Back
Home » ಸಿನಿ ಸಮಾಚಾರ
ದಯವಿಟ್ಟು ಗಮನಿಸಿ: ರಚಿತಾ ರಾಮ್ ಕಾಣೆಯಾಗಿದ್ದಾರೆ!
Oneindia | 16th Jan, 2020 08:28 PM

ಡಿಂಪಲ್ ಕ್ವೀನ್ ರಚಿರಾ ರಾಮ್ ಕಾಣೆಯಾಗಿದ್ದಾರೆ....ಹೀಗಂತಾ ಜಾಹೀರಾತು ನೀಡಿರುವುದು ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ. ಇದೇನಪ್ಪಾ ರಚಿತಾ, ಚಿಂಜೀವಿ ಸರ್ಜಾ, ಕಾಣೆಯಾಗಿದ್ದಾರೆ ಎಂದು ಹೆಚ್ಚು ಯೋಚಿಸಬೇಡಿ.

ರಚ್ಚು ಮತ್ತು ಚಿರು ಸರ್ಜಾ ನಟಿಸುತ್ತಿರುವ 'ಏಪ್ರಿಲ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಪುಟ್ಟ ಬಾಲಕಿಯ ಫೋಟೋ ಹಿಡಿದು ಮಿಸ್ಸಿಂಗ್ ಅಂತ ರಚಿತಾ ನಿಂತಿದ್ದಾರೆ. ಆದರೆ, ರಚಿತಾ ರಾಮ್ ಅವರೇ ಮಿಸ್ಸಿಂಗ್ ಎಂದು ಪೋಸ್ಟರ್ ಹಿಡಿದು ನಿಂತಿದ್ದಾರೆ ಚಿರು ಸರ್ಜಾ.

'ಏಪ್ರಿಲ್' ನಲ್ಲಿ ರಚಿತಾಗೆ ಜೋಡಿಯಾಗಲಿದ್ದಾರೆ ಚಿರಂಜೀವಿ ಸರ್ಜಾ

ಹಾಗಾಗಿ, ಏಪ್ರಿಲ್ ಸಿನಿಮಾದ ಫಸ್ಟ್ ಲುಕ್ ಕುತೂಹಲ ಕೆರಳಿಸಿದೆ. ಥ್ರಿಲ್ಲಿಂಗ್ ಸಬ್ಜೆಕ್ಟ್ ಇದಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದು ಮಹಿಳಾ ಪ್ರಧಾನ ಸಿನಿಮಾ ಎಂದು ಹೇಳಲಾಗುತ್ತಿದ್ದು, ಕಮರ್ಷಿಯಲ್ ಆಗಿ ಸಿನಿಮಾ ಮಾಡುತ್ತಿದ್ದಾರಂತೆ.

ಸತ್ಯ ರಾಯಲ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ಮಾಪಕ ನಾರಾಯಣ ಬಾಬು ಬಂಡವಾಳ ಹಾಕಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ ಹೊಂದಿದ್ದು, ಸಚಿನ್ ಬಸ್ರೂರು ಸಂಗೀತವಿದೆ.

ರಮೇಶ್ ಅರವಿಂದ್ ನಟನೆಯ '100' ಸಿನಿಮಾದಲ್ಲಿ ನಟಿಸುತ್ತಿರುವ ರಚಿತಾ ರಾಮ್, ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತೆಲುಗಿನಲ್ಲಿ ಸೂಪರ್ ಮಚ್ಚಿ ಎಂಬ ಸಿನಿಮಾ ಮಾಡುತ್ತಿದ್ದಾರೆ.

ಮತ್ತೊಂದೆಡೆ ಚಿರು ಸರ್ಜಾ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಖಾಕಿ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಆಧ್ಯಾ ಎಂಬ ಸಿನಿಮಾ ಶುರುವಾಗಿದೆ. ರಣಂ ಚಿತ್ರ ರಿಲೀಸ್ ಆಗಬೇಕಿದೆ. ಕ್ಷತ್ರಿಯ ಸಿನಿಮಾ ಮುಹೂರ್ತ ಮಾಡಿಕೊಂಡಿದೆ.

   
 
ಟೆಕ್ನಾಲಜಿ