'ಶಿವಾಜಿ ಸುರತ್ಕಲ್' ಚಿತ್ರದ ಚಿತ್ರೀಕರಣ ಮಡಿಕೇರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆದಿದೆ. ಈಗಾಗಲೇ ಚಿತ್ರದ ವಿತರಣೆ ಹಕ್ಕು ಕೆ.ಆರ್.ಜಿ ಸ್ಟುಡಿಯೋ ಪಾಲಾಗಿದೆ. ಇನ್ನೊಂದು ತಿಂಗಳಲ್ಲಿ 'ಶಿವಾಜಿ ಸುರತ್ಕಲ್' ಸಿನಿಮಾ ನಿಮ್ಮ ಮುಂದೆ ಬರಲಿದೆ.

   
 
ಟೆಕ್ನಾಲಜಿ